news18-kannada Updated:October 14, 2020, 4:26 PM IST
MI vs DC
ಇಂಡಿಯನ್ ಪ್ರೀಮಿಯರ್ ಲೀಗ್ ಮತ್ತೆ ಫಿಕ್ಸಿಂಗ್ ಆರೋಪಕ್ಕೆ ಗುರಿಯಾಗಿದೆ. ಇಂತಹದೊಂದು ಟೀಕೆಗೆ ಗುರಿಯಾಗಲು ಕಾರಣ ಮುಂಬೈ ಇಂಡಿಯನ್ಸ್ ತಂಡದ ಅಧಿಕೃತ ಟ್ವಿಟರ್ ಖಾತೆಯಿಂದ ಮಾಡಿದ ಒಂದು ಪೋಸ್ಟ್. 2013 ರಲ್ಲಿ ಫಿಕ್ಸಿಂಗ್ ಮತ್ತು ಬೆಟ್ಟಿಂಗ್ ವಿಷಯದಿಂದ ಭಾರೀ ರಾದ್ದಾಂತಕ್ಕೆ ಕಾರಣವಾಗಿದ್ದ ಟೂರ್ನಿ, ಬಳಿಕ ತಂಡಗಳ ಮತ್ತು ಆಟಗಾರರ ಮೇಲೆ ಕಠಿಣ ಕ್ರಮ ಜರುಗಿಸುವ ಮೂಲಕ ಆರೋಪದಿಂದ ಹೊರಬಂದಿತ್ತು. ಆದರೀಗ ಮತ್ತೆ ಅಂತಹದ್ದೇ ಗುಮಾನಿಯೊಂದು ಶುರುವಾಗಿದೆ.
ಭಾನುವಾರ ನಡೆದ ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಣ ಪಂದ್ಯವು ಮೊದಲೇ ಫಿಕ್ಸ್ ಆಗಿತ್ತಾ ಎಂಬ ಸಂಶಯ ಹುಟ್ಟಿಕೊಂಡಿದೆ. ಏಕೆಂದರೆ ಭಾರೀ ಕುತೂಹಲಕ್ಕೆ ಕಾರಣವಾಗಿದ್ದ ಈ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮೊದಲು ಬ್ಯಾಟಿಂಗ್ ಮಾಡಿತ್ತು. ಆದರೆ ಬ್ಯಾಟಿಂಗ್ ಆರಂಭಿಸುವ ಮುನ್ನವೇ ಮುಂಬೈ ಇಂಡಿಯನ್ಸ್ ಟ್ವಿಟರ್ ಖಾತೆಯಲ್ಲಿ
ಪ್ಯಾಟಿನ್ಸನ್ ಈಸ್ ಶೇರಿಂಗ್ ದಿ ನ್ಯೂ ಬಾಲ್ ವಿತ್ ಬೌಲ್ಟ್. ಡಿಸಿ 163/5 (19.5) ಎಂದು ಟ್ವೀಟ್ ಮಾಡಲಾಗಿತ್ತು. ತಕ್ಷಣವೇ ಟ್ವೀಟ್ ಅನ್ನು ಡಿಲೀಟ್ ಮಾಡಿದ್ದರು.

ಮುಂಬೈ ಇಂಡಿಯುನ್ಸ್ ಮಾಡಿರುವ ಟ್ವೀಟ್
ಅಚ್ಚರಿಯೆಂದರೆ ಡೆಲ್ಲಿ ಕ್ಯಾಪಿಟಲ್ಸ್ ಇನಿಂಗ್ಸ್ ಮುಗಿಸಿದಾಗ ಬಹುತೇಕ ಮೇಲಿನ ಟ್ವೀಟ್ಗೆ ಸರಿಸಮನಾದ ಮೊತ್ತ ದಾಖಲಿಸಿತ್ತು. ಅಂದರೆ 20 ಓವರ್ಗಳಲ್ಲಿ ಶ್ರೇಯಸ್ ಪಡೆ ಕಲೆಹಾಕಿದ್ದು 162 ರನ್ಗಳು. ಈ ಟ್ವೀಟ್ ಸ್ಕ್ರೀನ್ ಶಾಟ್ ಭಾರೀ ವೈರಲ್, ಇದರಿಂದ ಅಭಿಮಾನಿಗಳಿಗೆ ಮ್ಯಾಚ್ ಫಿಕ್ಸಿಂಗ್ ಆಗಿರುವ ಶಂಕೆ ವ್ಯಕ್ತಪಡಿಸಿದ್ದಾರೆ.
ಇದು ಕಾಕತಾಳೀಯವೋ ಅಥವಾ ಫಿಕ್ಸಿಂಗ್ ನಡೆಯುತ್ತಿದೆಯಾ ಎಂಬ ಅನುಮಾನಗಳನ್ನು ಹುಟ್ಟುಹಾಕಿದ್ದು, ಒಂದು ತಂಡ ಕಲೆಹಾಕಲಿರುವ ಸ್ಕೋರ್ನ್ನು ಅಚ್ಚುಕಟ್ಟಾಗಿ ಎದುರಾಳಿಯ ತಂಡ ಅಂದಾಜಿಸಲು ಸಾಧ್ಯವೇ?. ಖಂಡಿತವಾಗಿಯೂ ಇದು ಫಿಕ್ಸಿಂಗ್ ಎಂದು ಸೋಷಿಯಲ್ ಮೀಡಿಯಾಗಳಲ್ಲಿ ನೆಟ್ಟಿಗರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
POINTS TABLE:
SCHEDULE TIME TABLE:
ORANGE CAP:
PURPLE CAP:
RESULT DATA:
MOST SIXES:
ಇದನ್ನೂ ಓದಿ: IPL 2020: ಮೈದಾನದಲ್ಲೇ ಬೈಯ್ದಾಡಿಕೊಂಡ ಪಾಂಡ್ಯ ಬ್ರದರ್ಸ್: ಸಿಟ್ಟಿಗೆ ಕಾರಣವೇನು ಗೊತ್ತಾ?
Published by:
zahir
First published:
October 14, 2020, 4:13 PM IST