IPL 2020: RCB ಕಪ್ ಗೆಲ್ಲುವುದು ಇನ್ನಷ್ಟು ಖಚಿತ: ಡೆತ್ ಓವರ್ ಬೌಲಿಂಗ್ ಮಾಡುವುದು ಯಾರು ಗೊತ್ತೇ?

ಸಂದರ್ಶನವೊಂದರಲ್ಲಿ ಮಾತನಾಡಿರುವ ಆಡಂ ಝಾಂಪ, ಯಜುವೇಂದ್ರ ಚಹಾಲ್‌ ಜೊತೆಗೂಡಿ ಬೌಲಿಂಗ್‌ ಮಾಡುವುದನ್ನು ಎದುರು ನೋಡುತ್ತಿದ್ದೇನೆ. ಅದರಲ್ಲೂ ಡೆತ್‌ ಓವರ್‌ಗಳಲ್ಲಿ ಆರ್‌ಸಿಬಿಗೆ ನೆರವಾಗುವ ವಿಶ್ವಾಸ ಹೊರಹಾಕಿದ್ದಾರೆ.

RCB

RCB

 • Share this:
  13ನೇ ಸೀಸನ್ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡ ಈ ಬಾರಿ ಹೊಸ ಪ್ರಯತ್ನದೊಂದಿಗೆ ಕಣಕ್ಕಿಳಿಯಲು ತಯಾರಾಗಿದೆ. ತನ್ನ ಹಿಂದಿನ ಕೆಟ್ಟ ದಾಖಲೆಯನ್ನು ಅಳಿಸಿ ಐಪಿಎಲ್ ಟ್ರೋಫಿ ಎತ್ತಿ ಹಿಡಿಯಲೇ ಬೇಕೆಂದು ಪಣತೊಟ್ಟಿದೆ. ಇದಕ್ಕಾಗಿ ಕೊಹ್ಲಿ ಸೈನ್ಯ ಭರ್ಜರಿ ಅಭ್ಯಾಸದಲ್ಲೂ ನಿರತವಾಗಿದೆ. ಆ್ಯರೋನ್ ಫಿಂಚ್, ಎಬಿಡಿ ವಿಲಿಯರ್ಸ್​, ಕ್ರಿಸ್ ಮೊರೀಸ್ ಉತ್ತಮ ಫಾರ್ಮ್​ನಲ್ಲಿರುವುದು ತಂಡಕ್ಕೆ ಬಹುದೊಡ್ಡ ಪ್ಲಸ್ ಪಾಯಿಂಟ್. ಹೀಗಿರುವಾಗ ಬೆಂಗಳೂರು ತಂಡಕ್ಕೆ ಮತ್ತೊಂದು ಬಲ ಬಂದಿದೆ.

  IPL 2020: Adam Zampa keen to set ‘example’ for RCB in death overs
  ಆಡಂ ಝಾಂಪ.


  IPL 2020: ಐಪಿಎಲ್​ನಲ್ಲಿ ಮಯಾಂತಿಗೆ ಸೆಡ್ಡು ಹೊಡೆಯಲು ಬಂದಳು ಮಾದಕ ಚೆಲುವೆ: ಯಾರೀಕೆ ಗೊತ್ತೇ?

  ಪ್ರತಿ ಬಾರಿ ಬೌಲಿಂಗ್ ವಿಭಾಗದಲ್ಲಿ, ಅದರಲ್ಲೂ ಡೆತ್ ಓವರ್​ನಲ್ಲಿ ಅತಿ ಕಳಪೆ ಪ್ರದರ್ಶನ ತೋರುತ್ತಿದ್ದ ಆರ್​ಸಿಬಿಗೆ ಅಂತಿಮ ಹಂತದಲ್ಲಿ ಶಕ್ತಿ ಕೊಡಲು ಆಸ್ಟ್ರೇಲಿಯಾ ಸ್ಪಿನ್ನರ್ ಮುಂದಾಗಿದ್ದಾರೆ.

  ಆರ್​ಸಿಬಿ ತಂಡದ ಪ್ರಮುಖ ವೇಗಿ ಕೇನ್‌ ರಿಚರ್ಡಸನ್ ಇತ್ತೀಚೆಗಷ್ಟೆ ವೈಯಕ್ತಿಕ ಕಾರಣಗಳಿಂದಾಗಿ ಟೂರ್ನಿಯಿಂದ ಹಿಂದೆಸರಿದರು. ಹೀಗಾಗಿ ರಿಚರ್ಡಸನ್ ಬದಲಿಗೆ ಆರ್‌ಸಿಬಿ ಆಸ್ಟ್ರೇಲಿಯಾದ ಯುವ ಲೆಗ್‌ ಸ್ಪಿನ್ನರ್‌ ಆಡಂ ಝಾಂಪ ಅವರನ್ನು ಬದಲಿ ಆಟಗಾರನಾಗಿ ತೆಗೆದುಕೊಂಡಿತು. ಸದ್ಯದಲ್ಲೆ ಝಾಂಪ ತಂಡ ಸೇರಿಕೊಳ್ಳಲಿದ್ದಾರೆ.

  ಈ ನಡುವೆ ಸಂದರ್ಶನವೊಂದರಲ್ಲಿ ಮಾತನಾಡಿರುವ ಆಡಂ ಝಾಂಪ, ಯಜುವೇಂದ್ರ ಚಹಾಲ್‌ ಜೊತೆಗೂಡಿ ಬೌಲಿಂಗ್‌ ಮಾಡುವುದನ್ನು ಎದುರು ನೋಡುತ್ತಿದ್ದೇನೆ. ಅದರಲ್ಲೂ ಡೆತ್‌ ಓವರ್‌ಗಳಲ್ಲಿ ಆರ್‌ಸಿಬಿಗೆ ನೆರವಾಗುವ ವಿಶ್ವಾಸ ಹೊರಹಾಕಿದ್ದಾರೆ.

  ಜಂಪಾ ಹಾಗೂ ಚಹಾಲ್​ ಇಬ್ಬರು ರಿಸ್ಟ್​ ಸ್ಪಿನ್ನರ್​ ಆಗಿದ್ದಾರೆ. ಆದರೆ, ಆಸ್ಟ್ರೇಲಿಯನ್ ಬೌಲರ್​ ಆರ್​ಸಿಬಿ ತಂಡದ ಸಹ ಆಟಗಾರನಿಂದ ಇನ್ನಿಂಗ್ಸ್​ ಅಂತ್ಯದ ನಿರ್ಣಾಯಕ ಘಟ್ಟದಲ್ಲಿ ಬೌಲಿಂಗ್ ಮಾಡುವ ಕೌಶಲ್ಯ ಕಲಿಯಲು ಬಯಸಿರುವುದಾಗಿ ತಿಳಿಸಿದ್ದಾರೆ.

  Dream11 IPL 2020: ಪಾಕಿಸ್ತಾನ, ಚೀನಾ ಬಿಟ್ಟು 120 ರಾಷ್ಟ್ರಗಳಲ್ಲಿ ಐಪಿಎಲ್ 2020 ನೇರ ಪ್ರಸಾರ

  "ನಿರ್ಣಾಯಕ ಇನ್ನಿಂಗ್ಸ್​ ಅಂತ್ಯದಲ್ಲಿ(ಡೆತ್​) ಬೌಲಿಂಗ್​ನಲ್ಲಿ ಮಾಡುವುದನ್ನು ನಾನು ನಿಜವಾಗಿಯೂ ಆನಂದಿಸುತ್ತೇನೆ. ವಿಶೇಷವಾಗಿ ಅಂತಹ ಒತ್ತಡದ ಓವರ್​ಗಳನ್ನ ಮಾಡಲು ನಾನು ಇಷ್ಟಪಡುತ್ತೇನೆ. ಇನಿಂಗ್ಸ್‌ನ ಅಂತ್ಯದ ಓವರ್‌ಗಳ ಬೌಲಿಂಗ್‌ ಸಲುವಾಗಿ ತಂಡ ಕಷ್ಟ ಪಡುತ್ತಿದ್ದರೆ ನನಗೆ ಅಲ್ಲಿ ಅವಕಾಶ ಸಿಗುವ ಸಾಧ್ಯತೆ ಇದೆ. ಇಂಗ್ಲೆಂಡ್ ವಿರುದ್ಧದ 2ನೇ ಪಂದ್ಯದಲ್ಲಿ 2 ಓವರ್​ಗಳಲ್ಲಿ 18 ರನ್​ಗಳ ಅಗತ್ಯವಿದ್ದಾಗ ಫಿಂಚ್​ಗೆ ನಾನು ಬೌಲಿಂಗ್​ ಮಾಡುತ್ತೇನೆಂದು ಹೇಳಿದೆ. ಆದರೆ, ಅದು ಯೋಜನೆಯಂತೆ ನಡೆಯಲಿಲ್ಲ. ಒಂದು ಇನ್ನಿಂಗ್ಸ್​ನಲ್ಲಿ ಯೋಜನೆ ಫಲಿಸದಿದ್ದಕ್ಕೆ ನನ್ನ ಆ ಮನೋವ್ರತ್ತಿ ಬಿಡುವ ಪ್ರಶ್ನೆಯೇ ಇಲ್ಲ" ಎಂದಿದ್ದಾರೆ.

  ಝಾಂಪ ಸೇರ್ಪಡೆಯಿಂದ ಆರ್‌ಸಿಬಿ ಸ್ಪಿನ್ ಬೌಲಿಂಗ್ ಪಡೆ ಮತ್ತಷ್ಟು ಬಲಿಷ್ಠಗೊಂಡಿದೆ. ಈಗಾಗಲೇ ಚಹಾಲ್ ಜೊತೆಗೆ ವಾಷಿಂಗ್ಟನ್ ಸುಂದರ್, ಮೊಯಿನ್ ಅಲಿ, ಪವನ್ ನೇಗಿ ಹಾಗೂ ಶಹ್ಬಾಜ್ ಅಹ್ಮದ್ ಸ್ಪಿನ್ನರ್‌ಗಳಾಗಿ ತಂಡದಲ್ಲಿದ್ದಾರೆ.

  ಆರ್​ಸಿಬಿ ತನ್ನ ಮೊದಲ ಪಂದ್ಯವನ್ನು ಸೆಪ್ಟೆಂಬರ್ 21 ರಂದು ಸನ್​ರೈಸರ್ಸ್​ ಹೈದರಾಬಾದ್ ವಿರುದ್ಧ ಆಡುವ ಮೂಲಕ ಅಭಿಯಾನ ಆರಂಭಿಸಲಿದೆ.
  Published by:Vinay Bhat
  First published: