ಐಪಿಎಲ್‍ನಲ್ಲಿ ಸೋಮವಾರ ನಡೆದ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 82 ರನ್ಗಳ ಭರ್ಜರಿ ಜಯ ಸಾಧಿಸಿತು. ಎಬಿ ಡಿವಿಲಿಯರ್ಸ್ ಅವರ ಸ್ಫೋಟಕ ಬ್ಯಾಟಿಂಗ್ ಹಾಗೂ ಬೌಲರ್ಗಳ ಭರ್ಜರಿ ಪ್ರದರ್ಶನದಿಂದ ಕೊಹ್ಲಿ ಪಡೆ ಗೆದ್ದು ತನ್ನ ಪ್ಲೇ ಆಫ್ ಹಾದಿಯನ್ನ ಮತ್ತಷ್ಟು ಸುಗಮಗೊಳಿಸಿತು. ಈ ಪಂದ್ಯದಲ್ಲಿ ಆರ್‌ಸಿಬಿ ಕಲೆಹಾಕಿದ್ದು ಬರೋಬ್ಬರಿ 194 ರನ್ಸ್. ಆದರೆ, ಗುರಿ ಬೆನ್ನಟ್ಟಲು ಸಾಧ್ಯವಾಗದೆ ಕೆಕೆಆರ್ ತಂಡ 20 ಓವರ್ನಲ್ಲಿ 112 ರನ್ ಗಳಿಸಿ ಸೋಲೊಪ್ಪಿಗೊಂಡಿತು.
ವಿರಾಟ್ ಕೊಹ್ಲಿ ಜೊತೆಗೂಡಿ ಅಂತಿಮ ಹಂತದಲ್ಲಿ ಸ್ಫೋಟಕ ಬ್ಯಾಟಿಂಗ್ ನಡೆಸಿದ ಡಿವಿಲಿಯರ್ಸ್ ಆರ್‌ಸಿಬಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಎಬಿಡಿ ಕೇವಲ 33 ಎಸೆತಗಳಲ್ಲಿ 5 ಬೌಂಡರಿ, 6 ಸಿಕ್ಸರ್ ಸಿಡಿಸಿ ಅಜೇಯ 73 ರನ್ ಚಚ್ಚಿದರು. ಅಮೋಘ ಪ್ರದರ್ಶನ ನೀಡಿದ ಡಿವಿಲಿಯರ್ಸ್ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಬಾಜಿಕೊಂಡರು.
IPL 2020, RCB vs KKR: ಆರ್‌ಸಿಬಿ ಆಟಕ್ಕೆ ಕೆಕೆಆರ್ ದಂಗು: ಶಾರ್ಜಾದಲ್ಲಿ ಕೊಹ್ಲಿ ಟೀಂ ಕಿಂಗು!
ಆದರೆ, ರಾಜಸ್ಥಾನ್ ರಾಯಲ್ಸ್ ತಂಡದ ಆಲ್ರೌಂಡರ್ ಬೆನ್ ಸ್ಟೋಕ್ಸ್ ಅವರು ಎಬಿ ಡಿವಿಲಿಯರ್ಸ್ ಬದಲು ಆರ್‌ಸಿಬಿ ಸ್ಪಿನ್ನರ್ ಯಜುವೇಂದ್ರ ಚಹಾಲ್ ಅವರಿಗೆ ಮ್ಯಾನ್ ಆಫ್ ದಿ ಮ್ಯಾಚ್ ಕೊಡಬೇಕಿತ್ತು ಎಂದು ಹೇಳಿದ್ದಾರೆ.
ಇದಕ್ಕೆ ಕಾರಣವನ್ನೂ ತಿಳಿಸಿರುವ ಸ್ಟೋಕ್ಸ್, "ಬ್ಯಾಟಿಂಗ್ ಪಂದ್ಯದಲ್ಲಿ ಚಹಾಲ್‌ಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ನೀಡಬೇಕಾಗಿತ್ತು. ಬ್ಯಾಟಿಂಗ್ ಸ್ನೇಹಿ ವಿಕೆಟ್ ಆದ ಶಾರ್ಜಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ಅವರು ಅದ್ಭುತ ಬೌಲಿಂಗ್ ಮಾಡಿದ್ದಾರೆ," ಎಂದು ಬೆನ್ ಸ್ಟೋಕ್ಸ್ ಟ್ವೀಟ್ ಮಾಡಿದ್ದಾರೆ.
In a batters game @yuzi_chahal should get MOM here,incredible figures especially as it’s in Sharjah 👏
— Ben Stokes (@benstokes38) October 12, 2020
ಇನ್ನಾದರೂ ನಿವೃತ್ತಿಯಿಂದ ಹೊರಬನ್ನಿ: ಸ್ಟಾರ್ ಆಟಗಾರನಿಗೆ ಭಾರತದ ಕೋಚ್ ಮನವಿ
ಪ್ರಸಕ್ತ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಚಹಾಲ್ ಒಟ್ಟು 10 ವಿಕೆಟ್‌ಗಳನ್ನು ಪಡೆದುಕೊಂಡಿದ್ದಾರೆ. ಅತಿ ಹೆಚ್ಚು ವಿಕೆಟ್‌ಗಳನ್ನು ಪಡೆದುಕೊಂಡವರ ಪಟ್ಟಿಯಲ್ಲಿ ಅವರು ಐದನೇ ಸ್ಥಾನದಲ್ಲಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ