news18-kannada Updated:October 5, 2020, 7:54 AM IST
ಕೆಎಲ್ ರಾಹುಲ್
ನಿನ್ನೆ ನಡೆದ ಎರಡು ಪ್ರತ್ಯಕೇ ಪಂದ್ಯಗಳಲ್ಲಿ ಮುಂಬೈ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಗೆಲುವು ಸಾಧಿಸಿವೆ. ಈ ಮೂಲಕ ಡೆಲ್ಲಿ ಅಂಕ ಪಟ್ಟಿ ಸ್ಥಾನದಲ್ಲಿ ಜಿಗಿದಿವೆ. ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದ ಮುಂಬೈ ಟಾಪ್ ಸ್ಥಾನಕ್ಕೇರಿವೆ. ಇನ್ನು ಕೊನೆಯ ಸ್ಥಾನದಲ್ಲಿದ್ದ ಸಿಎಸ್ಕೆ 6ನೇ ಸ್ಥಾನಕ್ಕೆ ಜಿಗಿದಿದೆ. ಸಾಕಷ್ಟು ಅಡೆತಡೆಗಳನ್ನು ಎದುರಿಸಿ 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಪ್ರಾರಂಭಿಸಲಾಗಿದೆ. ಪ್ರತಿ ವರ್ಷ ಭಾರತದಲ್ಲಿ ಐಪಿಎಲ್ ನಡೆಯುತ್ತಿತ್ತು. ಆದರೆ, ಈ ಬಾರಿ ಐಪಿಎಲ್ ಯುಎಇಗೆ ಶಿಫ್ಟ್ ಆಗಿದೆ. ಸೆಪ್ಟೆಂಬರ್ 19ರಿಂದ ಹೊಡಿಬಡಿ ಆಟ ಅಭಿಮಾನಿಗಳನ್ನು ರಂಜಿಸುತ್ತಿದೆ. ಈಗಾಗಲೇ 13 ಪಂದ್ಯಗಳು ಪೂರ್ಣಗೊಂಡಿವೆ. ಮುಂಬೈ ಆಡಿದ ಐದು ಪಂದ್ಯಗಳಲ್ಲಿ ಎರಡರಲ್ಲಿ ಸೋತು ಮೂರರಲ್ಲಿ ಗೆದ್ದಿದೆ. ಸಿಎಸ್ಕೆ ಮೂರರಲ್ಲಿ ಸೋತು ಎರಡರಲ್ಲಿ ಗೆದ್ದಿದೆ. ಮುಂಬೈ, ಡಿಸಿ, ಆರ್ಸಿಬಿ ತಲಾ ಆರು ಅಂಕ ಪಡೆದ ಮೊದಲ ಮೂರು ಸ್ಥಾನದಲ್ಲಿವೆ. ನಂತರ ಕೆಕೆಆರ್ ಹಾಗೂ ರಾಜಸ್ಥಾನ, ಸಿಎಸ್ಕೆ ನಾಲ್ಕು ಅಂಕ ಗಳಿಸಿ ನಂತರದ ಮೂರು ಸ್ಥಾನಗಳಲ್ಲಿವೆ. ಉಳಿದಂತೆ ಚೆನ್ನೈ ಹೈದರಾಬಾದ್, ಕಿಂಗ್ಸ್ ಇಲವೆನ್ ಪಂಜಾಬ್ ತಲಾ ಎರಡು ಅಂಕ ಪಡೆಯುವ ಮೂಲಕ ಪಟ್ಟಿಯಲ್ಲಿ ಉಳಿದ ಎರಡು ಸ್ಥಾನವನ್ನು ಅಲಂಕರಿಸಿವೆ.
ಅತಿ ಹೆಚ್ಚು ರನ್ ಹೊಡೆದವರಿಗೆ ನೀಡುವ ಆರೆಂಜ್ ಕ್ಯಾಪ್ ಕಿಂಗ್ಸ್ ಇಲವೆನ್ ಪಂಜಾಬ್ ತಂಡದ ನಾಯಕ ಕೆಎಲ್ ರಾಹುಲ್ ಕೈ ಸೇರಿದೆ. ಐದು ಪಂದ್ಯಗಳಿಂದ ಅವರು 302 ರನ್ ಕಲೆ ಹಾಕಿದ್ದಾರೆ. 8 ವಿಕೆಟ್ ಕೀಳುವ ಮೂಲಕ ಬೆಂಗಳೂರು ತಂಡದ ಸ್ಪಿನ್ನರ್ ಯಜುವೇಂದ್ರ ಚಹಾಲ್ ಪರ್ಪಲ್ ಕ್ಯಾಪ್ ಹಾಕಿಕೊಂಡಿದ್ದಾರೆ.
Published by:
Rajesh Duggumane
First published:
October 5, 2020, 7:46 AM IST