IPL

  • associate partner
HOME » NEWS » Ipl » IPL 2020 RCB VIRAT KOHLI RCB TEAM FANS LOCALIZE RCB PLAYER WITH KARNATAKA BENGALURU LOCALITY VB

RCB: ಕೊಡಗಿನ ಕೊಹ್ಲಿ, ಮೂಡಿಗೆರೆ ಮೊರೀಸ್: ಕರುನಾಡ ಜಿಲ್ಲೆಗಳಲ್ಲಿ ಆರ್​ಸಿಬಿ ಪ್ಲೇಯರ್ಸ್ ಹವಾ!

ಕೊಹ್ಲಿ ಪಡೆ ಈ ಬಾರಿ ಇಷ್ಟರ ಮಟ್ಟಿಗೆ ಅತ್ಯುತ್ತಮ ಪ್ರದರ್ಶನ ನೀಡಲು ಒಂದು ಕಾರಣ ಆರ್​ಸಿಬಿಯ ಡೈ ಹಾರ್ಡ್​​ ಫ್ಯಾನ್ಸ್ ಎಂದರೆ ತಪ್ಪಾಗಲಾರದು. ಗೆಲುವಿವೇ ಬರಲಿ ಸೋಲೇ ಇರಲಿ ಆರ್​ಸಿಬಿ ತಂಡವನ್ನು ಅಭಿಮಾನಿಗಳು ಎಂದಿಗೂ ಕೈಬಿಡುವುದಿಲ್ಲ.

news18-kannada
Updated:October 13, 2020, 8:35 PM IST
RCB: ಕೊಡಗಿನ ಕೊಹ್ಲಿ, ಮೂಡಿಗೆರೆ ಮೊರೀಸ್: ಕರುನಾಡ ಜಿಲ್ಲೆಗಳಲ್ಲಿ ಆರ್​ಸಿಬಿ ಪ್ಲೇಯರ್ಸ್ ಹವಾ!
ಫೋಟೋ ಕೃಪೆ: ಹರೀಶ್ ಅರಸು ಫೇಸ್​ಬುಕ್.
  • Share this:
13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ವಿರಾಟ್ ಕೊಹ್ಲಿ ನಾಯಕತ್ವದ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡ ಭರ್ಜರಿ ಪ್ರದರ್ಶನ ತೋರುತ್ತಿದೆ. ಬ್ಯಾಟಿಂಗ್ - ಬೌಲಿಂಗ್​ನಲ್ಲಿ ಕೊಹ್ಲಿ ಸೈನ್ಯ ಮಿಂಚುತ್ತಿದ್ದು ಗೆಲುವಿನ ಲಯದಲ್ಲಿ ಮುನ್ನುಗ್ಗುತ್ತಿದೆ. ಆರ್​ಸಿಬಿ ಈಗಾಗಲೇ ಆಡಿರುವ ಏಳು ಪಂದ್ಯಗಳಲ್ಲಿ ಐದರಲ್ಲಿ ಗೆದ್ದಿದೆ. ಕೇವಲ ಎರಡು ಪಂದ್ಯಗಳಲ್ಲಷ್ಟೆ ಸೋಲು ಕಂಡಿದೆ. ಒಟ್ಟು 10 ಅಂಕ ಸಂಪಾದಿಸಿ ಪಾಯಿಂಟ್ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಈ ಮೂಲಕ ಆರ್​ಸಿಬಿ ತನ್ ಪ್ಲೇ ಆಫ್ ಹಾದಿಯನ್ನು ಸುಲಭ ಮಾಡಿಕೊಂಡಿದೆ. ಜೊತೆಗೆ ಕಪ್ ಗೆಲ್ಲುವುದು ಖಚಿತ ಎಂಬ ಸೂಚನೆ ನೀಡಿದೆ.

ಕೊಹ್ಲಿ ಪಡೆ ಈ ಬಾರಿ ಇಷ್ಟರ ಮಟ್ಟಿಗೆ ಅತ್ಯುತ್ತಮ ಪ್ರದರ್ಶನ ನೀಡಲು ಒಂದು ಕಾರಣ ಆರ್​ಸಿಬಿಯ ಡೈ ಹಾರ್ಡ್​​ ಫ್ಯಾನ್ಸ್ ಎಂದರೆ ತಪ್ಪಾಗಲಾರದು. ಗೆಲುವಿವೇ ಬರಲಿ ಸೋಲೇ ಇರಲಿ ಆರ್​ಸಿಬಿ ತಂಡವನ್ನು ಅಭಿಮಾನಿಗಳು ಎಂದಿಗೂ ಕೈಬಿಡುವುದಿಲ್ಲ.

SRH vs CSK, IPL 2020 Live Score

ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿಯಂತು ಆರ್​ಸಿಬಿ ತಂಡ ಬೊಂಬಾಟ್ ಪ್ರದರ್ಶನ ತೋರುತ್ತಿದೆ. ಹೀಗಾಗಿಯೆ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಕರ್ನಾಟಕದ ಜಿಲ್ಲೆಯಿಂದ ಆರ್​ಸಿಬಿ ಆಟಗಾರರು ಪ್ರತಿನಿಧಿಸಿದರೆ ಯಾವರೀತಿ ಇರುತ್ತೆ ಎಂಬ ಅಭಿಯಾನ ಶುರುಮಾಡಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ಹರೀಶ್ ಅರಸು ಅವರು ಮೊದಲಿಗೆ ಆರ್​ಸಿಬಿ ಆಟಗಾರರ ಹೆಸರಿಗೆ ತಮ್ಮ ಊರಿನ ಹೆಸರನ್ನು ಸೇರಿಸಿ ಫೇಸ್​​ಬುಕ್​ನಲ್ಲಿ ಹಂಚಿಕೊಂಡಿದ್ದರು. ಸದ್ಯ ಇದು ಭರ್ಜರಿ ವೈರಲ್ ಆಗುತ್ತಿದೆ.

ಹರೀಶ್ ಅವರು ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಆರ್​ಸಿಬಿ ಆಟಗಾರರು ಪ್ರತಿನಿಧಿಸಿದರೆ ಹೇಗಿರಬಹುದು ಎಂದು ಹಂಚಿಕೊಂಡಿರುವ ಹೆಸರು ಇಲ್ಲಿದೆ:

ಕೊಡಗಿನ ಕೊಹ್ಲಿ, ದಾವಣಗೆರೆ ದುಬೆ, ಉಡುಪಿ ಉಮೇಶ್, ಚಿಕ್ಕಮಗಳೂರು ಚಾಹಲ್, ಮೈಸೂರು ಮೋರಿಸ್, ಪುತ್ತೂರು ಪಾರ್ಥೀವ್, ಗದಗಿನ ಗುರ್ ಕೀರತ್, ಶ್ರೀರಂಗಪಟ್ಟಣ ಸಿರಾಜ್, ನೆಲಮಂಗಲ ನೇಗಿ, ಸಕಲೇಶಪುರ ಸುಂದರ್, ಪಾವಗಡ ಫಿಲಿಪ್, ಶಿವಮೊಗ್ಗ ಶಹಬಾಜ್, ಆನೇಕಲ್ ಎಬಿಡಿ, ಜಮಖಂಡಿ ಝಂಪಾ, ಪಾಂಡವಪುರ ಪಡಿಕ್ಕಲ್, ಪಿರಿಯಾಪಟ್ಟಣ ಪವನ್, ಪೀರನವಾಡಿ ಫಿಂಚ್, ಉಪ್ಪಿನಂಗಡಿ ಉಡಾನಾ, ಅರಸೀಕೆರೆ ಅಲಿ, ಶಿಡ್ಲಘಟ್ಟ ಸ್ಟೈನ್, ಸಿಂಧನೂರು ಸೈನಿ.

ಇದೇ ರೀತಿ ಬೆಂಗಳೂರಿನ ಪ್ರಮುಖ ಬಡಾವಣೆಗಳ ಹೆಸರುಗಳನ್ನು ಸೇರಿಸಿ ಇನ್ನೊಂದು ಪಟ್ಟಿ ತಯಾರಿಸಿದ್ದಾರೆ.



ಕತ್ರಿಗುಪ್ಪೆ ಕೊಹ್ಲಿ, ಎಂಟನೇ ಮೈಲಿ ಎ ಬಿ ಡಿ, ಆಸ್ಟಿನ್ ಟೌನ್ ಅಲಿ, ಉತ್ತರಹಳ್ಳಿ ಉಡಾನಾ, ದೊಮ್ಮಲೂರು ದುಬೆ, ಫ್ರೇಜರ್ ಟೌನ್ ಫಿಂಚ್, ಜಕ್ಕೂರು ಝಂಪಾ, ಪುಟ್ಟೇನಹಳ್ಳಿ ಪಡಿಕ್ಕಲ್, ಚಿಕ್ಕಪೇಟೆ ಚಾಹಲ್, ಮತ್ತಿಕೆರೆ ಮೋರಿಸ್, ಸುಂಕದಕಟ್ಟೆ ಸುಂದರ್, ಪೀಣ್ಯ ಪವನ್, ಪದ್ಮನಾಭನಗರ ಪಾರ್ಥೀವ್, ಸರ್ಜಾಪುರ ಸ್ಟೈನ್, ಸದಾಶಿವನಗರ ಸಿರಾಜ್, ಗಿರಿನಗರ ಗುರ್ ಕೀರತ್, ಪಣತ್ತೂರು ಫಿಲಿಪ್, ನಂದಿನಿ ಲೇ ಔಟ್ ನೇಗಿ, ಉಪ್ಪಾರ್ ಪೇಟೆ ಉಮೇಶ್, ಶಿವಾಜಿನಗರ ಶಹಬಾಜ್.
Published by: Vinay Bhat
First published: October 13, 2020, 8:22 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories