IPL

  • associate partner
HOME » NEWS » Ipl » IPL 2020 RCB DEVDUTT PADIKKAL CREATE ANOTHER RECORD HE IS SECOND UNCAPPED INDIAN TO SCORE 400 RUNS VB

Devdutt Padikkal: ಕನ್ನಡಿಗನ ಸಾಧನೆಗೆ ಮತ್ತೊಂದು ಮುಕುಟ: ಚೊಚ್ಚಲ ಸೀಸನ್​ನಲ್ಲೇ ಏರುತ್ತಿದೆ ಪಡಿಕ್ಕಲ್ ದಾಖಲೆ ಪಟ್ಟಿ

ಟೀಂ ಇಂಡಿಯಾ ಪರ ಕಣಕ್ಕಿಳಿಯುವ ಮೊದಲೇ ಮೊದಲ ಐಪಿಎಲ್ ಟೂರ್ನಿಯಲ್ಲಿ ಅಬ್ಬರಿಸಿದ ಆಟಗಾರರ ಪೈಕಿ ಇದೀಗ ದೇವದತ್ ಪಡಿಕ್ಕಲ್ 3ನೇ ಕ್ರಿಕೆಟಿಗನಾಗಿದ್ದಾರೆ. ಹೀಗೆ ತನ್ನ ಚೊಚ್ಚಲ ಐಪಿಎಲ್ ಆವೃತ್ತಿಯಲ್ಲೇ ಕನ್ನಡಿಗನ ದಾಖಲೆಗಳ ಪಟ್ಟಿ ಬೆಳೆಯುತ್ತ ಸಾಗುತ್ತಿದೆ.

news18-kannada
Updated:October 29, 2020, 4:16 PM IST
Devdutt Padikkal: ಕನ್ನಡಿಗನ ಸಾಧನೆಗೆ ಮತ್ತೊಂದು ಮುಕುಟ: ಚೊಚ್ಚಲ ಸೀಸನ್​ನಲ್ಲೇ ಏರುತ್ತಿದೆ ಪಡಿಕ್ಕಲ್ ದಾಖಲೆ ಪಟ್ಟಿ
Devdutt Padikkal
  • Share this:
ದೂರದ ಮರಳುಗಾಡಿನಲ್ಲಿ ನಡೆಯುತ್ತಿರುವ ಐಪಿಎಲ್ ಮಹಾಯುದ್ಧದಲ್ಲಿ ನಮ್ಮ ಕನ್ನಡಿಗ ದೇವದತ್ ಪಡಿಕ್ಕಲ್ ಅಮೋಘ ಪ್ರದರ್ಶನ ನೀಡುತ್ತಿದ್ದಾರೆ. ಪಂದ್ಯದಿಂದ ಪಂದ್ಯಕ್ಕೆ ಅನುಭವಿ ಬ್ಯಾಟ್ಸ್​ಮನ್​ಗಳ ರೀತಿ ಆಟವಾಡುತ್ತಿರುವ ಪಡಿಕ್ಕಲ್ ವಯಸ್ಸು ಚಿಕ್ಕದಾದ್ರೂ ಪ್ರತಿಭೆಗೆ ವಯಸ್ಸಿನ ಲೆಕ್ಕವಿಲ್ಲ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಅದರಲ್ಲೂ ಬುಧವಾರ ನಡೆದ ಮುಂಬೈ ಇಂಡಿಯನ್ಸ್ ವಿರುದ್ಧದ ಐಪಿಎಲ್​ನ 48ನೇ ಪಂದ್ಯದಲ್ಲಿ ಆರ್​ಸಿಬಿ ತಂಡದ ಮೊತ್ತ 150ರ ಗಡಿ ದಾಟಲು ಕಾರಣವಾಗಿದ್ದು ಇವರ ಭರ್ಜರಿ ಬ್ಯಾಟಿಂಗ್. ಕೇವಲ 45 ಎಸೆತಗಳಲ್ಲಿ 12 ಬೌಂಡರಿ, 1 ಸಿಕ್ಸರ್ ಸಿಡಿಸಿದ ದೇವದತ್ 74 ರನ್ ಚಚ್ಚಿದರು.

ಈ ಮೂಲಕ ಹೊಸ ದಾಖಲೆ ಬರೆದಿದ್ದಾರೆ. ಪದಾರ್ಪಣಾ ಐಪಿಎಲ್ ಟೂರ್ನಿಯಲ್ಲಿ ಒಟ್ಟು ನಾಲ್ಕು ಬಾರಿ 50+ ಸ್ಕೋರ್ ಸಿಡಿಸಿದ ಭಾರತೀಯ ಕ್ರೆಕೆಟಿಗ ಎಂಬ ಹೆಗ್ಗಳಿಕೆಗೆ ಪಡಿಕ್ಕಲ್ ಪಾತ್ರರಾಗಿದ್ದಾರೆ.

MI vs RCB: ಮೈದಾನದಲ್ಲೇ ಆರ್​ಸಿಬಿ ಬೌಲರ್-ಹಾರ್ದಿಕ್ ನಡುವೆ ಜಗಳ: ಬೆರಳು ತೋರಿಸಿ ಪಾಂಡ್ಯ ವಾರ್ನಿಂಗ್

ಟೀಂ ಇಂಡಿಯಾ ಪರ ಕಣಕ್ಕಿಳಿಯುವ ಮೊದಲೇ ಮೊದಲ ಐಪಿಎಲ್ ಟೂರ್ನಿಯಲ್ಲಿ ಅಬ್ಬರಿಸಿದ ಆಟಗಾರರ ಪೈಕಿ ಇದೀಗ ದೇವದತ್ ಪಡಿಕ್ಕಲ್ 3ನೇ ಕ್ರಿಕೆಟಿಗನಾಗಿದ್ದಾರೆ. ಜೊತೆಗೆ ಅಂತರಾಷ್ಟ್ರೀಯ ಕ್ರಿಕೆಟ್​ಗೆ ಪದಾರ್ಪಣೆ ಮಾಡದೆ ಮೊದಲ ಸೀಸನ್​ನಲ್ಲೇ 400+ ರನ್ ಕಲೆಹಾಕಿದ ಎರಡನೇ ಆಟಗಾರ ಆಗಿದ್ದಾರೆ. ಹೀಗೆ ತನ್ನ ಚೊಚ್ಚಲ ಐಪಿಎಲ್ ಆವೃತ್ತಿಯಲ್ಲೇ ಕನ್ನಡಿಗನ ದಾಖಲೆಗಳ ಪಟ್ಟಿ ಬೆಳೆಯುತ್ತ ಸಾಗುತ್ತಿದೆ.


ಈ ಹಿಂದೆ ಚೊಚ್ಚಲ ಐಪಿಎಲ್ ಆವೃತ್ತಿಯ ಆರಂಭಿಕ 4 ಪಂದ್ಯದಲ್ಲಿ 3 ಅರ್ಧಶತಕ ಸಿಡಿಸಿದ ಏಕೈಕ ಬ್ಯಾಟ್ಸ್​ಮನ್​ ಎಂಬ ಹೆಗ್ಗಳಿಕೆಗೆ ಪಡಿಕ್ಕಲ್ ಪಾತ್ರವಾಗಿದ್ದರು. ಅಲ್ಲದೆ ಆರ್‌ಸಿಬಿ ತಂಡದ ಪರ ಪದಾರ್ಪಣೆಯ ಪಂದ್ಯದಲ್ಲಿ ಅತ್ಯಧಿಕ ರನ್‌ ಗಳಿಸಿದ ಎರಡನೇ ಆರಂಭಿಕ ಬ್ಯಾಟ್ಸ್‌ಮನ್‌ ಎನಿಸಿಕೊಂಡಿದ್ದರು.

ಇನ್ನೂ ಐಪಿಎಲ್‌ಗೆ ಪದಾರ್ಪಣೆ ಮಾಡಿದ ಪಂದ್ಯದಲ್ಲಿ ಅರ್ಧಶತಕ ಬಾರಿಸಿದ ಪಡಿಕ್ಕಲ್‌, ಪ್ರಥಮ ದರ್ಜೆ ಕ್ರಿಕೆಟ್, ಲಿಸ್ಟ್‌ 'ಎ' ಕ್ರಿಕೆಟ್‌ ಮತ್ತು ಟಿ-20 ಕ್ರಿಕೆಟ್‌ ಎಲ್ಲದರಲ್ಲೂ ಪದಾರ್ಪಣೆಯ ಪಂದ್ಯಗಳಲ್ಲಿ 50+ ಸ್ಕೋರ್‌ ಮಾಡಿದ ವಿಶೇಷ ದಾಖಲೆ ಹೊಂದಿದ್ದಾರೆ.

IPL 2020, CSK vs KKR: ಸಿಎಸ್​ಕೆಗೆ ಔಪಚಾರಿಕ ಪಂದ್ಯ: ಮಾರ್ಗನ್ ಪಡೆಗೆ ಗೆದ್ದರಷ್ಟೆ ಉಳಿಗಾಲ

ಸದ್ಯ ಈ ಬಾರಿಯ ಐಪಿಎಲ್‌ನಲ್ಲಿ 12 ಪಂದ್ಯಗಳನ್ನು ಆಡಿರುವ ದೇವದತ್ 4 ಅರ್ಧ ಶತಕ ಸಿಡಿಸಿ ಮಿಂಚಿದ್ದಾರೆ. ಟೂರ್ನಿಯಲ್ಲಿ 417 ರನ್ ಸಿಡಿಸಿರುವ ಯುವ ಆಟಗಾರ 34.74ರ ಸರಾಸರಿಯಲ್ಲಿ ಪ್ರದರ್ಶನವನ್ನು ನೀಡಿದ್ದಾರೆ. ಈ ಮೂಲಕ ಮೊದಲ ಆವೃತ್ತಿಯಲ್ಲೇ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ.
Published by: Vinay Bhat
First published: October 29, 2020, 4:16 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories