IPL

  • associate partner

RCB Anthem: ಬಿಡುಗಡೆ ಆಯಿತು ಆರ್​ಸಿಬಿ ಥೀಂಮ್ ಸಾಂಗ್: ಆದರೂ ಅಭಿಮಾನಿಗಳು ಆಕ್ರೋಶಗೊಂಡಿದ್ದೇಕೆ?

ಈ ಹಾಡಿನಲ್ಲಿ ಎರಡು ಕನ್ನಡದ ಸಾಲುಗಳು ಮಾತ್ರ ಇವೆ. ಉಳಿದ ಹಾಡಿನಲ್ಲಿ ಇಂಗ್ಲಿಷ್ ಹಾಗೂ ಹಿಂದಿ ಭಾಷೆಯನ್ನು ಹೆಚ್ಚಾಗಿ ಬಳಸಲಾಗಿದೆ. ಹೀಗಾಗಿ ಆರ್‌ಸಿಬಿಯ ಕನ್ನಡಿಗ ಅಭಿಮಾನಿಗಳು ಈಗ ಆರ್‌ಸಿಬಿ ಫ್ರಾಂಚೈಸಿ ವಿರುದ್ಧ ಕಿಡಿಕಾರುತ್ತಿದ್ದಾರೆ.

news18-kannada
Updated:September 18, 2020, 1:51 PM IST
RCB Anthem: ಬಿಡುಗಡೆ ಆಯಿತು ಆರ್​ಸಿಬಿ ಥೀಂಮ್ ಸಾಂಗ್: ಆದರೂ ಅಭಿಮಾನಿಗಳು ಆಕ್ರೋಶಗೊಂಡಿದ್ದೇಕೆ?
RCB
  • Share this:
13ನೇ ಆವೃತ್ತಿಯ ಇಂಡಯನ್ ಪ್ರೀಮಿಯರ್ ಲೀಗ್ ಟೂರ್ನಿ ಆರಂಭಕ್ಕೆ ಕೇವಲ ಒಂದು ದಿನ ಬಾಕಿ ಉಳಿದಿದ್ದು ಅಭಿಮಾನಿಗಳಲ್ಲಿ ಸಂಭ್ರಮ ಮನೆ ಮಾಡಿದೆ. ಹೀಗಿರುವಾಗ ಈ ಬಾರಿ ಕಪ್ ಗೆಲ್ಲುವ ನೆಚ್ಚಿನ ತಂಡವಾಗಿರುವ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತನ್ನ ಥೀಮ್ ಸಾಂಗ್ ಅನ್ನು ಬಿಡುಗಡೆ ಮಾಡಿದೆ. ಈ ಹಾಡನ್ನು ಆರ್‌ಸಿಬಿ ಫ್ರಾಂಚೈಸಿ ಅಭಿಮಾನಿಗಳಿಗಾಗಿ ಅರ್ಪಿಸಿದೆ. ಈ ಬಗ್ಗೆ ಟ್ವಿಟರ್‌ನಲ್ಲಿ ಬರೆದುಕೊಂಡಿರುವ ರಾಯಲ್‌ ಚಾಲೆಂಜರ್ಸ್‌, ಆರ್‌ಸಿಬಿಯ ಅಧಿಕೃತ ಆಂಥೆಮ್‌ ಬಿಡುಗಡೆಯಾಗಿದೆ. ಇದನ್ನು ವಿಶ್ವಾದ್ಯಂತ ಇರುವ ಅಭಿಮಾನಿಗಳಿಗೆ ಅರ್ಪಿಸುತ್ತಿರುವುದಾಗಿ ಹೇಳಿದೆ.

ಆರ್‌ಸಿಬಿ ತಂಡದ ಅಭಿಮಾನಿಗಳಿಗೆ ಹುರಿದುಂಬಿಸಲು ತನ್ನ ಹೊಸ ಥೀಮ್ ಸಾಂಗ್‌ಅನ್ನು ಆರ್‌ಸಿಬಿ ಫ್ರಾಂಚೈಸಿ ಬಿಡುಗಡೆಗೊಳಿಸಿದೆ. ಯುಎಇನಲ್ಲಿ ಅಭ್ಯಾಸವನ್ನು ನಡೆಸುತ್ತಿರುವ ಆರ್‌ಸಿಬಿ ಆಟಗಾರರ ವಿಶೇಷ ಕ್ಷಣಗಳ ದೃಶ್ಯಗಳನ್ನು ಹೊಂದಿದೆ ಈ ಥೀಮ್ ಸಾಂಗ್.

IPL 2020: RCB ಫ್ರಾಂಚೈಸಿಯ ಈ ಕಾರ್ಯ ಎಲ್ಲರಿಗೂ ಮಾದರಿ: ಅಭಿಮಾನಿಗಳು ಹೆಮ್ಮೆಪಡುವ ವಿಚಾರ ಇದುಆದರೆ, ಈ ಹಾಡಿನಲ್ಲಿ ಎರಡು ಕನ್ನಡದ ಸಾಲುಗಳು ಮಾತ್ರ ಇವೆ. ಉಳಿದ ಹಾಡಿನಲ್ಲಿ ಇಂಗ್ಲಿಷ್ ಹಾಗೂ ಹಿಂದಿ ಭಾಷೆಯನ್ನು ಹೆಚ್ಚಾಗಿ ಬಳಸಲಾಗಿದೆ. ಹೀಗಾಗಿ ಆರ್‌ಸಿಬಿಯ ಕನ್ನಡಿಗ ಅಭಿಮಾನಿಗಳು ಈಗ ಆರ್‌ಸಿಬಿ ಫ್ರಾಂಚೈಸಿ ವಿರುದ್ಧ ಕಿಡಿಕಾರುತ್ತಿದ್ದಾರೆ.ಕರ್ನಾಟಕ ಮೂಲದ ಫ್ರಾಂಚೈಸಿಯಾಗಿದ್ದು ಕನ್ನಡ ಭಾಷೆಯನ್ನು ಸೂಕ್ತವಾಗಿ ಬಳಕೆ ಮಾಡದಿರುವುದು ಅಭಿಮಾನಿಗಳಿಗೆ ಬೇಸರವಾಗಲು ಒಂದು ಕಾರಣವಾದರೆ ಮತ್ತೊಂದು ಹಾಡಿನಲ್ಲಿ ಯಥೇಚ್ಛವಾಗಿ ಹಿಂದಿ ಬಳಕೆಯಾಗಿದೆ. ಇದು ಕನ್ನಡಿಗ ಅಭಿಮಾನಿಗಳನ್ನು ಕೆರಳಿಸಿದ್ದು ಸಾಮಾಜಿಕ ಜಾಲತಾಣದಲ್ಲಿ ಸರಿಯಾಗಿಯೇ ಕ್ಲಾಸ್ ತೆಗೆದುಕೊಳ್ಳುತ್ತಿದ್ದಾರೆ.

ಇನ್ನೂ ಈ ಬಾರಿಯ ಐಪಿಎಲ್​ನಲ್ಲಿ ಆರ್​ಸಿಬಿ ತಂಡ, ಕೋವಿಡ್-19 ಹತ್ತಿಕ್ಕಲು ನೆರವು ನೀಡಿದ ಹೀರೋಗಳಿಗೆ ಗೌರವ ಸಲ್ಲಿಸಲಿದೆ. ಆರ್‌ಸಿಬಿ ಈಗಾಗಲೇ 'ಮೈ ಕೋವಿಡ್ ಹೀರೋಸ್' (ನನ್ನ ಕೋವಿಡ್ ವೀರರು) ಎಂಬ ಹೆಸರಿನ ಜೆರ್ಸಿ ಹೊರ ತಂದಿದೆ.

Dream11 IPL 2020: ಈ ಬಾರಿಯ ಐಪಿಎಲ್​ನಲ್ಲಿ ಆ ಅಪರೂಪದ ದಾಖಲೆ ಪುಡಿಮಾಡುವವರು ಯಾರು?

ಐಪಿಎಲ್ ಅಭ್ಯಾಸದ ವೇಳೆ ಮತ್ತು ಇಡೀ ಟೂರ್ನಿಯುದ್ದಕ್ಕೂ ಆರ್‌ಸಿಬಿ ಈ ವಿಭಿನ್ನ ಜೆರ್ಸಿ ಧರಿಸಲಿದೆ. ಜೆರ್ಸಿಯ ಹಿಂಬಾಗ ಆಟಗಾರರ ಸಂಖ್ಯೆ ಇರುವ ಭಾಗದಲ್ಲಿ 'ಮೈ ಕೋವಿಡ್ ಹೀರೋಸ್' ಎಂದು ಪ್ರಿಂಟ್ ಹಾಕಲಾಗಿದೆ.

ಆರ್​ಸಿಬಿಯ ಆಟಗಾರರು ಮೊದಲ ಪಂದ್ಯದಲ್ಲಿ ಧರಿಸಿದ್ದ ಜೆರ್ಸಿಯನ್ನು ಹರಾಜು ಹಾಕಿ ಅದರಿಂದ ಬರುವ ಹಣವನ್ನು ಗೀವ್ ಇಂಡಿಯಾ ಫೌಂಡೇಶನ್​ಗೆ ನೀಡಲಾಗುತ್ತದೆ. ಕೊರೋನಾ ವೀರರಿಗೆ ಗೌರವ ಸಲ್ಲಿಸುವ ಸಲುವಾಗಿ ಹೊರ ತರಲಾಗಿರುವ ಜೆರ್ಸಿಯ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಆರ್‌ಸಿಬಿ ಅಧ್ಯಕ್ಷ ಸಂಜೀವ್ ಚೂರಿವಾಲ, 'ಆರ್​ಸಿಬಿ ತಂಡ ಯಾವತ್ತಿಗೂ ಪ್ರತಿಕೂಲ ಪರಿಸ್ಥಿತಿಯಲ್ಲಿ ಆಡುವುದಕ್ಕೋಸ್ಕರ ನಿಂತಿದೆ. ನಮ್ಮ ಕೋವಿಡ್ ಹೀರೋಗಳು ಪಟ್ಟು ಬಿಡದೆ ಶ್ರಮಿಸುವ ಮೂಲಕ ಕೋವಿಡ್ ಹತ್ತಿಕ್ಕುವ ಉದ್ದೇಶ ಸಾಕಾರಗೊಳಿಸುತ್ತಿದ್ದಾರೆ ಎಂದು ನಾವು ಭಾವಿಸಿದ್ದೇವೆ,' ಎಂದರು.
Published by: Vinay Bhat
First published: September 18, 2020, 1:51 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading