IPL

  • associate partner
HOME » NEWS » Ipl » IPL 2020 RCB VS SRH LIVE CRICKET SCORE ROYAL CHALLENGERS BANGALORE VS SUNRISERS HYDERABAD SRH LOST 4 WICKETS VB

RCB vs SRH, IPL 2020 Live Score: ಎಸ್​ಆರ್​​ಹೆಚ್ 4 ವಿಕೆಟ್ ಪತನ: ರೋಚಕ ಘಟ್ಟದತ್ತ ಪಂದ್ಯ

IPL 2020, Royal Challengers Bangalore vs Sunrisers Hyderabad Live Score: ಐಪಿಎಲ್​ನಲ್ಲಿ ಈವರೆಗೆ ಉಭಯ ತಂಡಗಳು 14 ಬಾರಿ ಮುಖಾಮುಖಿಯಾಗಿದ್ದು, 7 ರಲ್ಲಿ ಸನ್​ರೈಸರ್ಸ್​ ಹೈದರಾಬಾದ್ ಹಾಗೂ 7 ಪಂದ್ಯಗಳಲ್ಲಿ ರಾಯಲ್ ಚಾಲೆಂಜರ್ಸ್​ ಬೆಂಗಳೂರು ಗೆಲುವು ಸಾಧಿಸಿದೆ.

news18-kannada
Updated:October 31, 2020, 10:33 PM IST
RCB vs SRH, IPL 2020 Live Score: ಎಸ್​ಆರ್​​ಹೆಚ್ 4 ವಿಕೆಟ್ ಪತನ: ರೋಚಕ ಘಟ್ಟದತ್ತ ಪಂದ್ಯ
SRH vs RCB
  • Share this:
ಶಾರ್ಜಾ (ಅ. 31): ಇಲ್ಲಿನ ಶಾರ್ಜಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ಐಪಿಎಲ್​ನ 52ನೇ ಪಂದ್ಯ ನಡೆಯುತ್ತಿದ್ದು, ಸನ್​ರೈಸರ್ಸ್​ ಹೈದರಾಬಾದ್ ವಿರುದ್ಧ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡ ಬ್ಯಾಟಿಂಗ್ ವೈಫಲ್ಯ ಅನುಭವಿಸಿ ಸಾಧಾರಣ ಮೊತ್ತ ಕಲೆಹಾಕಿದೆ. ಹೈದರಾಬಾದ್ ಬೌಲರ್​ಗಳ ಮಾರಕ ದಾಳಿಯ ಪರಿಣಾಮ ಆರ್​ಸಿಬಿ 20 ಓವರ್​ಗಳಲ್ಲಿ 120 ರನ್ ಗಳಿಸಿದೆ.

ಸದ್ಯ ಗುರಿ ಬೆನ್ನಟ್ಟಿರುವ ಹೈದರಾಬಾದ್ 4 ವಿಕೆಟ್ ಕಳೆದುಕೊಂಡಿದೆ. ವಾಷಿಂಗ್ಟನ್ ಸುಂದರ್ ಬೌಲಿಂಗ್​ನಲ್ಲಿ ನಾಯಕ ಡೇವಿಡ್ ವಾರ್ನರ್ 8 ರನ್​ ಗಳಿಸಿ ಔಟ್ ಆದರು. ನಂತರ ಒಂದಾದ ವೃದ್ದಿಮನ್ ಸಾಹ ಹಾಗೂ ಮನೀಶ್ ಪಾಂಡೆ ಪವರ್ ಪ್ಲೇ ಓವರ್​ನಲ್ಲಿ ಅಬ್ಬರಿಸಿದರು. ಮೊಲ 6 ಓವರ್​ನಲ್ಲೊ 58 ರನ್ ಮೂಡಿಬಂತು.

ಆದರೆ, 8ನೇ ಓವರ್​ನ ಚಹಾಲ್ ಬೌಲಿಂಗ್​ನಲ್ಲಿ ಸಿಕ್ಸ್​ ಸಿಡಿಸುವಲ್ಲಿ ಎಡವಿದ ಪಾಂಡೆ 19 ಎಸೆತಗಳಲ್ಲಿ 26 ರನ್ ಬಾರಿಸಿ ನಿರ್ಗಮಿಸಿದರು. ಕಳೆದ ಪಂದ್ಯದಲ್ಲಿ ಅಬ್ಬರಿಸಿದ್ದ ಸಾಹ 32 ಎಸೆತಗಳಲ್ಲಿ 39 ರನ್ ಬಾರಿಸಿ ಔಟ್ ಆದರೆ, ಕೇನ್ ವಿಲಿಯಮ್ಸನ್ ಆಟ 8 ರನ್​ಗೆ ಅಂತ್ಯವಾಯಿತು.

ಸದ್ಯ ಕ್ರೀಸ್​ನಲ್ಲಿ ಅಭಿಷೇಕ್ ಶರ್ಮಾ ಹಾಗೂ ಜೇಸನ್ ಹೋಲ್ಡರ್ ಇದ್ದಾರೆ.

ಇದಕ್ಕೂ ಮುನ್ನ ಟಾಸ್ ಸೋತು ಬ್ಯಾಟಿಂಗ್​ಗೆ ಇಳಿದ ಆರ್​ಸಿಬಿ ಆರಂಭದಲ್ಲೇ ಪ್ರಮುಖ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. ಓಪನರ್​ ದೇವದತ್ ಪಡಿಕ್ಕಲ್ ಈ ಬಾರಿ ಕೇವಲ 5 ರನ್​ಗೆ ಔಟ್ ಆಗುವ ಮೂಲಕ ನಿರಾಸೆ ಮೂಡಿಸಿದರೆ, ನಾಯಕ ವಿರಾಟ್ ಕೊಹ್ಲಿ ಕೇವಲ 7 ರನ್​ಗೆ ನಿರ್ಗಮಿಸಿದರು.

ಈ ಸಂದರ್ಭ ಜೊತೆಯಾದ ಎಬಿ ಡಿವಿಲಿಯರ್ಸ್ ಹಾಗೂ ಜೋಶ್ ಫಿಲಿಪ್ ತಂಡವನ್ನು ಆರಂಭಿಕ ಆಘಾತದಿಂದ ಪಾರುಮಾಡಿದರು. ಆದರೆ, ಈ ಜೋಡಿಯ ಜೊತೆಯಾಟ 43 ರನ್​ಗೆ ಅಂತ್ಯವಾಯಿತು. ಡಿವಿಲಿಯರ್ಸ್ 24 ಎಸೆತಗಳಲ್ಲಿ 24 ರನ್ ಬಾರಿಸಿ ಔಟ್ ಆಗಿ ಶಾಕ್ ನೀಡಿದರು. ಇದರ ಬೆನ್ನಲ್ಲೇ 32 ರನ್ ಗಳಿಸಿದ್ದ ಫಿಲಿಪ್ ಕೂಡ ಬ್ಯಾಟ್ ಕೆಳಗಿಟ್ಟರು.

ವಾಷಿಂಗ್ಟನ್ ಸುಂದರ್(21) ತಂಡದ ಖಾತೆಗೆ ತಮ್ಮ ಕೈಲಾದಷ್ಟು ರನ್ ಸೇರಿಸಿದರು. ಕ್ರಿಸ್ ಮೊರೀಶ್ ಮೂರು ರನ್​ಗೆ ಸುಸ್ತಾದರು. ಉಸುರು ಉದಾನ ಸೊನ್ನೆ ಸುತ್ತಿದರು. ಗುರುಕೀರತ್ 24 ಎಸೆತಗಳಲ್ಲಿ ಅಜೇಯ 16 ರನ್ ಗಳಿಸಿದರು.

ಅಂತಿಮವಾಗಿ ಆರ್​ಸಿಬಿ 20 ಓವರ್​ಗಳಲ್ಲಿ 7 ವಿಕೆಟ್ ನಷ್ಟಕ್ಕೆ 120 ರನ್ ಗಳಿಸಿತು. ಎಸ್​ಆರ್​ಹೆಚ್ ಪರ ಸಂದೀಪ್ ಶರ್ಮಾ ಹಾಗೂ ಜೇಸನ್ ಹೋಲ್ಡರ್ ತಲಾ 2 ವಿಕೆಟ್ ಕಿತ್ತರೆ, ಟಿ. ನಟರಾಜನ್, ರಶೀದ್ ಖಾನ್ ಹಾಗೂ ಶಜ್ಬಾಜ್ ನದೀಂ ತಲಾ 1 ವಿಕೆಟ್ ಪಡೆದರು.

ಸನ್​ರೈಸರ್ಸ್​ ಹೈದರಾಬಾದ್: ಡೇವಿಡ್ ವಾರ್ನರ್ (ನಾಯಕ), ಕೇನ್ ವಿಲಿಯಮ್ಸನ್, ಮನೀಷ್ ಪಾಂಡೆ, ವೃದ್ದಿಮಾನ್ ಸಾಹ, ಜೇಸನ್ ಹೋಲ್ಡರ್, ಅಭಿಷೇಕ್ ಶರ್ಮಾ, ಶಹ್ಬಾಜ್ ನದೀಂ, ರಶೀದ್ ಖಾನ್, ಅಬ್ದುಲ್ ಸಮದ್, ಸಂದೀಪ್ ಶರ್ಮಾ, ಟಿ. ನಟರಾಜನ್.

ರಾಯಲ್ ಚಾಲೆಂಜರ್ಸ್​ ಬೆಂಗಳೂರು: ದೇವದತ್ ಪಡಿಕ್ಕಲ್, ಜೋಷ್ ಫಿಲಿಪ್, ವಿರಾಟ್ ಕೊಹ್ಲಿ (ನಾಯಕ), ಎಬಿ ಡಿವಿಲಿಯರ್ಸ್‌ (ವಿ.ಕೀ), ಗುರುಕೀರತ್ ಮನ್​ಸಿಂಗ್, ಕ್ರಿಸ್ ಮೊರೀಸ್, ವಾಷಿಂಗ್ಟನ್ ಸುಂದರ್, ಇಸುರು ಉದಾನ, ನವ್​ದೀಪ್ ಸೈನಿ, ಮೊಹಮ್ಮದ್ ಸಿರಾಜ್, ಯಜುವೇಂದ್ರ ಚಾಹಲ್.
Published by: Vinay Bhat
First published: October 31, 2020, 9:29 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories