IPL Points Table: ಐಪಿಎಲ್​ ಅಂಕ ಪಟ್ಟಿ - ಕೋಲ್ಕತ್ತಾಗೆ ಪ್ಲೇಆಫ್​ ಕನಸು ಜೀವಂತ; ರಾಜಸ್ಥಾನ್​, ಪಂಜಾಬ್​ ಔಟ್​

ನಿನ್ನೆಯ ಪಂದ್ಯದಲ್ಲಿ ಗೆದ್ದ ಕೋಲ್ಕತ್ತಾ ನೈಟ್​ ರೈಡರ್ಸ್​ ನಾಲ್ಕನೇ  ಸ್ಥಾನದಲ್ಲಿದೆ. ಐದನೇ ಸ್ಥಾನದಲ್ಲಿ ಹೈದರಾಬಾದ್​ ಹಾಗೂ ಆರನೇ ಸ್ಥಾನದಲ್ಲಿ ಪಂಜಾಬ್​. ಏಳನೇ ಸ್ಥಾನದಲ್ಲಿ ಚೆನ್ನೈ​​​​​ ಹಾಗೂ ಕೊನೆಯ ಸ್ಥಾನದಲ್ಲಿ ರಾಜಸ್ಥಾನ ಇದೆ.

KKR

KKR

 • Share this:
  IPLನ 54ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್​ ವಿರುದ್ಧ ಕೊಲ್ಕತ್ತಾ ನೈಟ್ ‌ರೈಡರ್ಸ್ 60 ರನ್​ಗಳ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ 4ನೇ ಸ್ಥಾನಕ್ಕೇರಿದ್ದು, ಇದರೊಂದಿಗೆ ನೆಟ್ ರನ್ ರೇಟ್ ಆಧಾರದಲ್ಲಿ ಪ್ಲೇ ಆಫ್​ಗೇರುವ​ ಆಸೆಯನ್ನು ಜೀವಂತವಿರಿಸಿಕೊಂಡಿದೆ. ಮತ್ತೊಂದೆಡೆ ಚೆನ್ನೈ ವಿರುದ್ಧ ಪಂಜಾಬ್​ ಸೋಲುವ ಮೂಲಕ ಪ್ಲೇಆಫ್​ಗೇರುವ ಆಸೆಯನ್ನು ಕಳೆದುಕೊಂಡಿದೆ.

  ಮುಂಬೈ ಇಂಡಿಯನ್ಸ್​ ಆಡಿದ 13 ಪಂದ್ಯಗಳಲ್ಲಿ 9ರಲ್ಲಿ ಗೆದ್ದು ನಾಲ್ಕರಲ್ಲಿ ಸೋತಿದೆ. ಈ ಮೂಲಕ 18 ಅಂಕ ಪಡೆದು ಅಂಕಪಟ್ಟಿಯಲ್ಲಿ ಮೊದಲಿದೆ. ಆರ್​ಸಿಬಿ ಆಡಿದ 13 ಪಂದ್ಯಗಳಲ್ಲಿ ಏಳರಲ್ಲಿ ಗೆಲುವು ಆರರಲ್ಲಿ ಸೋಲು ಕಂಡಿದೆ. ಡೆಲ್ಲಿ ಕ್ಯಾಪಿಟಲ್ಸ್​ ಆಡಿದ 13 ಪಂದ್ಯಗಳಲ್ಲಿ ಏಳರಲ್ಲಿ ಗೆಲುವು ಆರರಲ್ಲಿ ಸೋಲು ಕಂಡು ಮೂರನೇ ಸ್ಥಾನದಲ್ಲಿದೆ.

  ನಿನ್ನೆಯ ಪಂದ್ಯದಲ್ಲಿ ಗೆದ್ದ ಕೋಲ್ಕತ್ತಾ ನೈಟ್​ ರೈಡರ್ಸ್​ ನಾಲ್ಕನೇ  ಸ್ಥಾನದಲ್ಲಿದೆ. ಐದನೇ ಸ್ಥಾನದಲ್ಲಿ ಹೈದರಾಬಾದ್​ ಹಾಗೂ ಆರನೇ ಸ್ಥಾನದಲ್ಲಿ ಪಂಜಾಬ್​. ಏಳನೇ ಸ್ಥಾನದಲ್ಲಿ ಚೆನ್ನೈ​​​​​ ಹಾಗೂ ಕೊನೆಯ ಸ್ಥಾನದಲ್ಲಿ ರಾಜಸ್ಥಾನ ಇದೆ.

  POINTS TABLE:

  ಅತಿ ಹೆಚ್ಚು ರನ್​ ಹೊಡೆದವರಿಗೆ ನೀಡುವ ಆರೆಂಜ್​ ಕ್ಯಾಪ್​ ಕಿಂಗ್ಸ್​ ಇಲವೆನ್​ ಪಂಜಾಬ್​ ತಂಡದ ನಾಯಕ ಕೆಎಲ್​ ರಾಹುಲ್​ ಬಳಿ ಇದೆ. 14 ಪಂದ್ಯಗಳಿಂದ ಅವರು 670 ರನ್​ ಕಲೆ ಹಾಕಿದ್ದಾರೆ. ಮುಂಬೈ ಇಂಡಿಯನ್ಸ್​​ ಬೌಲರ್​ ಜಸ್ಪ್ರೀತ್​ ಬೂಮ್ರಾ 23 ವಿಕೆಟ್​ ತೆಗೆಯುವ ಮೂಲಕ ಈ ಮೂಲಕ ಪರ್ಪಲ್​​ ಕ್ಯಾಪ್ ಹಾಕಿಕೊಂಡಿದ್ದಾರೆ.
  Published by:Rajesh Duggumane
  First published: