IPL

  • associate partner
HOME » NEWS » Ipl » IPL 2020 RCB VS KXIP LIVE CRICKET SCORE ROYAL CHALLENGERS BANGALORE VSKINGS XI PUNJAB RCB 171 6 VB

IPL 2020, RCB vs KXIP: ಕೊಹ್ಲಿ 48: ಪಂಜಾಬ್ ವಿರುದ್ಧ ಉತ್ತಮ ಮೊತ್ತ ಕಲೆಹಾಕಿದ ಆರ್​ಸಿಬಿ

IPL 2020, Royal Challengers Bangalore vs Kings XI Punjab: ಉಭಯ ತಂಡಗಳು 25 ಬಾರಿ ಮುಖಾಮುಖಿಯಾದ್ದು, 13ರಲ್ಲಿ ಕಿಂಗ್ಸ್​ ಇಲೆವೆನ್ ಪಂಜಾಬ್ ಜಯ ಸಾಧಿಸಿದ್ರೆ, 12 ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡ ಗೆಲುವು ಸಾಧಿಸಿವೆ.

news18-kannada
Updated:October 15, 2020, 9:06 PM IST
IPL 2020, RCB vs KXIP: ಕೊಹ್ಲಿ 48: ಪಂಜಾಬ್ ವಿರುದ್ಧ ಉತ್ತಮ ಮೊತ್ತ ಕಲೆಹಾಕಿದ ಆರ್​ಸಿಬಿ
ವಿರಾಟ್ ಕೊಹ್ಲಿ.
  • Share this:
ಶಾರ್ಜಾ (ಅ. 15): ಇಲ್ಲಿನ ಶಾರ್ಜಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಪಿಎಲ್​ನ 31ನೇ ಪಂದ್ಯದಲ್ಲಿ ಕಿಂಗ್ಸ್​ ಇಲೆವೆನ್ ಪಂಜಾಬ್ ವಿರುದ್ಧ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡ ಉತ್ತಮ ಮೊತ್ತ ಕಲೆಹಾಕಿದೆ. ನಾಯಕ ವಿರಾಟ್ ಕೊಹ್ಲಿ ಅವರ 48 ರನ್​ಗಳ ನೆರವಿನಿಂದ ಆರ್​ಸಿಬಿ 20 ಓವರ್​ನಲ್ಲಿ 171 ರನ್ ಗಳಿಸಿದೆ.

ಟಾಸ್ ಗೆದ್ದು ಬ್ಯಾಟಿಂಗ್​ಗೆ ಇಳಿದ ಆರ್​ಸಿಬಿ ಸ್ಫೋಟಕ ಆರಂಭ ಪಡೆದುಕೊಂಡಿತು. ಓಪನರ್​ಗಳಾದ ಆ್ಯರೋನ್ ಫಿಂಚ್ ಹಾಗೂ ದೇವದತ್ ಪಡಿಕ್ಕಲ್ ಮೊದಲ 4 ಓವರ್​ಗಳಲ್ಲಿ 38 ರನ್ ಚಚ್ಚಿದರು. ಆದರೆ, 5ನೇ ಓವರ್​ನ ಮೊದಲ ಎಸೆತದಲ್ಲೇ 12 ಎಸೆತಗಳಲ್ಲಿ 18 ರನ್ ಬಾರಿಸಿದ್ದ ಪಡಿಕ್ಕಲ್ ಔಟ್ ಆದರು. ಫಿಂಚ್ ಆಟ 16 ರನ್​ಗೆ ಅಂತ್ಯವಾಯಿತು.

ವಾಷಿಂಗ್ಟನ್ ಸುಂದರ್(13) ನಾಯಕ ವಿರಾಟ್ ಕೊಹ್ಲಿ ಜೊತೆ ಕೆಲಹೊತ್ತು ಬ್ಯಾಟ್ ಬೀಸಿದರು. ಬಳಿಕ ಶಿವಂ ದುಬೆ ಜೊತೆಯಾದ ಕೊಹ್ಲಿ 41 ರನ್​ಗಳ ಕಾಣಿಕೆ ನೀಡಿದರು. ದುಬೆ 19 ಎಸೆತಗಳಲ್ಲಿ 2 ಸಿಕ್ಸರ್ ಬಾರಿಸಿ 23 ರನ್ ಗಳಿಸಿದರು. ಕಳೆದ ಪಂದ್ಯದಲ್ಲಿ ಅಬ್ಬರಿಸಿದ್ದ ಎಬಿ ಡಿವಿಲಿಯರ್ಸ್​(2) ಈ ಬಾರಿ ಬೇಗನೆ ಔಟ್ ಆಗಿ ನಿರಾಸೆ ಮೂಡಿಸಿದರು.

ಅಂತಿಮ ಹಂತದಲ್ಲಿ ಪಂಜಾಬ್ ಉತ್ತಮ ಬೌಲಿಂಗ್ ಪ್ರದರ್ಶಿಸಿದ್ದರಿಂದ ಆರ್​ಸಿಬಿ ರನ್ ಕಲೆಹಾಕಲು ಪರದಾಡಿತು. ಆದರೆ, ಕೊನೆಯ ಓವರ್​​ನಲ್ಲಿ ಮೊರೀಸ್ ಹಾಗೂ ಉದಾನ ಸೇರಿ 17 ರನ್ ಚಚ್ಚಿದರು. ಕೊಹ್ಲಿ 39 ಎಸೆತಗಳಲ್ಲಿ 3 ಬೌಂಡರಿ ಬಾರಿಸಿ 48 ರನ್ ಗಳಿಸಿ ಔಟ್ ಆದರು. ಕ್ರಿಸ್ ಮೊರೀಸ್ 8 ಎಸೆತಗಳಲ್ಲಿ ಅಜೇಯ 25 ರನ್ ಸಿಡಿಸಿದರು.

ಅಂತಿಮವಾಗಿ ಆರ್​ಸಿಬಿ 20 ಓವರ್​ನಲ್ಲಿ 6 ವಿಕೆಟ್ ನಷ್ಟಕ್ಕೆ 171 ರನ್ ಬಾರಿಸಿತು. ಪಂಜಾಬ್ ಪರ ಮೊಹಮ್ಮದ್ ಶಮಿ, ಮುರುಗನ್ ಅಶ್ವಿನ್ 2 ವಿಕೆಟ್ ಕಿತ್ತರೆ, ಅರ್ಶ್​ದೀಪ್ ಸಿಂಗ್, ಕ್ರಿಸ್ ಜಾರ್ಡನ್ 1 ವಿಕೆಟ್ ಪಡೆದರು.

ರಾಯಲ್ ಚಾಲೆಂಜರ್ಸ್​ ಬೆಂಗಳೂರು: ದೇವದತ್ ಪಡಿಕ್ಕಲ್, ಆ್ಯರೋನ್ ಫಿಂಚ್, ವಿರಾಟ್ ಕೊಹ್ಲಿ (ನಾಯಕ), ಎಬಿ ಡಿವಿಲಿಯರ್ಸ್‌ (ವಿ.ಕೀ), ಶಿವಂ ದುಬೆ, ಗುರುಕೀರತ್ ಮನ್​ ಸಿಂಗ್, ಕ್ರಿಸ್ ಮೊರೀಸ್, ವಾಷಿಂಗ್ಟನ್ ಸುಂದರ್, ಇಸುರು ಉದಾನ, ನವದೀಪ್ ಸೈನಿ, ಯಜುವೇಂದ್ರ ಚಾಹಲ್.

ರಾಯಲ್ ಚಾಲೆಂಜರ್ಸ್​ ಬೆಂಗಳೂರು: ದೇವದತ್ ಪಡಿಕ್ಕಲ್, ಆ್ಯರೋನ್ ಫಿಂಚ್, ವಿರಾಟ್ ಕೊಹ್ಲಿ (ನಾಯಕ), ಎಬಿ ಡಿವಿಲಿಯರ್ಸ್‌ (ವಿ.ಕೀ), ಶಿವಂ ದುಬೆ, ಗುರುಕೀರತ್ ಮನ್​ ಸಿಂಗ್, ಕ್ರಿಸ್ ಮೊರೀಸ್, ವಾಷಿಂಗ್ಟನ್ ಸುಂದರ್, ಇಸುರು ಉದಾನ, ನವದೀಪ್ ಸೈನಿ, ಯಜುವೇಂದ್ರ ಚಾಹಲ್.
Published by: Vinay Bhat
First published: October 15, 2020, 9:06 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories