ಶಾರ್ಜಾ (ಅ. 12): ಇಲ್ಲಿನ ಶಾರ್ಜಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ನ 28ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅಮೋಘ ಗೆಲುವು ಕಂಡಿದೆ. ಎಬಿ ಡಿವಿಲಿಯರ್ಸ್ ಅವರ ಸ್ಫೋಟಕ ಬ್ಯಾಟಿಂಗ್ ಹಾಗೂ ಬೌಲರ್ಗಳ ಭರ್ಜರಿ ಪ್ರದರ್ಶನದಿಂದ ಕೊಹ್ಲಿ ಪಡೆ 82 ರನ್ಗಳ ಜಯ ಸಾಧಿಸಿ ಪಾಯಿಂಟ್ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿದೆ.
ಆರ್ಸಿಬಿ ನೀಡಿದ್ದ 195 ರನ್ಗಳ ಕಠಿಣ ಟಾರ್ಗೆಟ್ ಬೆನ್ನಟ್ಟಿದ ಕೆಕೆಆರ್ ಆರಂಭದಿಂದಲೇ ವಿಕೆಟ್ ಕಳೆದುಕೊಂಡು ಸಾಗಿತು. ಈ ಬಾರಿ ಚೊಚ್ಚಲ ಐಪಿಎಲ್ ಪಂದ್ಯವನ್ನಾಡಿದ ಟಾಮ್ ಬಾಂಟನ್(8) ಬೇಗನೆ ಔಟ್ ಆಗಿ ನಿರಾಸೆ ಮೂಡಿಸಿದರೆ, ನಿತೀಶ್ ರಾಣ ಹೆಚ್ಚುಹೊತ್ತು ಕ್ರೀಸ್ನಲ್ಲಿ ನಿಲ್ಲದೆ 9 ರನ್ಗೆ ನಿರ್ಗಮಿಸಿದರು.
ಇತ್ತ ಇಯಾನ್ ಮಾರ್ಗನ್ ಜೊತೆಸೇರಿ ಇನ್ನಿಂಗ್ಸ್ ಕಟ್ಟಲು ಹೊರಟ ಶುಭ್ಮನ್ ಗಿಲ್ 25 ಎಸೆತಗಳಲ್ಲಿ 34 ರನ್ ಬಾರಿಸಿ ರನೌಟ್ಗೆ ಬಲಿಯಾದರೆ, ನಾಯಕ ದಿನೇಶ್ ಕಾರ್ತಿಕ್ ಬಂದ ಬೆನ್ನಲ್ಲೇ ಕೇವಲ 1 ರನ್ಗೆ ಪೆವಿಲಿಯನ್ ಕಡೆ ಹೆಜ್ಜೆ ಹಾಕಿದರು. ಇಯಾನ್ ಮಾರ್ಗನ್(8) ಬ್ಯಾಟ್ ಕೂಡ ಸದ್ದು ಮಾಡಲಿಲ್ಲ. ಬಳಿಕ ಬಂದ ಆಟಗಾರರು ಯಾರೂ ಕ್ರೀಸ್ನಲ್ಲಿ ನಿಲ್ಲಲಿಲ್ಲ.
The emotions and celebrations say it all!
Isuru Udana strikes. Dre Russ departs.#Dream11IPL pic.twitter.com/wC9hkL1GBs
— IndianPremierLeague (@IPL) October 12, 2020
ಇದಕ್ಕೂ ಮುನ್ನ ಟಾಸ್ ಗೆದ್ದು ಬ್ಯಾಟಿಂಗ್ಗೆ ಇಳಿದ ಆರ್ಸಿಬಿ ಸ್ಫೋಟಕ ಆರಂಭ ಪಡೆದುಕೊಂಡಿತು. ಪವರ್ ಪ್ಲೇ ಅನ್ನು ಅತ್ಯುತ್ತಮವಾಗಿ ಉಪಯೋಗಿಸಿಕೊಂಡ ಓಪನರ್ಗಳಾದ ಆ್ಯರೋನ್ ಫಿಂಚ್ ಹಾಗೂ ದೇವದತ್ ಪಡಿಕ್ಕಲ್ ಬಿರುಸಿನ ಬ್ಯಾಟಿಂಗ್ ನಡೆಸಿದರು. ಅದರಂತೆ ಈ ಜೋಡಿ ಮೊದಲ 6 ಓವರ್ನಲ್ಲಿ 47 ರನ್ ಕಲೆಹಾಕಿತು.
ಆದರೆ, 8ನೇ ಓವರ್ನ ರಸೆಲ್ ಬೌಲಿಂಗ್ನಲ್ಲಿ ಚೆಂಡನ್ನು ಸಿಕ್ಸ್ಗೆ ಅಟ್ಟುವಲ್ಲಿ ವಿಫಲರಾದ ಪಡಿಕ್ಕಲ್ 23 ಎಸೆತಗಳಲ್ಲಿ 33 ರನ್ ಗಳಿಸಿ ಔಟ್ ಆದರು. ಈ ಜೋಡಿ 67 ರನ್ಗಳ ಜೊತೆಯಾಟ ಆಡಿತು. ನಾಯಕ ವಿರಾಟ್ ಕೊಹ್ಲಿ ಹಾಗೂ ಫಿಂಚ್ 27 ರನ್ಗಳ ಕಾಣಿಕೆ ನೀಡಿದರಷ್ಟೆ.
ಫಿಂಚ್ 37 ಎಸೆತಗಳಲ್ಲಿ 4 ಬೌಂಡರಿ, 1 ಸಿಕ್ಸರ್ ಬಾರಿಸಿ 47 ರನ್ಗೆ ಔಟ್ ಆದರು. ಬಳಿಕ ಕೊಹ್ಲಿ ಜೊತೆಯಾದ ಎಬಿ ಡಿವಿಲಿಯರ್ಸ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. ಅಂತಿಮ ಹಂತದಲ್ಲಿ ಆರ್ಭಟಿಸಿದ ಎಬಿಡಿ 360 ಡಿ. ಯಲ್ಲಿ ಬ್ಯಾಟ್ ಬೀಸಿದರು, ಕೇವಲ 23 ಎಸೆತಗಳಲ್ಲಿ ಅರ್ಧಶತಕ ಬಾರಿಸಿದರು. ಇವರಿಗೆ ಕೊಹ್ಲಿ ಉತ್ತಮ ಸಾತ್ ನೀಡಿದರು.
The AB-Virat partnership - 3000 runs and counting 🤜🤛#Dream11IPL pic.twitter.com/DmjOlWs6hO
— IndianPremierLeague (@IPL) October 12, 2020
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ