IPL

  • associate partner

IPL 2020, RCB: ಉಳಿದಿರುವ ಎರಡು ಪಂದ್ಯ ಗೆದ್ದರೆ ಆರ್​ಸಿಬಿ ಸೇಫ್: ಸೋತರೆ ಏನುಗತಿ?: ಇಲ್ಲಿದೆ ಲೆಕ್ಕಾಚಾರ

ಆರ್​ಸಿಬಿಗೆ ಇನ್ನು ಕೇವಲ ಎರಡು ಪಂದ್ಯಗಳಷ್ಟೆ ಬಾಕಿಉಳಿದಿವೆ. ಅ. 31 ರಂದು ಸನ್​ರೈಸರ್ಸ್​ ಹೈದರಾಬಾದ್ ಹಾಗೂ ನ. 2 ರಂದು ಡೆಲ್ಲಿ ಕ್ಯಾಪಿಟಲ್ಸ್​ ವಿರುದ್ಧ ಆಡುವ ಮೂಲಕ ತನ್ನ ಲೀಗ್ ಹಂತದ ಪಂದ್ಯಗಳನ್ನು ಅಂತ್ಯಗೊಳಿಸಲಿದೆ.

news18-kannada
Updated:October 29, 2020, 7:43 PM IST
IPL 2020, RCB: ಉಳಿದಿರುವ ಎರಡು ಪಂದ್ಯ ಗೆದ್ದರೆ ಆರ್​ಸಿಬಿ ಸೇಫ್: ಸೋತರೆ ಏನುಗತಿ?: ಇಲ್ಲಿದೆ ಲೆಕ್ಕಾಚಾರ
RCB
  • Share this:
ದೂರದ ಅರಭ್ ರಾಷ್ಟ್ರದಲ್ಲಿ ಸಾಗುತ್ತಿರುವ 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಅಂತಿಮ ಘಟ್ಟದತ್ತ ಸಾಗುತ್ತಿದೆ. ನವೆಂಬರ್ 3ಕ್ಕೆ ಲೀಗ್ ಹಂತದ ಪಂದ್ಯಗಳು ಮುಕ್ತಾಯಗೊಳ್ಳಲಿದ್ದು ಬಳಿಕ ಪ್ಲೇ ಆಫ್ ಸುತ್ತು ನಡೆಯಲಿದೆ. ಈಗಾಗಲೇ ಮೂರು ಬಾರಿಯ ಚಾಂಪಿಯನ್ ಆಗಿರುವ ಎಂ ಎಸ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ​ ಟೂರ್ನಿಯಿಂದ ಹೊರಬಿದ್ದಿದೆ. ವಿಶೇಷ ಎಂದರೆ ಈಗಾಗಲೇ ಲೀಗ್ ಹಂತದ 12 ಪಂದ್ಯಗಳು ಮುಕ್ತಾಯಗೊಂಡರೂ ಇನ್ನೂ ಅಧಿಕೃತವಾಗಿ ಯಾವತಂಡ ಕೂಡ ಪ್ಲೇ ಆಫ್​ಗೆ ಎಂಟ್ರಿಕೊಟ್ಟಿಲ್ಲ. ಹೀಗಾಗಿ ಈ ಬಾರಿಯ ಐಪಿಎಲ್ ಮತ್ತಷ್ಟು ರೋಚಕತೆ ಸೃಷ್ಟಿಸುತ್ತಿದೆ.

ಪ್ರತಿ ಸೀಸನ್​ನಲ್ಲಿ ಕಪ್ ಗೆಲ್ಲಲು ಎಡವುತ್ತಿದ್ದ ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡ ಈ ಬಾರಿ ಪ್ರಶಸ್ತಿ ಮುಡಿಗೇರಿಸಿಕೊಳ್ಳುವ ವಿಶ್ವಾಸದಲ್ಲಿದೆ.

CSK vs KKR, IPL 2020 Live Score

ಆದರೆ, ಅಂತಿಮ ಹಂತ ತಲುಪಿರುವಾಗ ಮತ್ತೆ ಕಳಪೆ ಪ್ರದರ್ಶನ ತೋರುತ್ತಿದೆ. ಸದ್ಯ ಪಾಯಿಂಟ್ ಪಟ್ಟಿಯಲ್ಲಿ 14 ಅಂಕದೊಂದಿಗೆ ಎರಡನೇ ಸ್ಥಾನದಲ್ಲಿದೆ. ಆದರೆ, ಆರ್​ಸಿಬಿಗೆ ಪ್ಲೇ ಆಫ್ ಹಾದಿ ಅಷ್ಟೊಂದು ಸುಲಭವಿಲ್ಲ. ಹಾಗಾದ್ರೆ ಪ್ಲೇ ಆಫ್ ಪ್ರವೇಶಿಸಬೇಕಾದರೆ ಕೊಹ್ಲಿ ಸೈನ್ಯ ಇನ್ನೆಷ್ಟು ಪಂದ್ಯ ಗೆಲ್ಲಬೇಕು?, ಇಲ್ಲಿದೆ ಮಾಹಿತಿ.

ಆರ್​ಸಿಬಿ ತಂಡ ಈ ಆವೃತ್ತಿಯ ಆರಂಭದಲ್ಲಿ ಉತ್ತಮ ಆಟ ಪ್ರದರ್ಶಿಸುತ್ತಾ ಬಂತು. ಮೊದಲ ಆರು ಪಂದ್ಯಗಳಲ್ಲಿ ನಾಲ್ಕರಲ್ಲಿ ಜಯ ಸಾಧಿಸಿತು. ಆದರೆ, ಕಳೆದ ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್​ ವಿರುದ್ಧ ಸತತವಾಗಿ ಹೀನಾಯ ಸೋಲು ಕಂಡಿತು. ಹೀಗೆ ಅಂತಿಮ ಘಟ್ಟ ಸಮೀಸುತ್ತಿದೆ ಎಂಬೊತ್ತಿಗೆ ತನ್ನ ಹಳೇಯ ಚಾಳಿಯನ್ನ ಮುಂದುವರೆಸುತ್ತಿದೆ. ಸಂಘಟಿತ ಪ್ರದರ್ಶನ ನೀಡುವುದರಲ್ಲಿ ಕೊಹ್ಲಿ ಹುಡುಗರು ಎಡವುತ್ತಿದ್ದಾರೆ.

MI vs RCB: ಮೈದಾನದಲ್ಲೇ ಆರ್​ಸಿಬಿ ಬೌಲರ್-ಹಾರ್ದಿಕ್ ನಡುವೆ ಜಗಳ: ಬೆರಳು ತೋರಿಸಿ ಪಾಂಡ್ಯ ವಾರ್ನಿಂಗ್

ಆರ್​ಸಿಬಿಗೆ ಇನ್ನು ಕೇವಲ ಎರಡು ಪಂದ್ಯಗಳಷ್ಟೆ ಬಾಕಿಉಳಿದಿವೆ. ಅ. 31 ರಂದು ಸನ್​ರೈಸರ್ಸ್​ ಹೈದರಾಬಾದ್ ಹಾಗೂ ನ. 2 ರಂದು ಡೆಲ್ಲಿ ಕ್ಯಾಪಿಟಲ್ಸ್​ ವಿರುದ್ಧ ಆಡುವ ಮೂಲಕ ತನ್ನ ಲೀಗ್ ಹಂತದ ಪಂದ್ಯಗಳನ್ನು ಅಂತ್ಯಗೊಳಿಸಲಿದೆ.ಈ ಎರಡು ಪಂದ್ಯಗಳಲ್ಲಿ ಆರ್​ಸಿಬಿ ಎರಡರಲ್ಲೂ ಗೆದ್ದರೆ ಅಂಕಪಟ್ಟಿಯಲ್ಲಿ ಪ್ರಥಮ ಅಥವಾ ದ್ವಿತೀಯ ಸ್ಥಾನ ಅಲಂಕರಿಸಿ ಸೇಫ್ ಆಗಲಿದೆ. ಎಲ್ಲಾದರು ಒಂದು ಪಂದ್ಯ ಅಥವಾ ಎರಡೂ ಪಂದ್ಯ ಸೋತರೆ ಕೊಹ್ಲಿ ಪಡೆಯ ಪ್ಲೇ-ಆಫ್ ಹಾದಿ ದುಸ್ತರವಾಗಲಿದೆ. ಅಲ್ಲದೆ ಆರ್​ಸಿಬಿಗೆ ನೆಟ್ ರನ್​ರೇಟ್ ತುಂಬಾನೇ ಅವಶ್ಯಕವಾಗಿರುತ್ತದೆ. ದೊಡ್ಡ ಅಂತರದ ಗೆಲುವು ಬೇಕಾಗಿರುತ್ತದೆ. ಜೊತೆಗೆ ಡೆಲ್ಲಿ ಕ್ಯಾಪಿಟಲ್ಸ್​ ಮುಂದಿನ ಎರಡೂ ಪಂದ್ಯ ಗೆದ್ದರೆ ಇನ್ನಷ್ಟು ಕಠಿಣವಾಗಲುದೆ.

Devdutt Padikkal: ಕನ್ನಡಿಗನ ಸಾಧನೆಗೆ ಮತ್ತೊಂದು ಮುಕುಟ: ಚೊಚ್ಚಲ ಸೀಸನ್​ನಲ್ಲೇ ಏರುತ್ತಿದೆ ಪಡಿಕ್ಕಲ್ ದಾಖಲೆ ಪಟ್ಟಿ

ಹೀಗಾಗಿ ಮುಂದಿನ ಎರಡೂ ಪಂದ್ಯಗಳು ಬೆಂಗಳೂರು ಪಾಲಿಗೆ ಮಹತ್ವದ್ದಾಗಿದೆ. ಈ ನಡುವೆ ಇಂಜುರಿ ಸಮಸ್ಯೆ ಕೂಡ ನಾಯಕನ ತಲೆನೋವು ಹೆಚ್ಚಿಸಿದೆ. ಪ್ರಮುಖ ವೇಗಿ ನವ್​ದೀಪ್ ಸೈನಿ ತಮ್ಮ ಬಲಗೈ ಹೆಬ್ಬೆರಳಿಗೆ ಗಾಯ ಮಾಡಿಕೊಂಡಿದ್ದರು. ಕಳೆದ ಪಂದ್ಯದಲ್ಲಿ ಕಣಕ್ಕಿಳಿದಿರಲಿಲ್ಲ. ಆದರೆ, ಆ್ಯರೋನ್ ಫಿಂಚ್ ಬದಲು ಪಡಿಕ್ಕಲ್ ಜೊತೆ ಇನ್ನಿಂಗ್ಸ್​ ಆರಂಭಿಸಿದ ಜೋಷ್ ಫಿಲಿಪ್ ಭರವಸೆ ಮೂಡಿಸಿದ್ದಾರೆ. ಇದು ನಾಯಕನಿಗೆ ಕೊಂಚ ನೆಮ್ಮದಿ ತಂದಿದೆ.
Published by: Vinay Bhat
First published: October 29, 2020, 7:43 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading