IPL

  • associate partner
HOME » NEWS » Ipl » IPL 2020 RCB VS KXIP RCB BANGALORE BLASTER DEVDUTT PADIKKAL SMASHES SIX IN THE SAME MANNER OF YUVRAJ SINGH VB

Devdutt Padikkal: ಥೇಟ್ ಯುವರಾಜ್ ಸಿಂಗ್ ರೀತಿಯಲ್ಲಿ ಚೆಂಡನ್ನು ಸಿಕ್ಸ್​ಗೆ ಅಟ್ಟಿದ ಪಡಿಕ್ಕಲ್: ಇಲ್ಲಿದೆ ವಿಡಿಯೋ

ಕೇವಲ 4 ಓವರ್ ಆಗುವ ಹೊತ್ತಿಗೆ ಫಿಂಚ್ ಹಾಗೂ ದೇವದತ್ ಪಡಿಕ್ಕಲ್ ಸೇರಿ ಆರ್​ಸಿಬಿ ತಂಡದ ಮೊತ್ತವನ್ನು 40ರ ಅಂಚಿಗೆ ತಂದಿಟ್ಟಿದ್ದರು. ಅದರಲ್ಲೂ ಪಡಿಕ್ಕಲ್ ಸಿಡಿಸಿದ ಒಂದು ಸಿಕ್ಸ್​ ಎಲ್ಲರ ನಿಬ್ಬೆರಗಾಗಿಸಿತು.

news18-kannada
Updated:October 16, 2020, 3:41 PM IST
Devdutt Padikkal: ಥೇಟ್ ಯುವರಾಜ್ ಸಿಂಗ್ ರೀತಿಯಲ್ಲಿ ಚೆಂಡನ್ನು ಸಿಕ್ಸ್​ಗೆ ಅಟ್ಟಿದ ಪಡಿಕ್ಕಲ್: ಇಲ್ಲಿದೆ ವಿಡಿಯೋ
ದೇವದತ್ ಪಡಿಕ್ಕಲ್ - ಯುವರಾಜ್ ಸಿಂಗ್
  • Share this:
ಶಾರ್ಜಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಐಪಿಎಲ್​ನ 31ನೇ ಪಂದ್ಯದಲ್ಲಿ ಕಿಂಗ್ಸ್​ ಇಲೆವೆನ್ ಪಂಜಾಬ್ ವಿರುದ್ಧ ನಡೆದ ರೋಚಕ ಕಾದಾಟದಲ್ಲಿ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡ ಸೋಲುಕಂಡಿತು. ಬ್ಯಾಟಿಂಗ್​ನಲ್ಲಿ ಕೊಹ್ಲಿ ಪಡೆ ಉತ್ತಮ ಪ್ರದರ್ಶನ ತೋರಿತಾದರೂ ಬೌಲರ್​​ಗಳು ಕಮಾಲ್ ಮಾಡದ ಕಾರಣ ಟೂರ್ನಿಯಲ್ಲಿ ಮೂರನೇ ಸೋಲು ಅನುಭವಿಸಿತು. ರಾಹುಲ್ ಪಡೆ 8 ವಿಕೆಟ್​ಗಳ ಭರ್ಜರಿ ಗೆಲುವು ತನ್ನದಾಗಿಸಿತು.

ಆರ್​ಸಿಬಿ ತಂಡ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಸೋತರೂ ಕರ್ನಾಟಕದ ಯುವ ಭರವಸೆಯ ಆಟಗಾರ ದೇವದತ್ ಪಡಿಕ್ಕಲ್ ಕ್ರಿಕೆಟ್ ಅಭಿಮಾನಿಗಳ ಮನ ಗೆದ್ದರು. ಚೊಚ್ಚಲ ಐಪಿಎಲ್ ಸೀಸನ್ ಆಡುತ್ತಿರುವ ಪಡಿಕ್ಕಲ್ ಭರ್ಜರಿ ಫಾರ್ಮ್​​ನಲ್ಲಿದ್ದು ಅಮೋಘ ಬ್ಯಾಟಿಂಗ್ ಪ್ರದರ್ಶಿಸುತ್ತಿದ್ದಾರೆ. ಆರ್​ಸಿಬಿ ತಂಡಕ್ಕೆ ಆ್ಯರೋನ್ ಫಿಂಚ್ ಜೊತೆಸೇರಿ ಪ್ರತಿ ಬಾರಿ ಅತ್ಯುತ್ತಮ ಆರಂಭ ಒದಗಿಸುತ್ತಿದ್ದಾರೆ.

Dinesh Karthik: ಕೆಕೆಆರ್ ತಂಡಕ್ಕೆ ದೊಡ್ಡ ಆಘಾತ: ನಾಯಕತ್ವದಿಂದ ಕೆಳಗಿಳಿದ ದಿನೇಶ್ ಕಾರ್ತಿಕ್

ಪಂಜಾಬ್ ವಿರುದ್ಧದ ಪಂದ್ಯದಲ್ಲೂ ಇದು ಮುಂದುವರೆಯಿತು. ಕೇವಲ 4 ಓವರ್ ಆಗುವ ಹೊತ್ತಿಗೆ ಫಿಂಚ್ ಹಾಗೂ ಪಡಿಕ್ಕಲ್ ಸೇರಿ ತಂಡದ ಮೊತ್ತವನ್ನು 40ರ ಅಂಚಿಗೆ ತಂದಿಟ್ಟಿದ್ದರು. ಅದರಲ್ಲೂ ಪಡಿಕ್ಕಲ್ ಸಿಡಿಸಿದ ಒಂದು ಸಿಕ್ಸ್​ ಎಲ್ಲರ ನಿಬ್ಬೆರಗಾಗಿಸಿತು. ಥೇಟ್ ಸಿಕ್ಸರ್ ಕಿಂಗ್ ಯುವರಾಜ್ ಸಿಂಗ್ ಅವರ ರೀತಿಯಲ್ಲೇ ಫ್ಲಿಕ್ ಶಾಟ್ ಹೊಡೆದು ಪಡಿಕ್ಕಲ್ ಅವರು ಚೆಂಡನ್ನು ಸಿಕ್ಸ್​ಗೆ ಅಟ್ಟಿದ್ದು ಮನಮೋಹಕವಾಗಿತ್ತು.ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭರ್ಜರಿ ವೈರಲ್ ಆಗುತ್ತಿದೆ. 20 ವರ್ಷದ ಪಡಿಕ್ಕಲ್ ಈ ಬಾರಿಯ ಐಪಿಎಲ್​ನಲ್ಲಿ ಆಡಿದ 8 ಪಂದ್ಯಗಳಲ್ಲಿ ಒಟ್ಟು 261 ರನ್ ಚಚ್ಚಿದ್ದಾರೆ.

ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆರ್​ಸಿಬಿ, ನಾಯಕ ವಿರಾಟ್ ಕೊಹ್ಲಿ ಅವರ 48 ಹಾಗೂ ಕ್ರಿಸ್ ಮೊರೀಸ್ ಅವರ ಅಜೇಯ 25(8 ಎಸೆತ) ರನ್​ಗಳ ನೆರವಿನಿಂದ 20 ಓವರ್​ನಲ್ಲಿ 6 ವಿಕೆಟ್ ನಷ್ಟಕ್ಕೆ 171 ರನ್ ಗಳಿಸಿತು.IPL 2020, MI vs KKR: ಅಗ್ರಸ್ಥಾನದತ್ತ ಮುಂಬೈ ಕಣ್ಣು: ಕೆಕೆಆರ್​ಗೆ ಬೇಕಿದೆ ದೊಡ್ಡ ಗೆಲುವು

ಟಾರ್ಗೆಟ್ ಬೆನ್ನಟ್ಟಿದ ಪಂಜಾಬ್ ತಂಡ 20 ಓವರ್​ನಲ್ಲಿ 2 ವಿಕೆಟ್ ಕಳೆದುಕೊಂಡು 177 ರನ್ ಗಳಿಸಿ ರೋಚಕ ಗೆಲುವು ಸಾಧಿಸಿತು. ಕೆ. ಎಲ್ ರಾಹುಲ್ ಅಜೇಯ 61 ರನ್ ಗಳಿಸಿದರೆ, ಈ ಬಾರಿ ಚೊಚ್ಚಲ ಐಪಿಎಲ್ ಪಂದ್ಯವನ್ನಾಡಿದ ಕ್ರಿಸ್ ಗೇಲ್ 53 ಹಾಗೂ ಮಯಾಂಕ್ ಅಗರ್ವಾಲ್ 45 ರನ್ ಬಾರಿಸಿದರು.
Published by: Vinay Bhat
First published: October 16, 2020, 3:41 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories