• Home
 • »
 • News
 • »
 • ipl
 • »
 • RCB: ಆರ್​ಸಿಬಿಗೆ ಉಳಿದಿರುವುದು ಕೇವಲ 3 ಪಂದ್ಯ: ಪ್ಲೇ ಆಫ್ ಪ್ರವೇಶಕ್ಕೆ ಏನು ಮಾಡಬೇಕು?: ಇಲ್ಲಿದೆ ಮಾಹಿತಿ

RCB: ಆರ್​ಸಿಬಿಗೆ ಉಳಿದಿರುವುದು ಕೇವಲ 3 ಪಂದ್ಯ: ಪ್ಲೇ ಆಫ್ ಪ್ರವೇಶಕ್ಕೆ ಏನು ಮಾಡಬೇಕು?: ಇಲ್ಲಿದೆ ಮಾಹಿತಿ

RCB

RCB

Royal Challengers Bangalore: ಆರ್​ಸಿಬಿಗೆ ಇನ್ನು ಕೇವಲ ಮೂರು ಪಂದ್ಯಗಳಷ್ಟೆ ಬಾಕಿಉಳಿದಿವೆ. ಅ. 28 ರಂದು ಮುಂಬೈ ಇಂಡಿಯನ್ಸ್ ವಿರುದ್ಧ, ಅ. 31 ರಂದು ಸನ್​ರೈಸರ್ಸ್​ ಹೈದರಾಬಾದ್ ಹಾಗೂ ನ. 2 ರಂದು ಡೆಲ್ಲಿ ಕ್ಯಾಪಿಟಲ್ಸ್​ ವಿರುದ್ಧ ಆಡಲಿದೆ.

 • Share this:

  13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಮಹತ್ವದ ಘಟ್ಟದತ್ತ ಸಾಗುತ್ತಿದೆ. ಈಗಾಗಲೇ ಮೂರು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್​ ಟೂರ್ನಿಯಿಂದ ಹೊರಬಿದ್ದಿದೆ. ನವೆಂಬರ್ 3ಕ್ಕೆ ಲೀಗ್ ಹಂತದ ಪಂದ್ಯಗಳು ಮುಕ್ತಾಯಗೊಳ್ಳಲಿದೆ. ಪ್ರತಿ ಬಾರಿ ಕಪ್ ಗೆಲ್ಲುವಲ್ಲಿ ಎಡವುತ್ತಿದ್ದ ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡ ಈ ಬಾರಿ ಉತ್ತಮ ಪ್ರದರ್ಶನ ತೋರಿ ಸದ್ಯ ಪಾಯಿಂಟ್ ಪಟ್ಟಿಯಲ್ಲಿ 14 ಅಂಕದೊಂದಿಗೆ ಮೂರನೇ ಸ್ಥಾನದಲ್ಲಿದೆ. ಆದರೆ, ಆರ್​ಸಿಬಿಗೆ ಪ್ಲೇ ಆಫ್ ಹಾದಿ ಅಷ್ಟೊಂದು ಸುಲಭವಿಲ್ಲ. ಹಾಗಾದ್ರೆ ಪ್ಲೇ ಆಫ್ ಪ್ರವೇಶಿಸಬೇಕಾದರೆ ಕೊಹ್ಲಿ ಸೈನ್ಯ ಇನ್ನೆಷ್ಟು ಪಂದ್ಯ ಗೆಲ್ಲಬೇಕು?, ಇಲ್ಲಿದೆ ಮಾಹಿತಿ.


  ಆರ್​ಸಿಬಿ ತಂಡ ಈ ಬಾರಿಯ ಐಪಿಎಲ್​ನ ಆರಂಭದಲ್ಲಿ ಉತ್ತಮ ಆಟ ಪ್ರದರ್ಶಿಸುತ್ತಾ ಬಂತು. ಆದರೆ, ಈಗ ಅಂತಿಮ ಘಟ್ಟ ಸಮೀಸುತ್ತಿದೆ ಎಂಬೊತ್ತಿಗೆ ತನ್ನ ಹಳೇಯ ಚಾಳಿಯನ್ನ ಮುಂದುವರೆಸುತ್ತಿದೆ. ಸಂಘಟಿತ ಪ್ರದರ್ಶನ ನೀಡುವುದರಲ್ಲಿ ಕೊಹ್ಲಿ ಹುಡುಗರು ಎಡವುತ್ತಿದ್ದಾರೆ. ಸದ್ಯ 11 ಪಂದ್ಯಗಳಲ್ಲಿ ಆರ್​ಸಿಬಿ ಏಳು ಗೆಲುವು ಕಂಡಿದ್ದು, ನಾಲ್ಕರಲ್ಲಿ ಸೋಲುಂಡಿದೆ. ಒಟ್ಟು 14 ಅಂಕ ಸಂಪಾದಿಸಿದೆ.


  KKR vs KXIP, IPL 2020 Live Score


  ಆರ್​ಸಿಬಿಗೆ ಇನ್ನು ಕೇವಲ ಮೂರು ಪಂದ್ಯಗಳಷ್ಟೆ ಬಾಕಿಉಳಿದಿವೆ. ಅ. 28 ರಂದು ಮುಂಬೈ ಇಂಡಿಯನ್ಸ್ ವಿರುದ್ಧ ಕಾದಾಡಲಿದ್ದರೆ, ಅ. 31 ರಂದು ಸನ್​ರೈಸರ್ಸ್​ ಹೈದರಾಬಾದ್ ಹಾಗೂ ನ. 2 ರಂದು ಡೆಲ್ಲಿ ಕ್ಯಾಪಿಟಲ್ಸ್​ ವಿರುದ್ಧ ಆಡುವ ಮೂಲಕ ತನ್ನ ಲೀಗ್ ಹಂತದ ಪಂದ್ಯಗಳನ್ನು ಅಂತ್ಯಗೊಳಿಸಲಿದೆ.


  ಈ ಮೂರು ಪಂದ್ಯಗಳಲ್ಲಿ ಆರ್​ಸಿಬಿ ಕನಿಷ್ಠ ಎರಡರಲ್ಲಿ ಗೆಲ್ಲಲೇ ಬೇಕಿದೆ. ಹಾಗಿದ್ದರೆ ಮಾತ್ರ ಕೊಹ್ಲಿ ಪಡೆ ಯಾವುದೇ ಅಡಚಣೆ ಇಲ್ಲದೆ ಸುಲಭವಾಗಿ ಪ್ಲೇ ಆಫ್ ಪ್ರವೇಶಿಸಬಹುದು. ಒಂದು ವೇಳೆ ಒಂದು ಪಂದ್ಯ ಮಾತ್ರ ಗೆದ್ದಲ್ಲಿ ಪ್ಲೇ-ಆಫ್ ಹಾದಿ ಕೊಂಚ ದುಸ್ತರವಾಗಲಿದೆ. ಜೊತೆಗೆ ಬೇರೆ ತಂಡಗಳ ಪ್ರದರ್ಶನದ ಮೇಲೆ ಆರ್​ಸಿಬಿ ಭವಿಷ್ಯ ನಿರ್ಧಾರವಾಗಲಿದೆ.


  ಹೀಗಾಗಿ ಮುಂದಿನ ಮೂರು ಪಂದ್ಯ ಬೆಂಗಳೂರು ಪಾಲಿಗೆ ಮಹತ್ವದ್ದಾಗಿದೆ. ಈ ನಡುವೆ ಇಂಜುರಿ ಸಮಸ್ಯೆ ಕೂಡ ನಾಯಕನ ತಲೆನೋವು ಹೆಚ್ಚಿಸಿದೆ. ಕಳೆದ ಚೆನ್ನೈ ಸೂಪರ್ ಕಿಂಗ್ಸ್​ ವಿರುದ್ಧದ ಪಂದ್ಯದ ವೇಳೆ ತಂಡದ ಪ್ರಮುಖ ವೇಗಿ ನವ್​ದೀಪ್ ಸೈನಿ ತಮ್ಮ ಬಲಗೈ ಹೆಬ್ಬೆರಳಿಗೆ ಗಾಯ ಮಾಡಿಕೊಂಡಿದ್ದರು. ಮುಂದಿನ ಪಂದ್ಯಗಳಿಗೆ ಇವರ ಲಭ್ಯತೆ ಇರಲಿದೆಯೇ ಎಂಬ ಬಗ್ಗೆ ಮಾಹಿತಿ ಇಲ್ಲ.


  ಈ ವಿಚಾರದಲ್ಲಿ ಆರ್​ಸಿಬಿ ಬದಲಾಗಬೇಕಿದೆ:


  ಆರ್​ಸಿಬಿ ಪದೇಪದೇ ಉತ್ತಮ ಆರಂಭ ಪಡೆದುಕೊಳ್ಳುವಲ್ಲಿ ಎಡವುತ್ತಿದೆ. ದೇವದತ್ ಪಡಿಕ್ಕಲ್ ಉತ್ತಮ ಬ್ಯಾಟಿಂಗ್ ಪ್ರದರ್ಶಿಸುತ್ತಿದ್ದಾರೆ. ಆದರೆ, ಆ್ಯರೋನ್ ಫಿಂಚ್ ಬ್ಯಾಟ್​ನಿಂದ ರನ್​ಗಳು ಬರುತ್ತಿಲ್ಲ. ಜೊತೆಗೆ ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್​ ನಿರ್ಗಮನದ ಬಳಿಕ ಬ್ಯಾಟಿಂಗ್ ಶಕ್ತಿ ತುಂಬಲು ಸೂಕ್ತ ಆಟಗಾರನ ಅಗತ್ಯವಿದೆ. ಮೊಯೀನ್ ಅಲಿ ಕೂಡ ವೈಫಲ್ಯ ಅನುಭವಿಸುತ್ತಿದ್ದಾರೆ.


  IPL 2020: ಅತ್ತ ಕ್ಯಾನ್ಸರ್‌ ವಿರುದ್ಧ ತಂದೆಯ ಹೋರಾಟ: ಇತ್ತ ಬೆನ್ ಸ್ಟೋಕ್ಸ್‌ ದಾಖಲೆಯ ಆರ್ಭಟ


  ಬೌಲಿಂಗ್​ನಲ್ಲೂ ಕೊಹ್ಲಿ ಸೈನ್ಯ ಬರಬರುತ್ತಾ ದುಬಾರಿಯಾಗುತ್ತಿದೆ. ಯಜುವೇಂದ್ರ ಚಹಾಲ್, ವಾಷಿಂಗ್ಟನ್ ಸುಂದರ್ ಹಾಗೂ ಕ್ರಿಸ್ ಮೊರೀಸ್ ಬಿಟ್ಟರೆ ಇತರೆ ಬೌಲರ್​ಗಳು ನಿಖರ ಸ್ಪೆಲ್ ಮಾಡುತ್ತಿಲ್ಲ. ಇಸುರು ಉದಾನ ತಮ್ಮ ಅನುಭವಕ್ಕೆ ತಕ್ಕಂತೆ ಆಲ್​ರೌಂಡರ್ ಪ್ರದರ್ಶನ ನೀಡುತ್ತಿಲ್ಲ. ತಂಡದಲ್ಲಿ ಕೊಂಚ ಬದಲಾವಣೆಯಾದರೆ ಆರ್​ಸಿಬಿ ಈ ಬಾರಿ ಕಪ್ ಗೆಲ್ಲುವುದು ಕಷ್ಟವೇನಲ್ಲ.

  Published by:Vinay Bhat
  First published: