IPL

  • associate partner
HOME » NEWS » Ipl » IPL 2020 RCB DEVDUTT PADIKKAL RESPONDS AFTER YUVRAJ SINGH INVITES HIM FOR SIX HITTING CONTEST VB

ನಿನ್ನ ಜೊತೆ ಸಿಕ್ಸ್ ಸಿಡಿಸುವ ಸ್ಫರ್ಧೆ ಮಾಡಬೇಕು ಎಂದ ಯುವರಾಜ್​ಗೆ ಪಡಿಕ್ಕಲ್ ರಿಪ್ಲೇ ಏನು ಗೊತ್ತೇ?

Devdutt Padikkal: ದೇವದತ್ ಪಡಿಕ್ಕಲ್ ಅವರ ಅಮೋಘ ಆಟ ಕಂಡು ಯುವರಾಜ್ ಸಿಂಗ್ ಟ್ವೀಟ್ ಮಾಡಿದ್ದು ವಿರಾಟ್ ಕೊಹ್ಲಿ ಪ್ರದರ್ಶನದ ಬಗ್ಗೆ ಹೊಗಳಿಕೆಯ ಮಾತುಗಳನ್ನಾಡಿದ್ದಾರೆ.

news18-kannada
Updated:October 4, 2020, 5:38 PM IST
ನಿನ್ನ ಜೊತೆ ಸಿಕ್ಸ್ ಸಿಡಿಸುವ ಸ್ಫರ್ಧೆ ಮಾಡಬೇಕು ಎಂದ ಯುವರಾಜ್​ಗೆ ಪಡಿಕ್ಕಲ್ ರಿಪ್ಲೇ ಏನು ಗೊತ್ತೇ?
ದೇವದತ್ ಪಡಿಕ್ಕಲ್ ಹಾಗೂ ಯುವರಾಜ್ ಸಿಂಗ್.
  • Share this:
ದೇವದತ್ ಪಡಿಕ್ಕಲ್. ಕರ್ನಾಟಕದ ಯುವ ಪ್ರತಿಭಾವಂತ ಕ್ರಿಕೆಟಿಗ. ಸದ್ಯ ತನ್ನ ಚೊಚ್ಚಲ ಐಪಿಎಲ್ ಸೀಸನ್​ನಲ್ಲೇ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡದ ಪರ ಮಿಂಚು ಹರಿಸುತ್ತಿರುವ ಎಮರ್ಜಿಂಗ್ ಪ್ಲೇಯರ್. ಆಡಿದ ನಾಲ್ಕು ಪಂದ್ಯಗಳಲ್ಲಿ ಮೂರು ಅರ್ಧಶತಕ ಸಿಡಿಸಿ ಮಿಂಚಿರುವ ದೇವದತ್ ಪಡಿಕ್ಕಲ್ ಆಟದ ಬಗ್ಗೆ ಕ್ರಿಕೆಟ್ ಪಂಡಿತರು ಹಾಡಿಹೊಗಳುತ್ತಿದ್ದಾರೆ. ತಂಡದ ನಾಯಕ ವಿರಾಟ್ ಕೊಹ್ಲಿ ಕೂಡ ಡಿಪಿ ಆಟಕ್ಕೆ ಮನಸೋತು ಶಹಬಾಷ್ ಎಂದಿದ್ದಾರೆ.

ಸದ್ಯ ಟೀಂ ಇಂಡಿಯಾ ಮಾಜಿ ಆಟಗಾರ ಯುವರಾಜ್ ಸಿಂಗ್ ಕೂಡ ಪಡಿಕ್ಕಲ್ ಆಟ ಕಂಡು ಟ್ವೀಟ್ ಮಾಡಿದ್ದು ವೈರಲ್ ಆಗುತ್ತಿದೆ. ಅಲ್ಲದೆ ನನಗೆ ಪಡಿಕ್ಕಲ್ ಜೊತೆ ಬ್ಯಾಟ್ ಮಾಡಬೇಕು, ಯಾರು ಜಾಸ್ತಿ ದೂರ ಸಿಕ್ಸ್ ಹೊಡೆಯುತ್ತಾರೆ ನೋಡಬೇಕು ಎಂದು ಯುವಿ ಹೇಳಿದ್ದಾರೆ.

MI vs SRH: ಡಿಕಾಕ್ ಅರ್ಧಶತಕ, ಪಾಂಡ್ಯ-ಪೊಲಾರ್ಡ್​ ಸ್ಫೋಟಕ ಆಟ: ಹೈದರಾಬಾದ್​ಗೆ 209 ರನ್ಸ್ ಟಾರ್ಗೆಟ್

ನಿನ್ನೆಯ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ದೇವದತ್ ಅವರು ಕೇವಲ 34 ಎಸೆತಗಳಲ್ಲಿ ಹಾಫ್ ಸೆಂಚುರಿ ಸಿಡಿಸಿ ಸದ್ಯ ಐಪಿಎಲ್ 2020 ಟೂರ್ನಿಯಲ್ಲಿ ಒಟ್ಟು 174 ರನ್​ಗಳೊಂದಿಗೆ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್​ಮನ್​ಗಳ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೇರಿದ್ದಾರೆ. ಪಡಿಕ್ಕಲ್ ಹಾಗೂ ಕೊಹ್ಲಿಯ ಭರ್ಜರಿ ಆಟದ ನೆರವಿನಿಂದ ಆರ್​ಸಿಬಿ 8 ವಿಕೆಟ್​ಗಳ ಗೆಲುವು ಸಾಧಿಸಿತು.

ಇವರ ಈ ಅಮೋಘ ಆಟ ಕಂಡು ಯುವರಾಜ್ ಟ್ವೀಟ್ ಮಾಡಿದ್ದು ವಿರಾಟ್ ಕೊಹ್ಲಿ ಪ್ರದರ್ಶನದ ಬಗ್ಗೆ ಹೊಗಳಿಕೆಯ ಮಾತುಗಳನ್ನಾಡಿದ ಬಳಿಕ ಅದೇ ಟ್ವೀಟ್‌ನಲ್ಲಿ ಪಡಿಕ್ಕಲ್‌ಗೆ ಸವಾಲೊಂದನ್ನು ಹಾಕಿದ್ದಾರೆ. "ಪಡಿಕ್ಕಲ್ ನಿಜಕ್ಕೂ ಅದ್ಬುತವಾಗಿ ಕಾಣಿಸುತ್ತಿದ್ದೀರಿ. ನಿಮ್ಮ ಜೊತೆ ಬ್ಯಾಟ್‌ಮಾಡಬೇಕು ಹಾಗೂ ಯಾರು ಜಾಸ್ತಿ ದೂರ ಸಿಕ್ಸ್ ಹೊಡೆಯುತ್ತಾರೆ ನೋಡಬೇಕು" ಎಂದು ಟ್ವೀಟ್ ಮಾಡಿದ್ದರು.

ಯುವರಾಜ್ ಅವರ ಕಮೆಂಟ್ ನೋಡಿ ರೀಟ್ವೀಟ್ ಮಾಡಿರುವ ಪಡಿಕ್ಕಲ್ ಅವರು, ನಿಮ್ಮ ಜೊತೆ ಸ್ಪರ್ಧೆ ಮಾಡುವುದಿಲ್ಲ ಪಾಜಿ ಎಂದಿದ್ದಾರೆ. ನಾನು ಫ್ಲಿಕ್ ಶಾಟ್ ಹೊಡೆಯುವುದನ್ನು ನಿಮ್ಮಿಂದಲೇ ಕಲಿತ್ತಿದ್ದೇನೆ. ಸ್ಪರ್ಧೆ ಬೇಡ ಆದರೆ ನಿಮ್ಮೊಂದಿಗೆ ಬ್ಯಾಟ್ ಮಾಡಲು ಯಾವಾಗಲೂ ಬಯಸುತ್ತೇನೆ. ಬನ್ನಿ ಎಂದು ಬರೆದಿದ್ದಾರೆ.

ಇನ್ನೂ ಕೊಹ್ಲಿ ಕುರಿತು ಟ್ವೀಟ್ ಮಾಡಿರುವ ಯುವಿ, ಫಾರ್ಮ್ ಎಂಬುದು ತಾತ್ಕಾಲಿಕ ಕ್ಲಾಸ್ ಎಂಬುದು ಎಂದಿಗೂ ಇರುತ್ತದೆ. ಕಳೆದ ಎಂಟು ವರ್ಷದಲ್ಲಿ ವಿರಾಟ್ ಕೊಹ್ಲಿ ಫಾರ್ಮ್ ಕಳೆದುಕೊಂಡಿದ್ದನ್ನು ನಾನು ನೋಡೇ ಇಲ್ಲ. ಇದು ನಂಬಲು ಆಗದ ಮಾತು ಎಂದು ಹೇಳಿದ್ದಾರೆ.

ನಿನ್ನೆಯ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ ದೇವದತ್ ಪಡಿಕ್ಕಲ್ ರಾಜಸ್ಥಾನ ಬೌಲರ್ ಗಳನ್ನು ಮನಬಂದಂತೆ ದಂಡಿಸಿದರು. 34 ಎಸೆತಗಳಲ್ಲಿ ಅರ್ಧ ಶತಕ ಪೂರ್ಣಗೊಳಿಸಿದ್ದು ವಿಶೇಷವಾಗಿತ್ತು. ಉತ್ತಮವಾಗಿ ಆಡುತ್ತಿದ್ದ ಪಡಿಕ್ಕಲ್ ತಂಡ 124 ರನ್ ಗಳಿಸಿದ್ದ ಸಂದರ್ಭದಲ್ಲಿ, ಭಾರೀ ಹೊಡೆತಕ್ಕೆ ಮುಂದಾಗಿ ಕ್ಲೀನ್ ಬೌಲ್ಡ್ ಆಗುವ ಮೂಲಕ ಆರ್ಚರ್ ಗೆ ವಿಕೆಟ್ ಒಪ್ಪಿಸಿದರು. 45 ಎಸೆತಗಳಲ್ಲಿ 6 ಬೌಂಡರಿ, 1 ಸಿಕ್ಸರ್ ನೆರವಿನಿಂದ 140 ಸ್ಟ್ರೈಕ್ ರೇಟ್‍ನೊಂದಿಗೆ 63 ರನ್ ಗಳಿಸಿದ ಪಡಿಕ್ಕಲ್ ಸ್ಮರಣೀಯ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರು.
Published by: Vinay Bhat
First published: October 4, 2020, 5:38 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories