IPL

  • associate partner
HOME » NEWS » Ipl » IPL 2020 RCB 3 QUESTIONS THAT VIRAT KOHLI RCB BANGALORE TEAM NEED TO ANSWER BEFORE NEXT MATCH AGAINST RR VB

RCB: ಆರ್​ಸಿಬಿಗೆ ಶುರುವಾಯ್ತು ಕಂಟಕ: ಮುಂದಿನ ಪಂದ್ಯಕ್ಕೂ ಮುನ್ನ ಸರಿಪಡಿಸಬೇಕಿದೆ ಈ 3 ಅಂಶ

ಮುಂದಿನ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯಕ್ಕು ಮುನ್ನ ರಾಯಲ್ ಚಾಲೆಂಜರ್ಸ್​ ಬೆಂಗಳೂರು ಈ ತಪ್ಪುಗಳನ್ನು ಸರಿಪಡಿಸಬೇಕಿದೆ. ಇಲ್ಲವಾದರೆ ಪ್ಲೇ ಆಫ್ ಹಾದಿ ಮತ್ತಷ್ಟು ಕಠಿಣವಾಗಲಿದೆ.

news18-kannada
Updated:October 16, 2020, 8:35 PM IST
RCB: ಆರ್​ಸಿಬಿಗೆ ಶುರುವಾಯ್ತು ಕಂಟಕ: ಮುಂದಿನ ಪಂದ್ಯಕ್ಕೂ ಮುನ್ನ ಸರಿಪಡಿಸಬೇಕಿದೆ ಈ 3 ಅಂಶ
RCB
  • Share this:
ಯುಎಇನಲ್ಲಿ ಸಾಗುತ್ತಿರುವ 13ನೇ ಆವೃತ್ತಿಯ ಐಪಿಎಲ್ ಅರ್ಧದಷ್ಟು ಪೂರ್ಣಗೊಂಡಿದ್ದು ರೋಚಕ ಘಟ್ಟದತ್ತ ಸಾಗುತ್ತಿದೆ. ಯಾರೂ ಊಹಿಸಲಾಗದ ರೀತಿಯಲ್ಲಿ ಐಪಿಎಲ್ 2020 ಮುಂದುವರೆಯುತ್ತಿದ್ದು, ಬಲಿಷ್ಠ ಅಂದುಕೊಂಡಿದ್ದ ತಂಡ ಕಳಪೆ ಆಟ ಹಾಗೂ ದುರ್ಬಲ ಅಂದುಕೊಂಡಿದ್ದ ಟೀಂ ಅತ್ಯುತ್ತಮ ಪ್ರದರ್ಶನ ನೀಡುತ್ತಿದೆ. ಈ ಪೈಕಿ ಈಬಾರಿ ಕಪ್ ಗೆಲ್ಲುವ ನೆಚ್ಚಿನ ತಂಡವಾಗಿರುವ ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡ ಕೂಡ ಒಂದು.

ಕೊಹ್ಲಿ ಸೈನ್ಯ ಈಗಾಗಲೇ ಆಡಿರುವ 8 ಪಂದ್ಯಗಳ ಪೈಕಿ 5 ರಲ್ಲಿ ಜಯ ಸಾಧಿಸಿ, 3 ಪಂದ್ಯಗಳನ್ನು ಕೈಚೆಲ್ಲಿದೆ. ಕಳೆದ ಪಂದ್ಯದಲ್ಲಿ ಕೊಹ್ಲಿ ಪಡೆ ಅನೇಕ ತಪ್ಪುಗಳನ್ನು ಮಾಡಿ ಕಿಂಗ್ಸ್​ ಇಲೆವೆನ್ ಪಂಜಾಬ್ ವಿರುದ್ಧ ಸೋಲುಕಂಡಿತ್ತು. ಬ್ಯಾಟಿಂಗ್ – ಬೌಲಿಂಗ್​ನಲ್ಲಿ ಆಟಗಾರರು ಬಲಿಷ್ಠರಾಗುತ್ತಿದ್ದಾರೆ ಎಂಬೊತ್ತಿಗೆ ಆರ್​ಸಿಬಿ ತಂಡದಲ್ಲಿ ಅನಗತ್ಯ ಬದಲಾವಣೆ ಮಾಡಿ ಎಡವಿತು. ಸದ್ಯ ಮುಂದಿನ ಪಂದ್ಯಕ್ಕೂ ಮುನ್ನ ಆರ್​ಸಿಬಿ ಈ ತಪ್ಪುಗಳನ್ನು ಸರಿಪಡಿಸಬೇಕಿದೆ. ಇಲ್ಲವಾದರೆ ಪ್ಲೇ ಆಫ್ ಹಾದಿ ಮತ್ತಷ್ಟು ಕಠಿಣವಾಗಲಿದೆ.

MI vs KKR, IPL 2020 Live Score

ಮೊದಲನೆಯದಾಗಿ ಆರ್​ಸಿಬಿ ಪವರ್ ಹಿಟ್ಟರ್ ಆ್ಯರೋನ್ ಫಿಂಚ್ ಕಳಪೆ ಆಟವನ್ನು ಸಹಿಸುತ್ತಾ ಬರುತ್ತಿದೆ. ಇದರಲ್ಲಿ ಬದಲಾವಣೆ ಅಗತ್ಯವಿದೆ. ಆಡಿರುವ 8 ಪಂದ್ಯಗಳಲ್ಲಿ ಫಿಂಚ್ ಒಂದು ಅರ್ಧಶತಕ ಬಾರಿಸಿ 191 ರನ್ ಬಾರಿಸಿದ್ದಾರಷ್ಟೆ. ಹೀಗಾಗಿ ದೇವದತ್ ಪಡಿಕ್ಕಲ್ ಜೊತೆ ಸೂಕ್ತ ಆಟಗಾರನನ್ನು ಕಣಕ್ಕಿಳಿಸಬೇಕಿದೆ.

ಇನ್ನೂ ಆರ್​ಸಿಬಿಯ ಪ್ರಮುಖ ಬ್ಯಾಟ್ಸ್​ಮನ್​ ಎಬಿ ಡಿವಿಲಿಯರ್ಸ್​ ಅವರಿಗೆ ಸೂಕ್ತ ಬ್ಯಾಟಿಂಗ್ ಆರ್ಡನ್ ನೀಡುವ ಅಗತ್ಯವಿದೆ. ಹೌದು, ಒಂದೊಂದು ಪಂದ್ಯದಲ್ಲಿ ಒಂದೊಂದು ಕ್ರಮಾಂಕದಲ್ಲಿ ಎಬಿಡಿ ಕಣಕ್ಕಿಳಿಯುತ್ತಿದ್ದಾರೆ. ಅದರಲ್ಲೂ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಎಬಿಡಿ ಬ್ಯಾಟಿಂಗ್ ಕ್ರಮಾಂಕ ಸಾಕಷ್ಟು ಚರ್ಚೆಗೆ ಎಡೆಮಾಡಿಕೊಟ್ಟಿದೆ. ಅನೇಕ ಕ್ರಿಕೆಟ್ ಪಂಡಿತರೇ ಆರ್​ಸಿಬಿ ಬ್ಯಾಟಿಂಗ್ ಆರ್ಡರ್ ಬಗ್ಗೆ ಪ್ರಶ್ನೆ ಎತ್ತಿದ್ದಾರೆ. ಈ ಬಗ್ಗೆ ಆರ್​ಸಿಬಿ ಒಂದು ಮಹತ್ವದ ತೀರ್ಮಾನ ಕೈಗೊಳ್ಳುವುದು ಅನಿವಾರ್ಯವಾಗಿದೆ.

ಮೂರನೇಯದಾಗಿ ವಾಷಿಂಗ್ಟನ್ ಸುಂದರ್ ಯಾವಾಗ ಬೌಲಿಂಗ್ ಮಾಡಬೇಕು ಎಂಬುದು. ಈ ಬಾರಿಯ ಐಪಿಎಲ್​ನಲ್ಲಿ ಆರ್​ಸಿಬಿ ತಂಡದ ಪರ ಸುಂದರ್ ವಿಕೆಟ್ ಪಡೆದಿಲ್ಲವಾದರೂ ಇವರ ಬೌಲಿಂಗ್​ಗೆ ಎಲ್ಲರೂ ಶಹಭಾಷ್ ಎಂದಿದ್ದಾರೆ. ಪವರ್ ಪ್ಲೇ ಓವರ್​ನಲ್ಲಿ ಎದುರಾಳಿಗರನ್ನು ಕಟ್ಟಿಹಾಕಲು ಸುಂದರ್ ಪ್ರಮುಖ ಅಸ್ತ್ರವಾಗಿದ್ದಾರೆ. ಆದರೆ, ಕಳೆದ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಇವರು ಪವರ್ ಪ್ಲೇ ಓವರ್​​ನಲ್ಲಿ ಒಂದೇ ಒಂದು ಓವರ್ ಬೌಲಿಂಗ್ ಮಾಡಲಿಲ್ಲ. ಇದು ಎಲ್ಲರ ಆಘಾತಕ್ಕೆ ಕಾರಣವಾಗಿತ್ತು.

AB de Villiers: ಕೊಹ್ಲಿ, ಕೇನ್, ಸ್ಮಿತ್​ಗಿಂತ ಎಬಿಡಿ ಉತ್ತಮ ಬ್ಯಾಟ್ಸ್​ಮನ್..!ಹೀಗೆ ಆರ್​ಸಿಬಿ ತಂಡ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದೆ ಎಂಬೊತ್ತಿಗೆ ಹೊಸ ಪ್ರಯೋಗದಂತೆ ಈರೀತಿ ತಪ್ಪುಗಳನ್ನು ಮಾಡುತ್ತಿದೆ. ಇದು ತಂಡದ ಹಿನ್ನಡೆಗೆ ಕಾರಣವಾಗಿದೆ. ಕೊಹ್ಲಿ ಪಡೆ ತನ್ನ ಮುಂದಿನ ಪಂದ್ಯವನ್ನು ಶನಿವಾರ ರಾಜಸ್ಥಾನ್ ರಾಯಲ್ಸ್ ವಿರುದ್ಧ ಆಡಲಿದೆ. ಇದರಲ್ಲಿ ತನ್ನ ಹಿಂದಿನ ತಪ್ಪುಗಳನ್ನು ಸರಿಪಡಿಸಿ ಗೆಲುವಿನ ಲಯಕ್ಕೆ ಮರಳಬೇಕಿದೆ.
Published by: Vinay Bhat
First published: October 16, 2020, 8:35 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories