Virat Kohli: ಯಾವ ಭಾರತೀಯ ಕ್ರಿಕೆಟಿಗನೂ ಮಾಡಿರದ ಸಾಧನೆಯತ್ತ ಕೊಹ್ಲಿ: ಇಂದೇ ಆಗುತ್ತಾ ಆ ದಾಖಲೆ?

ಸದ್ಯ ಇಂದಿನ ಪಂದ್ಯದಲ್ಲಿ ಭಾರತೀಯ ಯಾವ ಆಟಗಾರ ಕೂಡ ಮಾಡಿರದ ನೂತನ ದಾಖಲೆ ಬರೆಯಲು ಕಿಂಗ್ ವಿರಾಟ್ ಕೊಹ್ಲಿ ಸಜ್ಜಾಗಿದ್ದಾರೆ.

ವಿರಾಟ್ ಕೊಹ್ಲಿ.

ವಿರಾಟ್ ಕೊಹ್ಲಿ.

 • Share this:
  ಐಪಿಎಲ್​ನಲ್ಲಿಂದು ನಡೆಯಲಿರುವ 19ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿ ಆಗುತ್ತಿದೆ. ದುಬೈ ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಈ ಹೈವೋಲ್ಟೇಜ್ ಪಂದ್ಯ ನಡೆಯಲಿದ್ದು, ಗೆದ್ದ ತಂಡ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಲಿದೆ. ಆರ್​ಸಿಬಿ ಮೇಲೆ ಈ ಬಾರಿ ಸಾಕಷ್ಟು ನಂಬಿಕೆ ಇಡಲಾಗಿದೆ. ಅಭಿಮಾನಿಗಳಂತು ಗೆಲುವಿನ ಅಲೆಯಲ್ಲಿ ತೇಲುತ್ತುದ್ದಾರೆ. ಅಲ್ಲದೆ ನಾಯಕ ವಿರಾಟ್ ಕೊಹ್ಲಿ ಫಾರ್ಮ್​ಗೆ ಮರಳಿರುವುದು ತಂಡದ ಶಕ್ತಿಯನ್ನು ಇನ್ನಷ್ಟು ಹೆಚ್ಚಿಸಿದೆ.

  ಕಳೆದ ರಾಜಸ್ಥಾನ್ ರಾಯಲ್ಸ್ ವಿರುದ್ಧ ನೂತನ ಸಾಧನೆ ಮಾಡಿದ್ದ ವಿರಾಟ್ ಕೊಹ್ಲಿ ಸದ್ಯ ಮತ್ತೊಂದು ದಾಖಲೆಯ ಸನಿಹದಲ್ಲಿದ್ದಾರೆ. ಆರ್​ಆರ್​ ವಿರುದ್ಧ ವಿರಾಟ್ ಕೊಹ್ಲಿ ಕೇವಲ 53 ಎಸೆತಗಳಲ್ಲಿ 7 ಬೌಂಡರಿ, 2 ಸಿಕ್ಸರ್ ಸಿಡಿಸಿ ಅಜೇಯ 75 ರನ್ ಚಚ್ಚಿದ್ದರು. ಈ ಮೂಲಕ ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ 5,500 ರನ್ ಗಡಿ ದಾಟಿದರು. ಐಪಿಎಲ್​ನಲ್ಲಿ ಈ ಸಾಧನೆ ಮಾಡಿದ ಏಕೈಕ ಆಟಗಾರ ಎಂಬ ಗೌರವಕ್ಕೆ ಕೊಹ್ಲಿ ಪಾತ್ರರಾದರು.

  IPL 2020, RCB vs DC: ಆರ್​ಸಿಬಿ ತಂಡದಲ್ಲಿ ಒಂದು ಮಹತ್ವದ ಬದಲಾವಣೆ: ಇಂದಿನ ಪಂದ್ಯಕ್ಕೆ ಪ್ಲೇಯಿಂಗ್ ಇಲೆವೆನ್ ಇಲ್ಲಿದೆ

  ಸದ್ಯ ಇಂದಿನ ಪಂದ್ಯದಲ್ಲಿ ಭಾರತೀಯ ಯಾವ ಆಟಗಾರ ಕೂಡ ಮಾಡಿರದ ನೂತನ ದಾಖಲೆ ಬರೆಯಲು ಕಿಂಗ್ ಕೊಹ್ಲಿ ಸಜ್ಜಾಗಿದ್ದಾರೆ. ಇಂದಿನ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಕೊಹ್ಲಿ ಕೇವಲ 10 ರನ್ ಗಳಿಸಿದರೆ ಟಿ-20 ಕ್ರಿಕೆಟ್​ನಲ್ಲಿ 9,000 ರನ್ ಪೂರೈಸಿದ ದಾಖಲೆ ಮಾಡಲಿದ್ದಾರೆ. ಅಲ್ಲದೆ ಈ ಸಾಧನೆ ಮಾಡಿದ ಮೊಟ್ಟ ಮೊದಲ ಭಾರತೀಯ ಆಟಗಾರ ಹಾಗೂ ಒಟ್ಟಾರೆ ಏಳನೇ ಪ್ಲೇಯರ್ ಕೊಹ್ಲಿ ಆಗಲಿದ್ದಾರೆ.

  ಅಲ್ಲದೆ ಕೊಹ್ಲಿ ಖಾತೆಯಲ್ಲಿ ಸದ್ಯ 192 ಸಿಕ್ಸರ್ ಇದ್ದು ಇನ್ನು ಕೇವಲ 8 ಸಿಕ್ಸರ್ ಸಿಡಿಸಿದರೆ 200 ಸಿಕ್ಸರ್ ಬಾರಿಸಿದ ಕೆಲವೇ ಬ್ಯಾಟ್ಸ್​ಮನ್​ಗಳ ಸಾಲಿನಲ್ಲಿ ಕೊಹ್ಲಿ ಕೂಡ ಸ್ಥಾನ ಪಡೆಯಲಿದ್ದಾರೆ.

  ಸತತ ಎರಡು ಗೆಲುವು ದಾಖಲಿಸಿರುವ ಆರ್​ಸಿಬಿಯಲ್ಲಿ ಬದಲಾವಣೆ ಸಾಧ್ಯತೆ ಕಡಿಮೆ. ಒಂದು ವೇಳೆ ಆಲ್​ರೌಂಡರ್​ ಕ್ರಿಸ್​ ಮಾರಿಸ್​ ಫಿಟ್​ ಆದಲ್ಲಿ ಇಂದಿನ ಪಂದ್ಯಕ್ಕೆ ಬರುವ ಸಾಧ್ಯತೆ ಇದೆ. ಈ ವೇಳೆ ಆಡಂ ಜಂಪಾ ಹೊರಗುಳಿಯಬೇಕಾಗಿ ಬರಬಹುದು.

  ಆರ್​ಸಿಬಿ ಸ್ಟಾರ್ ವೇಗಿ ನವ್​ದೀಪ್ ಸೈನಿ ಶೂನಲ್ಲಿ ಬರೆದ ಸಂದೇಶ ನೋಡಿದ್ರೆ ನೀವು ಶಾಕ್ ಆಗ್ತೀರಾ!

  ಡೆಲ್ಲಿ ಕೂಡ ಈ ಆವೃತ್ತಿಯಲ್ಲಿ ಉತ್ತಮ ಪ್ರದರ್ಶನವನ್ನೇ ನೀಡುತ್ತಿದೆ. ಕಳೆದ ಪಂದ್ಯದಲ್ಲಿ ಕೆಕೆಆರ್​ ವಿರುದ್ಧ ಡೆಲ್ಲಿ ರನ್​ ಹೊಳೆಯನ್ನೇ ಹರಿಸಿತ್ತು. ಹೀಗಾಗಿ ಇಂದಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್​ ಸಿಕ್ಕರೆ ಆರ್​ಸಿಬಿ ವಿರುದ್ಧ ದೊಡ್ಡ ಮೊತ್ತದ ಸ್ಕೋರ್​ ಕಲೆ ಹಾಕುವ ಆಲೋಚನೆಯಲ್ಲಿ ಡೆಲ್ಲಿ ಇದೆ.

  ಐಪಿಎಲ್ ಇತಿಹಾಸದಲ್ಲಿ ಡೆಲ್ಲಿ ಮತ್ತು ಬೆಂಗಳೂರು ತಂಡಗಳು 23 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ಆರ್​ಸಿಬಿ 14 ಪಂದ್ಯಗಳಲ್ಲಿ ಗೆಲುವು ಕಂಡಿದ್ದರೆ, ಡೆಲ್ಲಿ 8 ಪಂದ್ಯದಲ್ಲಿ ಜಯ ಸಾಧಿಸಿ ಒಂದು ಪಂದ್ಯ ಯಾವುದೇ ಫಲಿತಾಂಶ ಕಂಡಿಲ್ಲ.
  Published by:Vinay Bhat
  First published: