IPL 2020 Prize Money: ಚಾಂಪಿಯನ್ ಮುಂಬೈಗೆ, ರನ್ನರ್ ಅಪ್ ಡೆಲ್ಲಿಗೆ ಸಿಕ್ಕ ಒಟ್ಟು ಹಣವೆಷ್ಟು ಗೊತ್ತೇ?: ಇಲ್ಲಿದೆ ಮಾಹಿತಿ
ಕೊರೋನಾ ವೈರಸ್ ಕಾರಣ ಬಿಸಿಸಿಐ ಈ ಬಾರಿಯ ಐಪಿಎಲ್ ಪ್ರಶಸ್ತಿ ಹಣವನ್ನು ಖಡಿಮೆ ಮಾಡಲಾಗಿದೆ ಇಂದು ಹೇಳಲಾಗಿತ್ತು. ಆದರೆ, ಇದರಲ್ಲಿ ಯಾವುದೇ ಬದಲಾವಣೆ ಮಾಡದೆ ಪ್ರಶಸ್ತಿ ಗೆದ್ದ ಮುಂಬೈ ಇಂಡಿಯನ್ಸ್ ತಂಡ ಬರೋಬ್ಬರಿ...
news18-kannada Updated:November 11, 2020, 3:18 PM IST

IPL 2020 prize money
- News18 Kannada
- Last Updated: November 11, 2020, 3:18 PM IST
13ನೇ ಆವೃತ್ತಿಯ ಐಪಿಎಲ್ನ 59 ಪಂದ್ಯಗಳ ರೋಚಕ ಕಾದಾಟಕ್ಕೆ ತೆರೆಬಿದ್ದಿದೆ. ಲೀಗ್ ಹಂತದಿಂದ ಪ್ರಶಸ್ತಿ ಸುತ್ತಿನವರೆಗೂ ಬಲಿಷ್ಠ ನಿರ್ವಹಣೆ ಪ್ರದರ್ಶಿಸುತ್ತ ಬಂದ ಮುಂಬೈ ಇಂಡಿಯನ್ಸ್ ತಂಡ ಐಪಿಎಲ್ನಲ್ಲಿ ಸತತ 2ನೇ ಮತ್ತು ಒಟ್ಟಾರೆ 5ನೇ ಬಾರಿಗೆ ಪ್ರಶಸ್ತಿ ಗೆದ್ದು ದಾಖಲೆ ಬರೆದಿದೆ. ಇತ್ತ ಚೊಚ್ಚಲ ಪ್ರಶಸ್ತಿ ಗೆಲ್ಲುವ ಡೆಲ್ಲಿ ಕ್ಯಾಪಿಟಲ್ಸ್ ಕನಸು ಭಗ್ನಗೊಂಡಿದ್ದು ರನ್ನರ್ ಅಪ್ಗೆ ತೃಪ್ತಿಪಡಬೇಕಾಯಿತು. ಭಾರತದಲ್ಲಿ ನಡೆಯಬೇಕಿದ್ದ ಐಪಿಎಲ್ 2020 ಕೊರೋನಾ ವೈರಸ್ ಕಾರಣ ದೂರದ ಯುಎಇನಲ್ಲಿ ಆಯೋಜಿಸಲಾಯಿತು. ಅದರಂತೆ ಕಟ್ಟುನಿಟ್ಟಿನ ಕ್ರಮಕೈಗೊಂಡು ಬಿಸಿಸಿಐ ಇದರಲ್ಲಿ ಯಶಸ್ವಿಯಾಗಿದೆ. ಅನೇಕ ವಿಶೇಷತೆಗಳಿಂದ ಕೂಡಿದ್ದ ಈ ಬಾರಿಯ ಐಪಿಎಲ್ ಊಹಿಸಲಾಗದ ರೀತಿಯಲ್ಲಿ ಅನೇಕ ಘಟನೆಗಳು ಕೂಡ ನಡೆದವು.
Hardik Pandya: ಐಪಿಎಲ್ನಲ್ಲಿ ಗೆದ್ದ ಕಪ್ಅನ್ನು ಮಗನಿಗೆ ಗಿಫ್ಟ್ಆಗಿ ನೀಡೋಕೆ ಮುಂದಾದ್ರು ಹಾರ್ದಿಕ್ ಪಾಂಡ್ಯ! ಐಪಿಎಲ್ ಆರಂಭವಾದಾಗಿನಿಂದ ಬಲಿಷ್ಠ ತಂಡವೆನಿಸಿಕೊಂಡಿದ್ದ ಚೆನ್ನೈ ಸೂಪರ್ ಕಿಂಗ್ಸ್ ಲೀಗ್ ಹಂತದಲ್ಲೆ ಟೂರ್ನಿಯಿಂದ ಹೊರಬಿದ್ದರೆ, ಮುಂಬೈ, ಡೆಲ್ಲಿ, ಆರ್ಸಿಬಿ ಹಾಗೂ ಹೈದರಾಬಾದ್ ಪ್ಲೇ ಆಫ್ ಪ್ರವೇಶ ಪಡೆದಿದ್ದವು. ಮೊದಲ ಕ್ವಾಲಿಫೈಯರ್ನಲ್ಲಿ ಡೆಲ್ಲಿ ವಿರುದ್ಧ ಮುಂಬೈ ಜಯ ಸಾಧಿಸಿ ನೇರವಾಗಿ ಫೈನಲ್ ಟಿಕೇಟ್ ಪಡೆದುಕೊಂಡಿತು. ಎಲಿಮಿನೇಟರ್ ಪಂದ್ಯದಲ್ಲಿ ಆರ್ಸಿಬಿ ವಿರುದ್ಧ ಗೆದ್ದ ಎಸ್ಆರ್ಹೆಚ್, 2ನೇ ಕ್ವಾಲಿಫೈಯರ್ನಲ್ಲಿ ಸೋತ ಪರಿಣಾಮ ಡೆಲ್ಲಿ ಫೈನಲ್ಗೆ ಪ್ರವೇಶ ಪಡೆಯಿತು.
ಅಂತಿಮ ಫೈನಲ್ ಹಣಾಹಣಿಯಲ್ಲಿ ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್, ನಾಯಕ ಶ್ರೇಯಸ್ ಅಯ್ಯರ್ (ಅಜೇಯ 65) ಹಾಗೂ ರಿಷಭ್ ಪಂತ್ (56) ಅವರ ಉತ್ತಮ ಜೊತೆಯಾಟದ ನೆರವಿನಿಂದ 20 ಓವರ್ಗಳಲ್ಲಿ 156 ರನ್ ಗಳಿಸಿತು.
ಸಾಧಾರಣ ಟಾರ್ಗೆಟ್ ಬೆನ್ನಟ್ಟಿದ ಮುಂಬೈ, ನಾಯಕ ರೋಹಿತ್ ಶರ್ಮಾ ಅವರ 68 ಹಾಗೂ ಇಶಾನ್ ಕಿಶನ್ ಅವರ ಅಜೇಯ 33 ರನ್ಗಳ ನೆರವಿನಿಂದ 18.4 ಓವರ್ನಲ್ಲೇ ಗೆಲುವಿನ ನಗೆ ಬೀರಿತು. ಈ ಮೂಲಕ ಐಪಿಎಲ್ ಇತಿಹಾಸದಲ್ಲಿ 5ನೇ ಬಾರಿಗೆ ಟ್ರೋಫಿ ಗೆಲ್ಲುವ ಮೂಲಕ ಈವರೆಗೆ ಯಾರೂ ಮಾಡಿರದ ಸಾಧನೆ ಮಾಡಿತು. ಜೊತೆಗೆ ಸತತ ಎರಡನೇ ಬಾರಿ ಕಪ್ ಗೆದ್ದ ಎರಡನೇ ತಂಡವಾಗಿದೆ. ಇದಕ್ಕೂ ಮುನ್ನ ಚೆನ್ನೈ ಸೂಪರ್ ಕಿಂಗ್ಸ್ 2010 ಹಾಗೂ 2011 ರಲ್ಲಿ ಸತತವಾಗಿ ಪ್ರಶಸ್ತಿ ಗೆದ್ದಿತ್ತು.
Suryakumar Yadav: ನಾಯಕ ರೋಹಿತ್ಗಾಗಿ ತನ್ನ ವಿಕೆಟ್ಅನ್ನೇ ತ್ಯಾಗ ಮಾಡಿದ ಸೂರ್ಯಕುಮಾರ್ ಯಾದವ್
ಕೊರೋನಾ ವೈರಸ್ ಕಾರಣ ಬಿಸಿಸಿಐ ಈ ಬಾರಿಯ ಐಪಿಎಲ್ ಪ್ರಶಸ್ತಿ ಹಣವನ್ನು ಖಡಿಮೆ ಮಾಡಲಾಗಿದೆ ಇಂದು ಹೇಳಲಾಗಿತ್ತು. ಆದರೆ, ಇದರಲ್ಲಿ ಯಾವುದೇ ಬದಲಾವಣೆ ಮಾಡದೆ ಪ್ರಶಸ್ತಿ ಗೆದ್ದ ಮುಂಬೈ ಇಂಡಿಯನ್ಸ್ ತಂಡ ಬರೋಬ್ಬರಿ 20 ಕೋಟಿ ರೂ. ಪಡೆದುಕೊಂಡಿದೆ. ರನ್ನರ್ ಅಪ್ ಆಗಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡ 12.5 ಕೋಟಿ ರೂ. ನಗದು ಬಹುಮಾನ ಪಡೆದಿದೆ.ಇನ್ನೂ ಎರನಡೇ ಕ್ವಾಲಿಫೈಯರ್ನಲ್ಲಿ ಸೋತ ಹೈದರಾಬಾದ್ ಹಾಗೂ ಎಲಿಮಿನೇಟರ್ ಪಂದ್ಯದಲ್ಲಿ ಸೋತ ಆರ್ಸಿಬಿ ತಂಡ ಸಮಾನವಾಗಿ 8.75 ಕೋಟಿ ಹಣ ಪಡೆದುಕೊಂಡಿದೆ.
Hardik Pandya: ಐಪಿಎಲ್ನಲ್ಲಿ ಗೆದ್ದ ಕಪ್ಅನ್ನು ಮಗನಿಗೆ ಗಿಫ್ಟ್ಆಗಿ ನೀಡೋಕೆ ಮುಂದಾದ್ರು ಹಾರ್ದಿಕ್ ಪಾಂಡ್ಯ!