IPL

  • associate partner
HOME » NEWS » Ipl » IPL 2020 POINTS TABLE KXIP CLINCH SECOND WIN OF SEASON RCB IN THIRD PLACE IN POINTS TABLE RMD

IPL 2020 Points Table: ಸೋತರೂ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲೇ ಮುಂದುವರಿದ ಆರ್​ಸಿಬಿ

ಕೋಲ್ಕತ್ತಾ 7 ಪಂದ್ಯಗಳಲ್ಲಿ 4ರಲ್ಲಿ ಗೆದ್ದು ನಾಲ್ಕನೇ ಸ್ಥಾನದಲ್ಲಿದೆ. ಹೈದರಾಬಾದ್​, ಸಿಎಸ್​ಕೆ ಹಾಗೂ ರಾಜಸ್ಥಾನ ಅನುಕ್ರಮವಾಗಿ ಐದು, ಆರು ಹಾಗೂ ಏಳನೇ ಸ್ಥಾನಗಳಲ್ಲಿವೆ. ಕಿಂಗ್ಸ್​ ಇಲವೆನ್ ಪಂಜಾಬ್ 4 ಅಂಕ ಪಡೆಯುವ ಮೂಲಕ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ.

news18-kannada
Updated:October 16, 2020, 8:34 AM IST
IPL 2020 Points Table: ಸೋತರೂ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲೇ ಮುಂದುವರಿದ ಆರ್​ಸಿಬಿ
RCB
  • Share this:
ಇಲ್ಲಿನ ಶಾರ್ಜಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್​ನ 31ನೇ ರೋಚಕ ಪಂದ್ಯದಲ್ಲಿ ಕಿಂಗ್ಸ್​ ಇಲೆವೆನ್ ಪಂಜಾಬ್ ವಿರುದ್ಧ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡ ಸೋಲು ಕಂಡಿದೆ. ಕೆ. ಎಲ್ ರಾಹುಲ್ ಹಾಗೂ ಕ್ರಿಸ್ ಗೇಲ್ ಅವರ ಅಮೋಘ ಬ್ಯಾಟಿಂಗ್ ನೆರವಿನಿಂದ ಪಂಜಾಬ್ ತಂಡ 8 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿ ಟೂರ್ನಿಯಲ್ಲಿ 2ನೇ ಗೆಲುವು ಕಂಡಿದೆ. ಈ ಮೂಲಕ ಪ್ಲೇ ಆಫ್ ಹಾದಿಯ ಕನಸು ಜೀವಂತವಾಗಿರಿಸಿದೆ. ಇತ್ತ ಕೊಹ್ಲಿ ಪಡೆ ಟೂರ್ನಿಯಲ್ಲಿ ಮೂರನೇ ಸೋಲು ಅನುಭವಿಸಿದೆ. ಈ ಪಂದ್ಯದ ಬೆನ್ನಲ್ಲೇ ಅಂಕಪಟ್ಟಿಯಲ್ಲಿ ಯಾವುದೆ ಬದಲಾವಣೆ ಕಂಡಿಲ್ಲ. ಆರ್​ಸಿಬಿ ಮೂರನೇ ಸ್ಥಾನದಲ್ಲಿ ಮುಂದುವರಿದರೆ ಪಂಜಾಬ್​ 8ನೇ ಸ್ಥಾನದಲ್ಲೇ ಉಳಿದುಕೊಂಡಿದೆ.

ಡೆಲ್ಲಿ ಕ್ಯಾಪಿಟಲ್ಸ್​ ಆಡಿದ 8 ಪಂದ್ಯಗಳಲ್ಲಿ ಆರರಲ್ಲಿ ಗೆದ್ದು ಎರಡಲ್ಲಿ ಸೋತಿದೆ. ಈ ಮೂಲಕ 12 ಅಂಕ ಪಡೆದು ಅಂಕಪಟ್ಟಿಯಲ್ಲಿ ಮೇಲಿದೆ. ಮುಂಬೈ ಇಂಡಿಯನ್ಸ್​​  ಆಡಿದ ಏಳು ಪಂದ್ಯಗಳಲ್ಲಿ ಐದರಲ್ಲಿ ಗೆದ್ದು ಎರಡನೇ ಸ್ಥಾನದಲ್ಲಿದೆ. ಆರ್​ಸಿಬಿ 8 ಪಂದ್ಯಗಳಲ್ಲಿ ಐದರಲ್ಲಿ ಗೆದ್ದು ಮೂರರಲ್ಲಿ ಸೋತಿದೆ. ಈ ಮೂಲಕ ಮೂರನೇ ಸ್ಥಾನ ಅಲಂಕರಿಸಿದೆ.

ಕೋಲ್ಕತ್ತಾ 7 ಪಂದ್ಯಗಳಲ್ಲಿ 4ರಲ್ಲಿ ಗೆದ್ದು ನಾಲ್ಕನೇ ಸ್ಥಾನದಲ್ಲಿದೆ. ಹೈದರಾಬಾದ್​, ಸಿಎಸ್​ಕೆ ಹಾಗೂ ರಾಜಸ್ಥಾನ ಅನುಕ್ರಮವಾಗಿ ಐದು, ಆರು ಹಾಗೂ ಏಳನೇ ಸ್ಥಾನಗಳಲ್ಲಿವೆ. ಕಿಂಗ್ಸ್​ ಇಲವೆನ್ ಪಂಜಾಬ್ 4 ಅಂಕ ಪಡೆಯುವ ಮೂಲಕ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ.

POINTS TABLE:


ಅತಿ ಹೆಚ್ಚು ರನ್​ ಹೊಡೆದವರಿಗೆ ನೀಡುವ ಆರೆಂಜ್​ ಕ್ಯಾಪ್​ ಕಿಂಗ್ಸ್​ ಇಲವೆನ್​ ಪಂಜಾಬ್​ ತಂಡದ ನಾಯಕ ಕೆಎಲ್​ ರಾಹುಲ್​ ಬಳಿ ಇದೆ. 8 ಪಂದ್ಯಗಳಿಂದ ಅವರು 448 ರನ್​ ಕಲೆ ಹಾಕಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್​ ಬೌಲರ್​ ರಬಾಡ 18 ವಿಕೆಟ್​ ತೆಗೆಯುವ ಮೂಲಕ ಈ ಮೂಲಕ ಪರ್ಪಲ್​​ ಕ್ಯಾಪ್ ಹಾಕಿಕೊಂಡಿದ್ದಾರೆ.
Published by: Rajesh Duggumane
First published: October 16, 2020, 8:34 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories