IPL

  • associate partner
HOME » NEWS » Ipl » IPL 2020 MI VS RR PREVIEW RAJASTHAN ROYALS OUT TO CLIP HIGH FLYING MUMBAI INDIANS WINGS VB

IPL 2020, MI vs RR: ಹ್ಯಾಟ್ರಿಕ್ ಗೆಲುವಿನತ್ತ ಮುಂಬೈ ಚಿತ್ತ: ಸೋಲುಗಳಿಂದ ಕಂಗೆಟ್ಟಿರುವ ಆರ್​ಆರ್​ಗೆ ಗೆಲುವಿನ ತವಕ

ಉಭಯ ತಂಡಗಳು ಈವರೆಗೆ ಐಪಿಎಲ್​ನಲ್ಲಿ ಒಟ್ಟು 20 ಪಂದ್ಯಗಳಲ್ಲಿ ಮುಖಾಮುಖಿ ಆಗಿವೆ. ಇದರಲ್ಲಿ ಮುಂಬೈ ಇಂಡಿಯನ್ಸ್ 10 ಹಾಗೂ ರಾಜಸ್ಥಾನ್ ರಾಯಲ್ಸ್ 10 ಪಂದ್ಯಗಳಲ್ಲಿ ಗೆಲುವು ಸಾಧಿಸಿ ಸಮಬಲದಿಂದ ಕೂಡಿದೆ.

news18-kannada
Updated:October 6, 2020, 1:51 PM IST
IPL 2020, MI vs RR: ಹ್ಯಾಟ್ರಿಕ್ ಗೆಲುವಿನತ್ತ ಮುಂಬೈ ಚಿತ್ತ: ಸೋಲುಗಳಿಂದ ಕಂಗೆಟ್ಟಿರುವ ಆರ್​ಆರ್​ಗೆ ಗೆಲುವಿನ ತವಕ
ಮುಂಬೈ ಇಂಡಿಯನ್ಸ್
  • Share this:
13ನೇ ಆವೃತ್ತಿಯ ಐಪಿಎಲ್​ನಲ್ಲಿ ಇಂದು ನಡೆಯಲಿರುವ 20ನೇ ಪಂದ್ಯದಲ್ಲಿ ರೋಹಿತ್ ಶರ್ಮಾ ನಾಯಕತ್ವದ ಮುಂಬೈ ಇಂಡಿಯನ್ಸ್ ಹಾಗೂ ಸ್ಟೀವ್ ಸ್ಮಿತ್ ನೇತೃತ್ವದ ರಾಜಸ್ಥಾನ್ ರಾಯಲ್ಸ್ ತಂಡಗಳು ಮುಖಾಮುಖಿ ಆಗುತ್ತಿವೆ. ಈ ಪಂದ್ಯ ಅಬುಧಾಬಿಯ ಶೇಖ್ ಝಯೀದ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಸತತ ಎರಡು ಗೆಲುವು ದಾಖಲಿಸಿ ಆತ್ಮವಿಶ್ವಾಸದಲ್ಲಿರುವ ರೋಹಿತ್ ಪಡೆ ಹ್ಯಾಟ್ರಿಕ್ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರುವ ಹೊಂಚು ಹಾಕಿಕೊಂಡಿದ್ದರೆ, ಇತ್ತ ಸತತ ಎರಡು ಸೋಲುಗಳಿಂದ ಕಂಗೆಟ್ಟಿರುವ ಆರ್​ಆರ್​ ತಂಡ ಗೆಲುವಿನ ಲಯಕ್ಕೆ ಮರಳಲು ಮಾಸ್ಟರ್ ಪ್ಲ್ಯಾನ್ ಮಾಡಿಕೊಂಡಿದೆ.

ಮುಂಬೈ ಇಂಡಿಯನ್ಸ್ ಈವರೆಗೆ ಆಡಿರುವ 5 ಪಂದ್ಯಗಳಲ್ಲಿ ಮೂರರಲ್ಲಿ ಗೆದ್ದು 2 ಪಂದ್ಯಗಳಲ್ಲಿ ಸೋಲುಕಂಡಿದೆ. ರಾಜಸ್ಥಾನ್ ತಂಡ ಆಡಿರುವ ನಾಲ್ಕು ಪಂದ್ಯಗಳಲ್ಲಿ ಎರಡು ಗೆಲುವು ಎರಡು ಸೋಲು ಅನುಭವಿಸಿದೆ.

ರಾಷ್ಟ್ರೀಯ ಕಬಡ್ಡಿ ಸಂಭಾವ್ಯ ತಂಡಕ್ಕೆ ಆಯ್ಕೆಯಾಗಿದ್ದ ಸುಳ್ಯದ ಆಟಗಾರನಿಗೆ ತರಬೇತಿಗಿಲ್ಲ ಆಹ್ವಾನ!

ಮುಂಬೈ ಇಂಡಿಯನ್ಸ್ ತಂಡದಲ್ಲಿ ಬಹುತೇಕ ಬ್ಯಾಟ್ಸ್‌ಮನ್‌ಗಳು ಉತ್ತಮ ಫಾರ್ಮ್‌ನಲ್ಲಿದ್ದು ತಂಡಕ್ಕೆ ನೆರವಾಗುತ್ತಿದ್ದಾರೆ. ಆರಂಭಿಕ ಬ್ಯಾಟ್ಸ್​ಮನ್​ ಕ್ವಿಂಟನ್ ಡಿಕಾಕ್ ಕಳೆದ ಪಂದ್ಯದಲ್ಲಿ ಅರ್ಧಶತಕ ಸಿಡಿಸಿ ಫಾರ್ಮ್​ ಕಂಡುಕೊಂಡಿದ್ದಾರೆ. ಪಂದ್ಯವನ್ನು ಫಿನಿಶ್ ಮಾಡುವ ಜವಾಬ್ದಾರಿ ಕೀರೊನ್ ಪೊಲಾರ್ಡ್​ ಹಾಗೂ ಪಾಂಡ್ಯ ಬ್ರದರ್ಸ್​ ಸಖತ್ ಆಗಿ ನಿರ್ವಹಿಸುತ್ತಿದ್ದಾರೆ.

ಇತ್ತ ಬೌಲಿಂಗ್ ವಿಭಾಗದಲ್ಲೂ ಮುಂಬೈ ಅತ್ಯುತ್ತಮ ಪ್ರದರ್ಶನವನ್ನು ನೀಡುವಲ್ಲಿ ಸಫಲವಾಗುತ್ತಿದೆ. ಜಸ್​ಪ್ರೀತ್ ಬುಮ್ರಾ ದುಬಾರಿ ಆಗುತ್ತಿದ್ದಾರೆ ಆದರೂ ಯಾವುದೇ ಕ್ಷಣಗಳಲ್ಲಿ ಪಂದ್ಯದ ಗತಿಯನ್ನ ಬದಲಾಯಿಸುವ ಸಾಮರ್ಥ್ಯ ಹೊಂದಿದ್ದಾರೆ.

ಇತ್ತ ಅನುಭವಿ ಜೋಸ್ ಬಟ್ಲರ್ ಹಾಗೂ ನಾಯಕ ಸ್ಟೀವ್ ಸ್ಮಿತ್ ನಿರೀಕ್ಷಿತ ಮಟ್ಟದಲ್ಲಿ ಪ್ರದರ್ಶನ ನೀಡದಿರುವುದು ಆರ್​ಆರ್ ತಂಡಕ್ಕೆ ಹಿನ್ನಡೆಯಾಗುತ್ತಿದೆ. ಕಳೆದ ಆರ್​ಸಿಬಿ ವಿರುದ್ಧದ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಕೂಡ ಬೇಗನೆ ಔಟ್ ಆಗಿದ್ದರು. ರಾಬಿನ್ ಉತ್ತಪ್ಪಗೆ ಎಷ್ಟೇ ಅವಕಾಶ ನೀಡಿದರು ಮಿಂಚುತ್ತಿಲ್ಲ. ಹೀಗಾಗಿ ಆರ್​ಆರ್​ ತಂಡದ ಬ್ಯಾಟಿಂಗ್​ ಲೈನ್​ಅಪ್ ಬದಲಾವಣೆ ಆಗುವುದು ಖಚಿತ.

Najeeb Tarakai: ಅಪ್ಘಾನಿಸ್ತಾನದ ಟಾಪ್​ ಬ್ಯಾಟ್ಸ್​​ಮನ್​ ಕಾರು ಅಪಘಾತದಲ್ಲಿ ನಿಧನ

ಬೌಲಿಂಗ್​ನಲ್ಲೂ ಜೋಫ್ರಾ ಆರ್ಚರ್ ಹಾಗೂ ಟಾಮ್ ಕುರ್ರನ್ ಬಿಟ್ಟರೆ ಮತ್ಯಾರು ಮಿಂಚುತ್ತಿಲ್ಲ. ಜಯದೇವ್ ಉನಾದ್ಕಟ್ ದುಬಾರಿ ಆಗುತ್ತಿದ್ದಾರೆ. ಇನ್ನೂ ಸ್ಟಾರ್ ಆಲ್​ರೌಂಡರ್ ಬೆನ್ ಸ್ಟೋಕ್ಸ್ ಯುಎಇಗೆ ತಲುಪಿದರೂ ಕ್ವಾರಂಟೈನ್​ನಲ್ಲಿ ಇರುವುದರಿಂದ ಅಕ್ಟೋಬರ್ 11ರವರೆಗೂ ತಂಡಕ್ಕೆ ಅಲಭ್ಯರಾಗಿದ್ದಾರೆ.

ಉಭಯ ತಂಡಗಳು ಈವರೆಗೆ ಐಪಿಎಲ್​ನಲ್ಲಿ ಒಟ್ಟು 20 ಪಂದ್ಯಗಳಲ್ಲಿ ಮುಖಾಮುಖಿ ಆಗಿವೆ. ಇದರಲ್ಲಿ ಮುಂಬೈ ಇಂಡಿಯನ್ಸ್ 10 ಹಾಗೂ ರಾಜಸ್ಥಾನ್ ರಾಯಲ್ಸ್ 10 ಪಂದ್ಯಗಳಲ್ಲಿ ಗೆಲುವು ಸಾಧಿಸಿ ಸಮಬಲದಿಂದ ಕೂಡಿದೆ.

ಮುಂಬೈ ಇಂಡಿಯನ್ಸ್ ಸಂಭಾವ್ಯ ತಂಡ: ರೋಹಿತ್ ಶರ್ಮಾ (ನಾಯಕ), ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ಕೀರನ್ ಪೊಲಾರ್ಡ್, ಹಾರ್ದಿಕ್ ಪಾಂಡ್ಯ, ಕೃನಾಲ್ ಪಾಂಡ್ಯ, ಜೇಮ್ಸ್ ಪ್ಯಾಟಿನ್ಸನ್, ರಾಹುಲ್ ಚಹರ್, ಟ್ರೆಂಟ್ ಬೌಲ್ಟ್, ಜಸ್​ಪ್ರೀತ್ ಬುಮ್ರಾ.
Youtube Video

ರಾಜಸ್ಥಾನ್ ರಾಯಲ್ಸ್ ಸಂಭಾವ್ಯ ತಂಡ: ಜೋಸ್ ಬಟ್ಲರ್, ಯಶಸ್ವಿ ಜೈಸ್ವಾಲ್ / ರಾಬಿನ್ ಉತ್ತಪ್ಪ, ಸಂಜು ಸ್ಯಾಮ್ಸನ್, ಸ್ಟೀವ್ ಸ್ಮಿತ್ (ನಾಯಕ), ರಿಯಾನ್ ಪರಾಗ್, ಮಹಿಪಾಲ್ ಲೋಮರ್, ಟಾಮ್ ಕುರ್ರನ್, ರಾಹುಲ್ ತೇವಾಟಿಯಾ, ಜೋಫ್ರಾ ಆರ್ಚರ್, ಶ್ರೇಯಾಸ್ ಗೋಪಾಲ್, ಜಯದೇವ್ ಉನಾದ್ಕಟ್ / ವರುಣ್ ಆರನ್.
Published by: Vinay Bhat
First published: October 6, 2020, 1:51 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories