ಬೆಂಗಳೂರು (ನ. 03): ದೂರದ ಯುಎಇನಲ್ಲಿ ನಡೆಯುತ್ತಿರುವ 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಅಂತಿಮ ಘಟ್ಟಕ್ಕೆ ಬಂದು ತಲುಪಿದೆ. ಈಗಾಗಲೇ ಮುಂಬೈ ಇಂಡಿಯನ್ಸ್, ಡೆಲ್ಲಿ ಹಾಗೂ ಆರ್ಸಿಬಿ ಹೀಗೆ ಮೂರು ತಂಡಗಳು ಪ್ಲೇ ಆಪ್ ಹಂತಕ್ಕೆ ಲಗ್ಗೆಯಿಟ್ಟಿವೆ. ಇಂದು ಸನ್ರೈಸರ್ಸ್ ಹೈದರಾಬಾದ್ ಹಾಗೂ ಮುಂಬೈ ನಡುವೆ ಲೀಗ್ ಹಂತದ ಕೊನೆಯ ಪಂದ್ಯ ನಡೆಯಲಿದ್ದು, ಗೆದ್ದರೆ ಎಸ್ಆರ್ಹೆಚ್ ಸೋತರೆ ಕೆಕೆಆರ್ ನಾಲ್ಕನೇ ತಂಡವಾಗಿ ಕ್ವಾಲಿಫಯರ್ ಆಗಲಿದೆ.
ವಿಶೇಷ ಎಂದರೆ ಈ ಬಾರಿ ವಿರಾಟ್ ಕೊಹ್ಲಿ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕಠಿಣ ಹೋರಾಟ ನಡೆಸಿ ಪ್ಲೇ ಆಫ್ ಪ್ರವೇಶಿಸಿದ್ದು ಕಪ್ ಗೆಲ್ಲುವ ವಿಶ್ವಾಸದಲ್ಲಿದೆ. ಕಳೆದ ಮೂರು ವರ್ಷಗಳಿಂದ ಅತ್ಯಂತ ಕಳಪೆ ಪ್ರದರ್ಶನ ನೀಡುತ್ತಾ ಬಂದಿದ್ದ ಕೊಹ್ಲಿ ಪಡೆ ಈ ಬಾರಿ ಪುಟಿದೆದ್ದಿದೆ. ಜೊತೆಗೆ ಭರವಸೆಯ ಆಟಗಾರರು ಹುಟ್ಟುಕೊಂಡಿದ್ದಾರೆ.
Will we rise above the Sun or will it be a Knight to remember? 😉
Playoffs here we come. 😎#PlayBold #IPL2020 #WeAreChallengers #Dream11IPL pic.twitter.com/RT3JHASdXA
— Royal Challengers Bangalore (@RCBTweets) November 3, 2020
2017ರ ಐಪಿಎಲ್ ಸೀಸನ್ನಲ್ಲಿ ಪಾಯಿಂಟ್ ಪಟ್ಟಿಯ ಪಾತಾಳದಲ್ಲಿದ್ದ ಆರ್ಸಿಬಿ 2018ರಲ್ಲೂ 6ನೇ ಸ್ಥಾನಕ್ಕೆ ತೃಪ್ತಿಪಟ್ಟಿತ್ತು. ಕಳೆದ ಸೀಸನ್ನಲ್ಲೂ ಕೊನೆಯ ಸ್ಥಾನ ಪಡೆದು ಹೀನಾಯ ಪ್ರದರ್ಶನ ತೋರಿತ್ತು. ಹೀಗೆ ಸತತ ಮೂರು ಟೂರ್ನಿಗಳಲ್ಲಿ ಸ್ಥಿರ ಪ್ರದರ್ಶನ ನೀಡಲು ಎಡವಿದ್ದ ಆರ್ಸಿಬಿ, ಈ ಬಾರಿ ಕಪ್ ಗೆಲ್ಲಲೇ ಬೇಕೆಂದು ನಿರ್ಧಾರ ಮಾಡಿ ಪ್ಲೇ ಆಫ್ ಹಂತಕ್ಕೆ ಬಂದುನಿಂತಿದೆ.
ಎಸ್ಆರ್ಹೆಚ್ ವಿರುದ್ಧದ ಗೆಲುವಿನೊಂದಿಗೆ 2020ರ ಐಪಿಎಲ್ ಅನ್ನು ಆರಂಭಿಸಿದ ಆರ್ಸಿಬಿ, ಮೊದಲ ಏಳು ಪಂದ್ಯಗಳ ಪೈಕಿ ನಾಲ್ಕರಲ್ಲಿ ಗೆಲುವು ಸಾಧಿಸಿ ಬಲಿಷ್ಠ ತಂಡವಾಗಿ ಹೊರಹೊಮ್ಮಿತು. ಆದರೆ, ನಂತರದ ಏಳು ಪಂದ್ಯಗಳಲ್ಲಿ ಕೊಹ್ಲಿ ಪಡೆ ಗೆಲುವು ಸಾಧಿಸಿದ್ದು ಕೇವಲ ಎರಡು ಪಂದ್ಯಗಳಲ್ಲಿ ಮಾತ್ರ. ಆದರೂ ಆರಂಭದಲ್ಲಿ ಉತ್ತಮ ಪ್ರದರ್ಶನ ನೀಡಿದ ಪರಿಣಾಮ ಪ್ಲೇ ಆಫ್ ಟಿಕೆಟ್ ಪಡೆದುಕೊಂಡಿದೆ.
ಆರ್ಸಿಬಿ ಈ ಬಾರಿ ಉತ್ತಮ ಪ್ರದರ್ಶನ ನೀಡಲು ನಾಯಕ ವಿರಾಟ್ ಕೊಹ್ಲಿ ಹಾಗೂ ಎಬಿ ಡಿವಿಲಿಯರ್ಸ್ ಕೊಡುಗೆ ಎಂದಿನಂತೆ ಇದ್ದರೆ, ಚುಗುರು ಮೀಸೆ ಹುಡುಗ ಕರ್ನಾಟಕದ ದೇವದತ್ ಪಡಿಕ್ಕಲ್ ಕೂಡ ಪ್ರಮುಖ ಕಾರಣ. ತಂಡ ಉತ್ತಮ ಆರಂಭ ಪಡೆದುಕೊಂಡರೆ ಶೇ. 25 ರಷ್ಟು ಪಂದ್ಯ ಗೆದ್ದಂತೆ ಎಂಬ ಮಾತಿದೆ. ಹೀಗೆ ಪಡಿಕ್ಕಲ್ ಚೊಚ್ಚಲ ಆವೃತ್ತಿಯಲ್ಲೇ ದಾಖಲೆ ಬರೆದು ತಂಡಕ್ಕೆ ನೆರವಾಗುತ್ತಾ ಬಂದಿದ್ದಾರೆ.
Royal Challengers Bangalore: ಸತತ ನಾಲ್ಕು ಸೋಲು ಕಂಡರೂ ಆರ್ಸಿಬಿ ಪ್ಲೇಆಫ್ಗೆ ಏರಿದ್ದು ಹೇಗೆ?; ಇಲ್ಲಿದೆ ಮಾಹಿತಿ
ದಕ್ಷಿಣ ಆಫ್ರಿಕಾದ ಆಲ್ರೌಂಡರ್ ಕ್ರಿಸ್ ಮೊರೀಸ್ ಪಾತ್ರವನ್ನೂ ಮರೆಯುಂತಿಲ್ಲ. ಆರಂಭಿಕ ಪಂದ್ಯದಲ್ಲಿ ಇಂಜುರಿಯಿಂದ ಹೊರಗುಳಿದಿದ್ದ ಇವರು, ಬಳಿಕ ತಂಡಕ್ಕೆ ಕಮ್ಬ್ಯಾಕ್ ಮಾಡಿ ಬೌಲಿಂಗ್ ಶಕ್ತಿಯನ್ನು ಹೆಚ್ಚಿಸಿದರು. ವಾಷಿಂಗ್ಟನ್ ಸುಂದರ್ ಪವರ್ ಪ್ಲೇನಲ್ಲಿ ಬೌಲಿಂಗ್ ಮಾಡಿ ಹೊಸಭರವಸೆ ಮೂಡಿಸಿದ್ದಾರೆ. ವಿಕೆಟ್ ಟೇಕರ್ ಯಜುವೇಂದ್ರ ಚಹಾಲ್ ಸ್ಪಿನ್ ಮೋಡಿ ಚೆನ್ನಾಗಿ ವರ್ಕ್ ಆಗುತ್ತಿದೆ.
ಸದ್ಯ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿರುವ ಆರ್ಸಿಬಿ ನವೆಂಬರ್ 6 ರಂದು ಹೈದರಾಬಾದ್ ಅಥವಾ ಕೆಕೆಆರ್ ವಿರುದ್ಧ ಸೆಣೆಸಾಟ ನಡೆಸುವ ಸಾಧ್ಯತೆ ಇದೆ. ಬೆಂಗಳೂರು ತಂಡಕ್ಕೆ ಬ್ಯಾಟಿಂಗ್ – ಬೌಲಿಂಗ್ ಜೊತೆ ಅಭಿಮಾನಿಗಳ ಶಕ್ತಿ ಕೂಡ ಇದ್ದು, ಚೊಚ್ಚಲ ಬಾರಿಗೆ ಟ್ರೋಫಿ ಎತ್ತಿಹಿಡಿಯುತ್ತಾ ಎಂಬುದು ಕಾದುನೋಡಬೇಕಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ