Dream11 IPL 2020: ಐಪಿಎಲ್ ಆರಂಭಕ್ಕೆ ಇನ್ನು ಕೇವಲ ನಾಲ್ಕು ದಿನ ಬಾಕಿ: ತುದಿಗಾಲಿನಲ್ಲಿ ಕಾಯುತ್ತಿರುವ ಅಭಿಮಾನಿಗಳು

ಈಗಾಗಲೇ ಐಪಿಎಲ್ ಕೂಟದಲ್ಲಿ ಪಾಲ್ಗೊಳ್ಳಲು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ದುಬೈ ತಲುಪಿದ್ದಾರೆ. ಇಂದು ಶಾರ್ಜಾ ಕ್ರೀಡಾಂಗಣಕ್ಕೆ ಭೇಟಿ ನೀಡಿ ಅಧಿಕಾರಿಗಳ ಜೊತೆ ಮಾತನಾಡಿ ಕ್ರೀಡಾಂಗಣದ ಸುರಕ್ಷತೆಯನ್ನೆಲ್ಲ ವೀಕ್ಷಿಸಿದ್ದಾರೆ.

IPL 2020

IPL 2020

 • Share this:
  ಕ್ರಿಕೆಟ್ ಅಭಿಮಾನಿಗಳಲ್ಲಿ ಈಗಾಗಲೇ ಇಂಡಿಯನ್ ಪ್ರೀಮಿಯರ್ ಲೀಗ್ ಟಿ-20 ಫೀವರ್ ಶುರುವಾಗಿದೆ. ಯುಎಇನಲ್ಲಿ ನಡೆಯಲಿರುವ ಈ ಬಾರಿಯ ಹೊಡಿಬಡಿ ಟೂರ್ನಿಗೆ ಇನ್ನೇನು ಕೇವಲ ನಾಲ್ಕು ದಿನಗಳಷ್ಟೆ ಬಾಕಿಯಿದೆ. ಎಲ್ಲ ಫ್ರಾಂಚೈಸಿ ತಂಡದ ಆಟಗಾರರು ಮೈದಾನದಲ್ಲಿ ಭರ್ಜರಿ ಆಗಿ ಅಭ್ಯಾಸ ನಡೆಸುತ್ತಾ ಬೆವರು ಹರಿಸುತ್ತಿದ್ದಾರೆ. ಮೈದಾನದಲ್ಲಿ ರೋಹಿತ್ ಶರ್ಮಾ, ಎಂ ಎಸ್ ಧೋನಿ, ವಿರಾಟ್ ಕೊಹ್ಲಿ ಚೆಂಡನ್ನು ಸಿಕ್ಸರ್​ಗೆ ಅಟ್ಟುತ್ತಿರುವ ವಿಡಿಯೋ ವೈರಲ್ ಆಗುತ್ತಿದೆ. ಸೆಪ್ಟೆಂಬರ್ 19 ರಂದು ಉದ್ಘಾಟನಾ ಪಂದ್ಯ ನಡೆಯಲಿದ್ದು ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್​ ತಂಡಗಳು ಮುಖಾಮುಖಿ ಆಗಲಿವೆ.

  ಈಗಾಗಲೇ ಐಪಿಎಲ್ ಕೂಟದಲ್ಲಿ ಪಾಲ್ಗೊಳ್ಳಲು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ದುಬೈ ತಲುಪಿದ್ದಾರೆ. ಇಂದು ಶಾರ್ಜಾ ಕ್ರೀಡಾಂಗಣಕ್ಕೆ ಭೇಟಿ ನೀಡಿ ಅಧಿಕಾರಿಗಳ ಜೊತೆ ಮಾತನಾಡಿ ಕ್ರೀಡಾಂಗಣದ ಸುರಕ್ಷತೆಯನ್ನೆಲ್ಲ ವೀಕ್ಷಿಸಿದ್ದಾರೆ.


  View this post on Instagram

  Famous Sharjah stadium all set to host IPL 2020


  A post shared by SOURAV GANGULY (@souravganguly) on


  IPL 2020: RCB ಕಪ್ ಗೆಲ್ಲುವುದು ಇನ್ನಷ್ಟು ಖಚಿತ: ಡೆತ್ ಓವರ್ ಬೌಲಿಂಗ್ ಮಾಡುವುದು ಯಾರು ಗೊತ್ತೇ?

  ಟೂರ್ನಿ ಸಲುವಾಗಿ ಶಾರ್ಜಾ, ದುಬೈ ಮತ್ತು ಅಬುದಾಭಿ ಕ್ರೀಡಾಂಗಣಗಳಲ್ಲಿ ಬಯೋ ಸೆಕ್ಯೂರ್‌ ವಾತಾವರಣ ನಿರ್ಮಾಣ ಮಾಡಲಾಗಿದ್ದು ಸಂಪೂರ್ಣ 60 ಪಂದ್ಯಗಳು ಸೆಪ್ಟೆಂಬರ್‌ 19ರಿಂದ ನವೆಂಬರ್‌ 10ರವರೆಗೆ ನಡೆಯಲಿವೆ. ಸದ್ಯ ನವೆಂಬರ್ 3ರವರೆಗೆ ನಡೆಯಲಿರುವ ಲೀಗ್​ ಹಂತದ ಎಲ್ಲ 56 ಪಂದ್ಯಗಳ ವೇಳಾಪಟ್ಟಿ ಪ್ರಕಟಿಸಲಾಗಿದೆ. ಪ್ಲೇ ಆಫ್​ ಹಂತದ ವೇಳಾಪಟ್ಟಿ ಇನ್ನೂ ಬಿಡುಗಡೆಯಾಗಿಲ್ಲ.

  ಈ ಟೂರ್ನಿಯೊಂದಿಗೆ ಭಾರತದ ಸ್ಟಾರ್‌ ಆಟಗಾರರು ಕೊರೋನಾ ವೈರಸ್‌ನಿಂದ ಎದುರಾಗಿದ್ದ ಸುದೀರ್ಘಾವಧಿಯ ವಿರಾಮದ ಬಳಿಕ ಕ್ರಿಕೆಟ್‌ ಅಂಗಣಕ್ಕೆ ಕಮ್‌ಬ್ಯಾಕ್‌ ಮಾಡಲಿದ್ದಾರೆ. ಕಳೆದ ಫೆಬ್ರವರಿಯಲ್ಲಿ ಭಾರತ ತಂಡದ ಆಟಗಾರರು ಕಿವೀಸ್‌ ಪ್ರವಾಸದಲ್ಲಿ ಸ್ಪರ್ಧಾತ್ಮಕ ಕ್ರಿಕೆಟ್‌ ಆಡಿದ್ದರು. ಈಗ ಐಪಿಎಲ್‌ನಲ್ಲಿ ಮತ್ತೆ ಕ್ರಿಕೆಟ್‌ ಅಖಾಡಕ್ಕೆ ಇಳಿಯಲಿದ್ದಾರೆ.

  ಅಭಿನಿಗಳಂತು ಈ ಹೊಡಿಬಡಿ ಆಟ ಕಣ್ತುಂಬಿಕೊಳ್ಳಲು ತುದಿಗಾಲಿನಲ್ಲಿ ನಿಂತು ಕಾಯುತ್ತಿದ್ದಾರೆ. ಅನೇಕ ತಿಂಗಳುಗಳ ಬಳಿಕ ತನ್ನ ಮೆಚ್ಚಿನ ಆಟಗಾರ ಮೈದಾನದಲ್ಲಿ ಆರ್ಭಟಿಸುವುದನ್ನು ನೋಡಲು ಹಾತೊರೆಯುತ್ತಿದ್ದಾರೆ.

  ವಿಶೇಷ ಎಂದರೆ ಈ ಬಾರಿಯ ಐಪಿಎಲ್ ಅನ್ನು ಅಭಿಮಾನಿಗಳಿಗೆ ಮೈದಾನಕ್ಕೆ ಬಂದು ವೀಕ್ಷಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿಯೇ ಫ್ಯಾನ್ಸ್​ಗಾಗಿ ಐಪಿಎಲ್ ಟೂರ್ನಿಯನ್ನು 120 ರಾಷ್ಟ್ರಗಳಲ್ಲಿ ನೇರ ಪ್ರಸಾರ ಮತ್ತು ಲೈವ್ ಸ್ಟ್ರೀಮಿಂಗ್ ಮಾಡಲು ಬಿಸಿಸಿಐ ಮುಂದಾಗಿದೆ.

  IPL 2020: ಐಪಿಎಲ್​ನಲ್ಲಿ ಮಯಾಂತಿಗೆ ಸೆಡ್ಡು ಹೊಡೆಯಲು ಬಂದಳು ಮಾದಕ ಚೆಲುವೆ: ಯಾರೀಕೆ ಗೊತ್ತೇ?

  ಭಾರತದಲ್ಲಿ ಐಪಿಎಲ್ ಟೂರ್ನಿಯನ್ನು 7 ಭಾಷೆಗಳಲ್ಲಿ ಪ್ರಸಾರ ಮಾಡಲಾಗುತ್ತಿದೆ. ಸ್ಟಾರ್ ಸ್ಪೋರ್ಟ್ಸ್ ವಾಹಿನಿ ಭಾರತದಲ್ಲಿನ ಪ್ರಸಾರ ಹಕ್ಕನ್ನು ಪಡೆದುಕೊಂಡಿದ್ದು, ಕನ್ನಡ, ಹಿಂದಿ, ತಮಿಳು, ತೆಲುಗು, ಮಲಯಾಳಂ, ಮರಾಠಿ ಮತ್ತು ಬಂಗಾಳ ಭಾಷೆಗಳಲ್ಲಿ ಪ್ರಸಾರ ಆಗಲಿದೆ. ಆನ್​ಲೈನ್​ನಲ್ಲೂ ಪಂದ್ಯವನ್ನು ವೀಕ್ಷಣೆ ಮಾಡಬಹುದಾಗಿದ್ದು ಹಾಟ್​ಸ್ಟಾರ್​ನಲ್ಲಿ ಲೈವ್ ಪ್ರಸಾರವಾಗಲಿದೆ.

  ಇನ್ನೂ ಯುಎಇನಲ್ಲಿ ನಡೆಯುತ್ತಿರುವ ಕಾರಣ ಪಂದ್ಯ ನಿಯಮಿತ ಸಮಯಕ್ಕಿಂತ 30 ನಿಮಿಷ ಮುಂಚಿತವಾಗಿ ಪ್ರಾರಂಭವಾಗಲಿದೆ. ಇದಕ್ಕೂ ಮೊದಲು ರಾತ್ರಿ 8 ಗಂಟೆಗೆ ಈ ಪಂದ್ಯಗಳನ್ನು ಆರಂಭಿಸಲಾಗಿತ್ತು. ಆದರೆ, ಈ ಬಾರಿಯ ಟೂರ್ನಿಯಲ್ಲಿ ಪಂದ್ಯ ಸಂಜೆ 7:30ಕ್ಕೆ ಶುರುವಾಗಲಿದೆ. ಮಧ್ಯಾಹ್ನದ ಪಂದ್ಯಗಳು 3:30ಕ್ಕೆ ಶುರುವಾಗಲಿದೆ.

  2020 ಐಪಿಎಲ್ ಹೆಚ್ಚಿನ ಆಟಗಾರರಿಗೆ ಕೊನೆಯ ಟೂರ್ನಿ ಆಗಿರಲಿದೆ. ಅದರಲ್ಲೂ ಪ್ರಮುಖವಾಗಿ 40ರ ಹರೆಯದ ಕ್ರಿಸ್ ಗೇಲ್, ಇಮ್ರಾನ್ ತಾಹಿರ್, ಡೇಲ್ ಸ್ಟೈನ್, ಅಮಿತ್ ಮಿಶ್ರಾ ಸೇರಿದಂತೆ ಕೆಲವು ಆಟಗಾರರಿಗೆ ಇದೇ ಕೊನೆಯ ಐಪಿಎಲ್ ಆಗುವ ಸಾಧ್ಯತೆ ಇದೆ.
  Published by:Vinay Bhat
  First published: