ನಿನ್ನೆ ದುಬೈನ ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ನ 19ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿ ಆಗಿತ್ತು. ಇದರಲ್ಲಿ ಬ್ಯಾಟಿಂಗ್- ಬೌಲಿಂಗ್ನಲ್ಲಿ ಮಿಂಚಿದ ಶ್ರೇಯಸ್ ಅಯ್ಯರ್ ಪಡೆ 59 ರನ್ಗಳ ಭರ್ಜರಿ ಜಯದೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು. ಇತ್ತ ಕೊಹ್ಲಿ ಪಡೆ ಟೂರ್ನಿಯಲ್ಲಿ ಎರಡನೇ ಸೋಲುಕಂಡಿತು. ಈ ಪಂದ್ಯದಲ್ಲಿ ಡೆಲ್ಲಿ ತಂಡದ ಆಟಗಾರ ರವಿಚಂದ್ರನ್ ಅಶ್ವಿನ್ ಅವರು ಮಂಕಡಿಂಗ್ ಮೂಲಕ ಮತ್ತೆ ಸುದ್ದಿಯಾಗಿದ್ದಾರೆ.
ಆರ್ಸಿಬಿ ತಂಡ ಡೆಲ್ಲಿ ನೀಡಿದ್ದ 197 ರನ್ಗಳ ಕಠಿಣ ಟಾರ್ಗೆಟ್ ಬೆನ್ನಟ್ಟುತ್ತಿರುವ ವೇಳೆ ನಾನ್ ಸ್ಟ್ರೈಕರ್ ಎಂಡ್ನಲ್ಲಿದ್ದ ಬ್ಯಾಟ್ಸ್ಮನ್ ಆ್ಯರೋನ್ ಫಿಂಚ್ ಅವರನ್ನು ಮಂಕಡ್ ಔಟ್ ಮಾಡುವ ಅವಕಾಶ ಸಿಕ್ಕರೂ ಅಶ್ವಿನ್ ಹಿಂದೆ ಸರಿದರು. ಜೊತೆಗೆ ಖಡಕ್ ಎಚ್ಚರಿಕೆಯನ್ನೂ ನೀಡಿದರು.
ರಾಷ್ಟ್ರೀಯ ಕಬಡ್ಡಿ ಸಂಭಾವ್ಯ ತಂಡಕ್ಕೆ ಆಯ್ಕೆಯಾಗಿದ್ದ ಸುಳ್ಯದ ಆಟಗಾರನಿಗೆ ತರಬೇತಿಗಿಲ್ಲ ಆಹ್ವಾನ!
ಆರ್ಸಿಬಿ ಆರಂಭಿಕ ಆ್ಯರೋನ್ ಫಿಂಚ್ರನ್ನು ಮಂಕಡಿಂಗ್ ಮೂಲಕ ಔಟ್ ಮಾಡುವ ಅವಕಾಶ ಅಶ್ವಿನ್ಗೆ ಸುಲಭವಾಗಿ ಸಿಕ್ಕಿತ್ತು. ಅಶ್ವಿನ್ ಅವರು ಬೌಲಿಂಗ್ ಮಾಡುವಾಗ ಫಿಂಚ್ ಕ್ರೀಸ್ ಬಿಟ್ಟಿದ್ದರು. ಅಂದರೆ ಬಾಲ್ ಎಸೆಯುವ ಮುನ್ನವೇ ಫಿಂಚ್ ಗೇರೆ ದಾಟಿದ್ದರು. ಫಿಂಚ್ ಕ್ರೀಸ್ನಿಂದ ದೂರವಿದ್ದರೂ ಅಶ್ವಿನ್ ಕೈಯಲ್ಲಿ ಬಾಲ್ ಹಿಡಿದು ನಗುತ್ತಾ ನಿಂತಿದ್ದರು. ಬಳಿಕ ಕೂಡಲೇ ಎಚ್ಚೆತ್ತ ಫಿಂಚ್ ವಾಪಸ್ ಕ್ರೀಸ್ಗೆ ಬಂದರು.
ಈ ಸಮಯದಲ್ಲಿ ಡಗ್ ಔಟ್ನಲ್ಲಿ ಕುಳಿತಿದ್ದ ದೆಹಲಿ ಕೋಚ್ ರಿಕಿ ಪಾಂಟಿಂಗ್ ಕೂಡ ಅವರ ನಗುವನ್ನು ಕಂಟ್ರೋಲ್ ಮಾಡಿಕೊಳ್ಳಲು ಸಾಧ್ಯವಾಗಲಿಲ್ಲ. ಈ ಹಿಂದೆ ಮಂಕಡಿಂಗ್ ವಿವಾದ ಕುರಿತು ಅಶ್ವಿನ್ ಜೊತೆ ಡೆಲ್ಲಿ ಕ್ಯಾಪಿಟಲ್ಸ್ ಕೋಚ್ ರಿಕಿ ಪಾಂಟಿಂಗ್ ಭಿನ್ನಾಭಿಪ್ರಾಯ ಹೊಂದಿದ್ದರು.
ಇನ್ನೂ ಈ ಕುರಿತು ಟ್ವಿಟರ್ನಲ್ಲಿ ಆರ್ ಅಶ್ವಿನ್ ಅವರು ತಮಾಷೆಯಾಗಿ ಬರೆದಿದ್ದು, ನಾನು ಈಗಾಗಲೇ ವಾರ್ನಿಂಗ್ ಕೊಡುತ್ತಿದ್ದೇನೆ. ಇದನ್ನು ಅಧಿಕೃತವಾಗಿ ಹೇಳುತ್ತಿದ್ದೇನೆ. ಆಮೇಲೆ ನನ್ನನ್ನು ದೂಷಿಸಬೇಡಿ, ಕ್ರೀಸ್ ಬಿಟ್ಟರೆ ಮಂಕಡಿಂಗ್ ಔಟ್ ಮಾಡುತ್ತೇನೆಂದು ಎಚ್ಚರಿಕೆ ನೀಡಿದ್ದಾರೆ.
ನಿನ್ನೆಯ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ನಿಗದಿತ 20 ಓವರ್ಗಳಿಗೆ 196 ರನ್ಗಳನ್ನು ಕಲೆ ಹಾಕಿತು. ಬಳಿಕ ಗುರಿ ಹಿಂಬಾಲಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 9 ವಿಕೆಟ್ಗಳನ್ನು ಕಳೆದುಕೊಂಡು 137 ರನ್ಗಳಿಗೆ ಸೀಮಿತವಾಯಿತು.
IPL 2020, MI vs RR: ಹ್ಯಾಟ್ರಿಕ್ ಗೆಲುವಿನತ್ತ ಮುಂಬೈ ಚಿತ್ತ: ಸೋಲುಗಳಿಂದ ಕಂಗೆಟ್ಟಿರುವ ಆರ್ಆರ್ಗೆ ಗೆಲುವಿನ ತವಕ
ಕಗಿಸೋ ರಬಾಡ ನಾಲ್ಕು ವಿಕೆಟ್ಗಳನ್ನು ಕಬಳಿಸಿದರೆ, ಅಕ್ಷರ್ ಪಟೇಲ್ ಹಾಗೂ ಆನ್ರಿಚ್ ನಾಟ್ಜ್ ತಲಾ ಎರಡು ವಿಕೆಟ್ಗಳನ್ನು ಕಬಳಿಸಿದರು. ಅಂತಿಮವಾಗಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಆರ್ಸಿಬಿ 59 ರನ್ಗಳ ಸೋಲು ಅನುಭವಿಸಿತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ