news18-kannada Updated:November 2, 2020, 10:00 AM IST
ದುಬೈ ಸ್ಟೇಡಿಯಂ
IPLನ 54ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಕೊಲ್ಕತ್ತಾ ನೈಟ್ ರೈಡರ್ಸ್ 60 ರನ್ಗಳ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ 4ನೇ ಸ್ಥಾನಕ್ಕೇರಿದ್ದು, ಇದರೊಂದಿಗೆ ನೆಟ್ ರನ್ ರೇಟ್ ಆಧಾರದಲ್ಲಿ ಪ್ಲೇ ಆಫ್ಗೇರುವ ಆಸೆಯನ್ನು ಜೀವಂತವಿರಿಸಿಕೊಂಡಿದೆ. ಮತ್ತೊಂದೆಡೆ ಚೆನ್ನೈ ವಿರುದ್ಧ ಪಂಜಾಬ್ ಸೋಲುವ ಮೂಲಕ ಪ್ಲೇಆಫ್ಗೇರುವ ಆಸೆಯನ್ನು ಕಳೆದುಕೊಂಡಿದೆ.
ಅತಿ ಹೆಚ್ಚು ರನ್ ಹೊಡೆಯುವವರಿಗೆ ನೀಡುವ
ಆರೆಂಜ್ ಕ್ಯಾಪ್ ಕಿಂಗ್ಸ್ ಇಲವೆನ್ ಪಂಜಾಬ್ ತಂಡದ ಆಟಗಾರ, ಕನ್ನಡಿಗ ಕೆಎಲ್ ರಾಹುಲ್ ಬಳಿ ಇದೆ. 14 ಪಂದ್ಯಗಳಲ್ಲಿ ಅವರು 670ರನ್ ಕಲೆ ಹಾಕಿದ್ದಾರೆ. ಈ ಮೂಲಕ ಅತಿ ಹೆಚ್ಚು ರನ್ ಕಲೆ ಹಾಕುವ ಮೂಲಕ ಆರೇಂಜ್ ಕ್ಯಾಪ್ ತಮ್ಮಲ್ಲೇ ಉಳಿಸಿಕೊಂಡಿದ್ದಾರೆ.
ORANGE CAP:
ಇನ್ನು ಅತಿ ಹೆಚ್ಚು ವಿಕೆಟ್ ತೆಗೆದವರಿಗೆ ನೀಡುವ
ಪರ್ಪಲ್ ಕ್ಯಾಪ್ ಈ ಬಾರಿ ಮುಂಬೈ ಬೌಲರ್ ಜಸ್ಪ್ರೀತ್ ಬುಮ್ರಾ ಬಳಿ ಇದೆ. 23 ವಿಕೆಟ್ ಕೀಳುವ ಮೂಲಕ ಅವರು ಪರ್ಪಲ್ ಕ್ಯಾಪ್ ಹಾಕಿಕೊಂಡಿದ್ದಾರೆ.
ORANGE CAP:
ಐಪಿಎಲ್ ಎಂದಮೇಲೆ ಸಿಕ್ಸ್ನ ಸುರಿಮಳೆ ಸುರಿಯೋದು ಕಾಮನ್. ಈ ರೀತಿ
ಸಿಕ್ಸ್ ಸಿಡಿಸಿದವರ ಪಟ್ಟಿಯಲ್ಲಿ ಸಂಜು ಸ್ಯಾಮ್ಸನ್ ಮೊದಲಿದ್ದಾರೆ. 14 ಪಂದ್ಯಗಳಲ್ಲಿ ಅವರು ಬರೋಬ್ಬರಿ 26 ಸಿಕ್ಸ್ ಸಿಡಿಸಿದ್ದಾರೆ.
MOST SIXES:
ಮುಂಬೈ ಇಂಡಿಯನ್ಸ್ ಆಡಿದ 13 ಪಂದ್ಯಗಳಲ್ಲಿ 9ರಲ್ಲಿ ಗೆದ್ದು ನಾಲ್ಕರಲ್ಲಿ ಸೋತಿದೆ. ಈ ಮೂಲಕ 18 ಅಂಕ ಪಡೆದು ಅಂಕಪಟ್ಟಿಯಲ್ಲಿ ಮೊದಲಿದೆ. ಆರ್ಸಿಬಿ ಆಡಿದ 13 ಪಂದ್ಯಗಳಲ್ಲಿ ಏಳರಲ್ಲಿ ಗೆಲುವು ಆರರಲ್ಲಿ ಸೋಲು ಕಂಡಿದೆ. ಡೆಲ್ಲಿ ಕ್ಯಾಪಿಟಲ್ಸ್ ಆಡಿದ 13 ಪಂದ್ಯಗಳಲ್ಲಿ ಏಳರಲ್ಲಿ ಗೆಲುವು ಆರರಲ್ಲಿ ಸೋಲು ಕಂಡು ಮೂರನೇ ಸ್ಥಾನದಲ್ಲಿದೆ.
POINTS TABLE:
ನಿನ್ನೆಯ ಪಂದ್ಯದಲ್ಲಿ ಗೆದ್ದ ಕೋಲ್ಕತ್ತಾ ನೈಟ್ ರೈಡರ್ಸ್ ನಾಲ್ಕನೇ ಸ್ಥಾನದಲ್ಲಿದೆ. ಐದನೇ ಸ್ಥಾನದಲ್ಲಿ ಹೈದರಾಬಾದ್ ಹಾಗೂ ಆರನೇ ಸ್ಥಾನದಲ್ಲಿ ಪಂಜಾಬ್. ಏಳನೇ ಸ್ಥಾನದಲ್ಲಿ ಚೆನ್ನೈ ಹಾಗೂ ಕೊನೆಯ ಸ್ಥಾನದಲ್ಲಿ ರಾಜಸ್ಥಾನ ಇದೆ.
Published by:
Rajesh Duggumane
First published:
November 2, 2020, 10:00 AM IST