IPL

  • associate partner

IPL 2020: RCB vs MI: ಮದಗಜಗಳ ಕಾದಾಟ: ಅಂಕಿ ಅಂಶಗಳ ಪ್ರಕಾರ ಯಾರು ಬಲಿಷ್ಠ? ಇಲ್ಲಿದೆ ಫುಲ್ ಡಿಟೇಲ್ಸ್

RCB vs MI- Head-to-head record: ಬೌಲಿಂಗ್​ನಲ್ಲಿ ನೋಡುವುದಾದರೆ ಬೆಂಗಳೂರು ಪರ ಮುಂಬೈ ಇಂಡಿಯನ್ಸ್ ಅತೀ ಹೆಚ್ಚು ವಿಕೆಟ್ ಪಡೆದಿರುವುದು ವಿನಯ್ ಕುಮಾರ್(12 ವಿಕೆಟ್). ಹಾಗೆಯೇ ಆರ್​ಸಿಬಿ ಬ್ಯಾಟ್ಸ್​ಮನ್​ಗಳ ಪಾಲಿಗೆ ಕಂಟಕವಾಗಿದ್ದು ಹರ್ಭಜನ್ ಸಿಂಗ್ (22 ವಿಕೆಟ್).

news18-kannada
Updated:September 28, 2020, 5:00 PM IST
IPL 2020: RCB vs MI: ಮದಗಜಗಳ ಕಾದಾಟ: ಅಂಕಿ ಅಂಶಗಳ ಪ್ರಕಾರ ಯಾರು ಬಲಿಷ್ಠ? ಇಲ್ಲಿದೆ ಫುಲ್ ಡಿಟೇಲ್ಸ್
rohit-kohli
  • Share this:
IPL 2020​ ಟೂರ್ನಿಯ 10ನೇ ಪಂದ್ಯದಲ್ಲಿ ಇಂದು ಬಲಿಷ್ಠ ಮುಂಬೈ ಇಂಡಿಯನ್ಸ್ ಹಾಗೂ ಚಾಲೆಂಜಿಂಗ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮುಖಾಮುಖಿಯಾಗುತ್ತಿದೆ. ಉಭಯ ತಂಡಗಳಲ್ಲೂ ವಿಶ್ವ ಶ್ರೇಷ್ಠ ಆಟಗಾರರೇ ಒಳಗೊಂಡಿದ್ದು, ಹೀಗಾಗಿ ದುಬೈ ಮೈದಾನದಲ್ಲಿಂದು ರೋಚಕ ಹೋರಾಟವನ್ನು ನಿರೀಕ್ಷಿಸಬಹುದು. ಅಲ್ಲದೆ ಒಂದಾರ್ಥದಲ್ಲಿ ಇಂದಿನ ಪಂದ್ಯವು ಟೀಮ್ ಇಂಡಿಯಾ ನಾಯಕ ಹಾಗೂ ಉಪನಾಯಕನ ನಡುವಣ ಕಾದಾಟ ಎಂದು ಕೂಡ ಹೇಳಬಹುದು. ಏಕೆಂದರೆ ಐಪಿಎಲ್​ನಲ್ಲಿ ರೋಹಿತ್ ಶರ್ಮಾ ಕಪ್ತಾನಗಿರಿಯಲ್ಲಿ ಶ್ರೇಷ್ಠ ದಾಖಲೆ ಹೊಂದಿದ್ದರೂ, ಟೀಮ್ ಇಂಡಿಯಾ ಟಿ20 ನಾಯಕನ ಸ್ಥಾನ ಹಿಟ್​ಮ್ಯಾನ್​ಗೆ ಒಲಿದಿರಲಿಲ್ಲ. ಹೀಗಾಗಿ ಮತ್ತೊಮ್ಮೆ ಕೊಹ್ಲಿ ಮುಂದೆ ಸರ್ವಶ್ರೇಷ್ಠ ಪ್ರದರ್ಶನ ಮುಂದಿಡುವ ಮೂಲಕ ಮತ್ತೊಮ್ಮೆ ಆಯ್ಕೆಗಾರರ ಮುಂದೆ ರೋಹಿತ್​ಗೆ ತಮ್ಮ ನಾಯಕತ್ವದ ಚಾಕಚಕ್ಯತೆ ಪ್ರದರ್ಶಿಸಲು ಉತ್ತಮ ಅವಕಾಶ.

ಇನ್ನು ಆರಂಭಿಕ ಪಂದ್ಯದಲ್ಲಿ ಗೆದ್ದು ಬೀಗಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಕಿಂಗ್ಸ್​ ಇಲೆವೆನ್ ಪಂಜಾಬ್ ವಿರುದ್ಧದ 2ನೇ ಪಂದ್ಯದಲ್ಲಿ ಹೀನಾಯ ಸೋಲನುಭವಿಸಿತು. ಆದರೆ ಮುಂಬೈ ತಂಡವು ಮೊದಲ ಪಂದ್ಯದಲ್ಲಿ ಸೋತರೂ ಎರಡನೇ ಪಂದ್ಯದಲ್ಲಿ ಕೆಕೆಆರ್ ವಿರುದ್ಧ 49 ರನ್​ಗಳ ಭರ್ಜರಿ ಜಯ ಸಾಧಿಸುವ ಮೂಲಕ ಕಂಬ್ಯಾಕ್ ಮಾಡಿತು.

ಇದೀಗ ಉಭಯ ತಂಡಗಳಿಗೂ ಮೂರನೇ ಪಂದ್ಯವಾಗಿದ್ದು, ಕೊಹ್ಲಿ ಪಡೆ ಜಯದ ಲಯಕ್ಕೆ ಮರಳುವ ಸಿದ್ಧತೆಯಲ್ಲಿದ್ದರೆ, ಅತ್ತ ರೋಹಿತ್ ಶರ್ಮಾ ಬಳಗವು ಜಯದ ಲಯವನ್ನು ಮುಂದುವರೆಸಿಕೊಂಡು ಹೋಗುವ ತವಕದಲ್ಲಿದೆ. ಹೀಗಾಗಿ ಎರಡು ತಂಡಗಳಲ್ಲೂ ಇಂದು ಬಲಿಷ್ಠ ಆಟಗಾರರೇ ಕಣಕ್ಕಿಳಿಯುವ ಸಾಧ್ಯತೆಯಿದೆ.

ಇನ್ನು ಈ ಹಿಂದಿನ ಅಂಕಿ ಅಂಶಗಳನ್ನು ಗಮನಿಸಿದ್ರೆ ನಾಲ್ಕು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವೇ ಬಲಿಷ್ಠ ಎನ್ನಬಹುದು. ಏಕೆಂದರೆ ಉಭಯ ತಂಡಗಳು 25 ಬಾರಿ ಮುಖಾಮುಖಿಯಾಗಿದ್ದು, ಅದರಲ್ಲಿ ಆರ್​ಸಿಬಿ ಗೆದ್ದಿದ್ದು ಕೇವಲ 9 ಬಾರಿ ಮಾತ್ರ. ಹಾಗೆಯೇ 16 ಬಾರಿ ಬೆಂಗಳೂರು ವಿರುದ್ಧ ಮೇಲುಗೈ ಸಾಧಿಸಿರುವ ಮುಂಬೈ ಇಂಡಿಯನ್ಸ್ ಅದೇ ಆತ್ಮ ವಿಶ್ವಾಸದಲ್ಲಿಂದು ಕಣಕ್ಕಿಳಿಯಲಿದೆ.

ಅದೇ ಎರಡು ತಂಡಗಳ ಕೊನೆಯ ಐದು ಮುಖಾಮುಖಿಯನ್ನು ಗಮನಿಸಿದ್ರೆ, ಆರ್​ಸಿಬಿ ಪ್ರದರ್ಶನ ತುಂಬಾ ಹೀನಾಯವಾಗಿದೆ. ಏಕೆಂದರೆ ಐದರಲ್ಲಿ ಮುಂಬೈ ನಾಲ್ಕರಲ್ಲಿ ಗೆಲುವಿನ ನಗೆ ಬೀರಿದ್ರೆ, ಕೊಹ್ಲಿ ಪಡೆಯು ಒಂದು ಪಂದ್ಯದಲ್ಲಿ 14 ರನ್​ಗಳಿಂದ ರೋಚಕ ಜಯ ಸಾಧಿಸಿದೆ. ಇನ್ನು ಕಳೆದ ಸೀಸನ್​ನಲ್ಲಿನ ಮುಂಬೈ ವಿರುದ್ಧದ ಎರಡು ಪಂದ್ಯಗಳಲ್ಲೂ ಆರ್​ಸಿಬಿ ಸೋಲುಂಡಿತು.

2014 ರ ಯುಎಇ ಐಪಿಎಲ್​ನ ಪ್ರದರ್ಶನವನ್ನು ಗಮನಿಸಿದ್ರೆ, ಆರ್​ಸಿಬಿ ಹಾಗೂ ಮುಂಬೈ ಇಂಡಿಯನ್ಸ್ ಒಂದು ಪಂದ್ಯದಲ್ಲಿ ಮುಖಾಮುಖಿಯಾಗಿತ್ತು. ಈ ಮ್ಯಾಚ್​ನಲ್ಲಿ ಮೊದಲು ಬ್ಯಾಟ್ ಮಾಡಿದ್ದ ಮುಂಬೈ ಇಂಡಿಯನ್ಸ್ 20 ಓವರ್​ಗಳಲ್ಲಿ 9 ವಿಕೆಟ್ ನಷ್ಟಕ್ಕೆ ಗಳಿಸಿದ್ದು 115 ರನ್​ಗಳು ಮಾತ್ರ. ಈ ಗುರಿಯನ್ನು ಕೇವಲ 17.3 ಓವರ್​ನಲ್ಲಿ ತಲುಪುವ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿಜಯದ ನಗೆ ಬೀರಿತ್ತು. ಇದೇ ಆತ್ಮ ವಿಶ್ವಾಸದಲ್ಲಿ ಇಂದು ಕೊಹ್ಲಿ ಪಡೆ ಕಣಕ್ಕಿಳಿಯುವ ಸಾಧ್ಯತೆಯಿದೆ.

ಮುಂಬೈ ವಿರುದ್ಧ ಆರ್​ಸಿಬಿ ನಾಯಕ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ್ದು, ರೋಹಿತ್ ಪಡೆ ವಿರುದ್ಧದ ಇದುವರೆಗಿನ ಪಂದ್ಯಗಳಿಂದ 683 ರನ್​ ಕಲೆಹಾಕಿದ್ದಾರೆ. ಹಾಗೆಯೇ ಆರ್​ಸಿಬಿ ವಿರುದ್ಧ ಮುಂಬೈ ಬ್ಯಾಟ್ಸ್​ಮನ್ ಕೀರನ್ ಪೊಲಾರ್ಡ್​ 475 ರನ್ ಬಾರಿಸಿದ್ದಾರೆ. ಹೀಗಾಗಿ ಎರಡು ತಂಡಗಳು ಇಂದು ಈ ಇಬ್ಬರು ಬ್ಯಾಟ್ಸ್​ಮನ್​ಗಳ ಮೇಲೆ ಹೆಚ್ಚು ಅವಲಂಬಿತವಾಗಬಹುದು. ಹಾಗೆಯೇ ಎಬಿ ಡಿವಿಲಿಯರ್ಸ್ ಭರ್ಜರಿ ಶತಕ (ಅಜೇಯ 133 ರನ್​) ಬಾರಿಸಿರುವುದು ಕೂಡ ಮುಂಬೈ ಇಂಡಿಯನ್ಸ್ ವಿರುದ್ಧ ಎಂಬುದು ವಿಶೇಷ.ಬೌಲಿಂಗ್​ನಲ್ಲಿ ನೋಡುವುದಾದರೆ ಬೆಂಗಳೂರು ಪರ ಮುಂಬೈ ಇಂಡಿಯನ್ಸ್ ಅತೀ ಹೆಚ್ಚು ವಿಕೆಟ್ ಪಡೆದಿರುವುದು ವಿನಯ್ ಕುಮಾರ್(12 ವಿಕೆಟ್). ಹಾಗೆಯೇ ಆರ್​ಸಿಬಿ ಬ್ಯಾಟ್ಸ್​ಮನ್​ಗಳ ಪಾಲಿಗೆ ಕಂಟಕವಾಗಿದ್ದು ಹರ್ಭಜನ್ ಸಿಂಗ್ (22 ವಿಕೆಟ್). ಆದರೆ ಇವರಿಬ್ಬರೂ ಈಗ ತಂಡದಲ್ಲಿಲ್ಲ ಎಂಬುದು ಉಭಯ ತಂಡಗಳ ಬ್ಯಾಟ್ಸ್​ಮನ್​ಗಳಿಗೆ ಸಮಾಧಾನಕರ ವಿಷಯ.

ಒಟ್ಟಾರೆ ನೋಡುವುದಾದರೆ ರೋಹಿತ್ ಶರ್ಮಾ ನೇತೃತ್ವದ ಮುಂಬೈ ಇಂಡಿಯನ್ಸ್ ಬಲಿಷ್ಠವಾಗಿದೆ. ಆದರೆ ಯುಎಇ ಪಿಚ್​​ನಲ್ಲಿ ಮುಂಬೈಯನ್ನು ಮಣಿಸಿದ ದಾಖಲೆ ಆರ್​ಸಿಬಿ ಪಾಲಿಗಿದೆ. ಹೀಗಾಗಿ ಇಂದಿನ ಪಂದ್ಯದಲ್ಲಿ ಉಭಯ ತಂಡಗಳಿಂದ ಉತ್ತಮ ಪೈಪೋಟಿ ನಿರೀಕ್ಷಿಸಬಹುದು.
POINTS TABLE:

SCHEDULE TIME TABLE:

ORANGE CAP:

PURPLE CAP:

RESULT DATA:

MOST SIXES:

KL Rahul: ಕನ್ನಡಿಗನ ಕಮಾಲ್: ಸಿಡಿಲಬ್ಬರದ ಒಂದು ಸೆಂಚುರಿಗೆ 8 ದಾಖಲೆಗಳು ಉಡೀಸ್..!
Published by: zahir
First published: September 28, 2020, 5:00 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading