news18-kannada Updated:August 31, 2020, 1:06 PM IST
IPL 2020
13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೆ ಮತ್ತೆ ಕೊರೋನಾ ಕಂಟಕ ಎದುರಾಗಿದೆ. ಯಾವುದೇ ತೊಂದರೆ ಇಲ್ಲಿದೆ ಬಯೋ ಸೆಕ್ಯೂರ್ ವಾತಾವರಣ ಇರುವ ದುಬೈ, ಶರ್ಜಾ ಮತ್ತು ಅಬುದಾಭಿ ಕ್ರೀಡಾಂಗಣಗಳಲ್ಲಿ ಈ ಬಾರಿಯ ಐಪಿಎಲ್ ಆಯೋಜಿಸುವ ಬಿಸಿಸಿಐ ಕನಸಿಗೆ ಮತ್ತೆ ವಿಘ್ನ ಬಂದೊದಗಿದೆ. ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯ ಇಬ್ಬರು ಆಟಗಾರರು ಸಹಿತ ಒಟ್ಟು 13 ಸದಸ್ಯರಿಗೆ ಕೊರೋನಾ ಪಾಸಿಟಿವ್ ಬಂದಿರುವುದು ಟೂರ್ನಿಗೆ ಬಗ್ಗೆ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ. ನಿಗದಿ ಮಾಡಿರುವ ದಿನಾಂಕಕ್ಕೆ ಸೆಪ್ಟೆಂಬರ್ 19 ರಂದು ಐಪಿಎಲ್ ಆರಂಭ ಅನುಮಾನ ಎಂದು ಹೇಳಲಾಗುತ್ತಿದೆ.
ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಟಗಾರರಾದ ದೀಪಕ್ ಚಹಾರ್ ಮತ್ತು ಋತುರಾಜ್ ಗಾಯಕ್ವಾಡ್ ಅವರಿಗೆ ಕೋವಿಡ್ ದೃಢಪಟ್ಟಿದ್ದರೆ, ಸುರೇಶ್ ರೈನಾ ವೈಯಕ್ತಿಕ ಕಾರಣದಿಂದ ಐಪಿಎಲ್ ತೊರೆದು ಭಾರತಕ್ಕೆ ಬಂದಿದ್ದಾರೆ. ತಂಡದ ಕ್ವಾರಂಟೈನ್ ಅವಧಿಯನ್ನೂ ಸೆಪ್ಟೆಂಬರ್ 6ರ ವರೆಗೆ ಹೆಚ್ಚಿಸಲಾಗಿದ್ದು, ದೀಪಕ್ ಚಹಾರ್ ಹಾಗೂ ಋತುರಾಜ್ ಗಾಯಕ್ವಾಡ್ ಆರಂಭದ ಕೆಲ ಪಂದ್ಯಗಳಿಗೆ ಲಭ್ಯವಿರುವುದಿಲ್ಲ. ಈ ಎಲ್ಲ ಕಾರಣಗಳಿಂದ ಉದ್ಘಾಟನಾ ಪಂದ್ಯದಲ್ಲಿ ಚೆನ್ನೈ ತಂಡ ಆಡುವುದು ಅನುಮಾನ ಎನ್ನಲಾಗಿದೆ.
Sourav Ganguly: ಟಿ-20 ಕ್ರಿಕೆಟ್ಗೆ ಸೌರವ್ ಗಂಗೂಲಿ ಯೋಗ್ಯನೇ ಅಲ್ಲ: ಹೀಗೆ ಹೇಳಿದ್ಯಾರು ಗೊತ್ತೇ..?
ಈ ಹಿಂದಿನ ವೇಳಾಪಟ್ಟಿಯಲ್ಲಿ ನಿಗದಿ ಮಾಡಿರುವಂತೆ ಸೆಪ್ಟೆಂಬರ್ 19ರ ಉದ್ಘಾಟನಾ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ತಂಡಗಳು ಮುಖಾಮುಖಿ ಆಗಲಿದೆ ಎಂದು ಹೇಳಲಾಗಿತ್ತು. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಸಿಎಸ್ಕೆ ಸ್ಪರ್ಧಿಸುವ ಸಾಧ್ಯತೆ ಕಡಿಮೆ ಇದೆ.
ಹೀಗಾಗಿ ಮಾಹಿತಿ ಪ್ರಕಾರ ಉದ್ಘಾಟನಾ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಮುಂಬೈ ಇಂಡಿಯನ್ಸ್ ತಂಡ ಕಾದಾಟ ನಡೆಸಲಿದೆ ಎಂದು ತಿಳಿದುಬಂದಿದೆ.
13ನೇ ಆವೃತ್ತಿಯ ಮೊದಲ ಪಂದ್ಯ ಹೈವೋಲ್ಟೇಜ್ ಆಗಬೇಕು ಎಂಬುದು ಎಲ್ಲರ ಆಸೆ. ಹೀಗಾಗಿ ಚೆನ್ನೈ ಬಿಟ್ಟರೆ ಸ್ಟಾರ್ ಆಟಗಾರರಿರುವ ಮತ್ತೊಂದು ತಂಡವೆಂದರೆ ಅದು ಆರ್ಸಿಬಿ. ಹೀಗಾಗಿ ಉದ್ಘಾಟನಾ ಪಂದ್ಯದಲ್ಲಿ ಮುಂಬೈ ಜೊತೆ ಆರ್ಸಿಬಿ ಸೆಣೆಸಾಡಲಿದೆ ಎಂದು ಹೇಳಲಾಗುತ್ತಿದೆ.
IPL 2020: ಐದು ತಿಂಗಳ ಬಳಿಕ ಬ್ಯಾಟ್ ಮುಟ್ಟಿದ ವಿರಾಟ್ ಕೊಹ್ಲಿಗೆ ಆಗಿದ್ದು ಭಯ!ಕಳೆದ ವಾರವೇ ಬಿಸಿಸಿಐ ವೇಳಾಪಟ್ಟಿಯನ್ನು ಪ್ರಕಟಮಾಡಬೇಕಿತ್ತು. ಆದರೆ, ಸಿಎಸ್ಕೆ ತಂಡದಲ್ಲಾದ ಬೆಳವಣಿಗೆಯಿಂದ ವೇಳಾಪಟ್ಟಿ ಪ್ರಕಟ ಮುಂದಕ್ಕೆ ಹೋಗಿದೆ. ಈ ವಾರದ ಅಂತ್ಯದೊಳಗೆ ವೇಳಾಪಟ್ಟಿ ಅಂತಿಮಗೊಂಡು ಬಿಡುಗಡೆ ಮಾಡುವ ಸಾಧ್ಯತೆ ಇದೆ.
ಇದರ ನಡುವೆ ಸುರೇಶ್ ರೈನಾ ವೈಯಕ್ತಿಕ ಕಾರಣದಿಂದ ಭಾರತಕ್ಕೆ ವಾಪಸ್ಸಾಗಿದ್ದಾರೆ ಎಂದು ಫ್ರಾಂಚೈಸಿ ಹೇಳಿತ್ತು. ಆದರೆ, ರೈನಾ ಅವರಿಗೆ ಒದಗಿಸಲಾದ ಹೋಟೆಲ್ ಕೊಠಡಿ ಬಗ್ಗೆ ಅವರು ಅಸಮಾಧಾನ ಹೊಂದಿದ್ದರು. ಸಿಎಸ್ ಕೆ ನಾಯಕ ಮಹೇಂದ್ರ ಸಿಂಗ್ ಧೋನಿ ಅವರಿಗೆ ನೀಡಿರುವ ಕೊಠಡಿಯನ್ನು ಹೊಂದಲು ಸುರೇಶ್ ರೈನಾ ಬಯಸಿದ್ದರು. ಇದು ಸಾಧ್ಯವಾಗದ ಕಾರಣ ರೈನಾ ಭಾರತಕ್ಕೆ ವಾಪಸ್ಸಾಗಿದ್ದಾರೆ ಎಂದು ವರದಿಗಳು ತಿಳಿಸಿವೆ.
Published by:
Vinay Bhat
First published:
August 31, 2020, 1:06 PM IST