IPL 2020: CSK ಆಟ ಮುಗಿದಿಲ್ಲ: ಪ್ಲೇ ಆಫ್​ ಪ್ರವೇಶಿಸಲು ಇನ್ನೂ ಇದೆ ಅವಕಾಶ

CSK Play offs Chances: ಅದರೊಂದಿಗೆ ಇನ್ನುಳಿದ ತಂಡಗಳ ಫಲಿತಾಂಶಗಳನ್ನು ಎದುರು ನೋಡಲಿದೆ. ಅಂದರೆ ಕೊಲ್ಕತ್ತಾ ನೈಟ್ ರೈಡರ್ಸ್, ಕಿಂಗ್ಸ್ ಇಲೆವೆನ್, ರಾಜಸ್ಥಾನ್ ರಾಯಲ್ಸ್, ಹೈದರಾಬಾದ್ ತಂಡಗಳ ಫಲಿತಾಂಶವನ್ನು ಅವಲಭಿಸಿ ಸಿಎಸ್​ಕೆ ಮುಂದಿನ ಹಂತಕ್ಕೆ ಅರ್ಹತೆ ಪಡೆಯಬಹುದು

Dhoni

Dhoni

  • Share this:
    ಐಪಿಎಲ್​ನಲ್ಲಿ 8 ಬಾರಿ ಐಪಿಎಲ್ ಫೈನಲ್ ಆಡಿದ ಟೀಮ್, ಮೂರು ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದ ತಂಡ, 10 ಬಾರಿ ಪ್ಲೇ ಆಫ್ ಪ್ರವೇಶಿಸಿದ ಏಕೈಕ ಪಡೆ ಚೆನ್ನೈ ಸೂಪರ್ ಕಿಂಗ್ಸ್ ಈ ಬಾರಿ ನಿರೀಕ್ಷಿತ ಮಟ್ಟದ ಪ್ರದರ್ಶನ ನೀಡಿಲ್ಲ. ಆಡಿರುವ 12 ಪಂದ್ಯಗಳಲ್ಲಿ 8ರಲ್ಲಿ ಸೋತು 4 ಪಂದ್ಯಗಳನ್ನು ಮಾತ್ರ ಗೆದ್ದುಕೊಂಡಿದೆ. ಸದ್ಯ ಅಂಕಪಟ್ಟಿಯಲ್ಲಿ 7ನೇ ಸ್ಥಾನವನ್ನು ಅಲಂಕರಿಸಿದೆ. ಇದರೊಂದಿಗೆ ಸಿಎಸ್​ಕೆ ಪ್ಲೇ ಆಫ್​ ಹಂತಕ್ಕೇರುವ ಅವಕಾಶಗಳ ಬಾಗಿಲು ಮುಚ್ಚಿವೆ ಎಂದು ನೀವಂದುಕೊಂಡರೆ ನಿಮ್ಮ ಊಹೆ ತಪ್ಪು. ಏಕೆಂದರೆ ಇನ್ನೂ 2 ಪಂದ್ಯಗಳು ಬಾಕಿ ಉಳಿದಿವೆ. ಈಗಾಗಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ 8 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿ ಸಿಎಸ್​ಕೆ ಮತ್ತೆ ಪ್ಲೇ ಆಫ್ ಆಸೆಯನ್ನು ಜೀವಂತವಿರಿಸಿಕೊಂಡಿದೆ. ಇನ್ನುಳಿದಿರುವುದು ಕೊಲ್ಕತ್ತಾ ನೈಟ್ ರೈಡರ್ಸ್ ಹಾಗೂ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧದ ಪಂದ್ಯಗಳು ಮಾತ್ರ. ಈ ಎರಡು ಪಂದ್ಯಗಳಲ್ಲಿ ಭರ್ಜರಿ ನೆಟ್​ ರನ್​ ರೇಟ್​ನೊಂದಿಗೆ ಗೆಲ್ಲುವ ಅನಿವಾರ್ಯತೆ ಇದೆ.

    ಅದರೊಂದಿಗೆ ಇನ್ನುಳಿದ ತಂಡಗಳ ಫಲಿತಾಂಶಗಳನ್ನು ಎದುರು ನೋಡಲಿದೆ. ಅಂದರೆ ಕೊಲ್ಕತ್ತಾ ನೈಟ್ ರೈಡರ್ಸ್, ಕಿಂಗ್ಸ್ ಇಲೆವೆನ್, ರಾಜಸ್ಥಾನ್ ರಾಯಲ್ಸ್, ಹೈದರಾಬಾದ್ ತಂಡಗಳ ಫಲಿತಾಂಶವನ್ನು ಅವಲಭಿಸಿ ಸಿಎಸ್​ಕೆ ಮುಂದಿನ ಹಂತಕ್ಕೆ ಅರ್ಹತೆ ಪಡೆಯಬಹುದು. ಪ್ರಸ್ತುತ ಅಗ್ರ ಮೂರು ತಂಡಗಳ (ಮುಂಬೈ, ಡಿಸಿ ಮತ್ತು ಆರ್‌ಸಿಬಿ) ನಡುವಿನ ಪಂದ್ಯಗಳ ಫಲಿತಾಂಶಗಳು ಸಿಎಸ್‌ಕೆ ಅರ್ಹತಾ ಅವಕಾಶಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ.

    ಬದಲಾಗಿ ಧೋನಿ ಪಡೆ ಕೆಕೆಆರ್ ಮತ್ತು ಆರ್​ಆರ್​ ಫಲಿತಾಂಶಗಳ ಮೇಲೆ ಬಗ್ಗೆ ನಿಗಾ ಇಡಲಿದೆ. ಸೋಮವಾರ ಕೆಕೆಆರ್ ಪಂಜಾಬ್ ವಿರುದ್ಧ ಗೆದ್ದರೆ, ಸಿಎಸ್​ಕೆ ಹಾದಿ ಅಂತ್ಯವಾದಂತೆ. ಹೀಗಾಗಿ ಸಿಎಸ್​ಕೆ ಪಾಲಿಗೆ ಪಂಜಾಬ್ ಗೆಲ್ಲಲೇಬೇಕು. ಮತ್ತೊಂದೆಡೆ ರಾಜಸ್ಥಾನ್ ಮತ್ತು ಹೈದರಾಬಾದ್ ಎರಡೂ ಎಂಟು ಅಂಕಗಳನ್ನು ಹೊಂದಿದ್ದು, ಈ ತಂಡಗಳು ಉಳಿದ ಪಂದ್ಯಗಳನ್ನು ಗೆದ್ದರೆ ಗರಿಷ್ಠ 14 ಅಂಕಗಳನ್ನು ಗಳಿಸಬಹುದು. ಒಂದು ವೇಳೆ ಈ ತಂಡಗಳು ಮೂರು ಪಂದ್ಯಗಳಲ್ಲಿ ಒಂದನ್ನಾದರೂ ಕಳೆದುಕೊಂಡರೆ ಸಿಎಸ್​ಕೆ ಮೇಲೇರುವ ಅವಕಾಶ ದೊರೆಯಲಿದೆ. ಹೀಗಾಗಿ ಈ ಎರಡು ತಂಡಗಳು ಒಂದೊಂದು ಪಂದ್ಯದಲ್ಲಿ ಸೋಲಬೇಕು.

    ಹಾಗೆಯೇ ಕೊಲ್ಕತ್ತಾ ನೈಟ್ ರೈಡರ್ಸ್ ಮುಂದಿನ ಮೂರು ಪಂದ್ಯಗಳನ್ನು ಸೋಲಬೇಕು. ಅದರೊಂದಿಗೆ ಕಿಂಗ್ಸ್ ಇಲೆವೆನ್ ಪಂಜಾಬ್  ಸೋಮವಾರ ಕೆಕೆಆರ್ ತಂಡವನ್ನು ಸೋಲಿಸಿ ಉಳಿದ 2 ಪಂದ್ಯಗಳನ್ನು ಪರಾಜಯಗೊಳ್ಳಬೇಕು. ಇದರೊಂದಿಗೆ ಸನ್‌ರೈಸರ್ಸ್ ಹೈದರಾಬಾದ್ ಮುಂದಿನ 2 ಪಂದ್ಯಗಳಲ್ಲಿ ಕನಿಷ್ಠ 1 ಪಂದ್ಯವನ್ನು ದೊಡ್ಡ ಅಂತರದಿಂದ ಸೋತರೆ ಸಿಎಸ್​ಕೆಗೆ ಮತ್ತಷ್ಟು ಅವಕಾಶ ದೊರೆತಂತಾಗಲಿದೆ. ಇವೆಲ್ಲದರ ಜೊತೆ -0.602 ನೆಟ್ ರನ್​ ರೇಟ್ ಹೊಂದಿರುವ ಸಿಎಸ್​ಕೆ ಮುಂದಿನ 2 ಪಂದ್ಯಗಳನ್ನು ಭಾರೀ ಅಂತರದಿಂದ ( ಕನಿಷ್ಠ 50 ರನ್​ಗಳ ಅಂತರ) ಗೆದ್ದರೆ 12 ಅಂಕಗಳೊಂದಿಗೆ ನೆಟ್ ರನ್ ರೇಟ್ ಹೆಚ್ಚಿಸಿಕೊಳ್ಳಿದೆ. ಅದರೊಂದಿಗೆ 12 ಅಂಕ ಪಡೆದಿರುವ ಕೆಕೆಆರ್ ಅಥವಾ ಬೇರೆ ತಂಡಗಳನ್ನು ಹಿಂದಿಕ್ಕಿ ಪ್ಲೇ ಆಫ್​ಗೆ ಪ್ರವೇಶಿಸಬಹುದು.



    ಇದೆಲ್ಲಾ ನಡೆಯುವುದು ಪವಾಡ ಎಂದು ನೀವಂದುಕೊಂಡರೆ ನಿಮ್ಮ ಊಹೆ ತಪ್ಪು. ಏಕೆಂದರೆ ಐಪಿಎಲ್​ನಲ್ಲಿ 7 ಬಾರಿ ಪ್ಲೇಆಫ್‌ಗೆ ಅರ್ಹತೆ ಪಡೆಯುವ ಅಂತಿಮ ತಂಡವು ಸಾಮಾನ್ಯವಾಗಿ 14 ಪಾಯಿಂಟ್‌ಗಳು ಅಥವಾ ಅದಕ್ಕಿಂತ ಕಡಿಮೆ ಅಂಕಗಳೊಂದಿಗೆ ಎಂಟ್ರಿ ಕೊಟ್ಟಿರುವ ಇತಿಹಾಸವಿದೆ. ಅದರಲ್ಲೂ ಮುಖ್ಯವಾಗಿ 2019ರ ಐಪಿಎಲ್​ನಲ್ಲಿ ನಾಲ್ಕನೇ ಸ್ಥಾನದಲ್ಲಿ ಕಾಣಿಸಿಕೊಂಡ ಸನ್​ರೈಸರ್ಸ್​ ಹೈದರಾಬಾದ್ ಕೇವಲ 12 ಪಾಯಿಂಟ್‌ಗಳನ್ನು ಹೊಂದಿತ್ತು. ನೆಟ್ ರನ್ ರೇಟ್​ ಮೂಲಕ ಕೆಕೆಆರ್ ತಂಡವನ್ನು ಹಿಂದಿಕ್ಕಿ ಹೈದರಾಬಾದ್ ನಾಕೌಟ್ ಹಂತಕ್ಕೆ ಪ್ರವೇಶಿಸಿತ್ತು. ಹೀಗಾಗಿ ಸಿಎಸ್​ಕೆ ತಂಡವು ಮುಂದಿನ ಪಂದ್ಯಗಳ ಮೂಲಕ ಪ್ಲೇ ಆಫ್ ಪ್ರವೇಶಿಸಿದ್ರೆ ಇತಿಹಾಸ ನಿರ್ಮಾಣವಾಗಲಿದೆ.

    POINTS TABLE:

    SCHEDULE TIME TABLE:

    ORANGE CAP:

    PURPLE CAP:

    RESULT DATA:

    MOST SIXES:

    ಇದನ್ನೂ ಓದಿ: IPL 2020: 3ನೇ ವರ್ಷಕ್ಕೆ CSK ಸುಸ್ತು: ಡ್ಯಾಡಿಸ್ ಆರ್ಮಿ ವಿರುದ್ಧ ಕಿಡಿಕಾರಿದ ಕೋಚ್​
    Published by:zahir
    First published: