news18-kannada Updated:October 26, 2020, 3:02 PM IST
RCB
13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ವಿರಾಟ್ ಕೊಹ್ಲಿ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪ್ಲೇ ಆಫ್ನತ್ತ ದಾಪುಗಾಲಿಡುತ್ತಿದೆ. ಆದರೆ, ಭಾನುವಾರ ನಡೆದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಆರ್ಸಿಬಿ ಕಳಪೆ ಬ್ಯಾಟಿಂಗ್-ಬೌಲಿಂಗ್ ಮಾಡಿ ಸೋಲುಕಂಡಿತು. ಧೋನಿ ಪಡೆ 8 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿತು. ಸದ್ಯ ಕೊಹ್ಲಿ ಟೀಂ ಆಡಿದ 11 ಪಂದ್ಯಗಳಲ್ಲಿ ಏಳರಲ್ಲಿ ಜಯ ಸಾಧಿಸಿ ನಾಲ್ಕರಲ್ಲಿ ಸೋಲುಂಡು ಒಟ್ಟು 14 ಅಂಕದೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ.
ಸಿಎಸ್ಕೆ ವಿರುದ್ಧ ಸೋಲುಂಡ ಬೆನ್ನಲ್ಲೇ ಆರ್ಸಿಬಿಗೆ ಮತ್ತೊಂದು ಆಘಾತ ಉಂಟಾಗಿದೆ. ತಂಡದ ಪ್ರಮುಖ ಬೌಲರ್ ನವ್ದೀಪ್ ಸೈನಿ ಗಾಯಕ್ಕೆ ತುತ್ತಾಗಿದ್ದು ಮುಂದಿನ ಕೆಲವು ಪಂದ್ಯಗಳಿಗೆ ಅಲಭ್ಯರಾಗುವ ಸಾಧ್ಯತೆ ಇದೆ. ಪ್ರಮುಖ ಹಂತದಲ್ಲೇ ಇಂಜುರಿ ಸಮಸ್ಯೆ ಉಂಟಾಗಿರುವುದು ಆರ್ಸಿಬಿ ತಂಡಕ್ಕೆ ತಲೆನೋವಾಗಿ ಪರಿಣಮಿಸಿದೆ.
IPL 2020, KKR vs KXIP: ಐಪಿಎಲ್ನಲ್ಲಿಂದು ಹೈವೋಲ್ಟೇಜ್ ಪಂದ್ಯ: ಗೆಲ್ಲಲೇ ಬೇಕಾದ ಒತ್ತಡದಲ್ಲಿ ಕೆಕೆಆರ್-ಪಂಜಾಬ್
ಸಿಎಸ್ಕೆ ಬ್ಯಾಟಿಂಗ್ ಇನ್ನಿಂಗ್ಸ್ನ 18ನೇ ಓವರ್ನ ಕೊನೆಯ ಎಸೆತದಲ್ಲಿ ಸೈನಿ ತಮ್ಮ ಬಲಗೈ ಹೆಬ್ಬೆರಳಿಗೆ ಗಾಯ ಮಾಡಿಕೊಂಡು ಮೈದಾನದಿಂದಲೇ ಹೊರನಡೆಯ ಬೇಕಾಯಿತು. ಸೈನಿ ಯಾವಾಗ ಗುಣಮುಖರಾಗುತ್ತಾರೆ ಎಂಬುದು ಖಚಿತವಾಗಿಲ್ಲ ಎಂದು ತಂಡದ ಫಿಸಿಯೋ ಹೇಳಿದ್ದಾರೆ.
"ನವ್ದೀಪ್ ಸೈನಿ ಕೊನೆಯ ಎಸೆತದಲ್ಲಿ ಬೌಲಿಂಗ್ ಮಾಡುವಾಗ ತನ್ನ ಬೆರಳಿಗೆ ಗಾಯ ಮಾಡಿಕೊಂಡಿದ್ದಾರೆ. ಅದೃಷ್ಟವಶಾತ್, ನಾವು ಉತ್ತಮ ಶಸ್ತ್ರಚಿಕಿತ್ಸೆಯನ್ನು ಹೊಂದಿದ್ದೇವೆ. ಕೈಗೆ ಸ್ಟಿಚ್ ಮಾಡಲಾಗಿದೆ. ರಾತ್ರಿಯಿಡೀ ಮೇಲ್ವಿಚಾರಣೆ ಮಾಡುತ್ತೇವೆ. ಆದರೆ, ಮುಂದಿನ ಪಂದ್ಯಗಳಿಗೆ ಅವರು ಸಿದ್ಧರಿದ್ದಾರೆಯೇ ಅನ್ನೋದು ಕಾದು ನೋಡಬೇಕಿದೆ" ಎಂದು ಫಿಸಿಯೋ, ಇವಾನ್ ಸ್ಪೀಚ್ಲಿ ಹೇಳಿದ್ದಾರೆ.
IPL 2020: ಪಂದ್ಯದ ನಡುವೆ ಮಂಡಿಯೂರಿ Black Live Matter ಚಳುವಳಿಗೆ ಬೆಂಬಲ ಸೂಚಿಸಿದ ಹಾರ್ದಿಕ್ ಪಾಂಡ್ಯ
ಆರ್ಸಿಬಿಗೆ ಇನ್ನೂ ಲೀಗ್ ಹಂತದ ಮೂರು ಪಂದ್ಯಗಳು ಬಾಕಿ ಉಳಿದುಕೊಂಡಿವೆ. ಈ ಮೂರು ಪಂದ್ಯ ಆರ್ಸಿಬಿ ಪಾಲಿಗೆ ಮಹತ್ವದ್ದಾಗಿದೆ. ಹೀಗಿರುವಾಗ ಪ್ರಮುಖ ವೇಗಿ ಇಂಜುರಿಗೆ ತುತ್ತಾಗಿರುವುದು ತಂಡಕ್ಕೆ ಹಿನ್ನಡೆಯಾಗಿದೆ.
ಆರ್ಸಿಬಿ ತನ್ನ ಮುಂದಿನ ಪಂದ್ಯವನ್ನು ಅ. 28 ರಂದು ಮುಂಬೈ ಇಂಡಿಯನ್ಸ್ ವಿರುದ್ಧ ಆಡಲಿದೆ. ಆ ಬಳಿಕ ಅ. 31 ರಂದು ಸನ್ರೈಸರ್ಸ್ ಹೈದರಾಬಾದ್ ಹಾಗೂ ನ. 2 ರಂದು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಆಡುವ ಮೂಲಕ ಲೀಗ್ ಹಂತದ ಪಂದ್ಯಗಳನ್ನು ಅಂತ್ಯಗೊಳಿಸಲಿದೆ.
Published by:
Vinay Bhat
First published:
October 26, 2020, 3:02 PM IST