ಅಬುಧಾಬಿ (ನ. 08) 13ನೇ ಆವೃತ್ತಿಯ ಐಪಿಎಲ್ನಲ್ಲಿಂದು ಮಹತ್ವದ ಪಂದ್ಯ ನಡೆಯಲಿದ್ದು, ಶ್ರೇಯಸ್ ಅಯ್ಯರ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಡೇವಿಡ್ ವಾರ್ನರ್ ನೇತೃತ್ವದ ಸನ್ರೈಸರ್ಸ್ ಹೈದರಾಬಾದ್ ತಂಡಗಳು 2ನೇ ಕ್ವಾಮಿಫೈಯರ್ನಲ್ಲಿ ಮುಖಾಮುಖಿ ಆಗುತ್ತಿದೆ. ಈ ಪಂದ್ಯದಲ್ಲಿ ಗೆದ್ದ ತಂಡ ಫೈನಲ್ಗೇರಲಿದ್ದು ಮುಂಬೈ ಇಂಡಿಯನ್ಸ್ ವಿರುದ್ಧ ಪ್ರಶಸ್ತಿಗೆ ಮುತ್ತಿಕ್ಕಲು ಅಂತಿಮ ಹೋರಾಟ ನಡೆಸಲಿದೆ. ಇಲ್ಲಿನ ಶೇಕ್ ಝಯೇದ್ ಕ್ರೀಡಾಂಗಣ ಈ ಹೈವೋಲ್ಟೇಜ್ ಪಂದ್ಯಕ್ಕೆ ಸಾಕ್ಷಿಯಾಗಲಿದೆ.
ಕಳೆದ ಕೆಲವು ಪಂದ್ಯಗಳಿಂದ ಸೋಲನ್ನೇ ಕಾಣುತ್ತಿರುವ ಡೆಲ್ಲಿ ತಂಡದಲ್ಲಿ ಬ್ಯಾಟ್ಸ್ಮನ್ಗಳ ವೈಫಲ್ಯ ಎದ್ದು ಕಾಣುತ್ತಿದೆ. ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಹೀನಾಯ ಸೋಲು ಕಂಡ ಬಳಿಕ ದುರ್ಬಲ ತಂಡವಾಗಿ ಗೋಚರಿಸುತ್ತಿದೆ. ಶಿಖರ್ ಧವನ್, ಪೃಥ್ವಿ ಶಾ, ರಿಷಭ್ ಪಂತ್, ಶ್ರೇಯಸ್ ಅಯ್ಯರ್, ಅಜಿಂಕ್ಯಾ ರಹಾನೆ ಹೀಗೆ ಟಾಪ್ ಕ್ಲಾಸ್ ಅನುಭವಿ ಆಟಗಾರರಿದ್ದರೂ ದೊಡ್ಡ ಮೊತ್ತ ಕಲೆಹಾಕುವಲ್ಲಿ ಡೆಲ್ಲಿ ವಿಫಲವಾಗಿದೆ.
SRH vs RCB: ಇವತ್ತು ಇವನ ಆಟ ನಡೆಯಲ್ಲ: ಕಿರಿಕ್ ಮಾತಾಡಿದ ಕೊಹ್ಲಿಗೆ ಪಾಂಡೆ ಕೊಟ್ಟ ರಿಪ್ಲೈ ನೀವೇ ನೋಡಿ!
ಐಪಿಎಲ್ ಇತಿಹಾಸದಲ್ಲಿ ಚೊಚ್ಚಲ ಬಾರಿಗೆ ಫೈನಲ್ ಏರುವ ತವಕದಲ್ಲಿರುವ ಡೆಲ್ಲಿಗೆ ಈ ಪಂದ್ಯ ಬಹುಮುಖ್ಯವಾಗಿದ್ದು ತಪ್ಪುಗಳನ್ನು ಸರಿಪಡಿಸಿ ಕಣಕ್ಕಿಳಿಯಬೇಕಿದೆ. ಓಪನರ್ ಆಗಿ ಧವನ್ ಜೊತೆ ಮಾರ್ಕಸ್ ಸ್ಟಾಯಿನಿಸ್ ಕಣಕ್ಕಿಳಿಯುವ ಅಂದಾಜಿದೆ. ಜೊತೆಗೆ ಬ್ಯಾಟಿಂಗ್ ಬಲ ಹೆಚ್ಚಿಸಲು ಶಿಮ್ರೋನ್ ಹೆಟ್ಮೇರ್ ಆಡಬಹುದು. ಬೌಲಿಂಗ್ ವಿಭಾಗದಲ್ಲಿ ಬದಲಾವಣೆ ಅನುಮಾನ.
ಇತ್ತ ಪ್ರಚಂಡ ಫಾರ್ಮ್ನಲ್ಲಿರುವ ಎಸ್ಆರ್ಹೆಚ್ ಕೊನೆಯ 6 ಪಂದ್ಯಗಳಲ್ಲಿ 5ರಲ್ಲಿ ಗೆದ್ದು ಬೀಗಿದೆ. ಲೀಗ್ ಹಂತದ ಎರಡೂ ಮುಖಾಮುಖಿಗಳಲ್ಲಿ ಅಯ್ಯರ್ ವಿರುದ್ಧ ವಾರ್ನರ್ ಬಳಗ ಜಯ ಸಾಧಿಸಿದೆ. ಇಂದಿನ ಪಂದ್ಯದಲ್ಲೂ ಗೆದ್ದು 2016ರ ಬಳಿಕ ಮತ್ತೊಮ್ಮೆ ಫೈನಲ್ಗೇರುವ ತವಕದಲ್ಲಿದೆ.
ಇಂಜುರಿಗೆ ತುತ್ತಾಗಿರುವ ವೃದ್ದಿಮಾನ್ ಸಾಹ ಇಂದಿನ ಪಂದ್ಯದಲ್ಲಿ ಕಣಕ್ಕಿಳಿಯುವ ಬಗ್ಗೆ ಮಾಹಿತಿಯಿಲ್ಲ. ಆದರೆ, ಇವರು ಆಡಿದರೆ ತಂಡದ ಬ್ಯಾಟಿಂಗ್ ಬಲ ಮತ್ತಷ್ಟು ಹೆಚ್ಚಿಸಲಿದೆ. ನಾಯಕ ಡೇವಿಡ್ ವಾರ್ನರ್, ಮನೀಶ್ ಪಾಂಡೆ ಉತ್ತಮ ಲಯದಲ್ಲಿದ್ದಾರೆ. ಕೇನ್ ವಿಲಿಯಮ್ಸನ್ ಕೂಡ ಫಾರ್ಮ್ಗೆ ಬಂದಿದ್ದು ಕಳೆದ ಆರ್ಸಿಬಿ ವಿರುದ್ಧ ತಂಡಕ್ಕೆ ಜಯ ತಂದುಕೊಟ್ಟಿದ್ದರು.
ವಿರಾಟ್ ಕೊಹ್ಲಿ ತಪ್ಪನ್ನು ಬೇರೆಯವರ ಮೇಲೆ ಹೊರಿಸುವುದನ್ನು ಬಿಟ್ಟು ಸೋಲಿನ ಹೊಣೆ ಹೊತ್ತುಕೊಳ್ಳಲಿ ಎಂದ ಸ್ಟಾರ್ ಕ್ರಿಕೆಟಿಗ
ಅಂತಿಮ ಹಂತದಲ್ಲಿ ಜೇಸನ್ ಹೋಲ್ಡರ್ ಆಲ್ರೌಂಡರ್ ಪ್ರದರ್ಶನ ತಂಡಕ್ಕೆ ನೆರವಾಗುತ್ತಿದೆ. ಟಿ. ನಟರಾಜನ್ ಯಾರ್ಕರ್ ಮೂಲಕ ಬೆಂಕಿಯ ಚೆಂಡು ಎಸೆಯುತ್ತಿದ್ದಾರೆ. ರಶೀದ್ ಖಾನ್ ಅಂತೂ ತನ್ನ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವವಹಿಸುತ್ತಿದ್ದಾರೆ. ಹೀಗಾಗಿ ಮೇಲ್ನೋಟಕ್ಕೆ ಹೈದರಾಬಾದ್ ತಂಡ ಡೆಲ್ಲಿಗಿಂತ ಬಲಿಷ್ಠವಾಗಿ ಗೋಚರಿಸುತ್ತಿದೆ.
ಉಭಯ ತಂಡಗಳು ಈವರೆಗೆ ಐಪಿಎಲ್ನಲ್ಲಿ 17 ಪಂದ್ಯಗಳಲ್ಲಿ ಮುಖಾಮುಖಿ ಆಗಿದೆ. ಇದರಲ್ಲಿ ಸನ್ರೈಸರ್ಸ್ ಹೈದರಾಬಾದ್ 11 ಹಾಗೂ ಡೆಲ್ಲಿ ಕ್ಯಾಪಿಟಲ್ಸ್ 6 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ