news18-kannada Updated:September 28, 2020, 9:22 PM IST
ಮುಂಬೈ ಇಂಡಿಯನ್ಸ್
ಐಪಿಎಲ್ನ 10ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮುಖಾಮುಖಿಯಾಗಿದೆ. ಟಾಸ್ ಗೆದ್ದ ಮುಂಬೈ ನಾಯಕ ರೋಹಿತ್ ಶರ್ಮಾ ಮೊದಲು ಬ್ಯಾಟಿಂಗ್ ಆಯ್ದುಕೊಂಡರು.
ಅದರಂತೆ ಇನಿಂಗ್ಸ್ ಆರಂಭಿಸಿದ ಆರ್ಸಿಬಿ ಓಪನರ್ಗಳಾದ ದೇವದತ್ ಪಡಿಕ್ಕಲ್ ಹಾಗೂ ಆರೋನ್ ಫಿಂಚ್ ಉತ್ತಮ ಆರಂಭ ಒದಗಿಸಿದರು. ಮೊದಲ ಮೂರು ಓವರ್ಗಳಲ್ಲಿ 26 ರನ್ ಕಲೆಹಾಕಿದ ಈ ಜೋಡಿ ನಂತರದ ಮೂರು ಓವರ್ಗಳಲ್ಲಿ 33 ರನ್ ಸಿಡಿಸಿದರು. ಪರಿಣಾಮ ಪವರ್ಪ್ಲೇ ನಲ್ಲಿ ಆರ್ಸಿಬಿ ಮೊತ್ತ ವಿಕೆಟ್ ನಷ್ಟವಿಲ್ಲದೆ 59 ಬಂದು ನಿಂತಿತು.
ಪವರ್ ಪ್ಲೇ ಬಳಿಕ ಕೂಡ ಬಿರುಸಿನ ಆಟ ಮುಂದುವರೆಸಿದ ಫಿಂಚ್ 31 ಎಸೆತಗಳಲ್ಲಿ ಐಪಿಎಲ್ನಲ್ಲಿ ತಮ್ಮ 14ನೇ ಅರ್ಧಶತಕ ಪೂರೈಸಿದರು. ಈ ಸ್ಪೋಟಕ ಇನಿಂಗ್ಸ್ನಲ್ಲಿ 7 ಬೌಂಡರಿ ಹಾಗೂ 1 ಸಿಕ್ಸರ್ ಸಿಡಿಸಿದ್ದರು. ಆದರೆ ಹಾಫ್ ಸೆಂಚುರಿ ಬಳಿಕ ಕೇವಲ 2 ರನ್ ಗಳಿಸಿದ ಫಿಂಚ್ ಬೌಲ್ಟ್ ಎಸೆತದಲ್ಲಿ ಪೊಲಾರ್ಡ್ಗೆ ಕ್ಯಾಚ್ ನೀಡಿ ಹೊರ ನಡೆದರು.
ಫಿಂಚ್ ನಿರ್ಗಮನದೊಂದಿಗೆ ಆರ್ಸಿಬಿಯ ರನ್ ಗತಿಯು ನಿಧಾನಗೊಂಡಿತು. ಅದರಲ್ಲೂ 11 ಎಸೆತಗಳನ್ನು ಎದುರಿಸಿದ ಆರ್ಸಿಬಿ ನಾಯಕ ಕೊಹ್ಲಿ (3) ರನ್ಗಾಗಿ ಪರದಾಡಿದರು. ಕೊನೆಗೆ ಚಹರ್ ಎಸೆತದಲ್ಲಿ ರೋಹಿತ್ ಶರ್ಮಾಗೆ ಕ್ಯಾಚ್ ನಿರ್ಗಮಿಸಿದರು. ನಂತರ ಜೊತೆಯಾದ ಎಬಿಡಿ - ಪಡಿಕ್ಕಲ್ ಉತ್ತಮ ಆಟ ಪ್ರದರ್ಶಿಸಿದರು. ಈ ವೇಳೆ ಗೇರ್ ಬದಲಿಸಿದ ದೇವದತ್ ಬಿರುಸಿನ ಆಟಕ್ಕೆ ಒತ್ತು ನೀಡಿದರು. ಪರಿಣಾಮ 37 ಎಸೆತಗಳಲ್ಲಿ 5 ಬೌಂಡರಿ ಹಾಗೂ 2 ಸಿಕ್ಸರ್ ಒಳಗೊಂಡ ಐಪಿಎಲ್ನ 2ನೇ ಅರ್ಧಶತಕ ಪೂರೈಸಿದರು.
ಅಲ್ಲದೆ ತಂಡದ ಮೊತ್ತವನ್ನು 16 ಓವರ್ಗಳಲ್ಲಿ 136 ರನ್ಗೆ ತಂದು ನಿಲ್ಲಿಸಿದರು. ಕೊನೆಯ ನಾಲ್ಕು ಓವರ್ಗಳಿರುವಾಗ ಎಬಿಡಿಯ ಸಿಡಿಲಬ್ಬರ ಕೂಡ ಶುರುವಾಯಿತು. ಅದರಂತೆ ಬುಮ್ರಾ ಅವರ 17ನೇ ಓವರ್ನಲ್ಲಿ ಸಿಕ್ಸ್-ಫೋರ್ಗಳನ್ನು ಬಾರಿಸುವ ಮೂಲಕ 18 ರನ್ ಕಲೆಹಾಕಿದರು. ಆದರೆ 18ನೇ ಓವರ್ನ ಮೊದಲ ಎಸೆತದಲ್ಲೇ ಪಡಿಕ್ಕಲ್ (54) ಬೌಲ್ಟ್ಗೆ ವಿಕೆಟ್ ಒಪ್ಪಿಸಿದರು.
ಕೊನೆಯ ಓವರ್ಗಳಲ್ಲಿ ಅಬ್ಬರಿಸಿದ ಎಬಿ ಡಿವಿಲಿಯರ್ಸ್ 23 ಎಸೆತಗಳಲ್ಲಿ 4 ಬೌಂಡರಿ ಹಾಗೂ 4 ಸಿಡಿಲಬ್ಬರದ ಸಿಕ್ಸರ್ನೊಂದಿಗೆ ಐಪಿಎಲ್ನ 25 ಅರ್ಧಶತಕ ಪೂರೈಸಿದರು. ಪ್ಯಾಟಿನ್ಸನ್ ಎಸೆದ ಅಂತಿಮ ಓವರ್ನಲ್ಲಿ ಶಿವಂ ದುಬೆ 3 ಭರ್ಜರಿ ಸಿಕ್ಸರ್ ಸಿಡಿಸುವ ಮೂಲಕ ತಂಡದ ಮೊತ್ತವನ್ನು 3 ವಿಕೆಟ್ ನಷ್ಟಕ್ಕೆ 201ಕ್ಕೆ ತಂದು ನಿಲ್ಲಿಸಿದರು. ಮುಂಬೈ ಪರ ಟ್ರೆಂಟ್ ಬೌಲ್ಟ್ 4 ಓವರ್ನಲ್ಲಿ 32 ರನ್ಗೆ 2 ವಿಕೆಟ್ ಪಡೆದು ಗಮನ ಸೆಳೆದರು.
ಸ್ಕೋರ್: 201/3ಓವರ್: 20
ಉಭಯ ತಂಡಗಳು ತಲಾ 2 ಪಂದ್ಯಗಳನ್ನು ಆಡಿದ್ದು, ಸೋಲು ಗೆಲುವಿನ ರುಚಿ ನೋಡಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಮೊದಲ ಸೋಲಿನ ಬಳಿಕ ಎಚ್ಚೆತ್ತುಕೊಂಡ ಮುಂಬೈ ಇಂಡಿಯನ್ಸ್ ಕೊಲ್ಕತ್ತಾ ವಿರುದ್ಧ ಭರ್ಜರಿ ಜಯ ಸಾಧಿಸಿದೆ. ಆದರೆ ಮೊದಲ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ಗೆ ಸೋಲಿನ ರುಚಿ ತೋರಿಸಿದ್ದ ರಾಯಲ್ಸ್ ಚಾಲೆಂಜರ್ಸ್ ಕಿಂಗ್ಸ್ ಇಲೆವೆನ್ ವಿರುದ್ಧ ಹೀನಾಯ ಸೋಲನುಭಸಿ ಮುಖಭಂಗಕ್ಕೆ ಒಳಗಾಗಿದೆ. ಹೀಗಾಗಿ ಇಂದಿನ ಪಂದ್ಯವು ಕೊಹ್ಲಿ ಪಡೆಗೆ ಮಹತ್ವದ್ದು ಎನಿಸಿಕೊಂಡಿದೆ.
ಇನ್ನು ಕಿಂಗ್ಸ್ ಇಲೆವೆನ್ ವಿರುದ್ಧದ ಸೋಲು ರಾಯಲ್ ಚಾಲೆಂಜರ್ಸ್ ತಂಡವನ್ನು ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನಕ್ಕೆ ದೂಡಿದ್ದು, ಮುಂಬೈ ವಿರುದ್ಧ ಭರ್ಜರಿ ಜಯ ಸಾಧಿಸುವ ಮೂಲಕ ಮತ್ತೆ ಮೇಲೆಕ್ಕೇರುವ ಇರಾದೆಯಲ್ಲಿದೆ ಕೊಹ್ಲಿ ಪಡೆ. ಅತ್ತ ರೋಹಿತ್ ಶರ್ಮಾ ಕೂಡ ಜಯದ ಲಯವನ್ನು ಮುಂದುವರೆಸುವ ಯೋಚನೆಯಲ್ಲಿದ್ದು, ಹೀಗಾಗಿ ಆರ್ಸಿಬಿ ವಿರುದ್ಧ ಬ್ಯಾಟಿಂಗ್ ಮತ್ತು ಬೌಲಿಂಗ್ನಲ್ಲಿ ಮೇಲುಗೈ ಸಾಧಿಸಿ ಆತ್ಮ ವಿಶ್ವಾಸ ಹೆಚ್ಚಿಸಿಕೊಳ್ಳುವ ತವಕದಲ್ಲಿದೆ.
ಉಭಯ ತಂಡಗಳ ಅಂಕಿ ಅಂಶಗಳು ಕೂಡ ರೋಹಿತ್ ಪಡೆ ಪರವಿದ್ದು, ಆರ್ಸಿಬಿ ವಿರುದ್ಧ ಆಡಿದ್ದ 25 ಪಂದ್ಯಗಳಲ್ಲಿ 16 ರಲ್ಲಿ ಮುಂಬೈ ಗೆದ್ದು ಬೀಗಿದೆ. ಇದೇ ಆತ್ಮವಿಶ್ವಾಸ ಒಂದೆಡೆಯಾದರೆ, ವಿರಾಟ್ ಕೊಹ್ಲಿ ನೇತೃತ್ವದ ಬೆಂಗಳೂರು 2014 ರಲ್ಲಿ ದುಬೈನಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಮುಂಬೈ ತಂಡವನ್ನು ಮಣಿಸಿದ ಕಾನ್ಫಿಡೆನ್ಸ್ನಲ್ಲಿದೆ. ಈ ಆರು ವರ್ಷಗಳ ಹಿಂದಿನ ಗೆಲುವಿನ ಲೆಕ್ಕಾಚಾರಗಳೊಂದಿಗೆ ಇಂದು ರಾಯಲ್ ಚಾಲೆಂಜರ್ಸ್ ಹುಡುಗರು ಕಣಕ್ಕಿಳಿಯಲ್ಲಿದ್ದಾರೆ.
ಇನ್ನು ಎರಡು ಪಡೆಯಲ್ಲೂ ದಾಂಡಿಗರ ದಂಡೇ ಇದ್ದು, ಆರ್ಸಿಬಿಯಲ್ಲಿರುವ ಆರೋನ್ ಫಿಂಚ್ಗೆ ಸರಿಸಾಟಿಯಾಗಿ ಮುಂಬೈನಲ್ಲಿ ಕ್ವಿಂಟನ್ ಡಿ ಕಾಕ್ ಇದ್ದಾರೆ. ಎಬಿಡಿಗೆ ಸವಾಲೆಸಿಯುವಂತೆ ಬ್ಯಾಟ್ ಬೀಸಬಲ್ಲ ಕೀರನ್ ಪೊಲಾರ್ಡ್ ಮುಂಬೈ ತಂಡದಲ್ಲಿದ್ದಾರೆ. ಇನ್ನು ನಾಯಕನ ಆಟವಾಡಲು ರೋಹಿತ್ ಶರ್ಮಾ ಇದ್ದರೆ, ಅವರಿಗೆ ಸಮನಾಗಿ ಬ್ಯಾಟ್ ಝಳಪಳಿಸಬಲ್ಲ ವಿರಾಟ್ ಕೊಹ್ಲಿ ಆರ್ಸಿಬಿ ತಂಡದಲ್ಲಿದ್ದಾರೆ. ಇನ್ನು ಆಲ್ರೌಂಡರ್ಗಳನ್ನು ಗಣನೆಗೆ ತೆಗೆದುಕೊಂಡರೆ ಮುಂಬೈ ತಂಡದಲ್ಲಿ ಪಾಂಡ್ಯ ಸಹೋದರಿದ್ದರೆ, ಆರ್ಸಿಬಿಯಲ್ಲಿ ಶಿವಂ ದುಬೆ, ಮೊಯೀನ್ ಅಲಿ/ವಾಷಿಂಗ್ಟನ್ ಸುಂದರ್ ಇದ್ದಾರೆ.
ಹಾಗೆಯೇ ಬೌಲಿಂಗ್ ವಿಭಾಗದಲ್ಲಿ ವಿಶ್ವದ ಅಗ್ರ ಕ್ರಮಾಂಕಗಳ ಬೌಲರುಗಳಾದ ಟ್ರೆಂಟ್ ಬೌಲ್ಟ್ ಹಾಗೂ ಜಸ್ಪ್ರೀತ್ ಬುಮ್ರಾ ಮುಂಬೈ ಇಂಡಿಯನ್ಸ್ ಶಕ್ತಿ. ಇತ್ತ ಸ್ಪೀಡ್ ಮಾಸ್ಟರ್ ಡೇಲ್ ಸ್ಟೇನ್ ಜೊತೆ ಸ್ಪಿನ್ ಮೋಡಿಗಾರ ಚಹಲ್ ಇರುವುದು ಆರ್ಸಿಬಿಯ ಪ್ಲಸ್ ಪಾಯಿಂಟ್. ಹೀಗಾಗಿ ಎರಡು ತಂಡಗಳು ಸಮಬಲ ಎಂದೇ ಹೇಳಬಹುದು.
:
SCHEDULE TIME TABLE:
ORANGE CAP:
PURPLE CAP:
RESULT DATA:
MOST SIXES:
KL Rahul: ಕನ್ನಡಿಗನ ಕಮಾಲ್: ಸಿಡಿಲಬ್ಬರದ ಒಂದು ಸೆಂಚುರಿಗೆ 8 ದಾಖಲೆಗಳು ಉಡೀಸ್..!
Published by:
zahir
First published:
September 28, 2020, 6:12 PM IST