IPL

  • associate partner

IPL Points Table: ಪ್ಲೇಆಫ್​ಗೆ ಏರಲು ನಾಲ್ಕು ತಂಡಗಳ ನಡುವೆ ಪೈಪೋಟಿ; ಅಂಕಪಟ್ಟಿಯಲ್ಲಿ ಯಾರಿಗೆ ಯಾವ ಸ್ಥಾನ?

ನಿನ್ನೆಯ ಪಂದ್ಯದಲ್ಲಿ ಸೋಲು ಕಂಡರೂ ಕಿಂಗ್ಸ್​ ಇಲವೆನ್​ ಪಂಜಾಬ್​ ನಾಲ್ಕನೇ ಸ್ಥಾನದಲ್ಲೇ ಇದೆ. ಐದನೇ ಸ್ಥಾನದಲ್ಲಿ ರಾಜಸ್ಥಾನ ಹಾಗೂ ಆರನೇ ಸ್ಥಾನದಲ್ಲಿ ಕೋಲ್ಕತ್ತಾ ನೈಟ್​ ರೈಡರ್ಸ್​ ಇದೆ.

news18-kannada
Updated:October 31, 2020, 9:17 AM IST
IPL Points Table: ಪ್ಲೇಆಫ್​ಗೆ ಏರಲು ನಾಲ್ಕು ತಂಡಗಳ ನಡುವೆ ಪೈಪೋಟಿ; ಅಂಕಪಟ್ಟಿಯಲ್ಲಿ ಯಾರಿಗೆ ಯಾವ ಸ್ಥಾನ?
ದುಬೂ ಸ್ಟೇಡಿಯಂ
  • Share this:
ಅಬುಧಾಬಿಯ ಶೇಖ್ ಝಾಯೆದ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಐಪಿಎಲ್​ನ 50ನೇ ಪಂದ್ಯದಲ್ಲಿ ಕಿಂಗ್ಸ್​ ಇಲೆವೆನ್ ಪಂಜಾಬ್ ವಿರುದ್ಧ ರಾಜಸ್ಥಾನ್ ರಾಯಲ್ಸ್​ 7 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಪ್ಲೇ ಆಫ್​ಗೇರುವ ಆಸೆಯನ್ನು ಜೀವಂತವಿರಿಸಿಕೊಂಡಿದೆ. ಅಲ್ಲದೆ, ಪ್ಲೇಆಫ್​ಗೆ ಏರಲು ನಾಲ್ಕು ತಂಡಗಳ ನಡುವೆ ಭರ್ಜರಿ ಹಣಾಹಣಿ ಏರುವ ಲಕ್ಷಣ ಗೋಚರವಾಗಿದೆ. 

ಮುಂಬೈ ಇಂಡಿಯನ್ಸ್​ ಆಡಿದ 12 ಪಂದ್ಯಗಳಲ್ಲಿ ಎಂಟರಲ್ಲಿ ಗೆದ್ದು ನಾಲ್ಕರಲ್ಲಿ ಸೋತಿದೆ. ಈ ಮೂಲಕ 16 ಅಂಕ ಪಡೆದು ಅಂಕಪಟ್ಟಿಯಲ್ಲಿ ಮೊದಲಿದೆ. ಆರ್​ಸಿಬಿ ಆಡಿದ 12 ಪಂದ್ಯಗಳಲ್ಲಿ ಏಳರಲ್ಲಿ ಗೆಲುವು ಐದರಲ್ಲಿ ಸೋಲು ಕಂಡಿದೆ. ಡೆಲ್ಲಿ ಕ್ಯಾಪಿಟಲ್ಸ್​ ಆಡಿದ 12 ಪಂದ್ಯಗಳಲ್ಲಿ ಏಳರಲ್ಲಿ ಗೆಲುವು ಐದರಲ್ಲಿ ಸೋಲು ಕಂಡು ಮೂರನೇ ಸ್ಥಾನದಲ್ಲಿದೆ.

ನಿನ್ನೆಯ ಪಂದ್ಯದಲ್ಲಿ ಸೋಲು ಕಂಡರೂ ಕಿಂಗ್ಸ್​ ಇಲವೆನ್​ ಪಂಜಾಬ್​ ನಾಲ್ಕನೇ ಸ್ಥಾನದಲ್ಲೇ ಇದೆ. ಐದನೇ ಸ್ಥಾನದಲ್ಲಿ ರಾಜಸ್ಥಾನ ಹಾಗೂ ಆರನೇ ಸ್ಥಾನದಲ್ಲಿ ಕೋಲ್ಕತ್ತಾ ನೈಟ್​ ರೈಡರ್ಸ್​ ಇದೆ. ಏಳನೇ ಸ್ಥಾನದಲ್ಲಿ ಹೈದರಾಬಾದ್​​​​​ ಹಾಗೂ ಕೊನೆಯ ಸ್ಥಾನದಲ್ಲಿ ಚೆನ್ನೈ ಇದೆ.

POINTS TABLE:

ನಾಲ್ಕನೇ ಸ್ಥಾನಕ್ಕೆ ಲಗ್ಗೆ ಇಡಲು ಕಿಂಗ್ಸ್​ ಇಲವೆನ್​ ಪಂಜಾಬ್​, ರಾಜಸ್ಥಾನ್​, ಕೋಲ್ಕತ್ತಾ ಹಾಗೂ ಹೈದರಾಬಾದ್​ ನಡುವೆ ಹಣಾಹಣಿ ಏರ್ಪಡುವ ಸಾಧ್ಯತೆ ಇದೆ.

ಅತಿ ಹೆಚ್ಚು ರನ್​ ಹೊಡೆದವರಿಗೆ ನೀಡುವ ಆರೆಂಜ್​ ಕ್ಯಾಪ್​ ಕಿಂಗ್ಸ್​ ಇಲವೆನ್​ ಪಂಜಾಬ್​ ತಂಡದ ನಾಯಕ ಕೆಎಲ್​ ರಾಹುಲ್​ ಬಳಿ ಇದೆ. 13 ಪಂದ್ಯಗಳಿಂದ ಅವರು 641 ರನ್​ ಕಲೆ ಹಾಕಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್​ ಬೌಲರ್​ ರಬಾಡ 23 ವಿಕೆಟ್​ ತೆಗೆಯುವ ಮೂಲಕ ಈ ಮೂಲಕ ಪರ್ಪಲ್​​ ಕ್ಯಾಪ್ ಹಾಕಿಕೊಂಡಿದ್ದಾರೆ.
Published by: Rajesh Duggumane
First published: October 31, 2020, 9:17 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading