IPL

  • associate partner

RCB vs MI: ಎಬಿಡಿ-ಪಡಿಕ್ಕಲ್-ಫಿಂಚ್ ಫಿಫ್ಟಿಯಾಟ: ಮುಂಬೈ ಮುಂದಿದೆ ಕಠಿಣ ಸವಾಲು

RCB vs MI: ಉಭಯ ತಂಡಗಳು 25 ಬಾರಿ ಮುಖಾಮುಖಿಯಾಗಿದ್ದು, ಅದರಲ್ಲಿ ಆರ್​ಸಿಬಿ ಗೆದ್ದಿದ್ದು ಕೇವಲ 9 ಬಾರಿ ಮಾತ್ರ. ಹಾಗೆಯೇ 16 ಬಾರಿ ಬೆಂಗಳೂರು ವಿರುದ್ಧ ಮೇಲುಗೈ ಸಾಧಿಸಿರುವ ಮುಂಬೈ ಇಂಡಿಯನ್ಸ್ ಅದೇ ಆತ್ಮ ವಿಶ್ವಾಸದಲ್ಲಿಂದು ಕಣಕ್ಕಿಳಿದಿದೆ.

news18-kannada
Updated:September 28, 2020, 10:43 PM IST
RCB vs MI: ಎಬಿಡಿ-ಪಡಿಕ್ಕಲ್-ಫಿಂಚ್ ಫಿಫ್ಟಿಯಾಟ: ಮುಂಬೈ ಮುಂದಿದೆ ಕಠಿಣ ಸವಾಲು
rcb
  • Share this:
ಐಪಿಎಲ್​ನ 10ನೇ ಪಂದ್ಯದಲ್ಲಿ  ಮೊದಲು ಬ್ಯಾಟ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮುಂಬೈ ಇಂಡಿಯನ್ಸ್​ಗೆ 202 ರನ್​ಗಳ ಟಾರ್ಗೆಟ್ ನೀಡಿದೆ.  ದೇವದತ್ ಪಡಿಕ್ಕಲ್-ಫಿಂಚ್ ಹಾಗೂ ಎಬಿ ಡಿವಿಲಿಯರ್ಸ್ ಅವರ ಸ್ಪೋಟಕ ಹಾಫ್ ಸೆಂಚುರಿ ನೆರವಿನಿಂದ ಆರ್​ಸಿಬಿ ಬೃಹತ್ ಮೊತ್ತ ಪೇರಿಸುವಂತಾಯಿತು. ಇದಕ್ಕೂ ಮುನ್ನ ಟಾಸ್ ಗೆದ್ದ ಮುಂಬೈ ನಾಯಕ ರೋಹಿತ್ ಶರ್ಮಾ ಮೊದಲು ಬ್ಯಾಟಿಂಗ್ ಆಯ್ದುಕೊಂಡರು.  ಅದರಂತೆ ಇನಿಂಗ್ಸ್ ಆರಂಭಿಸಿದ ಆರ್​ಸಿಬಿ ಓಪನರ್​ಗಳಾದ ದೇವದತ್ ಪಡಿಕ್ಕಲ್ ಹಾಗೂ ಆರೋನ್ ಫಿಂಚ್ ಉತ್ತಮ ಆರಂಭ ಒದಗಿಸಿದರು. ಮೊದಲ ಮೂರು ಓವರ್​ಗಳಲ್ಲಿ 26 ರನ್​ ಕಲೆಹಾಕಿದ ಈ ಜೋಡಿ ನಂತರದ ಮೂರು ಓವರ್​ಗಳಲ್ಲಿ 33 ರನ್ ಸಿಡಿಸಿದರು. ಪರಿಣಾಮ ಪವರ್​ಪ್ಲೇ ನಲ್ಲಿ ಆರ್​ಸಿಬಿ ಮೊತ್ತ ವಿಕೆಟ್ ನಷ್ಟವಿಲ್ಲದೆ 59 ಬಂದು ನಿಂತಿತು.

ಪವರ್​ ಪ್ಲೇ ಬಳಿಕ ಕೂಡ ಬಿರುಸಿನ ಆಟ ಮುಂದುವರೆಸಿದ ಫಿಂಚ್ 31 ಎಸೆತಗಳಲ್ಲಿ ಐಪಿಎಲ್​ನಲ್ಲಿ ತಮ್ಮ 14ನೇ ಅರ್ಧಶತಕ ಪೂರೈಸಿದರು. ಈ ಸ್ಪೋಟಕ ಇನಿಂಗ್ಸ್​ನಲ್ಲಿ 7 ಬೌಂಡರಿ ಹಾಗೂ 1 ಸಿಕ್ಸರ್ ಸಿಡಿಸಿದ್ದರು. ಆದರೆ ಹಾಫ್ ಸೆಂಚುರಿ ಬಳಿಕ ಕೇವಲ 2 ರನ್ ಗಳಿಸಿದ ಫಿಂಚ್ ಬೌಲ್ಟ್ ಎಸೆತದಲ್ಲಿ ಪೊಲಾರ್ಡ್​ಗೆ ಕ್ಯಾಚ್ ನೀಡಿ ಹೊರ ನಡೆದರು.

ಫಿಂಚ್ ನಿರ್ಗಮನದೊಂದಿಗೆ ಆರ್​ಸಿಬಿಯ ರನ್ ಗತಿಯು ನಿಧಾನಗೊಂಡಿತು. ಅದರಲ್ಲೂ 11 ಎಸೆತಗಳನ್ನು ಎದುರಿಸಿದ ಆರ್​ಸಿಬಿ ನಾಯಕ ಕೊಹ್ಲಿ (3) ರನ್​ಗಾಗಿ ಪರದಾಡಿದರು. ಕೊನೆಗೆ ಚಹರ್ ಎಸೆತದಲ್ಲಿ ರೋಹಿತ್ ಶರ್ಮಾಗೆ ಕ್ಯಾಚ್ ನಿರ್ಗಮಿಸಿದರು. ನಂತರ ಜೊತೆಯಾದ ಎಬಿಡಿ - ಪಡಿಕ್ಕಲ್ ಉತ್ತಮ ಆಟ ಪ್ರದರ್ಶಿಸಿದರು. ಈ ವೇಳೆ ಗೇರ್ ಬದಲಿಸಿದ ದೇವದತ್​ ಬಿರುಸಿನ ಆಟಕ್ಕೆ ಒತ್ತು ನೀಡಿದರು. ಪರಿಣಾಮ 37 ಎಸೆತಗಳಲ್ಲಿ 5 ಬೌಂಡರಿ ಹಾಗೂ 2 ಸಿಕ್ಸರ್​ ಒಳಗೊಂಡ ಐಪಿಎಲ್​ನ 2ನೇ ಅರ್ಧಶತಕ ಪೂರೈಸಿದರು.

ಅಲ್ಲದೆ ತಂಡದ ಮೊತ್ತವನ್ನು 16 ಓವರ್​ಗಳಲ್ಲಿ 136 ರನ್​ಗೆ ತಂದು ನಿಲ್ಲಿಸಿದರು. ಕೊನೆಯ ನಾಲ್ಕು ಓವರ್​ಗಳಿರುವಾಗ ಎಬಿಡಿಯ ಸಿಡಿಲಬ್ಬರ ಕೂಡ ಶುರುವಾಯಿತು. ಅದರಂತೆ ಬುಮ್ರಾ ಅವರ 17ನೇ ಓವರ್​ನಲ್ಲಿ ಸಿಕ್ಸ್-ಫೋರ್​ಗಳನ್ನು ಬಾರಿಸುವ ಮೂಲಕ 18 ರನ್​ ಕಲೆಹಾಕಿದರು. ಆದರೆ 18ನೇ ಓವರ್​ನ ಮೊದಲ ಎಸೆತದಲ್ಲೇ ಪಡಿಕ್ಕಲ್ (54) ಬೌಲ್ಟ್​ಗೆ ವಿಕೆಟ್ ಒಪ್ಪಿಸಿದರು.

ಕೊನೆಯ ಓವರ್​ಗಳಲ್ಲಿ ಅಬ್ಬರಿಸಿದ ಎಬಿ ಡಿವಿಲಿಯರ್ಸ್ 23 ಎಸೆತಗಳಲ್ಲಿ 4 ಬೌಂಡರಿ ಹಾಗೂ 4 ಸಿಡಿಲಬ್ಬರದ ಸಿಕ್ಸರ್​ನೊಂದಿಗೆ ಐಪಿಎಲ್​ನ 25 ಅರ್ಧಶತಕ ಪೂರೈಸಿದರು. ಪ್ಯಾಟಿನ್ಸನ್ ಎಸೆದ ಅಂತಿಮ ಓವರ್​ನಲ್ಲಿ ಶಿವಂ ದುಬೆ 3 ಭರ್ಜರಿ ಸಿಕ್ಸರ್​ ಸಿಡಿಸುವ ಮೂಲಕ ತಂಡದ ಮೊತ್ತವನ್ನು 3 ವಿಕೆಟ್ ನಷ್ಟಕ್ಕೆ 201ಕ್ಕೆ ತಂದು ನಿಲ್ಲಿಸಿದರು. ಮುಂಬೈ ಪರ ಟ್ರೆಂಟ್ ಬೌಲ್ಟ್​ 4 ಓವರ್​ನಲ್ಲಿ 32 ರನ್​ಗೆ 2 ವಿಕೆಟ್ ಪಡೆದು ಗಮನ ಸೆಳೆದರು.





:

SCHEDULE TIME TABLE: ORANGE CAP:

PURPLE CAP:

RESULT DATA:

MOST SIXES:

KL Rahul: ಕನ್ನಡಿಗನ ಕಮಾಲ್: ಸಿಡಿಲಬ್ಬರದ ಒಂದು ಸೆಂಚುರಿಗೆ 8 ದಾಖಲೆಗಳು ಉಡೀಸ್..!
Published by: zahir
First published: September 28, 2020, 9:08 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading