• Home
 • »
 • News
 • »
 • ipl
 • »
 • ರಾಜಸ್ಥಾನ್ ರಾಯಲ್ಸ್​ ಭರ್ಜರಿ ಗೆಲುವು ​; ಅಧಿಕೃತವಾಗಿ ಐಪಿಎಲ್​ನಿಂದ ಹೊರಬಿದ್ದ ಚೆನ್ನೈ ಸೂಪರ್​ ಕಿಂಗ್ಸ್​

ರಾಜಸ್ಥಾನ್ ರಾಯಲ್ಸ್​ ಭರ್ಜರಿ ಗೆಲುವು ​; ಅಧಿಕೃತವಾಗಿ ಐಪಿಎಲ್​ನಿಂದ ಹೊರಬಿದ್ದ ಚೆನ್ನೈ ಸೂಪರ್​ ಕಿಂಗ್ಸ್​

MS Dhoni

MS Dhoni

ಆರನೇ ಸ್ಥಾನದಲ್ಲಿ ರಾಜಸ್ಥಾನ್​​​​, ಏಳನೇ ಸ್ಥಾನದಲ್ಲಿ ಹೈದರಾಬಾದ್​​ ಹಾಗೂ ಕೊನೆಯ ಸ್ಥಾನದಲ್ಲಿ ಚೆನ್ನೈ ಇದೆ. ರಾಜಸ್ಥಾನ ಗೆಲುವಿನ ನಂತರದಲ್ಲಿ ಚೆನ್ನೈ ತಂಡ ಅಧಿಕೃತವಾಗಿ ಈ ಬಾರಿಯ ಐಪಿಎಲ್​ನಿಂದ ಹೊರ ಬಿದ್ದಿದೆ. 

 • Share this:

  ನಿನ್ನೆ ನಡೆದ ಎರಡು ಪಂದ್ಯಗಳಲ್ಲಿ ಅಂಕಪಟ್ಟಿಯಲ್ಲಿ ಕೆಳಗಿನ ಸ್ಥಾನದಲ್ಲಿರುವ ಚೆನ್ನೈ ಸೂಪರ್​ ಕಿಂಗ್ಸ್​ ಹಾಗೂ ರಾಜಸ್ಥಾನ್​ ರಾಯಲ್ಸ್​ ಗೆದ್ದು ಬೀಗಿತ್ತು. ಹೀಗಾಗಿ ಅಂಕಪಟ್ಟಿಯಲ್ಲಿ ಅಲ್ಪ ಬದಲಾವಣೆ ಕಂಡಿದೆ. ಮುಂಬೈ ಅಗ್ರಸ್ಥಾನದಲ್ಲೇ ಮುಂದುವರಿದರೆ, ಚೆನ್ನೈ ಸೂಪರ್​ ಕಿಂಗ್ಸ್​ ಕೊನೆಯ ಸ್ಥಾನದಲ್ಲೇ ಉಳಿದುಕೊಂಡಿದೆ. ಈ ಮೂಲಕ ಈ ಬಾರಿಯ ಐಪಿಎಲ್​ನಿಂದ ಹೊರ ಬಿದ್ದಿದೆ.  ಪ್ರತಿ ವರ್ಷ ಭಾರತದಲ್ಲಿ ಐಪಿಎಲ್​ ನಡೆಯುತ್ತಿತ್ತು. ಆದರೆ, ಈ ಬಾರಿ ಐಪಿಎಲ್​ ಯುಎಇಗೆ ಶಿಫ್ಟ್​ ಆಗಿದೆ. ಸೆಪ್ಟೆಂಬರ್ 19ರಿಂದ ಹೊಡಿಬಡಿ ಆಟ ಅಭಿಮಾನಿಗಳನ್ನು ರಂಜಿಸುತ್ತಿದೆ.


  ಮುಂಬೈ ಇಂಡಿಯನ್ಸ್​ ಆಡಿದ 11 ಪಂದ್ಯಗಳಲ್ಲಿ ಏಳರಲ್ಲಿ ಗೆದ್ದು ನಾಲ್ಕರಲ್ಲಿ ಸೋತಿದೆ. ಈ ಮೂಲಕ 14 ಅಂಕ ಪಡೆದು ಅಂಕಪಟ್ಟಿಯಲ್ಲಿ ಮೊದಲಿದೆ. ಡೆಲ್ಲಿ 14 ಅಂಕ ಪಡೆದು ಎರಡನೇ ಸ್ಥಾನದಲ್ಲಿದೆ. ಆರ್​ಸಿಬಿ ಆಡಿದ 11 ಪಂದ್ಯಗಳಲ್ಲಿ ಏಳರಲ್ಲಿ ಗೆಲುವು ನಾಲ್ಕರಲ್ಲಿ ಸೋಲು ಕಂಡು ಮೂರನೇ ಸ್ಥಾನದಲ್ಲಿದೆ. ಈ ಮೂರು ಟೀಂಗಳು ಪ್ಲೇ ಆಫ್​ಗೆ ಏರುವುದು ಬಹುತೇಕ ಖಚಿತವಾಗಿದೆ.


  ಕೋಲ್ಕತ್ತಾ 11  ಪಂದ್ಯಗಳಲ್ಲಿ 6ರಲ್ಲಿ ಗೆದ್ದು ಐದರಲ್ಲಿ ಸೋತು ನಾಲ್ಕನೇ ಸ್ಥಾನದಲ್ಲಿದೆ. ಐದನೇ ಸ್ಥಾನದಲ್ಲಿ ಪಂಜಾಬ್​ ಇದೆ. ಆರನೇ ಸ್ಥಾನದಲ್ಲಿ ರಾಜಸ್ಥಾನ್​​​​, ಏಳನೇ ಸ್ಥಾನದಲ್ಲಿ ಹೈದರಾಬಾದ್​​ ಹಾಗೂ ಕೊನೆಯ ಸ್ಥಾನದಲ್ಲಿ ಚೆನ್ನೈ ಇದೆ. ರಾಜಸ್ಥಾನ ಗೆಲುವಿನ ನಂತರದಲ್ಲಿ ಚೆನ್ನೈ ತಂಡ ಅಧಿಕೃತವಾಗಿ ಈ ಬಾರಿಯ ಐಪಿಎಲ್​ನಿಂದ ಹೊರ ಬಿದ್ದಿದೆ.


  POINTS TABLE:

  ಅತಿ ಹೆಚ್ಚು ರನ್​ ಹೊಡೆದವರಿಗೆ ನೀಡುವ ಆರೆಂಜ್​ ಕ್ಯಾಪ್​ ಕಿಂಗ್ಸ್​ ಇಲವೆನ್​ ಪಂಜಾಬ್​ ತಂಡದ ನಾಯಕ ಕೆಎಲ್​ ರಾಹುಲ್​ ಬಳಿ ಇದೆ. 11 ಪಂದ್ಯಗಳಿಂದ ಅವರು 567 ರನ್​ ಕಲೆ ಹಾಕಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್​ ಬೌಲರ್​ ರಬಾಡ 23 ವಿಕೆಟ್​ ತೆಗೆಯುವ ಮೂಲಕ ಈ ಮೂಲಕ ಪರ್ಪಲ್​​ ಕ್ಯಾಪ್ ಹಾಕಿಕೊಂಡಿದ್ದಾರೆ.

  Published by:Rajesh Duggumane
  First published: