IPL

  • associate partner
HOME » NEWS » Ipl » IPL 2020 RCB VS SRH LIVE CRICKET SCORE ROYAL CHALLENGERS BANGALORE VS SUNRISERS HYDERABAD RCB 120 7 VB

RCB vs SRH, IPL 2020: ಮುಂದುವರೆದ ಆರ್​ಸಿಬಿ ಕಳಪೆ ಬ್ಯಾಟಿಂಗ್: ಎಸ್​ಆರ್​ಹೆಚ್​ಗೆ 121 ರನ್ಸ್ ಟಾರ್ಗೆಟ್

IPL 2020, Royal Challengers Bangalore vs Sunrisers Hyderabad: ಈ ಸಂದರ್ಭ ಜೊತೆಯಾದ ಎಬಿ ಡಿವಿಲಿಯರ್ಸ್ ಹಾಗೂ ಜೋಶ್ ಫಿಲಿಪ್ ತಂಡವನ್ನು ಆರಂಭಿಕ ಆಘಾತದಿಂದ ಪಾರುಮಾಡಿದರು. ಆದರೆ, ಈ ಜೋಡಿಯ ಜೊತೆಯಾಟ 43 ರನ್​ಗೆ ಅಂತ್ಯವಾಯಿತು.

news18-kannada
Updated:October 31, 2020, 9:05 PM IST
RCB vs SRH, IPL 2020: ಮುಂದುವರೆದ ಆರ್​ಸಿಬಿ ಕಳಪೆ ಬ್ಯಾಟಿಂಗ್: ಎಸ್​ಆರ್​ಹೆಚ್​ಗೆ 121 ರನ್ಸ್ ಟಾರ್ಗೆಟ್
SRH
  • Share this:
ಶಾರ್ಜಾ (ಅ. 31): ಇಲ್ಲಿನ ಶಾರ್ಜಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ಐಪಿಎಲ್​ನ 52ನೇ ಪಂದ್ಯ ನಡೆಯುತ್ತಿದ್ದು, ಸನ್​ರೈಸರ್ಸ್​ ಹೈದರಾಬಾದ್ ವಿರುದ್ಧ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡ ಬ್ಯಾಟಿಂಗ್ ವೈಫಲ್ಯ ಅನುಭವಿಸಿ ಸಾಧಾರಣ ಮೊತ್ತ ಕಲೆಹಾಕಿದೆ. ಹೈದರಾಬಾದ್ ಬೌಲರ್​ಗಳ ಮಾರಕ ದಾಳಿಯ ಪರಿಣಾಮ ಆರ್​ಸಿಬಿ 20 ಓವರ್​ಗಳಲ್ಲಿ 120 ರನ್ ಗಳಿಸಿದೆ.

ಟಾಸ್ ಸೋತು ಬ್ಯಾಟಿಂಗ್​ಗೆ ಇಳಿದ ಆರ್​ಸಿಬಿ ಆರಂಭದಲ್ಲೇ ಪ್ರಮುಖ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. ಓಪನರ್​ ದೇವದತ್ ಪಡಿಕ್ಕಲ್ ಈ ಬಾರಿ ಕೇವಲ 5 ರನ್​ಗೆ ಔಟ್ ಆಗುವ ಮೂಲಕ ನಿರಾಸೆ ಮೂಡಿಸಿದರೆ, ನಾಯಕ ವಿರಾಟ್ ಕೊಹ್ಲಿ ಕೇವಲ 7 ರನ್​ಗೆ ನಿರ್ಗಮಿಸಿದರು.
ಈ ಸಂದರ್ಭ ಜೊತೆಯಾದ ಎಬಿ ಡಿವಿಲಿಯರ್ಸ್ ಹಾಗೂ ಜೋಶ್ ಫಿಲಿಪ್ ತಂಡವನ್ನು ಆರಂಭಿಕ ಆಘಾತದಿಂದ ಪಾರುಮಾಡಿದರು. ಆದರೆ, ಈ ಜೋಡಿಯ ಜೊತೆಯಾಟ 43 ರನ್​ಗೆ ಅಂತ್ಯವಾಯಿತು. ಡಿವಿಲಿಯರ್ಸ್ 24 ಎಸೆತಗಳಲ್ಲಿ 24 ರನ್ ಬಾರಿಸಿ ಔಟ್ ಆಗಿ ಶಾಕ್ ನೀಡಿದರು. ಇದರ ಬೆನ್ನಲ್ಲೇ 32 ರನ್ ಗಳಿಸಿದ್ದ ಫಿಲಿಪ್ ಕೂಡ ಬ್ಯಾಟ್ ಕೆಳಗಿಟ್ಟರು.ವಾಷಿಂಗ್ಟನ್ ಸುಂದರ್(21) ತಂಡದ ಖಾತೆಗೆ ತಮ್ಮ ಕೈಲಾದಷ್ಟು ರನ್ ಸೇರಿಸಿದರು. ಕ್ರಿಸ್ ಮೊರೀಶ್ ಮೂರು ರನ್​ಗೆ ಸುಸ್ತಾದರು. ಉಸುರು ಉದಾನ ಸೊನ್ನೆ ಸುತ್ತಿದರು. ಗುರುಕೀರತ್ 24 ಎಸೆತಗಳಲ್ಲಿ ಅಜೇಯ 16 ರನ್ ಗಳಿಸಿದರು.

ಅಂತಿಮವಾಗಿ ಆರ್​ಸಿಬಿ 20 ಓವರ್​ಗಳಲ್ಲಿ 7 ವಿಕೆಟ್ ನಷ್ಟಕ್ಕೆ 120 ರನ್ ಗಳಿಸಿತು. ಎಸ್​ಆರ್​ಹೆಚ್ ಪರ ಸಂದೀಪ್ ಶರ್ಮಾ ಹಾಗೂ ಜೇಸನ್ ಹೋಲ್ಡರ್ ತಲಾ 2 ವಿಕೆಟ್ ಕಿತ್ತರೆ, ಟಿ. ನಟರಾಜನ್, ರಶೀದ್ ಖಾನ್ ಹಾಗೂ ಶಜ್ಬಾಜ್ ನದೀಂ ತಲಾ 1 ವಿಕೆಟ್ ಪಡೆದರು.

ಸನ್​ರೈಸರ್ಸ್​ ಹೈದರಾಬಾದ್: ಡೇವಿಡ್ ವಾರ್ನರ್ (ನಾಯಕ), ಕೇನ್ ವಿಲಿಯಮ್ಸನ್, ಮನೀಷ್ ಪಾಂಡೆ, ವೃದ್ದಿಮಾನ್ ಸಾಹ, ಜೇಸನ್ ಹೋಲ್ಡರ್, ಅಭಿಷೇಕ್ ಶರ್ಮಾ, ಶಹ್ಬಾಜ್ ನದೀಂ, ರಶೀದ್ ಖಾನ್, ಅಬ್ದುಲ್ ಸಮದ್, ಸಂದೀಪ್ ಶರ್ಮಾ, ಟಿ. ನಟರಾಜನ್.

ರಾಯಲ್ ಚಾಲೆಂಜರ್ಸ್​ ಬೆಂಗಳೂರು: ದೇವದತ್ ಪಡಿಕ್ಕಲ್, ಜೋಷ್ ಫಿಲಿಪ್, ವಿರಾಟ್ ಕೊಹ್ಲಿ (ನಾಯಕ), ಎಬಿ ಡಿವಿಲಿಯರ್ಸ್‌ (ವಿ.ಕೀ), ಗುರುಕೀರತ್ ಮನ್​ಸಿಂಗ್, ಕ್ರಿಸ್ ಮೊರೀಸ್, ವಾಷಿಂಗ್ಟನ್ ಸುಂದರ್, ಇಸುರು ಉದಾನ, ನವ್​ದೀಪ್ ಸೈನಿ, ಮೊಹಮ್ಮದ್ ಸಿರಾಜ್, ಯಜುವೇಂದ್ರ ಚಾಹಲ್.
Published by: Vinay Bhat
First published: October 31, 2020, 9:05 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories