ದುಬೈ ಅಂತರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆದ ಐಪಿಎಲ್ನ 10ನೇ ಪಂದ್ಯವು ರೋಚಕ ಹೋರಾಟಕ್ಕೆ ಸಾಕ್ಷಿಯಾಯಿತು. ಆರ್ಸಿಬಿ ನೀಡಿದ 202 ರನ್ಗಳ ಟಾರ್ಗೆಟ್ ಬೆನ್ನತ್ತಿದ ಮುಂಬೈ ಇಂಡಿಯನ್ಸ್ 201 ರನ್ ಗಳಿಸುವ ಮೂಲಕ ಸಮಬಲ ಸಾಧಿಸಿತು. ಬಳಿಕ ನಡೆದ ಸೂಪರ್ ಓವರ್ನಲ್ಲಿ ರೋಹಿತ್ ಪಡೆ ನೀಡಿದ 8 ರನ್ಗಳ ಗುರಿಯನ್ನು ಕೊನೆಯ ಎಸೆತದಲ್ಲಿ ಕಲೆಹಾಕುವ ಮೂಲಕ ಆರ್ಸಿಬಿ ರೋಚಕ ಜಯ ಸಾಧಿಸಿದೆ.
ಇದಕ್ಕೂ ಮುನ್ನ ಮೊದಲ ಇನಿಂಗ್ಸ್ನಲ್ಲಿ ಬ್ಯಾಟ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮುಂಬೈ ಇಂಡಿಯನ್ಸ್ಗೆ 202 ರನ್ಗಳ ಟಾರ್ಗೆಟ್ ನೀಡಿತು. ಈ ಬೃಹತ್ ಗುರಿ ಬೆನ್ನತ್ತಿದ ಮುಂಬೈ ಇಂಡಿಯನ್ಸ್ ಆರಂಭ ಉತ್ತಮವಾಗಿರಲಿಲ್ಲ. ನಾಯಕ ರೋಹಿತ್ ಶರ್ಮಾ ಕೇವಲ 8 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಇದರ ಬೆನ್ನಲ್ಲೇ ಇಸ್ರು ಉಡನಾ ಎಸೆತದಲ್ಲಿ ಕೀಪರ್ಗೆ ಕ್ಯಾಚ್ ಸೂರ್ಯ ಕುಮಾರ್ ಯಾದವ್ (0) ಬಂದ ವೇಗದಲ್ಲೇ ಪೆವಿಲಿಯನ್ ಕಡೆ ಮುಖ ಮಾಡಿದರು.ಇನ್ನು ಪವರ್ ಪ್ಲೇನಲ್ಲಿ ಮೂರು ಓವರ್ ಎಸೆದ ವಾಷಿಂಗ್ಟನ್ ಸುಂದರ್ ಸ್ಪಿನ್ ಮೋಡಿ ಮೂಲಕ ಮುಂಬೈ ಬ್ಯಾಟ್ಸ್ಮನ್ಗಳನ್ನು ಕಾಡಿದರು. ಈ ವೇಳೆ 1 ವಿಕೆಟ್ ಉರುಳಿಸಿ ನೀಡಿದ್ದು ಕೇವಲ 7 ರನ್ ಮಾತ್ರ. 7ನೇ ಓವರ್ನಲ್ಲಿ ಡಿಕಾಕ್ (14) ಚಾಹಲ್ ಎಸೆತದಲ್ಲಿ ವಿಕೆಟ್ ನೀಡಿ ನಿರ್ಗಮಿಸಿದರು.
ಇದಾದ ಬಳಿಕ ಜೊತೆಯಾದ ಹಾರ್ದಿಕ್ ಪಾಂಡ್ಯ ಹಾಗೂ ಇಶಾನ್ ಕಿಶನ್ ತಂಡದ ಗುರಿ ಬೆನ್ನತ್ತುವ ಜವಾಬ್ದಾರಿವಹಿಸಿಕೊಂಡರು. ಆದರೆ 12ನೇ ಓವರ್ನಲ್ಲಿ ಜಂಪಾ ಎಸೆತದಲ್ಲಿ ಬಿಗ್ ಹಿಟ್ಗೆ ಕೈಹಾಕಿದ ಪಾಂಡ್ಯ ಬೌಂಡರಿ ಲೈನ್ನಲ್ಲಿ ಕ್ಯಾಚ್ ನೀಡಿದರು. ಇದರೊಂದಿಗೆ 15 ರನ್ ಬಾರಿಸಿ ಅಪಾಯಕಾರಿಯಾಗುವ ಸೂಚನೆ ನೀಡಿದ್ದ ಹಾರ್ದಿಕ್ ಇನಿಂಗ್ಸ್ ಅಂತ್ಯಗೊಂಡಿತು. ಮತ್ತೊಂದು ಬದಿಯಲ್ಲಿ ಸಿಕ್ಕ ಅವಕಾಶವನ್ನು ಬಳಸಿಕೊಂಡ ಇಶಾನ್ ಕಿಶನ್, ನಾಲ್ಕು ಭರ್ಜರಿ ಸಿಕ್ಸರ್ ಹಾಗೂ 1 ಬೌಂಡರಿಯೊಂದಿಗೆ 39 ಎಸೆತಗಳಲ್ಲಿ ತಮ್ಮ ಹಾಫ್ ಸೆಂಚುರಿ ಪೂರೈಸಿದರು.
ಕೊನೆಯ 4 ಓವರ್ಗಳಲ್ಲಿ ಮುಂಬೈ ಇಂಡಿಯನ್ಸ್ಗೆ ಗೆಲ್ಲಲು 80 ರನ್ಗಳ ಅವಶ್ಯಕತೆಯಿತ್ತು. ಜಂಪಾ ಅವರ 17ನೇ ಓವರ್ನಲ್ಲಿ ಸಿಕ್ಸ್ ಫೋರ್ಗಳ ಸುರಿಮಳೆಗೈದ ಪೊಲಾರ್ಡ್ 27 ರನ್ಗಳನ್ನು ಕಲೆಹಾಕಿದರು. ಈ ಭರ್ಜರಿ ಆಟದ ಪರಿಣಾಮ ಮುಂಬೈ 3 ಓವರ್ಗಳಲ್ಲಿ 53 ರನ್ಗಳ ಗುರಿ ಪಡೆಯಿತು. ಚಹಲ್ ಅವರ 18ನೇ ಓವರ್ನಲ್ಲಿ 22 ರನ್ ಕಲೆಹಾಕಿದ ಮುಂಬೈ ಬ್ಯಾಟ್ಸ್ಮನ್ಗಳು ಅಂತಿಮ ಎರಡು ಓವರ್ಗಳಲ್ಲಿ 31 ರನ್ಗಳ ಗುರಿ ಪಡೆದಿತ್ತು.
ಈ ವೇಳೆ 20 ಎಸೆತಗಳಲ್ಲಿ ಐದು ಭರ್ಜರಿ ಸಿಕ್ಸರ್ಗಳೊಂದಿಗೆ ಪೊಲಾರ್ಡ್ ತಮ್ಮ ಅರ್ಧಶತಕವನ್ನು ಪೂರೈಸಿದರು. ಸೈನಿಯ 19ನೇ ಓವರ್ನಲ್ಲಿ ಇಶಾನ್ ಕಿಶನ್ರ ಮನಮೋಹಕ ಸಿಕ್ಸರ್ ಮೂಲಕ 12 ರನ್ ಕಲೆಹಾಕಿತು. ಕೊನೆಯ ಟಾರ್ಗೆಟ್ 6 ಎಸೆತಗಳಲ್ಲಿ 19 ರನ್ಗಳು.
ಇಸ್ರು ಉಡಾನ ಅವರ ಮೊದಲ ಎಸೆತದಲ್ಲಿ ಒಂದು ರನ್. 2ನೇ ಎಸೆತದಲ್ಲಿ ಕೂಡ 1 ರನ್. 3ನೇ ಎಸೆತದಲ್ಲಿ ಭರ್ಜರಿ ಸಿಕ್ಸ್ ಸಿಡಿಸಿದ ಇಶಾನ್. 4ನೇ ಎಸೆತದಲ್ಲಿ ಮತ್ತೊಂದು ಸಿಕ್ಸರ್. 5ನೇ ಎಸೆತದಲ್ಲಿ ಕ್ಯಾಚ್ ನೀಡುವ ಮೂಲಕ ಇಶಾನ್ ಕಿಶನ್ ಶತಕ ವಂಚಿತರಾದರು. ಕೊನೆಯವರೆಗೂ ಹೋರಾಟ ನಡೆಸಿದ ಯುವ ಬ್ಯಾಟ್ಸ್ಮನ್ 58 ಎಸೆತಗಳಲ್ಲಿ 99 ರನ್ ಬಾರಿಸಿದ್ದರು. ಈ ಭರ್ಜರಿ ಇನಿಂಗ್ಸ್ನಲ್ಲಿ ಮೂಡಿ ಬಂದಿದ್ದು 9 ಸಿಡಿಲಬ್ಬರದ ಸಿಕ್ಸರ್ಗಳು ಹಾಗೂ 5 ಬೌಂಡರಿಗಳು.
ಕೊನೆಯ ಎಸೆತದಲ್ಲಿ 5 ರನ್ಗಳ ಅವಶ್ಯಕತೆಯಿದ್ದಾಗ ಕೀರನ್ ಪೊಲಾರ್ಡ್ ಭರ್ಜರಿ ಬೌಂಡರಿ ಬಾರಿಸುವ ಮೂಲಕ ಪಂದ್ಯವನ್ನು ಟೈಗೊಳಿಸಿದರು. ತಮ್ಮ ಇನಿಂಗ್ಸ್ ತಲಾ ನಾಲ್ಕು ಸಿಕ್ಸ್-ಫೋರ್ ಬಾರಿಸಿದ ಪೊಲಾರ್ಡ್ 24 ಎಸೆತಗಳಲ್ಲಿ 55 ರನ್ ಬಾರಿಸಿ ಮಿಂಚಿದ್ದರು.
ಸೂಪರ್ ಓವರ್ನಲ್ಲಿ ಮುಂಬೈ ಪರ ಹಾರ್ದಿಕ್ ಪಾಂಡ್ಯ ಹಾಗೂ ಪೊಲಾರ್ಡ್ ಬ್ಯಾಟ್ ಬೀಸಿದರು. ಸೈನಿಯ ಮೊದಲ ಎಸೆತದಲ್ಲಿ ಪೊಲಾರ್ಡ್ ಸಿಂಗಲ್ ರನ್ ತೆಗೆದರು. 2ನೇ ಎಸೆತದಲ್ಲೂ ಒಂದು ರನ್ ಮಾತ್ರ. 3ನೇ ಎಸೆತದಲ್ಲಿ ಯಾವುದೇ ರನ್ ಇಲ್ಲ. 4ನೇ ಎಸೆತದಲ್ಲಿ ಬೌಂಡರಿ. 5ನೇ ಬಾಲ್ನಲ್ಲಿ ಪೊಲಾರ್ಡ್ ಔಟ್. ಕೊನೆಯ ಎಸೆತದಲ್ಲಿ ಒಂದು ರನ್. ನವದೀಪ್ ಸೈನಿ ಮಾರಕ ದಾಳಿ ಮುಂದೆ ರನ್ಗಾಗಿ ಪರದಾಡಿದ ಮುಂಬೈ ಬ್ಯಾಟ್ಸ್ಮನ್ಗಳು.
ಆರ್ಸಿಬಿಗೆ ಗೆಲ್ಲಲು 6 ಎಸೆತಗಳಲ್ಲಿ 8 ರನ್ಗಳ ಅವಶ್ಯಕತೆ. ಮುಂಬೈ ಪರ ಜಸ್ಪ್ರೀತ್ ಬುಮ್ರಾ ಬೌಲಿಂಗ್. ಬೆಂಗಳೂರು ಪರ ಕೊಹ್ಲಿ ಡಿವಿಲಿಯರ್ಸ್ ಬ್ಯಾಟಿಂಗ್. ಮೊದಲ ಎಸೆತದಲ್ಲಿ 1 ರನ್. ಎರಡನೇ ಬಾಲ್ನಲ್ಲಿ ಕೊಹ್ಲಿ ಬ್ಯಾಟ್ನಿಂದ 1 ರನ್. 3ನೇ ಎಸೆತದಲ್ಲಿ ಯಾವುದೇ ರನ್ ಇಲ್ಲ. 4ನೇ ಬಾಲ್ನಲ್ಲಿ ಎಬಿಡಿ ಬ್ಯಾಟ್ನಿಂದ ಸೂಪರ್ ಫೋರ್. 5ನೇ ಎಸೆತದಲ್ಲಿ 1 ರನ್ (ಪಂದ್ಯ ಟೈ). ಕೊನೆಯ ಎಸೆತದಲ್ಲಿ ಒಂದು ರನ್ ಅವಶ್ಯಕತೆ ಇದ್ದಾಗ ಬೌಂಡರಿ ಬಾರಿಸಿ ಕೊಹ್ಲಿ ಆರ್ಸಿಬಿ ಗೆಲುವು ತಂದುಕೊಟ್ಟರು.
ಇದಕ್ಕೂ ಮುನ್ನ ಟಾಸ್ ಗೆದ್ದ ಮುಂಬೈ ನಾಯಕ ರೋಹಿತ್ ಶರ್ಮಾ ಮೊದಲು ಬ್ಯಾಟಿಂಗ್ ಆಯ್ದುಕೊಂಡರು. ಅದರಂತೆ ಇನಿಂಗ್ಸ್ ಆರಂಭಿಸಿದ ಆರ್ಸಿಬಿ ಓಪನರ್ಗಳಾದ ದೇವದತ್ ಪಡಿಕ್ಕಲ್ ಹಾಗೂ ಆರೋನ್ ಫಿಂಚ್ ಉತ್ತಮ ಆರಂಭ ಒದಗಿಸಿದರು. ಮೊದಲ ಮೂರು ಓವರ್ಗಳಲ್ಲಿ 26 ರನ್ ಕಲೆಹಾಕಿದ ಈ ಜೋಡಿ ನಂತರದ ಮೂರು ಓವರ್ಗಳಲ್ಲಿ 33 ರನ್ ಸಿಡಿಸಿದರು. ಪರಿಣಾಮ ಪವರ್ಪ್ಲೇ ನಲ್ಲಿ ಆರ್ಸಿಬಿ ಮೊತ್ತ ವಿಕೆಟ್ ನಷ್ಟವಿಲ್ಲದೆ 59 ಬಂದು ನಿಂತಿತು.
ಪವರ್ ಪ್ಲೇ ಬಳಿಕ ಕೂಡ ಬಿರುಸಿನ ಆಟ ಮುಂದುವರೆಸಿದ ಫಿಂಚ್ 31 ಎಸೆತಗಳಲ್ಲಿ ಐಪಿಎಲ್ನಲ್ಲಿ ತಮ್ಮ 14ನೇ ಅರ್ಧಶತಕ ಪೂರೈಸಿದರು. ಈ ಸ್ಪೋಟಕ ಇನಿಂಗ್ಸ್ನಲ್ಲಿ 7 ಬೌಂಡರಿ ಹಾಗೂ 1 ಸಿಕ್ಸರ್ ಸಿಡಿಸಿದ್ದರು. ಆದರೆ ಹಾಫ್ ಸೆಂಚುರಿ ಬಳಿಕ ಕೇವಲ 2 ರನ್ ಗಳಿಸಿದ ಫಿಂಚ್ ಬೌಲ್ಟ್ ಎಸೆತದಲ್ಲಿ ಪೊಲಾರ್ಡ್ಗೆ ಕ್ಯಾಚ್ ನೀಡಿ ಹೊರ ನಡೆದರು.
ಫಿಂಚ್ ನಿರ್ಗಮನದೊಂದಿಗೆ ಆರ್ಸಿಬಿಯ ರನ್ ಗತಿಯು ನಿಧಾನಗೊಂಡಿತು. ಅದರಲ್ಲೂ 11 ಎಸೆತಗಳನ್ನು ಎದುರಿಸಿದ ಆರ್ಸಿಬಿ ನಾಯಕ ಕೊಹ್ಲಿ (3) ರನ್ಗಾಗಿ ಪರದಾಡಿದರು. ಕೊನೆಗೆ ಚಹರ್ ಎಸೆತದಲ್ಲಿ ರೋಹಿತ್ ಶರ್ಮಾಗೆ ಕ್ಯಾಚ್ ನಿರ್ಗಮಿಸಿದರು. ನಂತರ ಜೊತೆಯಾದ ಎಬಿಡಿ - ಪಡಿಕ್ಕಲ್ ಉತ್ತಮ ಆಟ ಪ್ರದರ್ಶಿಸಿದರು. ಈ ವೇಳೆ ಗೇರ್ ಬದಲಿಸಿದ ದೇವದತ್ ಬಿರುಸಿನ ಆಟಕ್ಕೆ ಒತ್ತು ನೀಡಿದರು. ಪರಿಣಾಮ 37 ಎಸೆತಗಳಲ್ಲಿ 5 ಬೌಂಡರಿ ಹಾಗೂ 2 ಸಿಕ್ಸರ್ ಒಳಗೊಂಡ ಐಪಿಎಲ್ನ 2ನೇ ಅರ್ಧಶತಕ ಪೂರೈಸಿದರು.
ಅಲ್ಲದೆ ತಂಡದ ಮೊತ್ತವನ್ನು 16 ಓವರ್ಗಳಲ್ಲಿ 136 ರನ್ಗೆ ತಂದು ನಿಲ್ಲಿಸಿದರು. ಕೊನೆಯ ನಾಲ್ಕು ಓವರ್ಗಳಿರುವಾಗ ಎಬಿಡಿಯ ಸಿಡಿಲಬ್ಬರ ಕೂಡ ಶುರುವಾಯಿತು. ಅದರಂತೆ ಬುಮ್ರಾ ಅವರ 17ನೇ ಓವರ್ನಲ್ಲಿ ಸಿಕ್ಸ್-ಫೋರ್ಗಳನ್ನು ಬಾರಿಸುವ ಮೂಲಕ 18 ರನ್ ಕಲೆಹಾಕಿದರು. ಆದರೆ 18ನೇ ಓವರ್ನ ಮೊದಲ ಎಸೆತದಲ್ಲೇ ಪಡಿಕ್ಕಲ್ (54) ಬೌಲ್ಟ್ಗೆ ವಿಕೆಟ್ ಒಪ್ಪಿಸಿದರು.
ಕೊನೆಯ ಓವರ್ಗಳಲ್ಲಿ ಅಬ್ಬರಿಸಿದ ಎಬಿ ಡಿವಿಲಿಯರ್ಸ್ 23 ಎಸೆತಗಳಲ್ಲಿ 4 ಬೌಂಡರಿ ಹಾಗೂ 4 ಸಿಡಿಲಬ್ಬರದ ಸಿಕ್ಸರ್ನೊಂದಿಗೆ ಐಪಿಎಲ್ನ 25 ಅರ್ಧಶತಕ ಪೂರೈಸಿದರು. ಪ್ಯಾಟಿನ್ಸನ್ ಎಸೆದ ಅಂತಿಮ ಓವರ್ನಲ್ಲಿ ಶಿವಂ ದುಬೆ 3 ಭರ್ಜರಿ ಸಿಕ್ಸರ್ ಸಿಡಿಸುವ ಮೂಲಕ ತಂಡದ ಮೊತ್ತವನ್ನು 3 ವಿಕೆಟ್ ನಷ್ಟಕ್ಕೆ 201ಕ್ಕೆ ತಂದು ನಿಲ್ಲಿಸಿದರು. ಮುಂಬೈ ಪರ ಟ್ರೆಂಟ್ ಬೌಲ್ಟ್ 4 ಓವರ್ನಲ್ಲಿ 32 ರನ್ಗೆ 2 ವಿಕೆಟ್ ಪಡೆದು ಗಮನ ಸೆಳೆದರು. ಈ ಭರ್ಜರಿ ಗೆಲುವಿನೊಂದಿಗೆ ಅಂಕ ಪಟ್ಟಿಯಲ್ಲಿ ಆರ್ಸಿಬಿ ಕೊನೆಯ ಸ್ಥಾನದಿಂದ 3ನೇ ಸ್ಥಾನಕ್ಕೆ ಜಿಗಿಯಿತು.
:
SCHEDULE TIME TABLE:
ORANGE CAP:
PURPLE CAP:
RESULT DATA:
MOST SIXES:
KL Rahul: ಕನ್ನಡಿಗನ ಕಮಾಲ್: ಸಿಡಿಲಬ್ಬರದ ಒಂದು ಸೆಂಚುರಿಗೆ 8 ದಾಖಲೆಗಳು ಉಡೀಸ್..!