ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ನತದೃಷ್ಟ ತಂಡವೆಂದೇ ಬಿಂಬಿತವಾಗಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಟೀಂನಲ್ಲಿ ನಾಯಕ್ವದ ಬದಲಾವಣೆ ಮಾತುಗಳು ಮತ್ತೆ ಕೇಳಿ ಬರುತ್ತಿವೆ. ಭಾರತ ತಂಡದ ಮಾಜಿ ಆಟಗಾರ ಗೌತಮ್ ಗಂಭೀರ್, ಆರ್ಸಿಬಿ ನಾಯಕತ್ವದಿಂದ ವಿರಾಟ್ ಕೊಹ್ಲಿಯನ್ನು ಕಿತ್ತುಹಾಕಿ ಎಂದು ಗುಡುಗಿದ್ದಾರೆ. ಕೊಹ್ಲಿ ಆರ್ಸಿಬಿ ನಾಯಕತ್ವ ವಹಿಸಿಕೊಂಡ 8 ವರ್ಷಗಳಲ್ಲಿ ಒಂದುಬಾರಿಯೂ ಪ್ರಶಸ್ತಿ ಗೆದ್ದಿಲ್ಲ. ಐಪಿಎಲ್ ಟ್ರೋಫಿ ಗೆಲ್ಲದ ಒಬ್ಬ ನಾಯಕ ಎಂಟು ವರ್ಷಗಳ ಕಾಲ ಒಂದೇ ಫ್ರಾಂಚೈಸಿಯಲ್ಲಿ ಮುಂದುವರಿಯಬಹುದೇ? ಎಂದು ಗಂಭೀರ್ ಪ್ರಶ್ನೆ ಮಾಡಿದ್ದಾರೆ.
ಈ ವಿಚಾರ ದೊಡ್ಡ ಮಟ್ಟದಲ್ಲಿ ಸುದ್ದು ಮಾಡುತ್ತಿರುವಾಗಲೇ ಕೊಹ್ಲಿ ಬದಲು ಆರ್ಸಿಬಿ ತಂಡದಲ್ಲಿ ನಾಯಕನ ಸ್ಥಾನ ಅಲಂಕರಿಸುವ ಆಟಗಾರ ಯಾರಿದ್ದಾರೆ? ಎಂಬ ಚರ್ಚೆ ಶುರುವಾಗಿದೆ. ಇದಕ್ಕೆ ಉತ್ತರ ಇಲ್ಲಿದೆ.
IPL 2020 Qualifier 2 DC vs SRH: 2ನೇ ಕ್ವಾಲಿಫೈಯರ್ನಲ್ಲಿ ಡೆಲ್ಲಿ-ಹೈದರಾಬಾದ್ ಕಾದಾಟ: ಗೆದ್ದ ತಂಡ ಫೈನಲ್ಗೆ
2008ರಿಂದ ಆರ್ಸಿಬಿ ತಂಡವನ್ನು ಪ್ರತಿನಿಧಿಸುತ್ತಾ ಬಂದಿರುವ ವಿರಾಟ್ ಕೊಹ್ಲಿ 2013ರಿಂದ ನಾಯಕನಾಗಿ ತಂಡವನ್ನು ಮುನ್ನಡೆಸುತ್ತಿದ್ದಾರೆ. ಕೊಹ್ಲಿ ನೇತೃತ್ವದಲ್ಲಿ ಇದುವರೆಗೆ ಬೆಂಗಳೂರು ತಂಡ ಒಂದು ಬಾರಿಯು ಪ್ರಶಸ್ತಿ ಮುಡಿಗೇರಿಸಿಕೊಂಡಿಲ್ಲ. ಅದರಲ್ಲು ಕಳೆದ ಎರಡು ಸೀಸನ್ನಲ್ಲಿ ಆರ್ಸಿಬಿ ತಂಡದ ಪ್ರದರ್ಶನ ಕಳಪೆ ಮಟ್ಟದ್ದಾಗಿತ್ತು.
ಈ ಬಾರಿ ಟೂರ್ನಿಯ ಆರಂಭದಲ್ಲಿ ಆರ್ಸಿಬಿ ಉತ್ತಮ ಪ್ರದರ್ಶನ ನೀಡಿತ್ತಾದರೂ ಬಳಿಕ ಅಂತಿಮ ಹಂತದಲ್ಲಿ ಸಾಲು ಸಾಲು ಸೋಲುಕಂಡಿತು. ಹೀಗಾಗಿ ಅವರ ಬದಲಿಗೆ ಮತ್ತೊಬ್ಬ ಸೂಕ್ತ ಆಟಗಾರನಿಗೆ ನಾಯಕನ ಪಟ್ಟ ನೀಡಬೇಕೆಂಬ ಮಾತು ಕೇಳಿ ಬರುತ್ತದೆ.
ಪಾರ್ಥಿವ್ ಪಟೇಲ್: ಈ ಬಾರಿಯ ಐಪಿಎಲ್ನಲ್ಲಿ ಪಾರ್ಥಿವ್ ಒಂದೇ ಒಂದು ಪಂದ್ಯವನ್ನು ಆಡಿಲ್ಲ. ಆದರೆ, ಕೊಹ್ಲಿಯನ್ನು ನಾಯಕ ಸ್ಥಾನದಿಂದ ಕೆಳಗಿಳಿಸಿದರೆ ಆ ಜಾಗವನ್ನು ಪಾರ್ಥಿವ್ ಪಟೇಲ್ ತುಂಬಬಹುದು. ಪಟೇಲ್ ಉತ್ತಮ ಓಪನರ್ ಮಾತ್ರವಲ್ಲದೆ ಅತ್ಯುತ್ತಮ ನಾಯಕ ಕೂಡ ಹೌದು. ಕಳೆದ ಕೆಲವು ವರ್ಷಗಳಿಂದ ಗುಜರಾತ್ ತಂಡವನ್ನು ಮುನ್ನಡೆಸುತ್ತಿದ್ದಾರೆ. ಅಲ್ಲದೆ ವಿಕೆಟ್ ಕೀಪರ್ ಒಬ್ಬ ನಾಯಕನಾದರೆ ತಂಡಕ್ಕೆ ಹೆಚ್ಚು ಉಪಯೋಗ. ಐಪಿಎಲ್ನಲ್ಲಿ ಆಡಿದ ಅನುಭವ ಕೂಡ ಪಾರ್ಥಿವ್ಗಿದೆ.
ಎಬಿ ಡಿವಿಲಿಯರ್ಸ್: ಅಂತರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತಿ ಪಡೆದ ಬಳಿಕ ದೇಶೀಯ ಟಿ-20 ಕ್ರಿಕೆಟ್ನಲ್ಲೇ ಬ್ಯುಸಿಯಾಗಿರುವ ಎಬಿಡಿ ಆರ್ಸಿಬಿ ತಂಡದ ದೊಡ್ಡ ಆಸ್ತಿ. ಆಫ್ರಿಕಾ ತಂಡವನ್ನು ನಾಯಕನಾಗಿ ಮುನ್ನಡೆಸಿದ ಇವರಿಗೆ ಆರ್ಸಿಬಿಯ ಕ್ಯಾಪ್ಟನ್ ಪಟ್ಟ ಕೊಟ್ಟರೆ ಬದಲಾವಣೆಯ ಗಾಳಿ ಬೀಸುವುದು ಖಚಿತ.
SRH vs RCB: ಇವತ್ತು ಇವನ ಆಟ ನಡೆಯಲ್ಲ: ಕಿರಿಕ್ ಮಾತಾಡಿದ ಕೊಹ್ಲಿಗೆ ಪಾಂಡೆ ಕೊಟ್ಟ ರಿಪ್ಲೈ ನೀವೇ ನೋಡಿ!
ಆ್ಯರೋನ್ ಫಿಂಚ್: ಪಾತಾಳಕ್ಕೆ ಕುಸಿದಿದ್ದ ಆಸ್ಟ್ರೇಲಿಯಾ ತಂಡವನ್ನು ನಾಯಕನ ಸ್ಥಾನದಲ್ಲಿ ನಿಂತು ಮೇಲೆತ್ತುವ ಪ್ರಯುತ್ನ ನಡೆಸಿದ್ದು ಆ್ಯರೋನ್ ಫಿಂಚ್. ಕ್ಯಾಪ್ಟನ್ ಆಗಿ ಅನೇಕ ಪಂದ್ಯಗಳನ್ನು ಆಡಿದ ಅನುಭವವಿರುವ ಇವರಿಗೆ ಆರ್ಸಿಬಿ ತಂಡವನ್ನು ಮುನ್ನಡೆಸುವ ಜಾವಾಬ್ದಾರಿ ನೀಡಿದರೆ ಒಳ್ಳೆಯದು. ಅಲ್ಲದೆ ನಾಯಕನ ಸ್ಥಾನದಲ್ಲಿ ನಿಂತು ಬ್ಯಾಟ್ ಬೀಸಿದಾಗ ಫಿಂಚ್ ಸರಾಸರಿ ಕೂಡ ಉತ್ತಮವಾಗಿದೆ.
ಐಪಿಎಲ್ನ ಒಟ್ಟು 13 ಸೀಸನ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 7 ಬಾರಿ ಲೀಗ್ ಹಂತದಲ್ಲೇ ಮುಗ್ಗರಿಸಿದೆ. ಒಟ್ಟು 3 ಬಾರಿ ರನ್ನರ್ ಅಪ್ ಹಾಗೂ 3 ಬಾರಿ ಪ್ಲೇ ಆಫ್ಗೆ ಲಗ್ಗೆ ಇಟ್ಟಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ