ಅಬುಧಾಬಿಯ ಶೇಖ್ ಜಾಹೇದ್ ಕ್ರೀಡಾಂಗಣದಲ್ಲಿ ನಿನ್ನೆ ಶನಿವಾರ ನಡೆದ ಐಪಿಎಲ್ನ 15ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ಭರ್ಜರಿ ಗೆಲುವು ಸಾಧಿಸಿತು. ಬ್ಯಾಟಿಂಗ್- ಬೌಲಿಂಗ್ನಲ್ಲಿ ಮಿಂಚಿದ ಕೊಹ್ಲಿ ಹುಡುಗರು 8 ವಿಕೆಟ್ಗಳ ಜಯದೊಂದಿಗೆ ಹ್ಯಾಟ್ರಿಕ್ ಗೆಲುವು ದಾಖಲಿಸಿತು.
ಆರ್ಸಿಬಿ ಗೆಲ್ಲಲು ಪ್ರಮಖ ಕಾರಣ ಕಿಂಗ್ ಕೊಹ್ಲಿಯ ಮನಮೋಹಕ ಇನ್ನಿಂಗ್ಸ್. ಆರಂಭದ ಮೂರು ಪಂದ್ಯಗಳಲ್ಲಿ ಕಳಪೆ ಪ್ರದರ್ಶನ ತೋರಿದ್ದ ಕಾರಣ ಆರ್ಆರ್ ವಿರುದ್ಧ ಕೊಹ್ಲಿ ಅಬ್ಬರಿಸಲೇ ಬೇಕಾಗಿತ್ತು. ಅದರಂತೆ ಕೊಹ್ಲಿ ಫಾರ್ಮ್ ಕಂಡುಕೊಂಡು ಐಪಿಎಲ್ ಇತಿಹಾಸದಲ್ಲಿ ಹೊಸ ದಾಖಲೆ ಬರೆದರು.
RCB vs RR: ರಾಯಲ್ಸ್ ಎದುರು ಮಿಂಚಿದ ಚಾಲೆಂಜರ್ಸ್: ಅಂಕಪಟ್ಟಿಯಲ್ಲಿ ಆರ್ಸಿಬಿ ಟಾಪ್!
ನಿನ್ನೆಯ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಕೇವಲ 53 ಎಸೆತಗಳಲ್ಲಿ 7 ಬೌಂಡರಿ, 2 ಸಿಕ್ಸರ್ ಸಿಡಿಸಿ ಅಜೇಯ 75 ರನ್ ಚಚ್ಚಿದರು. ಈ ಮೂಲಕ ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ವಿರಾಟ್ ಕೊಹ್ಲಿ 5,500 ರನ್ ಗಡಿ ದಾಟಿದರು. ಐಪಿಎಲ್ನಲ್ಲಿ ಈ ಸಾಧನೆ ಮಾಡಿದ ಏಕೈಕ ಆಟಗಾರ ಎಂಬ ಗೌರವಕ್ಕೆ ಪಾತ್ರರಾದರು. ಕೊಹ್ಲಿ 157ನೇ ಪಂದ್ಯದಲ್ಲಿ ಈ ಸಾಧನೆ ಮಾಡಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸುರೇಶ್ ರೈನಾ 5,000ಕ್ಕಿಂತ ಹೆಚ್ಚಿನ ರನ್ ಗಳಿಸಿ 2ನೇ ಸ್ಥಾನದಲ್ಲಿದ್ದಾರೆ. 4500ಕ್ಕಿಂತ ಹೆಚ್ಚು ರನ್ ಬಾರಿಸಿರುವ ಮುಂಬೈ ಇಂಡಿಯನ್ಸ್ ತಂಡದ ರೋಹಿತ್ ಶರ್ಮ 3ನೇ ಸ್ಥಾನದಲ್ಲಿದ್ದಾರೆ.
ನಿನ್ನೆಯ ಪಂದ್ಯದಲ್ಲಿ ರಾಜಸ್ಥಾನ್ ನೀಡಿದ್ದ 155 ರನ್ಗಳ ಸಾಧಾರಣ ಗುರಿ ಬೆನ್ನಟ್ಟಿದ ಆರ್ಸಿಬಿ ಆರಂಭದಲ್ಲೇ ಆ್ಯರೋನ್ ಫಿಂಚ್(8) ವಿಕೆಟ್ ಕಳೆದುಕೊಂಡಿತು. ಆದರೆ, ನಂತರ ಶುರುವಾಗಿದ್ದು, ದೇವದತ್ ಪಡಿಕ್ಕಲ್ ಹಾಗೂ ನಾಯಕ ವಿರಾಟ್ ಕೊಹ್ಲಿ ಜೋಡಿಯ ಬೊಂಬಾಟ್ ಆಟ.
RCB vs RR: ವಿವಾದಕ್ಕೆ ಕಾರಣವಾಯ್ತು ಚಹಾಲ್ ಹಿಡಿದ ಆ ಒಂದು ಕ್ಯಾಚ್: ಇಲ್ಲಿದೆ ವಿಡಿಯೋ
ಪಡಿಕ್ಕಲ್ ಬಿರುಸಿನ ಬ್ಯಾಟಿಂಗ್ ನಡೆಸಿದರೆ ಕಿಂಗ್ ಕೊಹ್ಲಿ ಅತ್ಯುತ್ತಮ ಸಾತ್ ನೀಡಿದರು. ಈ ಜೋಡಿ ತಂಡದ ಗೆಲುವನ್ನು ಪಕ್ಕ ಮಾಡಿತು. ಜೊತೆಗೆ ಬರೋಬ್ಬರು 99 ರನ್ಗಳ ಜೊತೆಯಾಟ ಆಡಿತು. ಪಡಿಕ್ಕಲ್ 53 ಎಸೆತಗಳಲ್ಲಿ 6 ಬೌಂಡರಿ, 1 ಸಿಕ್ಸರ್ ಬಾರಿಸಿ 63 ರನ್ ಚಚ್ಚಿದರು.
ಆರ್ಸಿಬಿ 19.1 ಓವರ್ನಲ್ಲಿ 2 ವಿಕೆಟ್ ನಷ್ಟಕ್ಕೆ 158 ರನ್ ಗಳಿಸುವ ಮೂಲಕ ಗೆಲುವು ಸಾಧಿಸಿತು. 8 ವಿಕೆಟ್ಗಳ ಬೊಂಬಾಟ್ ಜಯದೊಂದಿಗೆ ಆರ್ಸಿಬಿ ತಂಡ ಐಪಿಎಲ್ 2020 ರಲ್ಲಿ 6 ಅಂಕ ಸಂಪಾದಿಸಿತು. ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ