IPL

  • associate partner
HOME » NEWS » Ipl » IPL 2020 RCB VS RR RCB SPINNER YUZVENDRA CHAHALS CATCH TO DISMISS SANJU SAMSON SPARKS CONTROVERSY VB

RCB vs RR: ವಿವಾದಕ್ಕೆ ಕಾರಣವಾಯ್ತು ಚಹಾಲ್ ಹಿಡಿದ ಆ ಒಂದು ಕ್ಯಾಚ್: ಇಲ್ಲಿದೆ ವಿಡಿಯೋ

ಈ ಕ್ಯಾಚ್ ಪಂದ್ಯಕ್ಕೆ ಹೊಸ ತಿರುವನ್ನೇ ನೀಡಿತು. ರಾಜಸ್ಥಾನ್ ರಾಯಲ್ಸ್ ತಂಡ ದಿಢೀರ್ ಕುಸಿತ ಕಾಣಲು ಇದು ಪ್ರಮುಖ ಕಾರಣವಾಯಿತು.

news18-kannada
Updated:October 3, 2020, 8:48 PM IST
RCB vs RR: ವಿವಾದಕ್ಕೆ ಕಾರಣವಾಯ್ತು ಚಹಾಲ್ ಹಿಡಿದ ಆ ಒಂದು ಕ್ಯಾಚ್: ಇಲ್ಲಿದೆ ವಿಡಿಯೋ
ಚಹಾಲ್ ಕ್ಯಾಚ್ ಹಿಡಿಯುತ್ತಿರುವುದು.
  • Share this:
ಅಬುಧಾಬಿಯ ಶೇಖ್‌ ಜಾಹೇದ್‌ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್​ನ 15ನೇ ಪಂದ್ಯ ಸಾಕಷ್ಟು ಕುತೂಹಲ ಕೆರಳಿಸಿತ್ತು. ರಾಜಸ್ಥಾನ್ ರಾಯಲ್ಸ್ ತಂಡ ನೀಡಿದ್ದ 155 ರನ್​ಗಳ ಟಾರ್ಗೆಟ್ ಬೆನ್ನಟ್ಟಿದ ಆರ್​ಸಿಬಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸುವ ಮೂಲಕ 8 ವಿಕೆಟ್​ಗಳ ಅಮೋಘ ಗೆಲುವು ಸಾಧಿಸಿತು. ನಾಯಕ ವಿರಾಟ್ ಕೊಹ್ಲಿ ಹಾಗೂ ದೇವದತ್ ಪಡಿಕ್ಕಲ್ ಆಕರ್ಷಕ ಅರ್ಧಶತಕ ಸಿಡಿಸಿ ಮಿಂಚಿದರು. ಈ ಮೂಲಕ ಪಾಯಿಂಟ್ ಪಟ್ಟಿಯಲ್ಲಿ ಆರ್​ಸಿಬಿ ಅಗ್ರಸ್ಥಾನಕ್ಕೇರಿತು. ಕಳೆದ ಪಂದ್ಯಕ್ಕೆ ಹೋಲಿಸಿದರೆ ಆರ್​ಆರ್​ ತಂಡದ ಬ್ಯಾಟ್ಸ್​ಮನ್​ಗಳು ಇಂದಿನ ಪಂದ್ಯದಲ್ಲಿ ಸಂಪೂರ್ಣ ವೈಫಲ್ಯ ಅನುಭಿಸಿದರು. ನಾಯಕ ಸ್ಟೀವ್ ಸ್ಮಿತ್, ಜಾಸ್ ಬಟ್ಲರ್, ಸಂಜು ಸ್ಯಾಮ್ಸನ್, ರಾಬಿನ್ ಉತ್ತಪ್ಪ ರನ್ ಕಲೆಹಾಕಲು ಪರದಾಡಿದರು.

ಈ ನಡುವೆ ಆರ್​​ಆರ್​ ತಂಡದ ಸ್ಟಾರ್ ಬ್ಯಾಟ್ಸ್​ಮನ್​ ಸಂಜು ಸ್ಯಾಮ್ಸನ್ ಔಟ್ ಆದ ಬಗೆ ಸದ್ಯ ವಿವಾದಕ್ಕೆ ಕಾರಣವಾಗಿದೆ. ಯಜುವೇಂದ್ರ ಚಹಾಲ್ ಅವರು ತಮ್ಮ ಮೊದಲ ಓವರ್​ನ ಮೊದಲ ಎಸೆತದಲ್ಲೇ ಸ್ಯಾಮ್ಸನ್ ವಿಕೆಟ್ ಪಡೆದುಕೊಂಡರು. ಆದರೆ, ಅವರು ಔಟ್ ಆದ ರೀತಿ ವಿವಾದಕ್ಕೆ ಎಡೆಮಾಡಿಕೊಟ್ಟಿದೆ.

RCB vs RR: ರಾಯಲ್ಸ್ ಎದುರು ಮಿಂಚಿದ ಚಾಲೆಂಜರ್ಸ್​: ಅಂಕಪಟ್ಟಿಯಲ್ಲಿ ಆರ್​ಸಿಬಿ ಟಾಪ್!

ಚಹಾಲ್ ಬೌಲಿಂಗ್ ಅನ್ನು ಸಂಜು ಸ್ಯಾಮ್ಸನ್ ಅವರು ಡಿಫೆನ್ಸ್ ಮಾಡಲು ಮುಂದಾದರು. ಆದರೆ, ಸರಿಯಾಗಿ ಕನೆಕ್ಟ್ ಆಗದ ಕಾರಣ ಚೆಂಡು ನೇರವಾಗಿ ಚಹಾಲ್ ಕೈಸೇರಿತು. ಡೈ ಬಿದ್ದು ಚಹಾಲ್ ಕ್ಯಾಚ್ ಹಿಡಿದರು. ಅಂಪೈರ್ ಕೂಡ ಔಟ್ ಎಂದು ತೀರ್ಮಾನ ನೀಡಿದರು.ಆದರೆ ಔಟ್ ಆದ ಬಗ್ಗೆ ಗೊಂದಲವಿದ್ದ ಕಾರಣ ಥರ್ಡ್​ ಅಂಪೈರ್ ಮೊರೆಹೋದರು. ಮೇಲ್ನೋಟಕ್ಕೆ ಚಹಾಲ್​ ಕ್ಯಾಚ್​ ಹಿಡಿಯುವ ಸಂದರ್ಭದಲ್ಲಿ ಚೆಂಡು ನೆಲಕ್ಕೆ ತಾಗಿದಂತೆ ಕಾಣುತ್ತಿತ್ತು. ಎರಡು ಮೂರು ಬಾರಿ ರಿಪ್ಲೇ ನೋಡಿದ ಮೂರನೇ ಅಂಪೈರ್​ ಕೂಡ ಸ್ಪಷ್ಟವಾಗಿ ತೀರ್ಪು ನೀಡಲಾಗದೇ ಅಂತಿಮವಾಗಿ ಮೈದಾನದ ಅಂಪೈರ್​ ತೀರ್ಮಾನವನ್ನೇ ಎತ್ತಿ ಹಿಡಿದರು.ಆದರೆ, ಅಂಪೈರ್ ಔಟ್ ಕೊಟ್ಟ ತಕ್ಷಣ ಟ್ವಿಟ್ಟರ್​ನಲ್ಲಿ ಈ ಬಗ್ಗೆ ಚರ್ಚೆಗಳು ಶುರುವಾಗಿದೆ. ಕ್ರಿಕೆಟ್​ ನಿಯಮಗಳ ಪ್ರಕಾರ ಅಸ್ಪಷ್ಟವಾದರೆ ಅದರ ಲಾಭವನ್ನು ಬ್ಯಾಟ್ಸ್​ಮನ್​ಗೆ ನೀಡಬೇಕು. ಆದರೆ, ಇಲ್ಲಿ ಸಾಮ್ಸನ್​ಗೆ ಅನ್ಯಾಯವಾಗಿದೆ ಎಂದು ಅಂಪೈರ್ ವಿರುದ್ಧ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

IPL 2020 LIVE Score, DC vs KKR

ಈ ಕ್ಯಾಚ್ ಪಂದ್ಯಕ್ಕೆ ಹೊಸ ತಿರುವನ್ನೇ ನೀಡಿತು. ಆರ್​ಆರ್​ ದಿಢೀರ್ ಕುಸಿತ ಕಾಣಲು ಇದು ಪ್ರಮುಖ ಕಾರಣವಾಯಿತು. ಸಾಮ್ಸನ್​ ಮೊದಲ ಪಂದ್ಯದಲ್ಲಿ 74, ಎರಡನೇ ಪಂದ್ಯದಲ್ಲಿ 85 ರನ್​ಗಳಿಸಿದ್ದರೆ, 3 ಮತ್ತು 4 ನೇ ಪಂದ್ಯದಲ್ಲಿ 8 ಮತ್ತು 4 ರನ್​ಗಳಿಗೆ ಔಟಾದರು.
Published by: Vinay Bhat
First published: October 3, 2020, 8:48 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories