ಐಪಿಎಲ್ನ 5ನೇ ಪಂದ್ಯದಲ್ಲಿ ಕೊಲ್ಕತ್ತಾ ವಿರುದ್ಧ ಮುಂಬೈ ಇಂಡಿಯನ್ಸ್ ತಂಡ 49 ರನ್ಗಳ ಭರ್ಜರಿ ಜಯ ಸಾಧಿಸಿದೆ. ಟಾಸ್ ಗೆದ್ದ ಕೊಲ್ಕತ್ತಾ ನೈಟ್ ರೈಡರ್ಸ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಅದರಂತೆ ಬ್ಯಾಟಿಂಗ್ಗೆ ಇಳಿದ ಮುಂಬೈ ಇಂಡಿಯನ್ಸ್ ತಂಡ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದಲ್ಲದೆ, ನಾಯಕ ರೋಹಿತ್ ಶರ್ಮಾ ಅವರ ಅರ್ಧ ಶತಕದಿಂದ 20 ಓವರ್ನಲ್ಲಿ 195 ರನ್ ಗಳಿಸಿತು. ಇದನ್ನು ಬೆನ್ನು ಹತ್ತಿದ ಕೋಲ್ಕತ್ತಾ 20 ಓವರ್ಗಳಲ್ಲಿ 146 ರನ್ ಕಲೆ ಹಾಕಲಷ್ಟೇ ಶಕ್ಯವಾಯಿತು. ಈ ಪಂದ್ಯ ಗೆಲ್ಲುವ ಮೂಲಕ ಕೊನೆಯ ಸ್ಥಾನದಲ್ಲಿದ್ದ ಮುಂಬೈ ಇಂಡಿಯನ್ಸ್ ಮೊದಲ ಸ್ಥಾನಕ್ಕೇರಿದೆ. ಪ್ರತಿ ವರ್ಷ ಭಾರತದಲ್ಲಿ ಐಪಿಎಲ್ ನಡೆಯುತ್ತಿತ್ತು. ಆದರೆ, ಈ ಬಾರಿ ಐಪಿಎಲ್ ಯುಎಇಗೆ ಶಿಫ್ಟ್ ಆಗಿದೆ. ಸೆಪ್ಟೆಂಬರ್ 19ರಿಂದ ಹೊಡಿಬಡಿ ಆಟ ಅಭಿಮಾನಿಗಳನ್ನು ರಂಜಿಸುತ್ತಿದೆ. ಈಗಾಗಲೇ ಐದು ಪಂದ್ಯ ಮುಗಿದಿದ್ದು, ಮುಂಬೈ ಮೊದಲ ಸ್ಥಾನಕ್ಕೇರಿದೆ.
ಅತಿ ಹೆಚ್ಚು ರನ್ ಹೊಡೆಯುವವರಿಗೆ ನೀಡುವ
ಆರೆಂಜ್ ಕ್ಯಾಪ್ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಟಗಾರ ಪಾಫ್ ಡು ಪ್ಲೆಸಿಸ್ ಬಳಿ ಇದೆ. ಸಿಎಸ್ಕೆ ತಂಡ ಪ್ರಮುಖ ಆಟಗಾರರದ ಇವರು 2 ಮ್ಯಾಚ್ನಿಂದ 130 ರನ್ ಕಲೆ ಹಾಕಿದ್ದಾರೆ. ಈ ಮೂಲಕ ಇಲ್ಲಿಯುರೆಗೆ ಅತಿ ಹೆಚ್ಚು ರನ್ ಕಲೆ ಹಾಕುವ ಮೂಲಕ ಆರೇಂಜ್ ಕ್ಯಾಪ್ ತಮ್ಮದಾಗಿಸಿಕೊಂಡಿದ್ದಾರೆ.
ಇನ್ನು ಅತಿ ಹೆಚ್ಚು ವಿಕೆಟ್ ತೆಗೆದವರಿಗೆ ನೀಡುವ
ಪರ್ಪಲ್ ಕ್ಯಾಪ್ ಈ ಬಾರಿ ಸ್ಯಾಮ್ ಕುರ್ರನ್ ಬಳಿ ಇದೆ. ಚೆನ್ನೈ ಸೂಪರ್ ಕಿಂಗ್ಸ್ ತಂಡದ ಈ ಆಟಗಾರ ಎರಡು ಪಂದ್ಯಗಳಿಂದ ನಾಲ್ಕು ವಿಕೆಟ್ ಕಿತ್ತಿದ್ದಾರೆ. ಮೊದಲ ಪಂದ್ಯದಲ್ಲಿ ಒಂದು ಹಾಗೂ ನಿನ್ನೆಯ ಪಂದ್ಯದಲ್ಲಿ ಮೂರು ವಿಕೆಟ್ಗಳನ್ನು ಅವರು ಕೆಡವಿದ್ದಾರೆ.
ಐಪಿಎಲ್ ಎಂದಮೇಲೆ ಸಿಕ್ಸಿನ ಸುರಿಮಳೆ ಸುರಿಯೋದು ಕಾಮನ್. ಈ ರೀತಿ
ಸಿಕ್ಸ್ ಸಿಡಿಸಿದವರ ಪಟ್ಟಿಯಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಸಂಜು ಸ್ಯಾಮ್ಸನ್ ಮೊದಲ ಸ್ಥಾನಲ್ಲಿದ್ದಾರೆ. ಸಿಎಸ್ಕೆ ವಿರುದ್ಧದ ಪಂದ್ಯದಲ್ಲೇ ಅವರು 9 ಸಿಕ್ಸ್ಗಳನ್ನು ಸಿಡಿಸಿದ್ದಾರೆ.
ಇನ್ನು ಅಂಕಪಟ್ಟಿಯಲ್ಲಿ ರಾಜಸ್ಥಾನ್ ರಾಯಕ್ಸ್, ಆರ್ಸಿಬಿ, ಡೆಲ್ಲಿ, ಸಿಎಸ್ಕೆ ತಲಾ ಒಂದು ಮ್ಯಾಚ್ ಗೆಲ್ಲುವ ಮೂಲಕ ಅನುಕ್ರಮವಾಗಿ ಮೊದಲ ನಾಲ್ಕು ಸ್ಥಾನದಲ್ಲಿವೆ. ಎಲ್ಲರಿಗೂ ಪಾಯಿಂಟ್ಸ್ ಎರಡೇ ಬಂದರೂ ರನ್ ರೇಟ್ ಆಧಾರದ ಮೇಲೆ ಬೇರೆ ಬೇರೆ ರ್ಯಾಂಕ್ ದೊರೆತಿದೆ. ಆರ್ಆರ್ ರನ್ ರೇಟ್ +0.008, ಆರ್ಸಿಬಿಯ ರನ್ ರೇಟ್ +0.500 ಇದ್ದರೆ, ಸಿಎಸ್ಕೆಯದ್ದು, +0486 ಇದೆ. ಡೆಲ್ಲಿಯದ್ದು +0.000 ಇದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ