IPL

  • associate partner

RCB: ಆರ್​ಸಿಬಿಯ ಈ ಆಟಗಾರ ಮಾಡಿದ ಈ ಕೆಲಸಕ್ಕೆ ಸಲಾಂ ಹೊಡೆಯಲೇ ಬೇಕು!

Dream11 IPL 2020: ಮಿಚೆಲ್‌ ಮಾರ್ಷ್​ ಅವರು ಬ್ಯಾಟಿಂಗ್ ಮಾಡಲೂ ಸಾಧ್ಯವಾಗೆ ಬೇರೆ ದಾರಿಯಿಲ್ಲದೆ ಕೊನೆಯ 10ನೇ ಕ್ರಮಾಂಕದಲ್ಲಿ ಕ್ರೀಸ್​ಗೆ ಬಂದರು. ಆದರೆ, ಅವರು ಕ್ರಿಸ್‌ ಬಳಿ ನಿಲ್ಲಲೂ ತುಂಬಾ ಕಷ್ಟಪಟ್ಟರು. ಒಂದೇ ಎಸೆತದಲ್ಲಿ ಕ್ಯಾಚ್ ನೀಡಿದರು.

news18-kannada
Updated:September 22, 2020, 9:50 PM IST
RCB: ಆರ್​ಸಿಬಿಯ ಈ ಆಟಗಾರ ಮಾಡಿದ ಈ ಕೆಲಸಕ್ಕೆ ಸಲಾಂ ಹೊಡೆಯಲೇ ಬೇಕು!
ಮಿಷೆಲ್ ಮಾರ್ಷ್​ಗೆ ನಡೆಯಲು ಸಹಾಯ ಮಾಡುತ್ತಿರುವ ಆ್ಯರೋನ್ ಫಿಂಚ್.
  • Share this:
ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡ ಸನ್​ರೈಸರ್ಸ್​ ಹೈದರಾಬಾದ್ ವಿರುದ್ಧ 10 ರನ್​ಗಳ ಗೆಲುವು ಸಾಧಿಸುವ ಮೂಲಕ 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಭರ್ಜರಿ ಶುಭಾರಂಭ ಮಾಡಿದೆ. ಇದರಿಂದ ಆರ್​ಸಿಬಿ ಅಭಿಮಾನಿಗಳಂತು ಫುಲ್ ಖುಷಿಯಾಗಿದ್ದಾರೆ. ಗೆಲುವಿನಿಂದಿಗೆ ಆವೃತ್ತಿ ಆರಂಭಿಸಿರುವ ಕೊಹ್ಲಿ ಪಡೆ ಖಂಡಿತವಾಗಿಯೂ ಫೈನಲ್​ಗೇರುತ್ತೆ, ಕಪ್ ಗೆದ್ದೇ ಗೆಲ್ಲುತ್ತೆ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ. ಈ ನಡುವೆ ಆರ್​ಸಿಬಿ ಸ್ಟಾರ್ ಬ್ಯಾಟ್ಸ್​ಮನ್​ ಆ್ಯರೋನ್ ಫಿಂಚ್ ಮಾಡಿರುವ ಈ ಕೆಲಸ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಸೋಮವಾರ ನಡೆದ ಈ ಪಂದ್ಯದ ನಡುವೆ ಸನ್​ರೈಸರ್ಸ್​ ಹೈದರಾಬಾದ್ ತಂಡದ ಸ್ಟಾರ್ ಆಲ್​ರೌಂಡರ್ ಆಸ್ಟ್ರೇಲಿಯಾದ ಮಿಚೆಲ್ ಮಾರ್ಷ್​ ಬೌಲಿಂಗ್ ಮಾಡುತ್ತಿರುವಾಗ ಪಾದಾದ ಗಾಯಕ್ಕೆ ತುತ್ತಾಗಿ ಪೆವಿಲಿಯನ್ ಕಡೆ ನಡೆದರು.

IPL 2020, RR vs CSK: ಸ್ಯಾಮ್ಸನ್ ಸ್ಫೋಟಕ ಆಟ, ಸ್ಮಿತ್ ನಾಯಕನಾಟ: ಚೆನ್ನೈಗೆ 217 ರನ್ಸ್​ ಟಾರ್ಗೆಟ್

ಡೇವಿಡ್ ವಾರ್ನರ್‌, ಐದನೇ ಓವರ್‌ ಅನ್ನು ಮಿಚೆಲ್‌ ಮಾರ್ಷ್‌ಗೆ ನೀಡಿದ್ದರು. ಅದರಂತೆ ಆಲ್‌ರೌಂಡರ್‌ ಬೌಲಿಂಗ್‌ ಮಾಡುವ ವೇಳೆ ಪಿಚ್‌ ಮೇಲೆ ಜಾರಿ ನೆಲಕ್ಕೆ ಉರುಳಿದರು. ಇವರು ಕೇವಲ ನಾಲ್ಕು ಎಸೆತಗಳನ್ನು ಮಾತ್ರ ಹಾಕಲು ಶಕ್ತರಾಗಿದ್ದರು. ಇನ್ನುಳಿದ ಎರಡು ಎಸೆತಗಳನ್ನು ವಿಜಯ್‌ ಶಂಕರ್ ಮಾಡಿದ್ದರು.

ಅಲ್ಲದೆ ಮಾರ್ಷ್​ ಅವರು ಬ್ಯಾಟಿಂಗ್ ಮಾಡಲೂ ಸಾಧ್ಯವಾಗೆ ಬೇರೆ ದಾರಿಯಿಲ್ಲದೆ ಕೊನೆಯ 10ನೇ ಕ್ರಮಾಂಕದಲ್ಲಿ ಕ್ರೀಸ್​ಗೆ ಬಂದರು. ಆದರೆ, ಅವರು ಕ್ರಿಸ್‌ ಬಳಿ ನಿಲ್ಲಲೂ ತುಂಬಾ ಕಷ್ಟಪಟ್ಟರು. ಒಂದೇ ಎಸೆತದಲ್ಲಿ ಕ್ಯಾಚ್ ನೀಡಿದರು.

ಔಟ್ ಆದ ವೇಳೆ ಮಾರ್ಷ್​ ಪೆವಿಲಿಯನ್ ಕಡೆ ನಡೆಯಲು ಸಾಧ್ಯವಾಗಲಿಲ್ಲ. ಒಂದು ಕೈಯಲ್ಲಿ ಬ್ಯಾಟನ್ನು ಊರಿ ನಡೆಯುತ್ತಿದ್ದರು. ಈ ಸಂದರ್ಭ ಆರ್​ಸಿಬಿ ಬ್ಯಾಟ್ಸ್​ಮನ್​ ಆ್ಯರೋನ್ ಫಿಂಚ್ ಅವರು ಮಾರ್ಷ್​​ಗೆ ಸಹಾಯ ಮಾಡಿ ಅವರ ಕೈಹಿಡಿದು ನಡೆಯಲು ಸಹಾಯ ಮಾಡಿದರು. ಫಿಂಚ್ ಅವರ ಕ್ರೀಡಾ ಸ್ಫೂರ್ತಿಗೆ ಕ್ರಿಕೆಟ್ ಅಭಿಮಾನಿಗಳು ಸಲಾಂ ಹೊಡೆದಿದ್ದಾರೆ.
ಪಾದದ ಗಾಯಕ್ಕೆ ತುತ್ತಾಗಿರುವ ಮಿಚೆಲ್‌ ಮಾರ್ಷ್‌, ಪ್ರಸಕ್ತ ಆವೃತ್ತಿಯ ಐಪಿಎಲ್‌ ಇನ್ನುಳಿದ ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ ಎಂದು ಸನ್‌ ರೈಸರ್ಸ್‌ ಹೈದರಾಬಾದ್‌ ತಂಡದ ಮೂಲಗಳು ತಿಳಿಸಿವೆ. ಆದರೆ, ತಂಡ ಅಧಿಕೃತವಾಗಿ ಈ ಬಗ್ಗೆ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಒಂದು ವೇಳೆ ಮಾರ್ಷ್ ಟೂರ್ನಿಯಿಂದ ಹೊರ ನಡೆದರೆ, ಡೇವಿಡ್ ವಾರ್ನರ್ ಪಡೆಗೆ ತುಂಬಾ ನಷ್ಟವಾಗಲಿದೆ.
Published by: Vinay Bhat
First published: September 22, 2020, 9:50 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading