IPL

  • associate partner
HOME » NEWS » Ipl » IPL 2020 RCB VS DC CHRIS MORRIS MAY COME BACK FOR TODAYS MATCH RMD

IPL 2020, RCB vs DC: ಹ್ಯಾಟ್ರಿಕ್ ಜಯದ ಕನಸಲ್ಲಿ ಆರ್​ಸಿಬಿ; ಕೊಹ್ಲಿ ತಂಡದಲ್ಲಿ ಮಹತ್ವದ ಬದಲಾವಣೆ

ಡೆಲ್ಲಿ ಕೂಡ ಈ ಆವೃತ್ತಿಯಲ್ಲಿ ಉತ್ತಮ ಪ್ರದರ್ಶನವನ್ನೇ ನೀಡುತ್ತಿದೆ. ಕಳೆದ ಪಂದ್ಯದಲ್ಲಿ ಕೆಕೆಆರ್​ ವಿರುದ್ಧ ಡೆಲ್ಲಿ ರನ್​ ಹೊಳೆಯನ್ನೇ ಹರಿಸಿತ್ತು. ಹೀಗಾಗಿ ಇಂದಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್​ ಸಿಕ್ಕರೆ ಆರ್​ಸಿಬಿ ವಿರುದ್ಧ ದೊಡ್ಡ ಮೊತ್ತದ ಸ್ಕೋರ್​ ಕಲೆ ಹಾಕುವ ಆಲೋಚನೆಯಲ್ಲಿ ಡೆಲ್ಲಿ ಇದೆ.

news18-kannada
Updated:October 5, 2020, 12:14 PM IST
IPL 2020, RCB vs DC: ಹ್ಯಾಟ್ರಿಕ್ ಜಯದ ಕನಸಲ್ಲಿ ಆರ್​ಸಿಬಿ; ಕೊಹ್ಲಿ ತಂಡದಲ್ಲಿ ಮಹತ್ವದ ಬದಲಾವಣೆ
ನಾಯಕ ವಿರಾಟ್ ಕೊಹ್ಲಿ ಹಾಗೂ ಎಬಿ ಡಿವಿಲಿಯರ್ಸ್​ ಕೂಡ ತಮ್ಮ ಘನತೆಗೆ ತಕ್ಕಂತೆ ಆಡುತ್ತಿಲ್ಲ. ಇನ್ನೂ ಎಬಿಡಿ ನಿರ್ಗಮನದ ಬಳಿಕ ತಂಡದಲ್ಲಿ ದೊಡ್ಡ ರನ್ ಕಲೆಹಾಕುವ ಸಾಮರ್ಥ್ಯ ಯಾರಲ್ಲೂ ಇಲ್ಲ.
  • Share this:
ಸತತ ಎರಡು ಗೆಲುವು ದಾಖಲಿಸುವ ಮೂಲಕ ಆತ್ಮ ವಿಶ್ವಾಸ ಹೆಚ್ಚಿಸಿಕೊಂಡಿರುವ ವಿರಾಟ್​ ಕೊಹ್ಲಿ ನೇತೃತ್ವದ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಇಂದು ಡೆಲ್ಲಿ ಕ್ಯಾಪಿಟಲ್ಸ್​ ತಂಡವನ್ನು ಎದುರಿಸಲಿದೆ. ಎರಡೂ ತಂಡಗಳು ತಲಾ ಮೂರು ಗೆಲುವು ಒಂದು ಸೋಲು ದಾಖಲಿಸಿದ್ದು, ಅಗ್ರ ಸ್ಥಾನಕ್ಕಾಗಿ ಭಾರೀ ಪೈಪೋಟಿ ನಡೆಸಲಿವೆ. ಪಂಜಾಬ್​ ವಿರುದ್ಧದ ಪಂದ್ಯ ಹೊರತುಪಡಿಸಿದರೆ ಉಳಿದ ಮೂರು ಪಂದ್ಯಗಳಲ್ಲಿ ಆರ್​ಸಿಬಿ ಉತ್ತಮ ಪ್ರದರ್ಶನ ನೀಡಿದೆ. ಮೊದಲ ಮೂರು ಪಂದ್ಯಗಳಲ್ಲಿ ತೀವ್ರ ಕಳಪೆ ಪ್ರದರ್ಶನ ನೀಡಿದ್ದ ನಾಯಕ ಕೊಹ್ಲಿ ರಾಜಸ್ಥಾನದ ವಿರುದ್ಧದ ಪಂದ್ಯದಲ್ಲಿ ಅಬ್ಬರಿಸಿದ್ದಾರೆ. ಇದು ತಂಡಕ್ಕೆ ಹೊಸ ಬಲ ಬಂದಂತಾಗಿದೆ.

ಡೆಲ್ಲಿ ಕೂಡ ಈ ಆವೃತ್ತಿಯಲ್ಲಿ ಉತ್ತಮ ಪ್ರದರ್ಶನವನ್ನೇ ನೀಡುತ್ತಿದೆ. ಕಳೆದ ಪಂದ್ಯದಲ್ಲಿ ಕೆಕೆಆರ್​ ವಿರುದ್ಧ ಡೆಲ್ಲಿ ರನ್​ ಹೊಳೆಯನ್ನೇ ಹರಿಸಿತ್ತು. ಹೀಗಾಗಿ ಇಂದಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್​ ಸಿಕ್ಕರೆ ಆರ್​ಸಿಬಿ ವಿರುದ್ಧ ದೊಡ್ಡ ಮೊತ್ತದ ಸ್ಕೋರ್​ ಕಲೆ ಹಾಕುವ ಆಲೋಚನೆಯಲ್ಲಿ ಡೆಲ್ಲಿ ಇದೆ.

ಸತತ ಎರಡು ಗೆಲುವು ದಾಖಲಿಸಿರುವ ಆರ್​ಸಿಬಿಯಲ್ಲಿ ಬದಲಾವಣೆ ಸಾಧ್ಯತೆ ಕಡಿಮೆ. ಒಂದು ವೇಳೆ ಆಲ್​ರೌಂಡರ್​ ಕ್ರಿಸ್​ ಮಾರಿಸ್​ ಫಿಟ್​ ಆದಲ್ಲಿ ಇಂದಿನ ಪಂದ್ಯಕ್ಕೆ ಬರುವ ಸಾಧ್ಯತೆ ಇದೆ. ಈ ವೇಳೆ ಆಡಂ ಜಂಪಾ ಹೊರಗುಳಿಯಬೇಕಾಗಿ ಬರಬಹುದು.

ಇನ್ನು ಡೆಲ್ಲಿ ತಂಡದಲ್ಲಿ ಬದಲಾವಣೆ ಸಾಧ್ಯತೆ ಕಡಿಮೆ. ಸ್ಪಿನ್ನರ್ ಅಮಿತ್​ ಮಿಶ್ರಾ ಗಾಯಗೊಂಡಿರುವುದರಿಂದ ಅವರ ಲಭ್ಯತೆ ಗೊಂದಲದಲ್ಲಿದೆ. ಇಶಾಂತ್​ ಶರ್ಮಾ ಬದಲಿಗೆ ಸ್ಥಾನ ಗಿಟ್ಟಿಸಿಕೊಂಡಿದ್ದ ಹರ್ಷಲ್​ ಪಟೇಲ್​ ಉತ್ತಮ ರೀತಿಯಲ್ಲಿ ಆಡುತ್ತಿದ್ದು, ಅವರು ಮತ್ತೊಮ್ಮೆಕಣಕ್ಕೆ ಇಳಿಯಬಹುದು.

ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ರಾತ್ರಿ 7:30ಕ್ಕೆ ಪಂದ್ಯ ಆರಂಭವಾಗಲಿದೆ.
Published by: Rajesh Duggumane
First published: October 5, 2020, 12:14 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories