IPL

  • associate partner
HOME » NEWS » Ipl » IPL 2020 RCB VS SRH ROYAL CHALLENGERS BANGALORE VS SUNRISERS HYDERABAD SRH WON BY 6 WICKETS VB

RCB vs SRH, IPL 2020: ಆರ್​ಸಿಬಿ ಪ್ಲೇ ಆಫ್ ಹಾದಿ ಕಠಿಣ: ಎಸ್​ಆರ್​ಹೆಚ್​ಗೆ 5 ವಿಕೆಟ್​ಗಳ ಜಯ

IPL 2020, Royal Challengers Bangalore vs Sunrisers Hyderabad: ನಂತರ ಒಂದಾದವೃದ್ದಿಮನ್ ಸಾಹ ಹಾಗೂ ಮನೀಶ್ ಪಾಂಡೆ ಪವರ್ ಪ್ಲೇ ಓವರ್​ನಲ್ಲಿ ಅಬ್ಬರಿಸಿದರು. ಮೊಲ 6 ಓವರ್​ನಲ್ಲೊ 58 ರನ್ ಮೂಡಿಬಂತು.

news18-kannada
Updated:October 31, 2020, 10:46 PM IST
RCB vs SRH, IPL 2020: ಆರ್​ಸಿಬಿ ಪ್ಲೇ ಆಫ್ ಹಾದಿ ಕಠಿಣ: ಎಸ್​ಆರ್​ಹೆಚ್​ಗೆ 5 ವಿಕೆಟ್​ಗಳ ಜಯ
SRH
  • Share this:
ಶಾರ್ಜಾ (ಅ. 31): ಇಲ್ಲಿನ ಶಾರ್ಜಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್​ನ 52ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್​ ಬೆಂಗಳೂರು ವಿರುದ್ಧ ಸನ್​ರೈಸರ್ಸ್​ ಹೈದರಾಬಾದ್ ತಂಡ ಭರ್ಜರಿ ಗೆಲುವು ಸಾಧಿಸಿದೆ. ಬ್ಯಾಟಿಂಗ್ ಹಾಗೂ ಬೌಲಿಂಗ್​ನಲ್ಲಿ ಮೇಲುಗೈ ಸಾಧಿಸಿದ ವಾರ್ನರ್ ಪಡೆ 5 ವಿಕೆಟ್​ಗಳ ಜಯದೊಂದಿಗೆ ತನ್ನ ಪ್ಲೇ ಆಫ್ ಆಸೆಯನ್ನು ಜೀವಂತವಾಗಿರಿಸಿದೆ. ಇತ್ತ ಆರ್​ಸಿಬಿಗೆ ಪ್ಲೇ ಆಫ್ ಹಾದಿ ಮತ್ತಷ್ಟು ಕಠಿಣವಾಗಿದ್ದು, ಮುಂದಿನ ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ಗೆಲ್ಲಲೇ ಬೇಕಾಗಿದೆ.

ಆರ್​ಸಿಬಿ ನೀಡಿದ್ದ 121 ರನ್​ಗಳ ಸುಲಭ ಟಾರ್ಗೆಟ್ ಬೆನ್ನಟ್ಟಿದ ಹೈದರಾಬಾದ್ ಆರಂಭದಲ್ಲೇ ವಿಕೆಟ್ ಕಳೆದುಕೊಂಡಿತು. ವಾಷಿಂಗ್ಟನ್ ಸುಂದರ್ ಬೌಲಿಂಗ್​ನಲ್ಲಿ ನಾಯಕ ಡೇವಿಡ್ ವಾರ್ನರ್ 8 ರನ್​ ಗಳಿಸಿ ಔಟ್ ಆದರು. ನಂತರ ಒಂದಾದವೃದ್ದಿಮನ್ ಸಾಹ ಹಾಗೂ ಮನೀಶ್ ಪಾಂಡೆ ಪವರ್ ಪ್ಲೇ ಓವರ್​ನಲ್ಲಿ ಅಬ್ಬರಿಸಿದರು. ಮೊಲ 6 ಓವರ್​ನಲ್ಲೊ 58 ರನ್ ಮೂಡಿಬಂತು.


ಆದರೆ, 8ನೇ ಓವರ್​ನ ಚಹಾಲ್ ಬೌಲಿಂಗ್​ನಲ್ಲಿ ಸಿಕ್ಸ್​ ಸಿಡಿಸುವಲ್ಲಿ ಎಡವಿದ ಪಾಂಡೆ 19 ಎಸೆತಗಳಲ್ಲಿ 26 ರನ್ ಬಾರಿಸಿ ನಿರ್ಗಮಿಸಿದರು. ಕಳೆದ ಪಂದ್ಯದಲ್ಲಿ ಅಬ್ಬರಿಸಿದ್ದ ಸಾಹ 32 ಎಸೆತಗಳಲ್ಲಿ 39 ರನ್ ಬಾರಿಸಿ ಔಟ್ ಆದರೆ, ಕೇನ್ ವಿಲಿಯಮ್ಸನ್ ಆಟ 8 ರನ್​ಗೆ ಅಂತ್ಯವಾಯಿತು.

ಆದರೆ, ಇದರಿಂದ ವಾರ್ನರ್ ಪಡೆಗೆ ಯಾವುದೇ ಹಿನ್ನಡೆಯಾಗಲಿಲ್ಲ. ಜೇಸನ್ ಹೋಲ್ಡರ್ ಕೇವಲ 10 ಎಸೆತಗಳಲ್ಲಿ 1 ಬೌಂಡರಿ, 3 ಸಿಕ್ಸರ್ ಬಾರಿಸಿ ಅಜೇಯ 26 ರನ್ ತಂಡಕ್ಕೆ ಗೆಲುವು ತಂದುಕೊಡುವಲ್ಲಿ ಯಶಸ್ವಿಯಾದರು.

ಅಂತಿಮವಾಗಿ ಎಸ್​ಆರ್​ಹೆಚ್ 14.1 ಓವರ್​ನಲ್ಲಿ 5 ವಿಕೆಟ್ ಕಳೆದುಕೊಂಡು 121 ರನ್ ಸಿಡಿಸಿ 5 ವಿಕೆಟ್​ಗಳ ಅಮೋಘ ಗೆಲುವು ಕಂಡಿತು. ಆರ್​ಸಿಬಿ ಪರ ಯಜುವೇಂದ್ರ ಚಹಾಲ್ 2, ವಾಷಿಂಗ್ಟನ್ ಸುಂದರ್, ಇಸುರು ಉದಾನ ಹಾಗೂ ಯಜುವೇಂದ್ರ ಚಹಾಲ್ ತಲಾ 1 ವಿಕೆಟ್ ಪಡೆದರು.

ಇದಕ್ಕೂ ಮುನ್ನ ಟಾಸ್ ಸೋತು ಬ್ಯಾಟಿಂಗ್​ಗೆ ಇಳಿದ ಆರ್​ಸಿಬಿ ಆರಂಭದಲ್ಲೇ ಪ್ರಮುಖ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. ಓಪನರ್​ ದೇವದತ್ ಪಡಿಕ್ಕಲ್ ಈ ಬಾರಿ ಕೇವಲ 5 ರನ್​ಗೆ ಔಟ್ ಆಗುವ ಮೂಲಕ ನಿರಾಸೆ ಮೂಡಿಸಿದರೆ, ನಾಯಕ ವಿರಾಟ್ ಕೊಹ್ಲಿ ಕೇವಲ 7 ರನ್​ಗೆ ನಿರ್ಗಮಿಸಿದರು.





ಈ ಸಂದರ್ಭ ಜೊತೆಯಾದ ಎಬಿ ಡಿವಿಲಿಯರ್ಸ್ ಹಾಗೂ ಜೋಶ್ ಫಿಲಿಪ್ ತಂಡವನ್ನು ಆರಂಭಿಕ ಆಘಾತದಿಂದ ಪಾರುಮಾಡಿದರು. ಆದರೆ, ಈ ಜೋಡಿಯ ಜೊತೆಯಾಟ 43 ರನ್​ಗೆ ಅಂತ್ಯವಾಯಿತು. ಡಿವಿಲಿಯರ್ಸ್ 24 ಎಸೆತಗಳಲ್ಲಿ 24 ರನ್ ಬಾರಿಸಿ ಔಟ್ ಆಗಿ ಶಾಕ್ ನೀಡಿದರು. ಇದರ ಬೆನ್ನಲ್ಲೇ 32 ರನ್ ಗಳಿಸಿದ್ದ ಫಿಲಿಪ್ ಕೂಡ ಬ್ಯಾಟ್ ಕೆಳಗಿಟ್ಟರು.

ವಾಷಿಂಗ್ಟನ್ ಸುಂದರ್(21) ತಂಡದ ಖಾತೆಗೆ ತಮ್ಮ ಕೈಲಾದಷ್ಟು ರನ್ ಸೇರಿಸಿದರು. ಕ್ರಿಸ್ ಮೊರೀಶ್ ಮೂರು ರನ್​ಗೆ ಸುಸ್ತಾದರು. ಉಸುರು ಉದಾನ ಸೊನ್ನೆ ಸುತ್ತಿದರು. ಗುರುಕೀರತ್ 24 ಎಸೆತಗಳಲ್ಲಿ ಅಜೇಯ 16 ರನ್ ಗಳಿಸಿದರು.

ಅಂತಿಮವಾಗಿ ಆರ್​ಸಿಬಿ 20 ಓವರ್​ಗಳಲ್ಲಿ 7 ವಿಕೆಟ್ ನಷ್ಟಕ್ಕೆ 120 ರನ್ ಗಳಿಸಿತು. ಎಸ್​ಆರ್​ಹೆಚ್ ಪರ ಸಂದೀಪ್ ಶರ್ಮಾ ಹಾಗೂ ಜೇಸನ್ ಹೋಲ್ಡರ್ ತಲಾ 2 ವಿಕೆಟ್ ಕಿತ್ತರೆ, ಟಿ. ನಟರಾಜನ್, ರಶೀದ್ ಖಾನ್ ಹಾಗೂ ಶಜ್ಬಾಜ್ ನದೀಂ ತಲಾ 1 ವಿಕೆಟ್ ಪಡೆದರು.
Published by: Vinay Bhat
First published: October 31, 2020, 10:46 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories