IPL 2020: ಹಳೆಯ ಸೋಲಿನ ನೋವು: ಸೇಡು ತೀರಿಸುವ ತವಕದಲ್ಲಿ ಕೊಹ್ಲಿ ಪಡೆ..!

ಕಠಿಣ ಸವಾಲು ಪಡೆದರೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಗೆಲ್ಲಲಿದೆ ಎಂದು ಎಲ್ಲರೂ ವಿಶ್ವಾಸ ಹೊಂದಿದ್ದರು. ಇದಕ್ಕೆ ಕಾರಣ ಆರ್​ಸಿಬಿ ಆರಂಭಿಕರಾಗಿ ಕಣಕ್ಕಿಳಿಯುತ್ತಿದದ್ದು ಯುನಿರ್ವಸ್ ಬಾಸ್ ಕ್ರಿಸ್ ಗೇಲ್ ಹಾಗೂ ಸಿಡಿಲಮರಿ ವಿರಾಟ್ ಕೊಹ್ಲಿ.

virat kohli

virat kohli

 • Share this:
  ಅದು ಮೇ 29, 2016...ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮೊದಲ ಬಾರಿ ಫೈನಲ್​ ಪ್ರವೇಶಿಸಿತ್ತು. 2009 ಹಾಗೂ 2011 ರಲ್ಲಿ ಫೈನಲ್​ನಲ್ಲಿ ಮುಗ್ಗರಿಸಿದ್ದ ಆರ್​ಸಿಬಿ ಈ ಬಾರಿ ಕಪ್ ಗೆಲ್ಲಲಿದೆ ಎಂದು ಎಲ್ಲರೂ ಭವಿಷ್ಯ ನುಡಿದಿದ್ದರು. ಏಕೆಂದರೆ ಭರ್ಜರಿ ಪ್ರದರ್ಶನದ ಮೂಲಕ ಕೊಹ್ಲಿ ಪಡೆ ಪ್ಲೇ ಆಫ್ ಪ್ರವೇಶಿಸಿತ್ತು. ಅಂಕ ಪಟ್ಟಿಯಲ್ಲಿ 16 ಪಾಯಿಂಟ್​ಗಳೊಂದಿಗೆ 2ನೇ ಸ್ಥಾನ ಅಲಂಕರಿಸಿತ್ತು. ಹೀಗಾಗಿ ಫೈನಲ್​ನಲ್ಲಿ ಗೆಲ್ಲುವ ಫೇವರೇಟ್ ಎಂಬ ಹಣೆಪಟ್ಟಿ ಆರ್​ಸಿಬಿ ಪರವಿತ್ತು.

  ಅದರಂತೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಫೈನಲ್​ ಪಂದ್ಯದಲ್ಲಿ ಟಾಸ್ ಗೆದ್ದ ಸನ್​ರೈಸರ್ಸ್ ಹೈದರಾಬಾದ್ ತಂಡದ ನಾಯಕ ಡೇವಿಡ್ ವಾರ್ನರ್ ಬ್ಯಾಟಿಂಗ್ ಆಯ್ದುಕೊಂಡರು. ಆರಂಭಿಕರಾಗಿ ಕಣಕ್ಕಿಳಿದ ವಾರ್ನರ್ ಹಾಗೂ ಶಿಖರ್ ಧವನ್ ಜೋಡಿ ಮೊದಲ ವಿಕೆಟ್​ಗೆ 69 ರನ್​ಗಳ ಸ್ಪೋಟಕ ಜೊತೆಯಾಟವಾಡಿದರು. 38 ಎಸೆತಗಳಲ್ಲಿ 69 ರನ್ ಬಾರಿಸಿ ವಾರ್ನರ್ ತಂಡಕ್ಕೆ ಭದ್ರ ಅಡಿಪಾಯ ಹಾಕಿಕೊಟ್ಟರು. ಮಧ್ಯಮ ಕ್ರಮಾಂಕದಲ್ಲಿ ಯುವರಾಜ್ ಸಿಂಗ್ 23 ಎಸೆತಗಳಲ್ಲಿ 38 ರನ್ ಚಚ್ಚಿದರು. ಡೆತ್ ಓವರ್​ನಲ್ಲಿ ಅಬ್ಬರಿಸಿದ ಬೆನ್ ಕಟ್ಟಿಂಗ್ ಕೇವಲ 15 ಎಸೆತಗಳಲ್ಲಿ 4 ಭರ್ಜರಿ ಸಿಕ್ಸರ್ ಹಾಗೂ 3 ಬೌಂಡರಿಗಳೊಂದಿಗೆ 39 ರನ್ ಸಿಡಿಸಿದರು. ಪರಿಣಾಮ ಸನ್​ರೈಸರ್ಸ್ ಹೈದರಾಬಾದ್ ಮೊತ್ತ 20 ಓವರ್​ಗಳಲ್ಲಿ 208 ಕ್ಕೆ ಬಂದು ನಿಂತಿತು.

  ಕಠಿಣ ಸವಾಲು ಪಡೆದರೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಗೆಲ್ಲಲಿದೆ ಎಂದು ಎಲ್ಲರೂ ವಿಶ್ವಾಸ ಹೊಂದಿದ್ದರು. ಇದಕ್ಕೆ ಕಾರಣ ಆರ್​ಸಿಬಿ ಆರಂಭಿಕರಾಗಿ ಕಣಕ್ಕಿಳಿಯುತ್ತಿದದ್ದು ಯುನಿರ್ವಸ್ ಬಾಸ್ ಕ್ರಿಸ್ ಗೇಲ್ ಹಾಗೂ ಸಿಡಿಲಮರಿ ವಿರಾಟ್ ಕೊಹ್ಲಿ. ಎಲ್ಲರ ಊಹೆಯಂತೆ ಬೆಂಗಳೂರು ತಂಡ ಸ್ಪೋಟಕ ಆರಂಭ ಪಡೆಯಿತು. ಗೇಲ್-ಕೊಹ್ಲಿ ಮೈದಾನದ ಮೂಲೆ ಮೂಲೆಗೂ ಚೆಂಡನ್ನು ತಲುಪಿಸಿದರು.

  ಪರಿಣಾಮ ಮೊದಲ 10 ಓವರ್ ಮುಕ್ತಾಯ ಆಗುವಷ್ಟರಲ್ಲಿ ತಂಡದ ಮೊತ್ತ 100 ದಾಟಿತ್ತು. ಅತ್ತ 8 ಸಿಕ್ಸರ್, 4 ಬೌಂಡರಿ ಸಿಡಿಸಿ ಕ್ರೀಸ್ ಗೇಲ್ ಇದ್ದರು. ಇನ್ನೇನು 7-8 ಓವರ್​ಗಳಲ್ಲಿ ಪಂದ್ಯವನ್ನು ಮುಗಿಸುವ ಇರಾದೆಯಲ್ಲಿದ್ದರು. ಆದರೆ ಬೆನ್ ಕಟ್ಟಿಂಗ್ ಎಸೆತದಲ್ಲಿ ಬಿಪುಲ್ ಶರ್ಮಾ ಹಿಡಿದ ಕ್ಯಾಚ್​ಗೆ 38 ಎಸೆತಗಳಲ್ಲಿ 76 ರನ್ ಬಾರಿಸಿದ ಗೇಲ್ ಹೊರನಡೆಯಬೇಕಾಯಿತು. ಆದರೆ ಅದಾಗಲೇ ತಂಡದ ಮೊತ್ತ 10.3 ಓವರ್​ಗಳಲ್ಲಿ 114 ಕ್ಕೆ ತಲುಪಿತ್ತು. ಹಾಗೆಯೇ ಮತ್ತೊಂದು ತುದಿಯಲ್ಲಿ ವಿರಾಟ್ ಕೊಹ್ಲಿ ಕೂಡ ಇದ್ದರು.

  ಗೇಲ್ ಹೊರನಡೆದ ಬೆನ್ನಲ್ಲೇ ಕೊಹ್ಲಿ ಅಬ್ಬರಿಸಲು ಶುರು ಮಾಡಿದ್ದರು. ಪರಿಣಾಮ 12.4 ಓವರ್​ನಲ್ಲಿ ತಂಡದ ಮೊತ್ತ 140ಕ್ಕೆ ಬಂದು ನಿಂತಿತು. ಈ ಹಂತದಲ್ಲಿ ಬರಿಂಧರ್ ಎಸೆತವನ್ನು ಗುರುತಿಸುವಲ್ಲಿ ಎಡವಿದ ಆರ್​ಸಿಬಿ ನಾಯಕ ಕ್ಲೀನ್ ಬೌಲ್ಡ್ ಆದರು. 2 ಸಿಕ್ಸರ್, 5 ಬೌಂಡರಿಯೊಂದಿಗೆ 35 ಎಸೆತಗಳಲ್ಲಿ 54 ರನ್ ಸಿಡಿಸಿ ಕೊಹ್ಲಿ ನಿರ್ಗಮಿಸಿದರು. ಈ ಹಂತದಲ್ಲಿ ಆರ್​ಸಿಬಿ ಗೆಲ್ಲಲು ಬೇಕಾಗಿದ್ದದ್ದು 42 ಎಸೆತಗಳಲ್ಲಿ 68 ರನ್​ಗಳು ಮಾತ್ರ. ಇನ್ನೇನು ಗೆಲ್ಲಲಿದೆ ಅಂದುಕೊಳ್ಳುವಷ್ಟರಲ್ಲಿ ನಾಟಕೀಯ ತಿರುವಿಗೆ ಆರ್​ಸಿಬಿ ಸಾಕ್ಷಿಯಾಯಿತು.

  ಎಬಿ ಡಿವಿಲಿಯರ್ಸ್ (5), ಕೆಎಲ್ ರಾಹುಲ್ (11), ಶೇನ್ ವಾಟ್ಸನ್ (11) 20 ರನ್​ ಸೇರಿಸುವಷ್ಟರಲ್ಲಿ ವಿಕೆಟ್ ಒಪ್ಪಿಸಿದರು. ಈ ವೇಳೆ ಸಂಪೂರ್ಣ ಹಿಡಿತ ಸಾಧಿಸಿದ ಸನ್​ರೈಸರ್ಸ್ ಬೌಲರುಗಳು ಆರ್​ಸಿಬಿ ಬ್ಯಾಟ್ಸ್​ಮನ್​ಗಳನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾದರು. ಅಲ್ಲದೆ 20 ಓವರ್​ಗಳಲ್ಲಿ 7 ವಿಕೆಟ್ ನಷ್ಟಕ್ಕೆ ಆರ್​ಸಿಬಿ 200 ರನ್​ ಮಾತ್ರ ಗಳನಷ್ಟೇ ಕಲೆಹಾಕಲು ಶಕ್ತರಾದರು. ಪರಿಣಾಮ ಗೆಲ್ಲುವ ಪಂದ್ಯವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಕೇವಲ 8 ರನ್​ಗಳಿಂದ ಕೈಚೆಲ್ಲಿಕೊಂಡಿತು.

  ಇದು ನಡೆದು ಮೂರು ವರ್ಷಗಳ ಬಳಿಕ ಇದೀಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತೆ ಪ್ಲೇ ಆಫ್ ಪ್ರವೇಶಿಸಿದೆ. ಎಲಿಮಿನೇಟರ್ ಪಂದ್ಯದಲ್ಲಿ ಮತ್ತದೇ ಸನ್​ರೈಸರ್ಸ್ ಹೈದರಾಬಾದ್ ಎದುರಾಗಿದೆ. ಅಂದಿನ ಫೈನಲ್ ಸೋಲಿನ ಬಳಿಕ ಇದೇ ಮೊದಲ ಬಾರಿ ಆರ್​ಸಿಬಿ ಉತ್ತಮ ಪ್ರದರ್ಶನ ನೀಡಿದೆ. ಇದೀಗ ಹಳೆಯ ಲೆಕ್ಕವನ್ನು ಚುಕ್ತಾ ಮಾಡಿ ಎಲಿಮಿನೇಟರ್ ಪಂದ್ಯದ ಮೂಲಕ ಸನ್​ರೈಸರ್ಸ್ ಹೈದರಾಬಾದ್ ತಂಡವನ್ನು ಪ್ರಶಸ್ತಿ ಸುತ್ತಿನಿಂದ ಹೊರಹಾಕುವ ಅವಕಾಶ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಒದಗಿ ಬಂದಿದೆ. ಕೊಹ್ಲಿ ಪಡೆ ಕೂಡ ಹಳೆಯ ಸೋಲಿನ ಸೇಡನ್ನು ತೀರಿಸುವ ತವಕದಲ್ಲಿದೆ. ಅಷ್ಟೇ ಅಲ್ಲದೆ ಈ ಸಲ ಕಪ್​ನೊಂದಿಗೆ ಮರಳಲು ಆತ್ಮ ವಿಶ್ವಾಸದಲ್ಲಿದೆ. ಮೂರು ವರ್ಷಗಳ ಹಿಂದಿನ ಸೋಲಿನ ನೋವಿನ ಲೆಕ್ಕವನ್ನು ಕೊಹ್ಲಿ ಪಡೆ ಚುಕ್ತಾ ಮಾಡುತ್ತಾ ಕಾದು ನೋಡಬೇಕಿದೆ.
  POINTS TABLE:

  SCHEDULE TIME TABLE:

  ORANGE CAP:

  PURPLE CAP:

  RESULT DATA:

  MOST SIXES:

  ಇದನ್ನೂ ಓದಿ: IPL 2020: ಇಲ್ಲಿವರೆಗೂ ಈತ ಹೇಳಿದ ಭವಿಷ್ಯ ನಿಜವಾಗಿದೆ: ಈ ಬಾರಿ ಕಪ್ ಗೆಲ್ಲುವ ತಂಡವನ್ನೂ ತಿಳಿಸಿದ್ದಾನೆ..!
  Published by:zahir
  First published: