• ಹೋಂ
  • »
  • ನ್ಯೂಸ್
  • »
  • IPL
  • »
  • IPL 2020: ಬೆನ್ ಸ್ಟೋಕ್ಸ್ ಬೆರಳು ಮಡಚಿದ್ದರ ಹಿಂದಿದೆ ಮತ್ತೊಂದು ಕಹಾನಿ..!

IPL 2020: ಬೆನ್ ಸ್ಟೋಕ್ಸ್ ಬೆರಳು ಮಡಚಿದ್ದರ ಹಿಂದಿದೆ ಮತ್ತೊಂದು ಕಹಾನಿ..!

Ben Stokes

Ben Stokes

Ben Stokes: ಮುಂಬೈ ಇಂಡಿಯನ್ಸ್ ವಿರುದ್ಧದ ರಾಜಸ್ಥಾನ್ ರಾಯಲ್ಸ್​ ತಂಡದ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಬೆನ್ ಸ್ಟೋಕ್ಸ್ ಕೇವಲ 59 ಎಸೆತಗಳಲ್ಲಿ ಶತಕ ಪೂರೈಸಿದ್ದರು. ಅಲ್ಲದೆ ಅಜೇಯರಾಗುಳಿದ ಆರ್​ಆರ್ ತಂಡದ ಆಲ್​ರೌಂಡರ್ 60 ಎಸೆತಗಳಲ್ಲಿ 107 ರನ್ ಬಾರಿಸಿದರು.

  • Share this:

ಬೆಂಜಮಿನ್ ಆ್ಯಂಡ್ರೊ ಸ್ಟೋಕ್ಸ್ ಅಲಿಯಾಸ್ ಬೆನ್ ಸ್ಟೋಕ್ಸ್ ಐಪಿಎಲ್​ನ 45ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಅಬ್ಬರಿಸಿದ್ದಾರೆ. ಹಾರ್ದಿಕ್ ಪಾಂಡ್ಯ ಅವರ ಸ್ಪೋಟಕ ಬ್ಯಾಟಿಂಗ್ ನೆರವಿನಿಂದ ಮುಂಬೈ ನಿಗದಿತ 20 ಓವರ್​ಗಳಲ್ಲಿ 195 ರನ್​ ಪೇರಿಸಿತ್ತು. ಈ ಕಠಿಣ ಸವಾಲು ಬೆನ್ನತ್ತಿದ ರಾಜಸ್ಥಾನ್ ರಾಯಲ್ಸ್​ಗೆ ಬೆನ್ ಸ್ಟೋಕ್ಸ್ ಅಬ್ಬರ ಆರಂಭ ಒದಗಿಸಿದ್ದರು. ಜಸ್​ಪ್ರೀತ್ ಬುಮ್ರಾ, ಟ್ರೆಂಟ್ ಬೌಲ್ಟ್​ ಒಳಗೊಂಡ ಮುಂಬೈ ವೇಗದ ಅಸ್ತ್ರಗಳ ಮುಂದೆ ಲೀಲಾಜಾಲವಾಗಿ ಬ್ಯಾಟ್ ಬೀಸಿದ ಸ್ಟೋಕ್ಸ್ ಅಜೇಯ ಶತಕದೊಂದಿಗೆ ತಂಡಕ್ಕೆ ಸೂಪರ್ಬ್ ಗೆಲುವು ತಂದುಕೊಟ್ಟರು.


ಈ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಭರ್ಜರಿ ಗೆಲುವುದ ದಾಖಲಿಸುತ್ತಿದ್ದಂತೆ ಬೆನ್​ ಸ್ಟೋಕ್ಸ್ ತನ್ನ ಕೈಯ ನಡು ಬೆರಳನ್ನು ಮಡಚಿ ಪೋಸ್ ನೀಡಿದ್ದರು. ಈ ಫೋಟೋ ಕೂಡ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಆದರೆ ಅಂತಹದೊಂದು ಸಿಂಬಲ್ ತೋರಿಸಿ ಆರ್​ಆರ್ ಆಟಗಾರ ಪೋಸ್ ನೀಡಿದ್ದರ ಹಿಂದಿದೆ ಮತ್ತೊಂದು ಕಾರಣ ಕೂಡ ಇದೆ.


ಈ ಹಿಂದೆ ಇಂಗ್ಲೆಂಡ್ ಟೆಸ್ಟ್ ಸರಣಿಯಲ್ಲಿ ಭರ್ಜರಿ ಪ್ರದರ್ಶನ ನೀಡಿದ ವೇಳೆ ಕೂಡ ಸ್ಟೋಕ್ಸ್ ಇದೇ ಕೈ ಚಿಹ್ನೆಯನ್ನು ಪ್ರದರ್ಶಿಸಿದ್ದರು. ಹೀಗೆ ತನ್ನ ಸಂಭ್ರಮದಲ್ಲಿ ಪೋಸ್ ನೀಡಲು ಕಾರಣ ತಂದೆಯ ನೆನಪು. ಹೌದು, ತನ್ನ ತಂದೆಯನ್ನು ನೆನೆದು ಬೆನ್ ಸ್ಟೋಕ್ಸ್ ಹೀಗೆ ಮಾಡುತ್ತಿದ್ದಾರೆ. ಅವರ ತಂದೆ ಗೆಡ್ ಸ್ಟೋಕ್ಸ್ ಅವರಿಗೆ ಎಡಗೈಯ ನಡು ಬೆರಳಿಲ್ಲ. ರಗ್ಬಿ ಆಟಗಾರರಾಗಿದ್ದ ಗೆಡ್, ಅನೇಕ ಬಾರಿ ಬೆರಳಿಗೆ ಗಾಯ ಮಾಡಿಕೊಂಡಿದ್ದರು. ಹಲವು ಬಾರಿ ಗಾಯವಾಗಿದ್ದರಿಂದ ಮುಂದೆ ಚಿಕಿತ್ಸೆಗಳು ಫಲಕಾರಿಯಾಗುತ್ತಿರಲಿಲ್ಲ. ಹೀಗಾಗಿ ಅವರ ಮಧ್ಯ ಬೆರಳನ್ನು ವೈದ್ಯರು ಶಸ್ತ್ರಚಿಕಿತ್ಸೆಯ ಮೂಲಕ ತುಂಡರಿಸಲಾಗಿತ್ತು. ಇದೇ ಕಾರಣದಿಂದ ಸ್ಟೋಕ್ಸ್ ತಮ್ಮ ಸಂಭ್ರಮವನ್ನು ತಂದೆಗೆ ಬೆರಳಿನ ಪೋಸ್​ ಮೂಲಕ ಅರ್ಪಿಸುತ್ತಿದ್ದಾರೆ.


ಮುಂಬೈ ಇಂಡಿಯನ್ಸ್ ವಿರುದ್ಧದ ರಾಜಸ್ಥಾನ್ ರಾಯಲ್ಸ್​ ತಂಡದ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಬೆನ್ ಸ್ಟೋಕ್ಸ್ ಕೇವಲ 59 ಎಸೆತಗಳಲ್ಲಿ ಶತಕ ಪೂರೈಸಿದ್ದರು. ಅಲ್ಲದೆ ಅಜೇಯರಾಗುಳಿದ ಆರ್​ಆರ್ ತಂಡದ ಆಲ್​ರೌಂಡರ್ 60 ಎಸೆತಗಳಲ್ಲಿ 107 ರನ್ ಬಾರಿಸಿದರು. ಈ ವೇಳೆ ಸ್ಟೋಕ್ಸ್ ಬ್ಯಾಟ್​ನಿಂದ ಸಿಡಿದದ್ದು 14 ಬೌಂಡರಿ ಹಾಗೂ 3 ಸಿಕ್ಸರ್​ಗಳು. ಸ್ಟೋಕ್ಸ್ ಅವರ ಈ ಅಮೋಘ ಆಟದ ನೆರವಿನಿಂದ ರಾಜಸ್ಥಾನ್ ರಾಯಲ್ಸ್​ ತಂಡಕ್ಕೆ ಪ್ಲೇ ಆಫ್ ಪ್ರವೇಶಿಸುವ ಅವಕಾಶವಿದೆ.
POINTS TABLE:



SCHEDULE TIME TABLE:



ORANGE CAP:



PURPLE CAP:



RESULT DATA:



MOST SIXES:



ಇದನ್ನೂ ಓದಿ: IPL 2020: 3ನೇ ವರ್ಷಕ್ಕೆ CSK ಸುಸ್ತು: ಡ್ಯಾಡಿಸ್ ಆರ್ಮಿ ವಿರುದ್ಧ ಕಿಡಿಕಾರಿದ ಕೋಚ್​

top videos
    First published: