IPL

  • associate partner

RCB vs MI: ಆರ್​ಸಿಬಿಯಲ್ಲಿ ಫಾರ್ಮ್​ ಕಳೆದುಕೊಂಡವರದೇ ದೊಡ್ಡ ಪಟ್ಟಿ: ಗೆಲುವಿನ ನಗು ಬೀರಲು ಎಬಿಡಿ, ಪಡಿಕ್ಕಲ್​, ಚಹಾಲ್​ ಗಟ್ಟಿ

IPL 2020 Match Today: ಮುಂಬೈ ತಂಡದಲ್ಲಿ ಬದಲಾವಣೆ ಕಡಿಮೆ ಎನ್ನಲಾಗಿದೆ. ಸೌರಭ್​ ತಿವಾರಿ ಬದಲಿಗೆ ಇಶಾನ್​ ಕಿಶನ್​ ಕಣಕ್ಕೆ ಇಳಿಯಬಹುದು. ಆಲ್​ ರೌಂಡರ್​ ಹಾರ್ದಿಕ್​ ಪಾಂಡ್ಯ ಬಾಲಿಂಗ್​ ಮಾಡದಿದ್ದರೂ ಉತ್ತಮ ಬ್ಯಾಟಿಂಗ್​ ಮಾಡುತ್ತಿದ್ದಾರೆ. ಟ್ರೆಂಟ್​ ಬೌಲ್ಟ್ ಆರ್​​ಸಿಬಿ ವಿರುದ್ಧ​ ಪ್ರಮುಖ ಬೌಲರ್​ ಆಗಲಿದ್ದಾರೆ ಎನ್ನಲಾಗಿದೆ

news18-kannada
Updated:September 28, 2020, 1:41 PM IST
RCB vs MI: ಆರ್​ಸಿಬಿಯಲ್ಲಿ ಫಾರ್ಮ್​ ಕಳೆದುಕೊಂಡವರದೇ ದೊಡ್ಡ ಪಟ್ಟಿ: ಗೆಲುವಿನ ನಗು ಬೀರಲು ಎಬಿಡಿ, ಪಡಿಕ್ಕಲ್​, ಚಹಾಲ್​ ಗಟ್ಟಿ
ಕೊಹ್ಲಿ-ರೋಹಿತ್​ ಶರ್ಮಾ
  • Share this:
ಮೊದಲ ಪಂದ್ಯದಲ್ಲಿ ಶುಭಾರಂಭ ಮಾಡಿ ನಂತರ ಹೀನಾಯವಾಗಿ ಸೋತಿರುವ ವಿರಾಟ್​ ಕೊಹ್ಲಿ ನೇತೃತ್ವದ ಆರ್​​ಸಿಬಿ ತಂಡ ಇಂದು, ಹಾಲಿ ಚಾಂಪಿಯನ್ಸ್​ ಮುಂಬೈ ಇಂಡಿಯನ್ಸ್​ ತಂಡವನ್ನು ಎದುರಿಸಲಿದೆ. ಮೊದಲ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಆರ್​ಸಿಬಿ ತಂಡದ ಆಟಗಾರರು ಎರಡನೇ ಪಂದ್ಯದಲ್ಲಿ ಸಂಪೂರ್ಣ ಫಾರ್ಮ್​ ಕಳೆದುಕೊಂಡಂತೆ ಭಾಸವಾಗಿತ್ತು. ಇನ್ನು, ಮುಂಬೈ ತಂಡ ಮೊದಲ ಪಂದ್ಯದಲ್ಲಿ ಸೋತು ಎರಡನೇ ಪಂದ್ಯ ಗೆದ್ದಿತ್ತು. ಎರಡೂ ತಂಡಗಳು ತಲಾ ಒಂದು ಪಂದ್ಯ ಗೆದ್ದಿರುವುದರಿಂದ ಎರಡೂ ತಂಡಕ್ಕೆ ಇಂದಿನ ಪಂದ್ಯ ಮುಖ್ಯವಾಗಿದೆ. ಎರಡು ಪಂದ್ಯಗಳಿಂದ ವಿರಾಟ್​ ಕೊಹ್ಲಿ ಪೇರಿಸಿದ್ದು ಕೇವಲ 15 ರನ್​ಗಳಷ್ಟೇ. ಅವರ ಫಾರ್ಮ್​ ವಿಚಾರ ತಂಡಕ್ಕೆ ದೊಡ್ಡ ತಲೆನೋವಾಗಿದೆ. ಇಂದಾದರೂ ಅವರು ಉತ್ತಮ ಪ್ರದರ್ಶನ ನೀಡುತ್ತಾರಾ ಎನ್ನುವ ಕುತೂಹಲ ಅಭಿಮಾನಿಗಳದ್ದು. ಚೆನ್ನೈ ವಿರುದ್ಧ ಸೋತರೂ ಕೆಕೆಆರ್​ ವಿರುದ್ಧ ಗೆದ್ದು ಬೀಗಿರುವುದರಿಂದ ಮುಂಬೈ ವಿಶ್ವಾಸ ಮತ್ತಷ್ಟು ಹೆಚ್ಚಿದೆ.

ಮೊದಲ ಪಂದ್ಯದಲ್ಲಿ ಮಿಂಚಿದ್ದ ಕನ್ನಡಿಗ ದೇವೆಂದ್ರ ಪಡಿಕ್ಕಲ್​, ಎರಡನೇ ಪಂದ್ಯದಲ್ಲಿ ನಿರಾಸೆ ಮೂಡಿಸಿದ್ದರು. ಹೀಗಾಗಿ, ಇಂದು ಸಿಗುವ ಅವಕಾಶವನ್ನು ಅವರು ಸರಿಯಾಗಿ ಬಳಕೆ ಮಾಡಿಕೊಳ್ಳಬೇಕಿದೆ. ಆಸ್ಟ್ರೇಲಿಯಾ ಆಟಗಾರ ಆರನ್​ ಫಿಂಚ್​ ಇನ್ನೂ ಕೆಲ ಹೊತ್ತು ಸ್ಕ್ರೀಜ್​ನಲ್ಲಿ ನಿಲ್ಲಬೇಕಿದೆ. ಇನ್ನು, ತಂಡಕ್ಕೆ ವೇಗದ ಬೌಲರ್​ಗಳ ಸಮಸ್ಯೆ ದೊಡ್ಡದಾಗಿ ಕಾಡುತ್ತಿದೆ.ಡೇಲ್​ ಸ್ಟೈನ್​ ಕಳೆದ ಪಂದ್ಯದಲ್ಲಿ ಒಂದೂ ವಿಕೆಟ್ ಕೀಳದೆ 57 ರನ್​ ಕೊಟ್ಟಿದ್ದರು. ಡೆತ್​ ಓವರ್​ಗಳಲ್ಲಿ ಅವರು ದುಬಾರಿ ಆಗಿದ್ದರು. ಹೀಗಾಗಿ ಸ್ಟೈನ್​ ಬದಲಿಗೆ ಇಸುರು ಉದಾನ ಕಣಕ್ಕೆ ಇಳಿಯುವ ಸಾಧ್ಯತೆ ಇದೆ. ಉಮೇಶ್​ ಯಾದವ್​ ಬದಲಿಗೆ ಮೊಹಮದ್​ ಸಿರಾಜ್​ ಆಡಬಹುದು. ಉತ್ತಮ ಪ್ರದರ್ಶನ ತೋರದ ಜೋಶ್​ ಫಿಲಿಪ್​ ಬದಲಿಗೆ ಆಲ್​ರೌಂಡರ್​ ಮೊಯಿನ್​ ಅಲಿ ಕಣಕ್ಕೆ ಬರಬಹುದು. ಹಾಗಾದರೆ, ಎಬಿ ಡಿವಿಲಿಯರ್ಸ್​ ಕೀಪಿಂಗ್​ ಮಾಡಲಿದ್ದಾರೆ.
ಇನ್ನು, ಮುಂಬೈ ತಂಡದಲ್ಲಿ ಬದಲಾವಣೆ ಕಡಿಮೆ ಎನ್ನಲಾಗಿದೆ. ಸೌರಭ್​ ತಿವಾರಿ ಬದಲಿಗೆ ಇಶಾನ್​ ಕಿಶನ್​ ಕಣಕ್ಕೆ ಇಳಿಯಬಹುದು. ಆಲ್​ ರೌಂಡರ್​ ಹಾರ್ದಿಕ್​ ಪಾಂಡ್ಯ ಬಾಲಿಂಗ್​ ಮಾಡದಿದ್ದರೂ ಉತ್ತಮ ಬ್ಯಾಟಿಂಗ್​ ಮಾಡುತ್ತಿದ್ದಾರೆ. ಟ್ರೆಂಟ್​ ಬೌಲ್ಟ್ ಆರ್​​ಸಿಬಿ ವಿರುದ್ಧ​ ಪ್ರಮುಖ ಬೌಲರ್​ ಆಗಲಿದ್ದಾರೆ ಎನ್ನಲಾಗಿದೆ.
Published by: Rajesh Duggumane
First published: September 28, 2020, 1:34 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading