IPL

  • associate partner
HOME » NEWS » Ipl » IPL 2020 RCB VS KXIP LIVE CRICKET SCORE ROYAL CHALLENGERS BANGALORE VSKINGS XI PUNJAB GAYLE RAHUL PARTNERSHIP VB

RCB vs KXIP, IPL 2020 Live Score: ರಾಹುಲ್-ಗೇಲ್ ಭರ್ಜರಿ ಬ್ಯಾಟಿಂಗ್: ವಿಕೆಟ್​ಗಾಗಿ ಆರ್​ಸಿಬಿ ಪರದಾಟ

IPL 2020, Royal Challengers Bangalore vs Kings XI Punjab Live Score: ಉಭಯ ತಂಡಗಳು 25 ಬಾರಿ ಮುಖಾಮುಖಿಯಾದ್ದು, 13ರಲ್ಲಿ ಕಿಂಗ್ಸ್​ ಇಲೆವೆನ್ ಪಂಜಾಬ್ ಜಯ ಸಾಧಿಸಿದ್ರೆ, 12 ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡ ಗೆಲುವು ಸಾಧಿಸಿವೆ.

news18-kannada
Updated:October 15, 2020, 10:22 PM IST
RCB vs KXIP, IPL 2020 Live Score: ರಾಹುಲ್-ಗೇಲ್ ಭರ್ಜರಿ ಬ್ಯಾಟಿಂಗ್: ವಿಕೆಟ್​ಗಾಗಿ ಆರ್​ಸಿಬಿ ಪರದಾಟ
RCB vs KXIP Live Score Updates
  • Share this:
ಶಾರ್ಜಾ (ಅ. 15): ಇಲ್ಲಿನ ಶಾರ್ಜಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಪಿಎಲ್​ನ 31ನೇ ಪಂದ್ಯದಲ್ಲಿ ಕಿಂಗ್ಸ್​ ಇಲೆವೆನ್ ಪಂಜಾಬ್ ವಿರುದ್ಧ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡ ಉತ್ತಮ ಮೊತ್ತ ಕಲೆಹಾಕಿದೆ. ನಾಯಕ ವಿರಾಟ್ ಕೊಹ್ಲಿ ಅವರ 48 ರನ್​ಗಳ ನೆರವಿನಿಂದ ಆರ್​ಸಿಬಿ 20 ಓವರ್​ನಲ್ಲಿ 171 ರನ್ ಗಳಿಸಿದೆ.

ಸದ್ಯ ಟಾರ್ಗೆಟ್ ಬೆನ್ನಟ್ಟಿರುವ ಪಂಜಾಬ್ ತಂಡ ಭರ್ಜರಿ ಆರಂಭ ಪಡೆದುಕೊಂಡಿತು. ನಾಯಕ ಕೆ, ಎಲ್ ರಾಹುಲ್ ಹಾಗೂ ಮಯಾಂಕ್ ಅಗರ್ವಾಲ್ ಪವರ್ ಪ್ಲೇ ಓವರ್ ಅನ್ನು ಅತ್ಯುತ್ತಮವಾಗಿ ಉಪಯೋಗಿಸಿಕೊಂಡರು. ಮಯಾಂಕ್ ಅಬ್ಬರಿಸಿದರೆ ರಾಹುಲ್ ಉತ್ತಮ ಸಾತ್ ನೀಡಿದರು.

ಈ ಸಂದರ್ಭ ವಿಕೆಟ್​ಗಾಗಿ ಪರದಾಡುತ್ತಿದ್ದ ಆರ್​ಸಿಬಿಗೆ ಚಹಾಲ್ ಬ್ರೇಕ್ ನೀಡಿದರು. 25 ಎಸೆತಗಳಲ್ಲಿ 4 ಬೌಂಡರಿ, 3 ಸಿಕ್ಸರ್ ಬಾರಿಸಿ 45 ರನ್​ಗೆ ಮಯಾಂಕ್ ಬೌಲ್ಡ್​ ಆದರು. ಈ ಜೋಡಿ 71 ರನ್​ಗಳ ಕಾಣಿಕೆ ನೀಡಿತು.

ಸದ್ಯ ರಾಹುಲ್ ಹಾಗೂ ಕ್ರೀಸ್​ ಗೇಲ್ ಕ್ರೀಸ್​ನಲ್ಲಿದ್ದು ಬೊಂಬಾಟ್ ಆಟ ಪ್ರದರ್ಶಿಸುತ್ತಿದ್ದಾರೆ.

ಇದಕ್ಕೂ ಮುನ್ನ ಟಾಸ್ ಗೆದ್ದು ಬ್ಯಾಟಿಂಗ್​ಗೆ ಇಳಿದ ಆರ್​ಸಿಬಿ ಸ್ಫೋಟಕ ಆರಂಭ ಪಡೆದುಕೊಂಡಿತು. ಓಪನರ್​ಗಳಾದ ಆ್ಯರೋನ್ ಫಿಂಚ್ ಹಾಗೂ ದೇವದತ್ ಪಡಿಕ್ಕಲ್ ಮೊದಲ 4 ಓವರ್​ಗಳಲ್ಲಿ 38 ರನ್ ಚಚ್ಚಿದರು. ಆದರೆ, 5ನೇ ಓವರ್​ನ ಮೊದಲ ಎಸೆತದಲ್ಲೇ 12 ಎಸೆತಗಳಲ್ಲಿ 18 ರನ್ ಬಾರಿಸಿದ್ದ ಪಡಿಕ್ಕಲ್ ಔಟ್ ಆದರು. ಫಿಂಚ್ ಆಟ 16 ರನ್​ಗೆ ಅಂತ್ಯವಾಯಿತು.

ವಾಷಿಂಗ್ಟನ್ ಸುಂದರ್(13) ನಾಯಕ ವಿರಾಟ್ ಕೊಹ್ಲಿ ಜೊತೆ ಕೆಲಹೊತ್ತು ಬ್ಯಾಟ್ ಬೀಸಿದರು. ಬಳಿಕ ಶಿವಂ ದುಬೆ ಜೊತೆಯಾದ ಕೊಹ್ಲಿ 41 ರನ್​ಗಳ ಕಾಣಿಕೆ ನೀಡಿದರು. ದುಬೆ 19 ಎಸೆತಗಳಲ್ಲಿ 2 ಸಿಕ್ಸರ್ ಬಾರಿಸಿ 23 ರನ್ ಗಳಿಸಿದರು. ಕಳೆದ ಪಂದ್ಯದಲ್ಲಿ ಅಬ್ಬರಿಸಿದ್ದ ಎಬಿ ಡಿವಿಲಿಯರ್ಸ್​(2) ಈ ಬಾರಿ ಬೇಗನೆ ಔಟ್ ಆಗಿ ನಿರಾಸೆ ಮೂಡಿಸಿದರು.

ಅಂತಿಮ ಹಂತದಲ್ಲಿ ಪಂಜಾಬ್ ಉತ್ತಮ ಬೌಲಿಂಗ್ ಪ್ರದರ್ಶಿಸಿದ್ದರಿಂದ ಆರ್​ಸಿಬಿ ರನ್ ಕಲೆಹಾಕಲು ಪರದಾಡಿತು. ಆದರೆ, ಕೊನೆಯ ಓವರ್​​ನಲ್ಲಿ ಮೊರೀಸ್ ಹಾಗೂ ಉದಾನ ಸೇರಿ 17 ರನ್ ಚಚ್ಚಿದರು. ಕೊಹ್ಲಿ 39 ಎಸೆತಗಳಲ್ಲಿ 3 ಬೌಂಡರಿ ಬಾರಿಸಿ 48 ರನ್ ಗಳಿಸಿ ಔಟ್ ಆದರು. ಕ್ರಿಸ್ ಮೊರೀಸ್ 8 ಎಸೆತಗಳಲ್ಲಿ ಅಜೇಯ 25 ರನ್ ಸಿಡಿಸಿದರು.ಅಂತಿಮವಾಗಿ ಆರ್​ಸಿಬಿ 20 ಓವರ್​ನಲ್ಲಿ 6 ವಿಕೆಟ್ ನಷ್ಟಕ್ಕೆ 171 ರನ್ ಬಾರಿಸಿತು. ಪಂಜಾಬ್ ಪರ ಮೊಹಮ್ಮದ್ ಶಮಿ, ಮುರುಗನ್ ಅಶ್ವಿನ್ 2 ವಿಕೆಟ್ ಕಿತ್ತರೆ, ಅರ್ಶ್​ದೀಪ್ ಸಿಂಗ್, ಕ್ರಿಸ್ ಜಾರ್ಡನ್ 1 ವಿಕೆಟ್ ಪಡೆದರು.

ಇಂದಿನ ಪಂದ್ಯಕ್ಕೆ ಆರ್​ಸಿಬಿ ತಂಡದಲ್ಲಿ ಯಾವುದೇ ಬದಲಾವಣೆ ಮಾಡದೆ ಕಳೆದ ಗೆದ್ದ ತಂಡದಲ್ಲಿನ ಆಟಗಾರರೇ ಇಂದುಕೂಡ ಕಣಕ್ಕಿಳಿಯುತ್ತಿದ್ದಾರೆ.

ರಾಯಲ್ ಚಾಲೆಂಜರ್ಸ್​ ಬೆಂಗಳೂರು: ದೇವದತ್ ಪಡಿಕ್ಕಲ್, ಆ್ಯರೋನ್ ಫಿಂಚ್, ವಿರಾಟ್ ಕೊಹ್ಲಿ (ನಾಯಕ), ಎಬಿ ಡಿವಿಲಿಯರ್ಸ್‌ (ವಿ.ಕೀ), ಶಿವಂ ದುಬೆ, ಗುರುಕೀರತ್ ಮನ್​ ಸಿಂಗ್, ಕ್ರಿಸ್ ಮೊರೀಸ್, ವಾಷಿಂಗ್ಟನ್ ಸುಂದರ್, ಇಸುರು ಉದಾನ, ನವದೀಪ್ ಸೈನಿ, ಯಜುವೇಂದ್ರ ಚಾಹಲ್.

ಪಂಜಾಬ್ ತಂಡದಲ್ಲಿ 3 ಪ್ರಮುಖ ಬದಲಾವಣೆ ಮಾಡಲಾಗಿದ್ದು, ಈ ಬಾರಿಯ ಐಪಿಎಲ್​ನಲ್ಲಿ ಮೊದಲ ಬಾರಿಗೆ ಕ್ರಿಸ್ ಗೇಲ್ ಹಾಗೂ ದೀಪಕ್ ಹೂಡ ಕಣಕ್ಕಿಳಿಯುತ್ತಿದ್ದು, ಮುರುಗನ್ ಅಶ್ವಿನ್ ಕೂ ಸ್ಥಾನ ಪಡೆದುಕೊಂಡಿದ್ದಾರೆ. ಮಜೀದ್ ಉರ್ ರೆಹ್ಮಾನ್, ಮಂದೀಪ್ ಸಿಂಗ್ ಹಾಗೂ ಸಿಮ್ರಾನ್ ಸಿಂಗ್  ಹೊರಗುಳಿದಿದ್ದಾರೆ.

ಕಿಂಗ್ಸ್ ಇಲೆವೆನ್ ಪಂಜಾಬ್: ಲೋಕೇಶ್ ರಾಹುಲ್ (ನಾಯಕ), ಕ್ರಿಸ್ ಗೇಲ್, ಮಾಯಾಂಕ್ ಅಗರ್ವಾಲ್, ದೀಪಕ್ ಹೂಡ, ಗ್ಲೆನ್ ಮ್ಯಾಕ್ಸ್ ವೆಲ್, ನಿಕೋಲಸ್ ಪೂರನ್ , ಮುರುಗನ್ ಅಶ್ವಿನ್, ರವಿ ಬಿಷ್ಣೋಯ್, ಕ್ರಿಸ್ ಜಾರ್ಡನ್, ಅರ್ಶ್​ದೀಪ್ ನಾಥ್, ಮೊಹಮ್ಮದ್ ಶಮಿ.

ಈ ವರ್ಷದ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಸಾಲು ಸಾಲು ಸೋಲುಗಳಿಂದ ಕಂಗೆಟ್ಟಿರುವ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಆಡಿದ 7 ಪಂದ್ಯಗಳಲ್ಲಿ ಕೇವಲ 1 ಪಂದ್ಯವನ್ನಷ್ಟೆ ಗೆದ್ದಿದೆ. ಉಳಿದ 6 ಪಂದ್ಯಗಳಲ್ಲಿ ಸೋಲುಂಡಿದೆ. ಇತ್ತ ಮೋರಿಸ್ ಆಗಮನದ ನಂತರ ಆರ್​ಸಿಬಿ ಬೌಲಿಂಗ್ ಬಲ ಹೆಚ್ಚಿದ್ದು, ಆಡಿದ 7 ಪಂದ್ಯಗಳ ಪೈಕಿ 5 ರಲ್ಲಿ ಜಯ ಸಾಧಿಸಿ 2 ಪಂದ್ಯಗಳನ್ನು ಕೈಚೆಲ್ಲಿದೆ.

ಪಂದ್ಯದಿಂದ ಪಂದ್ಯಕ್ಕೆ ಅತ್ಯುತ್ತಮ ನಿರ್ವಹಣೆ ತೋರಲು ಯಶಸ್ವಿಯಾಗುತ್ತಿರುವ ಆರ್‌ಸಿಬಿ ತಂಡ, ಎದುರಾಳಿಗೆ ಕಂಟಕವಾಗಿ ಪರಿಣಮಿಸಿದೆ.

ಆರ್​ಸಿಬಿಗೆ ಇದು ಸೇಡಿನ ಪಂದ್ಯ ಕೂಡ ಹೌದು. ಈ ಬಾರಿ ಆರ್​ಸಿಬಿ ಎರಡು ಪಂದ್ಯಗಳಲ್ಲಿ ಸೋತಿರುವ ಪೈಕಿ ಪಂಜಾಬ್ ವಿರುದ್ಧವೂ ಒಂದು. ಹೀಗಾಗಿ ಸೇಡು ತೀರಿಸಿಕೊಳ್ಳಲು ಕೊಹ್ಲಿ ಪಡೆ ಕಾತುರದಲ್ಲಿದೆ.

ಇತ್ತ ಸರ್ವಾಂಗೀಣ ಆಟವನ್ನು ಪ್ರದರ್ಶಿಸಲು ವಿಫ‌ಲವಾಗುತ್ತಿರುವ ಪಂಜಾಬ್‌ ತಂಡವು ಕೆಲವೊಂದು ನಿಕಟ ಪಂದ್ಯಗಳಲ್ಲಿಯೂ ಎಡವಿ ಸೋಲುತ್ತಿದೆ. ಪರಿಣಾಮ ಪಂಜಾಬ್‌ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಹೀಗಾಗಿ ಪ್ಲೇ ಆಫ್​ ಕನಸು ಕಾಣುತ್ತಿರುವ ರಾಹುಲ್ ಪಡೆಗೆ ಈ ಪಂದ್ಯ ಮಾಡು ಇಲ್ಲವೇ ಮಡಿ ಎಂಬಂತಾಗಿದೆ.

ಇಲ್ಲಿಯವರೆಗೂ ಉಭಯ ತಂಡಗಳು 25 ಬಾರಿ ಮುಖಾಮುಖಿಯಾದ್ದು, 13ರಲ್ಲಿ ಕಿಂಗ್ಸ್​ ಇಲೆವೆನ್ ಪಂಜಾಬ್ ಜಯ ಸಾಧಿಸಿದ್ರೆ, 12 ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡ ಗೆಲುವು ಸಾಧಿಸಿವೆ.
Published by: Vinay Bhat
First published: October 15, 2020, 7:02 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories