news18-kannada Updated:November 3, 2020, 8:10 PM IST
Rcb
ಇಂಡಿಯನ್ ಪ್ರೀಮಿಯರ್ ಲೀಗ್ ನಿರ್ಣಾಯಕ ಹಂತ ತಲುಪಿದೆ. ಇನ್ನೊಂದು ವಾರದೊಳಗೆ 13ನೇ ಸೀಸನ್ ಚಾಂಪಿಯನ್ ಯಾರೆಂಬುದು ಗೊತ್ತಾಗಲಿದೆ. ಈಗಾಗಲೇ ಮುಂಬೈ ಇಂಡಿಯನ್ಸ್, ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ಲೇ ಆಫ್ ಪ್ರವೇಶಿಸಿದೆ. ಇನ್ನು ನಾಲ್ಕನೇ ಸ್ಥಾನದಲ್ಲಿ ಕೆಕೆಆರ್ ಅಥವಾ ಸನ್ರೈಸರ್ಸ್ ಹೈದರಾಬಾದ್ ಕಾಣಿಸಿಕೊಳ್ಳಲಿದೆ. ಅದರೊಂದಿಗೆ ಕ್ವಾಲಿಫಯರ್ ಹಾಗೂ ಎಲಿಮಿನೇಟರ್ ಹೋರಾಟಗಳು ಆರಂಭವಾಗಲಿದೆ.
ಇದರ ನಡುವೆ ಸತತ ಸೋಲುಗಳಿಂದ ಕಂಗೆಟ್ಟಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ನೆಟ್ ರನ್ ರೇಟ್ ಆಧಾರದಲ್ಲಿ ಪ್ಲೇ ಆಫ್ ಅರ್ಹತೆಯನ್ನು ಪಡೆದುಕೊಂಡಿದೆ. ಆದರೆ ಮುಂದೆ ಆಡಬೇಕಿರುವುದು ಎಲಿಮಿನೇಟರ್ ಪಂದ್ಯ. ಒಂದು ಸಣ್ಣ ತಪ್ಪು ನಡೆದರೂ ಪ್ರಶಸ್ತಿ ಸುತ್ತಿನಿಂದ ಆರ್ಸಿಬಿ ಹೊರಬೀಳಬಹುದು. ಹೀಗಾಗಿ ಮುಂದಿನ ಪಂದ್ಯವು ಆರ್ಸಿಬಿ ಪಾಲಿಗೆ ಮೊದಲ ಫೈನಲ್ ಇದ್ದಂತೆ. ಆದರೆ ಕೊಹ್ಲಿ ಪಡೆಗೆ ಈಗ ತಂಡದ ಇನಿಂಗ್ಸ್ ಆರಂಭದ್ದೇ ಚಿಂತೆ. ಏಕೆಂದರೆ ಆರಂಭಿಕರಾಗಿ ದೇವದತ್ ಪಡಿಕ್ಕಲ್ ಮಿಂಚಿದರೂ, ಮತ್ತೊಂದು ತುದಿಯಲ್ಲಿ ಯಾರೂ ಮಿಂಚುತ್ತಿಲ್ಲ.
11 ಪಂದ್ಯಗಳಲ್ಲಿ ಅವಕಾಶ ಪಡೆದಿದ್ದ ಆರೋನ್ ಫಿಂಚ್ 21.45 ಸರಾಸರಿಯಲ್ಲಿ 236 ರನ್ಗಳಿಸಲಷ್ಟೇ ಶಕ್ತರಾಗಿದ್ದರು. ಹೀಗಾಗಿ ಕಳೆದ ಮೂರು ಪಂದ್ಯಗಳಲ್ಲಿ ಆರಂಭಿಕನಾಗಿ ಜೋಶ್ ಫಿಲಿಪೆಗೆ ಅವಕಾಶ ನೀಡಲಾಗಿತ್ತು. ಆದರೆ ಐದು ಪಂದ್ಯಗಳಲ್ಲಿ ಅವಕಾಶ ಪಡೆದ ಫಿಲಿಪೆ ಗಳಿಸಿದ್ದು ಕೇವಲ 78 ರನ್ ಮಾತ್ರ. ಇದೀಗ ಮೂರು ವರ್ಷಗಳ ಬಳಿಕ ಪ್ಲೇ ಆಫ್ ಪ್ರವೇಶಿಸಿರುವ ಆರ್ಸಿಬಿ ಪ್ರಶಸ್ತಿ ಗೆಲ್ಲಲೇಬೇಕೆಂಬ ಪಣ ತೊಟ್ಟಿದೆ. ಅದಕ್ಕೆ ಈಗ ಉತ್ತಮ ಆರಂಭ ಕೂಡ ಅಷ್ಟೇ ಮುಖ್ಯ.
ಫಿಂಚ್ ಅವರ ಬದಲು ಫಿಲಿಪೆಗೆ ಅವಕಾಶ ನೀಡಿದರೂ ಮಿಂಚುತ್ತಿಲ್ಲ. ಹೀಗಾಗಿ ನಿರ್ಣಾಯಕ ಪಂದ್ಯದಲ್ಲಿ ಆರ್ಸಿಬಿ ದೊಡ್ಡ ಬದಲಾವಣೆ ಮಾಡಿಕೊಳ್ಳುವುದು ಅಗತ್ಯ ಎಂದು ಟೀಮ್ ಇಂಡಿಯಾ ಮಾಜಿ ವೇಗಿ ಆಶಿಶ್ ನೆಹ್ರಾ ಅಭಿಪ್ರಾಯಪಟ್ಟಿದ್ದಾರೆ. ಮುಂದಿನ ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ ಆರಂಭಿಕರಾಗಿ ಕಣಕ್ಕಿಳಿಯುವುದು ಉತ್ತಮ ಎಂದಿದ್ದಾರೆ.
ಆರೋನ್ ಫಿಂಚ್ ಕಣಕ್ಕಿಳಿಯದಿದ್ರೆ ಆರ್ಸಿಬಿ ಪರ ವಿರಾಟ್ ಕೊಹ್ಲಿ ಆರಂಭಿಕರಾಗಿ ಬ್ಯಾಟ್ ಬೀಸುವುದು ಉತ್ತಮ. ಈ ಮೂಲಕ ತಂಡಕ್ಕೆ ಉತ್ತಮ ಅಡಿಪಾಯ ಹಾಕಿಕೊಡುವಲ್ಲಿ ನೆರವಾಗಲಿದೆ ಎಂದು ನೆಹ್ರಾ ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೆ ಈ ಹಿಂದೆ ವಿರಾಟ್ ಕೊಹ್ಲಿ- ಕ್ರಿಸ್ ಗೇಲ್ ಬೆಂಗಳೂರು ತಂಡದ ಆರಂಭಿಕರಾಗಿ ಕಣಕ್ಕಿಳಿದಿದ್ದರು. ಇದೇ ವೇಳೆ ತಂಡ ಸ್ಪೋಟಕ ಆರಂಭ ಪಡೆಯುತ್ತಿತ್ತು.
ಇದೇ ಕಾರಣದಿಂದ ಆಶಿಶ್ ನೆಹ್ರಾ, ದೇವದತ್ ಪಡಿಕ್ಕಲ್ ಜೊತೆ ವಿರಾಟ್ ಕೊಹ್ಲಿ ಆರಂಭಿಕರಾಗಿ ಕಣಕ್ಕಿಳಿಯುವುದು ಆರ್ಸಿಬಿ ಪಾಲಿಗೆ ಉತ್ತಮ ಎಂದು ಅಭಿಪ್ರಾಯಪಟ್ಟಿದ್ದಾರೆ.
POINTS TABLE:
SCHEDULE TIME TABLE:
ORANGE CAP:
PURPLE CAP:
RESULT DATA:
MOST SIXES:
ಇದನ್ನೂ ಓದಿ: MS Dhoni: ಯುವ ಪೀಳಿಗೆಗೆ ಜವಾಬ್ದಾರಿ ನೀಡಬೇಕಿದೆ: ಮುಂದಿನ ನಡೆಯ ಬಗ್ಗೆ ಸುಳಿವು ನೀಡಿದ ಧೋನಿ
Published by:
zahir
First published:
November 3, 2020, 8:10 PM IST