IPL

  • associate partner

IPL 2020: ಈ ಬಾರಿಯ ಐಪಿಎಲ್​ನಲ್ಲಿ 600 ರನ್​ ಸಿಡಿಸಿದ ಮೊದಲ ಆಟಗಾರ ಎನ್ನುವ ಖ್ಯಾತಿಗೆ ಭಾಜನರಾದ ರಾಹುಲ್​

ಐಪಿಎಲ್​ ಎಂದಮೇಲೆ ಸಿಕ್ಸ್​​ನ ಸುರಿಮಳೆ ಸುರಿಯೋದು ಕಾಮನ್​. ಈ ರೀತಿ ಸಿಕ್ಸ್ ಸಿಡಿಸಿದವರ ಪಟ್ಟಿಯಲ್ಲಿ ಸಂಜು ಸ್ಯಾಮ್ಸನ್​ ಮೊದಲಿದ್ದಾರೆ. 13  ಪಂದ್ಯಗಳಲ್ಲಿ ಅವರು ಬರೋಬ್ಬರಿ 26 ಸಿಕ್ಸ್​ ಸಿಡಿಸಿದ್ದಾರೆ.

news18-kannada
Updated:October 31, 2020, 9:33 AM IST
IPL 2020: ಈ ಬಾರಿಯ ಐಪಿಎಲ್​ನಲ್ಲಿ 600 ರನ್​ ಸಿಡಿಸಿದ ಮೊದಲ ಆಟಗಾರ ಎನ್ನುವ ಖ್ಯಾತಿಗೆ ಭಾಜನರಾದ ರಾಹುಲ್​
IPL 2020
  • Share this:
ಅಬುಧಾಬಿಯ ಶೇಖ್ ಝಾಯೆದ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಐಪಿಎಲ್​ನ 50ನೇ ಪಂದ್ಯದಲ್ಲಿ ಕಿಂಗ್ಸ್​ ಇಲೆವೆನ್ ಪಂಜಾಬ್ ವಿರುದ್ಧ ರಾಜಸ್ಥಾನ್ ರಾಯಲ್ಸ್​ 7 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಪ್ಲೇ ಆಫ್​ಗೇರುವ ಆಸೆಯನ್ನು ಜೀವಂತವಿರಿಸಿಕೊಂಡಿದೆ. ಅಲ್ಲದೆ, ಪ್ಲೇಆಫ್​ಗೆ ಏರಲು ನಾಲ್ಕು ತಂಡಗಳ ನಡುವೆ ಭರ್ಜರಿ ಹಣಾಹಣಿ ಏರುವ ಲಕ್ಷಣ ಗೋಚರವಾಗಿದೆ.

ಅತಿ ಹೆಚ್ಚು ರನ್​ ಹೊಡೆಯುವವರಿಗೆ ನೀಡುವ ಆರೆಂಜ್​ ಕ್ಯಾಪ್ ಕಿಂಗ್ಸ್​ ಇಲವೆನ್ ಪಂಜಾಬ್​ ತಂಡದ ಆಟಗಾರ, ಕನ್ನಡಿಗ ಕೆಎಲ್​ ರಾಹುಲ್​​ ಬಳಿ ಇದೆ. 13 ಪಂದ್ಯಗಳಲ್ಲಿ ಅವರು 641 ರನ್​ ಕಲೆ ಹಾಕಿದ್ದಾರೆ. ಈ ಮೂಲಕ ಅತಿ ಹೆಚ್ಚು ರನ್​ ಕಲೆ ಹಾಕುವ ಮೂಲಕ ಆರೇಂಜ್​ ಕ್ಯಾಪ್​ ತಮ್ಮಲ್ಲೇ ಉಳಿಸಿಕೊಂಡಿದ್ದಾರೆ.

ORANGE CAP:

ಇನ್ನು ಅತಿ ಹೆಚ್ಚು ವಿಕೆಟ್​ ತೆಗೆದವರಿಗೆ ನೀಡುವ ಪರ್ಪಲ್ ಕ್ಯಾಪ್​ ಈ ಬಾರಿ ಡೆಲ್ಲಿ ಬೌಲರ್​ ರಬಾಡ ಬಳಿ ಇದೆ. 23 ವಿಕೆಟ್​ ಕೀಳುವ ಮೂಲಕ ಅವರು ಪರ್ಪಲ್​​ ಕ್ಯಾಪ್ ಹಾಕಿಕೊಂಡಿದ್ದಾರೆ.

ORANGE CAP:

ಐಪಿಎಲ್​ ಎಂದಮೇಲೆ ಸಿಕ್ಸ್​​ನ ಸುರಿಮಳೆ ಸುರಿಯೋದು ಕಾಮನ್​. ಈ ರೀತಿ ಸಿಕ್ಸ್ ಸಿಡಿಸಿದವರ ಪಟ್ಟಿಯಲ್ಲಿ ಸಂಜು ಸ್ಯಾಮ್ಸನ್​ ಮೊದಲಿದ್ದಾರೆ. 13  ಪಂದ್ಯಗಳಲ್ಲಿ ಅವರು ಬರೋಬ್ಬರಿ 26 ಸಿಕ್ಸ್​ ಸಿಡಿಸಿದ್ದಾರೆ.

MOST SIXES: ಮುಂಬೈ ಇಂಡಿಯನ್ಸ್​ ಆಡಿದ 12 ಪಂದ್ಯಗಳಲ್ಲಿ ಎಂಟರಲ್ಲಿ ಗೆದ್ದು ನಾಲ್ಕರಲ್ಲಿ ಸೋತಿದೆ. ಈ ಮೂಲಕ 16 ಅಂಕ ಪಡೆದು ಅಂಕಪಟ್ಟಿಯಲ್ಲಿ ಮೊದಲಿದೆ. ಆರ್​ಸಿಬಿ ಆಡಿದ 12 ಪಂದ್ಯಗಳಲ್ಲಿ ಏಳರಲ್ಲಿ ಗೆಲುವು ಐದರಲ್ಲಿ ಸೋಲು ಕಂಡಿದೆ. ಡೆಲ್ಲಿ ಕ್ಯಾಪಿಟಲ್ಸ್​ ಆಡಿದ 12 ಪಂದ್ಯಗಳಲ್ಲಿ ಏಳರಲ್ಲಿ ಗೆಲುವು ಐದರಲ್ಲಿ ಸೋಲು ಕಂಡು ಮೂರನೇ ಸ್ಥಾನದಲ್ಲಿದೆ.

POINTS TABLE:

ನಿನ್ನೆಯ ಪಂದ್ಯದಲ್ಲಿ ಸೋಲು ಕಂಡರೂ ಕಿಂಗ್ಸ್​ ಇಲವೆನ್​ ಪಂಜಾಬ್​ ನಾಲ್ಕನೇ ಸ್ಥಾನದಲ್ಲೇ ಇದೆ. ಐದನೇ ಸ್ಥಾನದಲ್ಲಿ ರಾಜಸ್ಥಾನ ಹಾಗೂ ಆರನೇ ಸ್ಥಾನದಲ್ಲಿ ಕೋಲ್ಕತ್ತಾ ನೈಟ್​ ರೈಡರ್ಸ್​ ಇದೆ. ಏಳನೇ ಸ್ಥಾನದಲ್ಲಿ ಹೈದರಾಬಾದ್​​​​​ ಹಾಗೂ ಕೊನೆಯ ಸ್ಥಾನದಲ್ಲಿ ಚೆನ್ನೈ ಇದೆ.
Published by: Rajesh Duggumane
First published: October 31, 2020, 9:33 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading