IPL

  • associate partner
HOME » NEWS » Ipl » IPL 2020 PREITY ZINTAS STATUTORY WARNING TWEET AFTER KXIP ZP

IPL 2020: ಎಚ್ಚರಿಕೆ: ದುರ್ಬಲ ಹೃದಯದವರು ಕಿಂಗ್ಸ್ ಇಲೆವೆನ್ ಪಂಜಾಬ್ ಮ್ಯಾಚ್ ನೋಡ್ಬೇಡಿ..!

ಅಂತಿಮ ಓವರ್​ನಲ್ಲಿ ಕೇವಲ 2 ರನ್​ಗಳಷ್ಟೇ ಬೇಕಿದ್ದರೂ, ಕಿಂಗ್ಸ್ ಇಲೆವೆನ್ ಪಂಜಾಬ್ ಬ್ಯಾಟ್ಸ್​ಮನ್​ಗಳು ಪಂದ್ಯವನ್ನು ಕೊನೆಯ ಎಸೆತದವರೆಗೂ ಕೊಂಡೊಯ್ದು ಎಲ್ಲರ ಹೃದಯ ಬಡಿತ ಹೆಚ್ಚಿಸಿದ್ದರು.

news18-kannada
Updated:October 16, 2020, 9:56 PM IST
IPL 2020: ಎಚ್ಚರಿಕೆ: ದುರ್ಬಲ ಹೃದಯದವರು ಕಿಂಗ್ಸ್ ಇಲೆವೆನ್ ಪಂಜಾಬ್ ಮ್ಯಾಚ್ ನೋಡ್ಬೇಡಿ..!
KL Rahul- Preity Zinta
  • Share this:
ಇಂಡಿಯನ್ ಪ್ರೀಮಿಯರ್ ಲೀಗ್ 13ನೇ ಆವೃತ್ತಿಯ ನತದೃಷ್ಟ ತಂಡವೆಂದೇ ಗುರುತಿಸಿಕೊಂಡಿರುವ ಕಿಂಗ್ಸ್ ಪಂಜಾಬ್ ಸದ್ಯ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಭರ್ಜರಿ ಪ್ರದರ್ಶನ ಹೊರತಾಗಿಯೂ ರಾಹುಲ್ ಪಂದ್ಯವನ್ನು ಗೆಲ್ಲುವಲ್ಲಿ ಎಡವುತ್ತಿದೆ. ಇದರ ಹೊರತಾಗಿ ಟೂರ್ನಿಯಲ್ಲಿ ಪಂಜಾಬ್ ಗೆದ್ದಿರುವುದು 2 ಪಂದ್ಯಗಳನ್ನು ಮಾತ್ರ. ಅದು ಕೂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಎಂಬುದು ವಿಶೇಷ. ಆದರೆ ಆರ್​ಸಿಬಿ ವಿರುದ್ಧದ ಮೊದಲ ಪಂದ್ಯದಲ್ಲಿ 97 ರನ್​ಗಳಿಂದ ಭರ್ಜರಿ ಜಯ ಸಾಧಿಸಿದ್ದ ಕಿಂಗ್ಸ್ ಇಲೆವೆನ್, 2ನೇ ಪಂದ್ಯದಲ್ಲಿ ಕೊನೆಯ ಎಸೆತದಲ್ಲಿ ರೋಚಕ ಜಯ ಸಾಧಿಸಿ ನಿಟ್ಟುಸಿರು ಬಿಟ್ಟಿತು.

ಅಂತಿಮ ಓವರ್​ನಲ್ಲಿ ಕೇವಲ 2 ರನ್​ಗಳಷ್ಟೇ ಬೇಕಿದ್ದರೂ, ಕಿಂಗ್ಸ್ ಇಲೆವೆನ್ ಪಂಜಾಬ್ ಬ್ಯಾಟ್ಸ್​ಮನ್​ಗಳು ಪಂದ್ಯವನ್ನು ಕೊನೆಯ ಎಸೆತದವರೆಗೂ ಕೊಂಡೊಯ್ದು ಎಲ್ಲರ ಹೃದಯ ಬಡಿತ ಹೆಚ್ಚಿಸಿದ್ದರು. ಆದರೆ ಕೊನೆಯ ಎಸೆತದಲ್ಲಿ ನಿಕೋಲಸ್ ಪೂರನ್ ಸಿಕ್ಸ್ ಸಿಡಿಸಿ ಪಂದ್ಯ ಗೆಲ್ಲಿಸಿದರೂ, ಅತ್ತ ನಾನ್​ ಸ್ಟ್ರೈಕ್​ನಲ್ಲಿದ್ದ ನಾಯಕ ಕೆಎಲ್ ರಾಹುಲ್ ಚಿಂತೆಯಲ್ಲಿ ಕುಸಿದು ಕೂತಿದ್ದರು. ಏಕೆಂದರೆ ಆ ಸಿಕ್ಸ್ ಕೆಲವೇ ಅಂತರದಲ್ಲಿ ಬೌಂಡರಿ ಲೈನ್ ದಾಟಿತ್ತು. ಒಂದು ವೇಳೆ ಅದು ಕ್ಯಾಚ್ ಆಗಿದಿದ್ರೆ ಮತ್ತೆ ಸೂಪರ್ ಓವರ್ ಆಡಬೇಕಿತ್ತು.

ಇದಕ್ಕೂ ಮುನ್ನ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲೂ ಕೊನೆಯ ಎಸೆತದಲ್ಲಿ ಕ್ಯಾಚ್ ನೀಡಿ ಕಿಂಗ್ಸ್ ಇಲೆವೆನ್ ಸೋಲನ್ನು ಮೈ ಮೇಲೆ ಎಳೆದುಕೊಂಡಿತ್ತು. ಹಾಗೆಯೇ ಕೆಕೆಆರ್ ವಿರುದ್ಧ ಸುಲಭವಾಗಿ ಗೆಲ್ಲಬಹುದಾಗಿದ್ದ ಪಂದ್ಯದಲ್ಲಿ ಎಡವಿ 2 ರನ್​ಗಳಿಂದ ಸೋತಿತ್ತು. ರಾಜಸ್ಥಾನ್ ರಾಯಲ್ಸ್ ವಿರುದ್ದ 223 ಬಾರಿಸಿದ್ರೂ ಅಂತಿಮ ಮೂರು ಓವರ್​ನಲ್ಲಿ 50 ಕ್ಕೂ ಅಧಿಕ ರನ್ ಬಿಟ್ಟು ಕೊಟ್ಟು ಸೋಲಿಗೆ ಶರಣಾಗಿತ್ತು. ಹೀಗೆ ಗೆಲ್ಲಬಹುದಾಗಿದ್ದ ಪಂದ್ಯಗಳನ್ನು ಕಿಂಗ್ಸ್ ಇಲೆವೆನ್ ಪಂಜಾಬ್ ಸೋತಿದೆ. ಅದು ಕೂಡ ರೋಚಕ ಹಣಾಹಣಿಯಲ್ಲಿ ಎಂಬುದು ವಿಶೇಷ.

ಗುರುವಾರ ಬೆಂಗಳೂರು ವಿರುದ್ಧ ಕೂಡ ಅಂತಿಮ ಎಸೆತದವರೆಗೂ ಕಿಂಗ್ಸ್ ಇಲೆವೆನ್ ಗೆಲ್ಲಲಿದೆ ಎಂದು ಯಾರೂ ಭಾವಿಸಿರಲ್ಲ. ತಂಡದ ಮಾಲೀಕರಲ್ಲಿ ಒಬ್ಬರಾಗಿರು ನಟಿ ಪ್ರೀತಿ ಝಿಂಟಾ ಕೂಟ ಆತಂಕದಿಂದಲೇ ಕೊನೆಯ ಎಸೆತದವರೆಗೂ ಉಸಿರು ಬಿಗಿ ಹಿಡಿದಿದ್ದರು. ಗೆಲುವಿನ ಬಳಿಕ ಕೊನೆಗೂ ನಮ್ಮ ತಂಡಕ್ಕೆ ಅಗತ್ಯವಿದ್ದ ಗೆಲುವು ದೊರೆತಿದೆ ಎಂದು ಪ್ರೀತಿ ಝಿಂಟಾ ತಿಳಿಸಿದ್ದಾರೆ.

ಅಲ್ಲದೆ ಕ್ರಿಕೆಟ್ ಹೆಸರಿನಲ್ಲಿ ನಮ್ಮ ತಂಡ ಜನರಿಗೆ ಹೃದಯಾಘಾತ ಉಂಟು ಮಾಡದಿರಲಿ ಎಂದು ಬಯಸುತ್ತೇನೆ. ದಯವಿಟ್ಟು ದುರ್ಬಲ ಹೃದಯದವರು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಪಂದ್ಯಗಳನ್ನು ನೋಡಬೇಡಿ ಎಂದು ಎಚ್ಚರಿಸುತ್ತಿದ್ದೀನಿ. ಅಂತಿಮ ಹಂತದಲ್ಲಿ ಆರ್‌ಸಿಬಿ ತಂಡದ ಬೌಲರ್‌ಗಳು ತೋರಿದ ಹೋರಾಟವನ್ನು ನಿಜಕ್ಕೂ ಮೆಚ್ಚುತ್ತೇನೆ ಎಂದು ಪ್ರೀತಿ ಝಿಂಟಾ ತಿಳಿಸಿದ್ದಾರೆ.
POINTS TABLE:

SCHEDULE TIME TABLE: ORANGE CAP:

PURPLE CAP:

RESULT DATA:

MOST SIXES:

ಇದನ್ನೂ ಓದಿ:   IPL 2020: ರಾಹುಲ್ ಸಲಹೆಗೆ ಕೊಹ್ಲಿಯ ಕೌಂಟರ್..!
Published by: zahir
First published: October 16, 2020, 9:56 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories