IPL

  • associate partner
HOME » NEWS » Ipl » IPL 2020 RCB RELEASE KANNADA VERSION OF NEW ANTHEM AFTER UPROAR FROM FANS ZP

IPL 2020: ಥೀಮ್ ಸಾಂಗ್ ಬಗ್ಗೆ ಕನ್ನಡಾಭಿಮಾನಿಗಳ ಆಕ್ರೋಶ: ಮತ್ತೊಂದು ಹಾಡು ಬಿಡುಗಡೆ ಮಾಡಿದ RCB

ಕನ್ನಡದ ಪದಗಳನ್ನು ಬಳಸದಿರುವುದು ಒಂದೆಡೆಯಾದರೆ, ಅತ್ತ ಹಾಡಿನಲ್ಲಿ ಹಿಂದಿ ಬಳಸಿ ಸಾಹಿತ್ಯ ರಚಿಸಿರುವುದು ಅನೇಕರನ್ನು ರೊಚ್ಚಿಗೆಬ್ಬಿಸಿತ್ತು.

news18-kannada
Updated:September 18, 2020, 9:14 PM IST
IPL 2020: ಥೀಮ್ ಸಾಂಗ್ ಬಗ್ಗೆ ಕನ್ನಡಾಭಿಮಾನಿಗಳ ಆಕ್ರೋಶ: ಮತ್ತೊಂದು ಹಾಡು ಬಿಡುಗಡೆ ಮಾಡಿದ RCB
Rcb virat Kohli
  • Share this:
ರಂಗು ರಂಗಿನ ಕ್ರಿಕೆಟ್ ಟೂರ್ನಿ ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭವಾಗಲು ಉಳಿದಿರುವುದು ಕೇವಲ ಒಂದು ದಿನ ಮಾತ್ರ. ಈ ಮಧ್ಯೆ ಅಭಿಮಾನಿಗಳಲ್ಲಿ ಕಿಚ್ಚು ಹಚ್ಚಲು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನ ಅಧಿಕೃತ ಥೀಮ್ ಸಾಂಗ್​ನ್ನು ಬಿಡುಗಡೆ ಮಾಡಿತ್ತು. ಆದರೆ ಹಾಡು ಕೇಳಿದ ಬಹುತೇಕ ಕನ್ನಡಿಗರು ಸಾಂಗ್ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದರು. ಏಕೆಂದರೆ ಹಾಡಿನಲ್ಲಿ ಬೆರಳಣಿಕೆಯಷ್ಟು ಮಾತ್ರ ಕನ್ನಡ ಸಾಲುಗಳನ್ನು ಬಳಸಲಾಗಿತ್ತು. ಇದರಿಂದ ಗೆದ್ದರೂ ಸೋತರೂ ನಾವು ಆರ್​ಸಿಬಿ ಪರ ಎನ್ನುವ ಅಭಿಮಾನಿಗಳಿಗೆ ನಿರಾಸೆಯಾಗಿತ್ತು.

ಕನ್ನಡದ ಪದಗಳನ್ನು ಬಳಸದಿರುವುದು ಒಂದೆಡೆಯಾದರೆ, ಅತ್ತ ಹಾಡಿನಲ್ಲಿ ಹಿಂದಿ ಬಳಸಿ ಸಾಹಿತ್ಯ ರಚಿಸಿರುವುದು ಅನೇಕರನ್ನು ರೊಚ್ಚಿಗೆಬ್ಬಿಸಿತ್ತು. ಈಗಾಗಲೇ ಕರ್ನಾಟಕದಲ್ಲಿ ಹಿಂದಿ ಹೇರಿಕೆ ವಿರುದ್ಧ ವ್ಯಾಪಕ ಅಭಿಯಾನಗಳು ನಡೆಯುತ್ತಿದ್ದು, ಇದರ ಬೆನ್ನಲ್ಲೇ ಬೆಂಗಳೂರು ತಂಡದ ಹಾಡಿನಲ್ಲಿ ಹಿಂದಿ ಪದ ಬಳಕೆ ಮಾಡಿರುವುದು ಹಲವರ ಕೋಪಕ್ಕೆ ಕಾರಣ. ಹೀಗಾಗಿಯೇ ಅನೇಕರು ಹಾಡಿನ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅಸಮಾಧಾನ ಹೊರಹಾಕಿದ್ದರು.
ಈ ಬಗ್ಗೆ ಭಾರತದ ಮಾಜಿ ಕ್ರಿಕೆಟಿಗ ದೊಡ್ಡ ಗಣೇಶ್ ಅವರು ಕೂಡ ಟ್ವೀಟ್ ಮಾಡಿ ಹಾಡು ಚೆನ್ನಾಗಿದೆ, ಹಿಂದಿಯ ಬದಲು ಕನ್ನಡದ ಸಾಹಿತ್ಯ ಬಳಕೆಯಾಗಿದ್ದಾರೆ ಚೆನ್ನಾಗಿ ಇರುತ್ತಿತ್ತು ಎನ್ನುವ ಮೂಲಕ ಗಮನ ಸೆಳೆದರು.


ಇತ್ತ ಥೀಮ್​ ಸಾಂಗ್ ಅಭಿಮಾನಿಗಳ ಆಕ್ರೋಶಕ್ಕೆ ಗುರಿಯಾಗುತ್ತಿದ್ದಂತೆ ರಾಯಲ್ ಚಾಲೆಂಜರ್ಸ್ ತಂಡ ಮತ್ತೊಂದು ಹಾಡನ್ನು ಬಿಡುಗಡೆ ಮಾಡಿದೆ. ಅದು ಕೂಡ ಕನ್ನಡ ರ್ಯಾಪ್ ಸಾಂಗ್ ಹೆಸರಿನಲ್ಲಿ ಎಂಬುದು ವಿಶೇಷ. ಈ ಮೊದಲು ಬಿಡುಗಡೆ ಮಾಡಲಾಗಿದ್ದ ಹಾಡಿನ ಕೆಲ ಭಾಗದಲ್ಲಿ ಆರ್​ಸಿಬಿ ತಂಡದ ಆಟಗಾರ ದೇವದತ್ ಪಡಿಕ್ಕಲ್ ಕನ್ನಡದಲ್ಲಿ ರ್ಯಾಪ್ ಮಾಡುವ ಹೊಸ ಟಚ್ ನೀಡಿದ್ದಾರೆ.

ಏನೇ ಬರಲಿ... ಎಂತೇ ಇರಲಿ... RCB! ಸಾಹಿತ್ಯದೊಂದಿಗೆ ಪ್ರಾರಂಭವಾಗುವ ಕನ್ನಡ ಆರ್​ಸಿಬಿ ಗೀತೆಯ ಮೂಲಕ ಅಸಮಾಧಾನಗೊಂಡಿದ್ದ ಕನ್ನಡಾಭಿಮಾನಿಗಳ ಮನತಣಿಸುವ ಪ್ರಯತ್ನ ಮಾಡಿದೆ ಆರ್​ಸಿಬಿ. ಆದರೂ ಕೂಡ ಅನೇಕರು ಹಾಡಿನಲ್ಲಿ ಹಿಂದಿ ಬಳಕೆ ಯಾಕೆ ಎಂಬ ಪ್ರಶ್ನೆಯೊಂದನ್ನು ಮುಂದಿಡುತ್ತಿದ್ದಾರೆ.ಒಟ್ಟಿನಲ್ಲಿ ಐಪಿಎಲ್ ಆರಂಭವಾಗಲು ದಿನ ಮಾತ್ರ ಉಳಿದಿರುವಾಗ ಥೀಮ್ ಸಾಂಗ್ ಮೂಲಕ ಆರ್​ಸಿಬಿ ಅಭಿಮಾನಿಗಳ ಆಕ್ರೋಶಕ್ಕೆ ಗುರಿಯಾಗಿದ್ದು ಮಾತ್ರ ವಿಪರ್ಯಾಸ.
Published by: zahir
First published: September 18, 2020, 4:12 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories